1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ
1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ 1,000 ಮಕ್ಕಳ ಕಾಂಡಕೋಶ ಕಸಿ ಮೈಲಿಗಲ್ಲು ಸಾಧನೆ; ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ವಿಶೇಷ ಆಚರಣೆ ಬೆಂಗಳೂರು, ಸೆಪ್ಟೆಂಬರ್ 4, 2026: ತಲಸೇಮಿಯಾ ಸೇರಿದಂತೆ ತೀವ್ರ ಅನುವಂಶಿಕ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳಿಗೆ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ (ಕಾಂಡಕೋಶ ಕಸಿ) ಯಶಸ್ವಿಯಾಗಿ ನೆರವೇರಿಸಿದ್ದು, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಈ ಸಾಧನೆಯನ್ನು “1,000 ಹೊಸ ಆರಂಭಗಳು” ಎಂಬ ಪರಿಕಲ್ಪನೆಯಡಿ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಪಾಲುದಾರ ಸಂಸ್ಥೆ ಕ್ಯೂರ್2ಚಿಲ್ಡ್ರನ್ ಫೌಂಡೇಶನ್ ನಡುವಿನ ದಶಕಕ್ಕೂ ಅಧಿಕ ಕಾಲದ ಸಹಭಾಗಿತ್ವದ ಪ್ರಮುಖ ಸಾಧನೆಯಾಗಿ ಈ ಮೈಲಿಗಲ್ಲು ಗುರುತಿಸಿಕೊಂಡಿದೆ. ತೀವ್ರ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ರಕ್ತಪೂರಣ ಮತ್ತು ದೀರ್ಘಕಾಲದ ಚಿಕಿತ್ಸೆಯ ಅವಲಂಬನೆಯಿಂದ ಹೊರಬಂದು ಆರೋಗ್ಯಕರ ಜೀವನ ನಡೆಸುವ ಅವಕಾಶವನ್ನು ಈ ಟ್ರಾನ್ಸ್‌ಪ್ಲಾಂಟೇಶನ್ ಕಾರ್ಯಕ್ರಮ ಒದಗಿಸುತ್ತಿದೆ. 820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸೆಗೆ DK...