ಕಸ್ತೂರಿ ಕರ್ನಾಟಕ ಸಂಘಟನೆಗಳ ಒಕ್ಕೂಟ(ರಿ) ಸಹಯೋಗದೊಂದಿಗೆ ಪತ್ರಿಕಾಗೋಷ್ಠಿ ನಡೆಸಲಾಯಿತು

 ಕಸ್ತೂರಿ ಕರ್ನಾಟಕ ಸಂಘಟನೆಗಳ ಒಕ್ಕೂಟ(ರಿ) ಸಹಯೋಗದೊಂದಿಗೆ ಪತ್ರಿಕಾಗೋಷ್ಠಿ ನಡೆಸಲಾಯಿತು 

ಕರ್ನಾಟಕ ದಲಿತ ಸಂರಕ್ಷಣಾ ಸೇನೆ(ರಿ), ಡ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ(ರಿ) ವಿಶ್ವರತ್ನ ಅಂಬೇಡ್ಕರ್ ಸೇನೆ(ರಿ), ಪ್ರಜಾಪ್ರಭುತ್ವ ಜನಸೇವಾ ಸಮತಿ(ಲ) ಜೈಭೀಮ್ ಅಂಬೇಡ್ಕರ್ ಸಮಿತಿ(ರಿ) ಪ್ರಜಾಶಕ್ತಿ ಜನಪರ ವೇದಿಕೆ(ರಿ) ಜೈಭೀಮ್ ಸಾಮ್ರಾಜ್ಯ(ರಿ) ಕರ್ನಾಟಕ ಕಟ್ಟಡ ಕೂಲಿ ಕಾರ್ಮಿಕರ ರಕ್ಷಣಾ ವೇದಿಕೆ(ರಿ) ಹೊಸಬೆಳಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ) ಮಹಾನಾಯಕ ಅಂಬೇಡ್ಕರ್ ಸಮಿತಿ(ರಿ) ಸಂಘಟನೆಗಳವತಿಯಿಂದ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಸರ್ಕಾರಿ ಗೋಮಾಳ ಜಮೀನು ಅತಿಕ್ರಮಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಲಪಟಾಯಿಸಿ ಇದೀಗ ಕೆಲ ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಒತ್ತಡದಿಂದ ಪ್ರತಿಭಟನಾಕಾರರ ಮೇಲೆ ಸುಳ್ಳು ಎಫ್.ಐ.ಆರ್ ದಾಖಲಿಸಿ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿ ಪತ್ರಿಕಾ ಗೋಷ್ಠಿ ಕರೆಯಲಾಗಿದೆ.


ಜೈಭೀಮ್ ಬಂಧುಗಳೇ,


ಗೂಳ್ಯನಂದಿಗುಂದ ಗ್ರಾಮದ ಜಮೀನು ವಿವಾದದ ಕುರಿತು ನ್ಯಾಯಯುತ ತನಿಖೆಗೆ ಆಗ್ರಹಿಸಿ


ಮೇಲ್ಕಂಡ ಸಂಘಟನೆಗಳ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ, ಗೂಳ್ಯ ನಂದಿಗುಂದ ಗ್ರಾಮದ ಸರ್ವೆ ನಂ.28 ರಲ್ಲಿ 8-14 ಎಕರೆ ಜಮೀನು ಹಾಗೂ ಸರ್ವೆ ನಂ. 30 ರಲ್ಲಿ 4-30 ಎಕರೆ ಸರ್ಕಾರಿ ಗೋಮಾಳ ಜಮೀನಿಗೆ ನಕಲಿ/ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿರುವುದು ಸರ್ವೆ ನಂ.28 ಹಾಗೂ ಸರ್ವೆ ನಂ. 30 ರಲ್ಲಿ ಜಮೀನುಗಳು ಸರ್ಕಾರಿ ಗೋಮಾಳ ಜಮೀನು ಎಂಬುದು ನಮ್ಮ ದೂರಿನ ಪ್ರಮುಖ ಅಂಶವಾಗಿದ್ದು ಸದರಿ ಜಮೀನಿನ ದಾಖಲೆಗಳು ಇತರೆ ಕಂದಾಯ ದಾಖಲೆಗಳ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದೆ.


ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗಳು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರೆ ಅಥವಾ ಅಂತಹ ದಾಖಲೆಗಳನ್ನು ಸೃಷ್ಟಿಸಲು/ಮಾಡಿಕೊಡಲು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಸಹರಿಸಿದ್ದರೆ ತನಿಖೆಯ ಮೂಲಕ ಹೊಣೆಗಾರರನ್ನಾಗಿ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು.

ಪ್ರತಿಭಟನಕಾರರ ಮೇಲೆ ಸುಳ್ಳು ಆರೋಪಗಳು ಮಾಡಿರುವುದು ಖಂಡನೀಯ ಸಾರ್ವಜನಿಕರ ಆಸ್ತಿ ಮತ್ತು ಸರ್ಕಾರಿ ದಾಖಲೆಗಳ ಕುರಿತು ಪ್ರಶ್ನಿಸಿ ಕಾನೂನು ಬದ್ಧವಾಗಿ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ರಾಜಕೀಯ ಪ್ರಭಾವ ಅಥವಾ ಅಧಿಕಾರಿಗಳ ಒತ್ತಡದಿಂದ ಸುಳ್ಳು ಆರೋಪ/ಪ್ರಕರಣ ದಾಖಲಿಸಿರುವುದು ಖಂಡನೀಯ ನ್ಯಾಯಯುತವಾಗಿ ಪ್ರಶ್ನಿಸುವ ಮತ್ತು ಕಾನೂನು ಹೋರಾಟ ಮಾಡುವ ನಾಗರೀಕರ ಹಕ್ಕುಗಳನ್ನು ಹತ್ತಿಕ್ಕಬಾರದು. ಯಾವುದೇ ಪ್ರಕರಣ ದಾಖಲಾಗಿದ್ದರೆ ಅದರ ಕುರಿತು ನಿಷ್ಟಪಕ್ಷಪಾತವಾಗಿ ತನಿಖೆ ನಡೆಸಿ ಸಾಕ್ಷ್ಯಾದಾರಗಳ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು. ರಾಜಕೀಯ ಅಥವಾ ಅಧಿಕಾರದ ಒತ್ತಡಕ್ಕೆ ಮಣಿದು ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬಾರದು.


ನಮ್ಮ ಪ್ರಮುಖ ಬೇಡಿಕೆಗಳು


1. ಸರ್ವೆ ನಂ.28 ಮತ್ತು 30ರ ಸಂಪೂರ್ಣ ಮೂಲ ದಾಖಲೆಗಳನ್ನು ಪರಿಶೀಲಿಸಿ, ನಕಲಿ/ಅಕ್ರಮ ದಾಖಲೆಗಳ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು.


2. ಸರ್ವೆ ನಂ.28 ಮತ್ತು 30ರ ಸರ್ಕಾರಿ ಗೋಮಾಳ ಜಮೀನಿನ ಸರ್ಕಾರಿ ಸ್ವರೂಪವನ್ನು ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅಕ್ರಮ ಅತಿಕ್ರಮಣ ಕಂಡುಬಂದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.


3. ನಕಲಿ ದಾಖಲೆ ಸೃಷ್ಟಿಸಿ ಅಥವಾ ಅಕ್ರಮ ನೋಂದಣಿಯಲ್ಲಿ ಯಾರಾದರೂ ಭಾಗಿಯಾಗಿರುವುದು ತನಿಖೆಯಲ್ಲಿ ದೃಡಪಟ್ಟರೆ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು.


4. ದಾಖಲೆಗಳನ್ನು ಸೃಷ್ಟಿಸಲು ಅಥವಾ ಬದಲಾಯಿಸಲು ಯಾವುದೇ ಅಧಿಕಾರಿ/ಸಿಬ್ಬಂದಿ ಕರ್ತವ್ಯಲೋಪ ಅಥವಾ ಅಕ್ರಮವಾಗಿ ಸಹಕರಿಸಿರುವುದು ಕಂಡುಬಂದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು.


5. ಈ ಪ್ರಕರಣ ಕುರಿತು ಸ್ವಂತಂತ್ರ ನಿಷ್ಟಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು.


6. ಪ್ರತಿಭಟನಕಾರರ ವಿರುದ್ಧ ದಾಖಲಾಗಿರುವ ಆರೋಪ/ಪ್ರಕರಣಗಳು ಸತ್ಯಾ ಸತ್ಯತೆ ಇಲ್ಲದೆ ಅಥವಾ ದುರುದ್ದೇಶದಿಂದ ದಾಖಲಿಸಲ್ಪಟ್ಟಿದ್ದರೆ ಅವುಗಳ ಕುರಿತು ಮೇಲಾಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು.


7. ಪ್ರತಿಭಟನಕಾರರ ಮೇಲೆ ಯಾವುದೇ ರೀತಿಯ ರಾಜಕೀಯ ಆಡಳಿತಾತ್ಮಕ ಅಥವಾ ಪೊಲೀಸ್ ಒತ್ತಡ ಹೇರಬಾರದು.


8 ಸರ್ಕಾರಿ ಆಸ್ತಿ ಮತ್ತು ಸಾರ್ವಜನಿಕ ದಾಖಲೆಗಳ ರಕ್ಷಣೆಗೆ ಜಿಲ್ಲಾಡಳಿತವು ತಕ್ಷಣ ಕ್ರಮ ಕೈಗೊಳ್ಳಬೇಕು.


ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ದಾಖಲಾತಿಗಳನ್ನು ಸೃಷ್ಟಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ಕಾನೂನು ರೀತಿಯ ಕ್ರಮಕ್ಕಾಗಿ ಮೇಲ್ಕಂಡ ಸಂಘಟನೆಗಳವತಿಯಿಂದ ಪತ್ರಿಕಾಗೋಷ್ಟಿಯನ್ನು ಕರೆಯಲಾಗಿದ್ದು, ಎಲ್ಲಾ ನಮ್ಮ ಆತ್ಮೀಯ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ