ಆರ್ ಡಿಪಿ ಆರ್ ಇಲಾಖೆಯ 1353 ಹುದ್ದೆಗಳ ನೇಮಕದಲ್ಲಿ ಬಾರೀ ಅಕ್ರಮ ತನಿಖೆಗೆ ರೈತೋದಯ ಹಸಿರು ಸೇನೆ ಆಗ್ರಹ.
ಆರ್ ಡಿಪಿ ಆರ್ ಇಲಾಖೆಯ 1353 ಹುದ್ದೆಗಳ ನೇಮಕದಲ್ಲಿ ಬಾರೀ ಅಕ್ರಮ ತನಿಖೆಗೆ ರೈತೋದಯ ಹಸಿರು ಸೇನೆ ಆಗ್ರಹ. ಬೆಂಗಳೂರು ಅಕ್ಟೋಬರ್ 17; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 1353 ಅಭಿವೃದ್ಧಿ ಅಧಿಕಾರಿಗಳ ನೇಮಕದಲ್ಲಿ ಬಾರೀ ಪ್ರಮಾಣದ ಅಕ್ರಮ ನಡೆದಿದ್ದು,ಕೂಡಲೇ ಗೃಹ ಮಂತ್ರಿಗಳು ತಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡದಿದ್ದರೆ ರಾಜೀನಾಮೆ ನೀಡಿ ಇಲ್ಲವಾದರೆ ಬಾರೀ ಪ್ರಮಾಣದ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2018-19ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಪಿಡಿಒ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್ -1 ಹುದ್ದೆಗಳಿಗೆ ಆಯ್ಕೆಯಾಗಿರುವ ಒಂದು ಸಾವಿರ ಅಭ್ಯರ್ಥಿಗಳಿಗೆ ಆರ್ ಡಿಪಿಆರ್ ಇಲಾಖೆಯಿಂದ ಆದೇಶ ಪ್ರಮಾಣ ಪತ್ರ ನೀಡದೇ ನೇಮಕಾತಿಯಲ್ಲಿ ಅಕ್ರಮ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ 1353ಪಿಡಿಒ ಹುದ್ದೆಗಳನ್ನು ಮಾರಾಟ ಮಾಡಿದ್ದಾರೆ ಇಂತಹ ದೊಡ್ಡ ಮಟ್ಟದ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು. ನೊಂದ ಮಹಿಳೆ ಮೀನಾಕ್ಷಿ ಕೆಪಿಎಸ್ ಸಿಯಲ್ಲಿ 2015ರಲ್ಲಿ ಅದಿಸೂಚನೆ ಹೊರಡಿಸಿ 2017ರಲ್ಲಿ ಪರೀಕ್ಷೆ ಬರೆದಿದ್ದು 2018ರಲ್ಲಿ ಅನುಪಾತದ ಮೇಲೆ ಆಯ್ಕೆ ನಡೆದಿದ್ದು 2019ರಲ್ಲಿ ನೇಮಕಾತಿ ಪತ್ರ ನೀಡದೇ ಮೋಸ ಮಾಡಿದ್ದಾರೆ.ನಕಲಿ ಪಟ...