ಕ್ರಿಶ್ಚಿಯನ್ ನಿಗಮ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಜಾಕ್ಕೆ ಒತ್ತಾಯ.
ಕ್ರಿಶ್ಚಿಯನ್ ನಿಗಮ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಜಾಕ್ಕೆ ಒತ್ತಾಯ ಆರೋಪಗಳಲ್ಲಿ ಆಧಾರವಿಲ್ಲ.ಪಾರದರ್ಶವಾಗಿ ಎಲ್ಲವೂ ನಡೆದಿದೆ; ಉಪಾಧ್ಯಕ್ಷ ಸಂಜಯ್ ಜಾಗೀರ್ದಾರ್. ಬೆಂಗಳೂರು ಆಗಸ್ಟ್ 4; ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿಗಮದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಅವರ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ರೈಸ್ತ ಮಹಾಸಭಾವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಹಾಸಭಾ ರಾಜ್ಯಾಧ್ಯಕ್ಷ ಪ್ರಜ್ವಲ್ ಸ್ವಾಮಿ ಮಾತನಾಡಿ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅಂದಾಜು 1.5ವರ್ಷರ ಗತಿಸಿದರೂ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿರಿಸಿರುವ 250ಕೋಟಿ ಅನುದಾನದಲ್ಲಿ ಇಲ್ಲಿಯವರಗೆ ಕೇವಲ 85ಕೋಟಿ ರೂಪಾಯಿ ಅನುದಾನ ಮಾತ್ರ ಖರ್ಚು ಮಾಡಲಾಗಿದೆ. ಅದೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡದೇ ಹೆಚ್ಚಾಗಿ ಕೇವಲ ಲೋನ್‌ಗಳಿಗೆ ಮಾತ್ರ ಬಿಡುಗಡೆ ಮಾಡಿದ್ದಾರೆ ಇಂತಹ ಅಧ್ಯಕ್ಷರು,ಉಪಾಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಸಮರ್ಪಕ ಬೇಜವಾಬ್ದಾರಿಯುತ ಹಾಗೂ ಇಂತಹ ಪದವಿಗಳಿಗೆ ತರಲವಲ್ಲದ ರೀತಿಯಿ ಕಾರ್ಯನಿರ್ವಹಣೆಯಿಂದಾಗಿ ಸಕಾಲದಲ್ಲಿ ಅನುದಾನ ಬಳಕೆ ಮಾಡದೇ ಇರುವುದರಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು ಕ್ರಿಶ್ಚಿಯನ...