ಕೆಎಸ್‌ಟಿಡಿಎಸ್ ಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು: ಡಿ.ಲಕ್ಷ್ಮೀವೆಂಕಟೇಶ್

 ಕೆಎಸ್‌ಟಿಡಿಎಸ್ ಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು: ಡಿ.ಲಕ್ಷ್ಮೀವೆಂಕಟೇಶ್


ಬೆಂಗಳೂರು: ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ ವಿವಿಧ ಘಟಕಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವರದಿಯಾಗಿರುವುದು ಸಂಪೂರ್ಣ ಸುಳ್ಳು ಎಂದು ಕೆಎಸ್‌ಟಿಡಿಸಿ ಎಂಪ್ಲಾಯಿಸ್ ಯೂನಿಯನ್ ಸ್ಪಷ್ಟಪಡಿಸಿದೆ.


ಈ ಕುರಿತು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಡಿ.ಲಕ್ಷ್ಮೀವೆಂಕಟೇಶ್ ಮಾತನಾಡಿ, ನಮ್ಮ ಸಂಘಟನೆಯ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲನುಂಡ ವರ್ಕಸ್ ಯೂನಿಯನ್‌ನ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯೋರ್ವರು ಈ ಎಲ್ಲಾ ಸುಳ್ಳು ಪ್ರಚಾರಗಳಿಗೆ ಕಾರಣಕರ್ತರಾಗಿರುತ್ತಾರೆ ಎಂದು ಆರೋಪಿಸಿದರು.


ಪರಾಜಿತ ವರ್ಕಸ್ ಯೂನಿಯನ್ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯು ಕೆಎಸ್‌ಟಿಡಿಸಿ ನಿಗಮದ ಅಧಿಕಾರಿ ವರ್ಗ, ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಬೆದರಿಕೆ, ಬ್ಲಾಕ್ ಮೇಲ್ ತಂತ್ರಗಳನ್ನು ಬಳಸಿ ಹಣ ವಸೂಲಿ ದಂಧೆಗಳಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.


ಪ್ರಧಾನ ಕಾರ್ಯದರ್ಶಿ ಎ.ಬಾಬು ಪೂಜಾರಿ ಮಾತನಾಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಆಡಳಿತ ಹಾಗೂ ನೌಕರರ ವಿರುದ್ಧ ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಆರೋಪಗಳು ಹಾಗೂ ಅಪಪ್ರಚಾರಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.


ನಿಗಮಕ್ಕೆ ಸಂಬಂಧಿಸಿದ ಸಚಿವರು, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಂಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ನೌಕರ ವರ್ಗವೂ ನಿಗಮದ ಅಭಿವೃದ್ಧಿಗೆ ಸಹಕರಿಸುತ್ತಿದೆ. ಆದರೆ ನಿಗಮದ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಆಧಾರರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್‌ಗಳಲ್ಲಿ ಪ್ರಸಾರ ಮಾಡುವುದರಿಂದ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಇಂತಹ ಬೆಳವಣಿಗೆಗಳಿಂದ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಕ್ಕೂ ಹೆಚ್ಚು ನೌಕರರ ಹಿತಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.


ಯೂನಿಯನ್ ಪದಾಧಿಕಾರಿ ಲಕ್ಷ್ಮೀಪತಿ ಮಾತನಾಡಿ, ನಿಗಮದ ಘನತೆಗೆ ಧಕ್ಕೆ ತರುವಂತಹ ಆಧಾರರಹಿತ ಆರೋಪಗಳು ಮತ್ತು ಅಪಪ್ರಚಾರಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದೃಶ್ಯ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳು ಯಾವುದೇ ಆರೋಪಗಳನ್ನು ಪ್ರಕಟಿಸುವ ಮುನ್ನ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.


ಯೂನಿಯನ್ ಗೌರವಾಧ್ಯಕ್ಷ ಗುರುಪ್ರಸಾದ್, ಪದಾಧಿಕಾರಿಗಳಾದ ಗೋಪಾಲ್, ಎಸಿ ಗುಂಡಯ್ಯಗೌಡ, ವಿನಯ್ ಇತರರಿದ್ದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ