ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರನ್ನು ಹೈಕೋರ್ಟ್ ಆದೇಶದಂತೆ ಖಾಯಂ ಗೊಳಿಸಿ: ಹೆಣ್ಣೂರು ಶ್ರೀನಿವಾಸ್‌

 ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರನ್ನು ಹೈಕೋರ್ಟ್ ಆದೇಶದಂತೆ ಖಾಯಂ ಗೊಳಿಸಿ: ಹೆಣ್ಣೂರು ಶ್ರೀನಿವಾಸ್‌

ಬೆಂಗಳೂರು: ರಾಜ್ಯದ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು, ಕಸ ವಿಲೇವಾರಿ ಗುತ್ತಿಗೆ ಡಿಪಿಎಸ್ ದಿನಗೂಲಿ ಕಾರ್ಮಿಕರನ್ನು ಐಡಿಪಿ ಸಾಲಪ್ಪ ವರದಿ ಆಧರಿಸಿದ ಸರ್ಕಾರಿ ಸುತ್ತೋಲೆ ಅನುಸಾರ ಖಾಯಂ ಕಾರ್ಮಿಕರಾಗಿ ವಿಲೀನ ಮಾಡಲು ಕರ್ನಾಟಕ ಉಚ್ಛ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಅದನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಪೌರಕಾರ್ಮಿಕ ಮತ್ತು ವರ್ಕರ್ಸ್ ಯೂನಿಯನ್ ನ ಗೌರವಾಧ್ಯಕ್ಷ ಹೆಣ್ಣೂರು ಶ್ರೀನಿವಾಸ್‌ ಆಗ್ರಹಿಸಿದರು.


ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿ ವರ್ಕರ್ಸ್ ಯೂನಿಯನ್ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ಪೌರಕಾರ್ಮಿಕರು, ಕಸ ವಿಲೇವರೇ ಗುತ್ತಿಗೆದಾರರ ಡಿಪಿಎ ದಿನಗೂಲಿ ನೌಕರರನ್ನು ಖಾಯಂ ಮಾಡಬೇಕೆಂದು ಕೇಳಿಕೊಳ್ಳಲಾಗಿದೆ. ಆದರೆ ಸರ್ಕಾರ ಮೀನಾ ಮೇಷ ಎನಿಸುತ್ತಿದ್ದು, ನಮ್ಮ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ದೂರಿದರು.


ಸಫಾಯಿ ಕರ್ಮಚಾರಿ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಯಾವುದೇ ರೀತಿಯ ಆರೋಗ್ಯ ಸುರಕ್ಷಾ ಯೋಜನೆಗಳು ಸಿಗದೇ ಇರುವುದು ಹಾಗೂ ಸರ್ಕಾರದಿಂದ ಇತರೆ ಯಾವುದೇ ರೀತಿಯ ಸವಲತ್ತುಗಳು ಸಿಗದೇ ಇರುವುದರಿಂದ ಪೌರಕಾರ್ಮಿಕರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ 38,000 ರೂ ವೇತನ ನೀಡಬೇಕು ಅದರ ಜೊತೆಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಚಾಚು ತಪ್ಪದೇ ನೀಡಬೇಕು ಎಂದು ಮನವಿ ಮಾಡಿದರು.


ರಾಜ್ಯದ ನಾಗರಿಕರನ್ನು ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸಲು ಪೌರಕಾರ್ಮಿಕರು ಸಾಕಷ್ಟು ಶ್ರಮಿಸುತ್ತಿದ್ದು, ಇವರುಗಳಿಗೆ ಕೈಗವಸಗಳು ಫೇಸ್ ಮಾಸ್ಕ ಹಾಗೂ ಶೂಗಳನ್ನು ಸರಿಯಾದ ಸಮಯಕ್ಕೆ ನೀಡಲಾಗುತ್ತಿಲ್ಲ. ದಶಕಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆ ಸಲ್ಲಿಸುತ್ತಿರುವ ಇವರುಗಳು  ಆಧುನಿಕ ಜೀತ ಪದ್ಧತಿಯಲ್ಲಿ ಕೆಲಸ ಮಾಡುವಂತಾಗಿದೆ. ಇವರಿಗೆ ಸೇವಾ ಭದ್ರತೆ ಇಲ್ಲದೆ ಇರುವುದು ಶೋಚನೀಯವಾಗಿದೆ. ಆದ್ದರಿಂದ ಐಡಿಪಿ ಸಾಲಪ್ಪ ವರದಿಯ ಅಂಗೀಕರಿಸಿ 98 ಶಿಫಾರಸುಗಳಲ್ಲಿ 38 ಶಿಫಾರಸುಗಳನ್ನು ಜಾರಿ ಮಾಡಲು ಸರ್ಕಾರಿ ಸುತ್ತೋಲೆ ಹೊರಡಿಸಬೇಕು ಎಂದರು. 


ಗ್ರಾಮ ಪಂಚಾಯಿತಿಗಳಲ್ಲಿ ಏಳುನೂರು ಜನಕ್ಕೆ ಒಬ್ಬ ಪೌರಕಾರ್ಮಿಕನನ್ನ ನೇಮಿಸಬೇಕೆಂದು ಆದೇಶವಾಗಿದೆ ಆದರೆ ಅವೆಲ್ಲವನ್ನು ಸಹ ಸರ್ಕಾರ ಗಾಳಿಗೆ ತೂರಿ ಪೌರಕಾರ್ಮಿಕರಿಗೆ ಯಾವುದೇ ಸವಲತ್ತು ನೀಡದೆ ವಂಚಿಸುತ್ತಿದೆ ಎಂದು 


ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ, ಮಹೇಶ್‌ ಉಪಾಧ್ಯಕ್ಷರೂಗಳಾದ ಜೇಶ್ವಾ ಹಾಗೂ ಶ್ರೀನಿವಾಸ್‌ ಜಂಟಿ ಕಾರ್ಯದರ್ಶಿ ನರಸಿಂಹಲು ಹಾಗೂ  ಯೂನಿಯನ್ ನ ಇತರ ಪದಾಧಿಕಾರಿಗಳು, ಪೌರಕಾರ್ಮಿಕರು ಇದೇ ವೇಳೆ ಉಪಸ್ಥಿತರಿದ್ದರು.

Comments

Popular posts from this blog

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ