ಫೈಲ್‌ನೇಮ್: ಕೆಎಸ್‌ಟಿಡಿಎಸ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು
ಫೈಲ್‌ನೇಮ್: ಕೆಎಸ್‌ಟಿಡಿಎಸ
ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು
ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ವಿವಿಧ ಘಟಕಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವರದಿಯಾಗಿರುವುದು ಸಂಪೂರ್ಣ ಸುಳ್ಳು ಎಂಬುದಾಗಿ ಕೆಎಸ್‌ಟಿಡಿಸಿ ಎಂಪ್ಲಾಯಿಸ್ ಯೂನಿಯನ್ ಸ್ಪಷ್ಟೀಕರಣ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಡಿ.ಲಕ್ಷ್ಮೀ ವೆಂಕಟೇಶ್ ಮಾತನಾಡಿ, ನಮ್ಮ ಸಂಘಟನೆಯ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲನುಂಡ ವರ್ಕಸ್ ಯೂನಿಯನ್‌ನ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯೋರ್ವರು ಈ ಎಲ್ಲಾ ಸುಳ್ಳು ಪ್ರಚಾರಗಳಿಗೆ ಕಾರಣ ಕರ್ತರಾಗಿರುತ್ತಾರೆ ಎಂದು ಆರೋಪಿಸಿದರು.
ಪರಾಜಿತ ವರ್ಕಸ್ ಯೂನಿಯನ್ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯು ಕೆಎಸ್‌ಟಿಡಿಸಿ ನಿಗಮದ ಅಧಿಕಾರಿ ವರ್ಗ, ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಬೆದರಿಕೆ, ಬ್ಲಾಕ್ ಮೇಲ್ ತಂತ್ರಗಳನ್ನು ಬಳಸಿ ಹಣ ವಸೂಲಿ ದಂಧೆಗಳಲ್ಲಿ ತೊಡಗಿರುತ್ತಾರೆ ಎಂದು ತಿಳಿಸಿದರು.
ಯೂನಿಯನ್ ಗೌರವಾಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಎ.ಬಾಬು ಪೂಜಾರಿ, ಪದಾಧಿಕಾರಿಗಳಾದ ಗೋಪಾಲ್, ಎಸಿ ಗುಂಡಯ್ಯಗೌಡ, ವಿನಯ್, ಲಕ್ಷ್ಮೀಪತಿ ಇತರರಿದ್ದರು.

Comments
Post a Comment