ಸೆ.27 ಕ್ಕೆ ಆಲ್ಕೋಹಾಲಿಕ್ಸ್ ಅನಾನಿಮಸ್ ವಾರ್ಷಿಕೋತ್ಸವ
ಸೆ.27 ಕ್ಕೆ ಆಲ್ಕೋಹಾಲಿಕ್ಸ್ ಅನಾನಿಮಸ್ ವಾರ್ಷಿಕೋತ್ಸ
ಬೆಂಗಳೂರು: ಆಲ್ಕೋಹಾಲಿಕ್ಸ್ ಅನಾನಿಮಸ್ ಬೆಂಗಳೂರು ಒಕ್ಕೂಟದ 62ನೇ ವಾರ್ಷಿಕೋತ್ಸವ ಸಮಾರಂಭ ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.30ಕ್ಕೆ ಜಯನಗರದ ಕಾರ್ಮೆಲ್ ಕಾನ್ವೆಂಟ್‌ನ ಮದರ್ ವೆರೋನಿಕಾ ಹಾಲ್‌ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪೊಲೀಸ್ ಮಹಾನಿರ್ದೇಶಕ ಜೆ. ಅರುಣ್ ಚಕ್ರವರ್ತಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಮದ್ಯವ್ಯಸನದಿಂದ ಹೊರಬರಲು ಬಯಸುವವರಿಗೆ ಪರಸ್ಪರ ಅನುಭವ, ಬಲ ಮತ್ತು ಭರವಸೆಯನ್ನು ಹಂಚಿಕೊಳ್ಳುವ ವೇದಿಕೆಯಾಗಿ ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ವಿವಿಧೆಡೆ ಪ್ರತಿದಿನ ಸುಮಾರು 120 ಸಭೆಗಳು ಸಂಸ್ಥೆಯ ವತಿಯಿಂದ ನಡೆಯುತ್ತಿದ್ದು, 12 ಹೆಜ್ಜೆಗಳ ಚೇತರಿಕೆ ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿಗೆ ಮದ್ಯಪಾನದಿಂದ ದೂರವಿರಲು ನೆರವಾಗುತ್ತಿದೆ.
ಪ್ರಸ್ತುತ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಸದಸ್ಯರು ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಸ್ಥೆಯನ್ನು ಅನ್ನು ತಮ್ಮ ಚೇತರಿಕೆಯ ಸಾಧನವಾಗಿ ಬಳಸುತ್ತಿದ್ದಾರೆ. ಮದ್ಯಪಾನವನ್ನು ನಿಲ್ಲಿಸುವ ಬಯಕೆಯೇ ಇದರ ಸದಸ್ಯತ್ವಕ್ಕೆ ಇರುವ ಏಕೈಕ ಅರ್ಹತೆಯಾಗಿದ್ದು, ಯಾವುದೇ ಶುಲ್ಕ ಅಥವಾ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿಲ್ಲ, ಧರ್ಮ, ಪಂಥ, ರಾಜಕೀಯ ಪಕ್ಷ ಅಥವಾ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಮದ್ಯಪಾನದಿಂದ ದೂರವಿರುವುದು ಹಾಗೂ ಇತರ ಮದ್ಯವ್ಯಸನಿಗಳಿಗೂ ಚೇತರಿಕೆಗೆ ನೆರವಾಗುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಹೆಚ್ಚಿನh ಮಾಹಿತಿಗಾಗಿ 98455 87507/ 99022 62316 ಸಂಪರ್ಕಿಸಬಹುದು ಎಂದು ಆಲ್ಕೋಹಾಲಿಕ್ಸ್ ಅನಾನಿಮಸ್ ಕರ್ನಾಟಕ ಏರಿಯಾ ಕಮಿಟಿ–1ರ ಅಧ್ಯಕ್ಷರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Comments
Post a Comment