Posts

ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಆಯುಷ್ ವೈದ್ಯರುಗಳಿಂದ ಬೃಹತ್ ಪ್ರತಿಭಟನೆ*

Image
 *ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಆಯುಷ್ ವೈದ್ಯರುಗಳಿಂದ ಬೃಹತ್ ಪ್ರತಿಭಟನೆ* ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯುಶ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕದ ವತಿಯಿಂದ ಆಯುಷ್ ವೈದ್ಯರ ಬಹುದಿನಗಳ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ 22ರಂದು ರಾಯಚೂರು ಚಲೋ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹದ ಕುರಿತು ಅಧ್ಯಕ್ಷರಾದ ಡಾ||ಮೋಹನ್ ಬಿರಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಆನಂದ್ ಕಿರಿಶಾಳ, ಪದಾಧಿಕಾರಿಗಳಿಂದ ಮಾಧ್ಯಮಗೋಷ್ಟಿ. ಅಧ್ಯಕ್ಷರಾದ ಡಾ.ಮೋಹನ್ ಬಿರಾದಾರ ರವರು ಮಾತನಾಡಿ ಆಯುಷ್ ಇಲಾಖೆಯ ವೈದ್ಯರುಗಳಿಗೆ ಸಂಬಳ ಹೆಚ್ಚಳವಿಲ್ಲ ಮತ್ತು ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಂಡು ವಿಡಿಯೊ ಮಾಡುವುದು, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆಯುಷ್ ವೈದ್ಯರುಗಳು ಬಹುದಿನಗಳಿಂದ ವಿವಿಧ ಬೇಡಿಕೆಗಳು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು ನಮ್ಮ ಮನವಿ ಸರ್ಕಾರ ಸ್ಪಂದನೆ ಮಾಡಿಲ್ಲ ಅದ್ದರಿಂದ ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಮುಷ್ಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ 32ಜಿಲ್ಲೆಗಳಿಂದ ಆಯುಷ್ ವೈದ್ಯರುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಆಯುಷ್ ವೈದ್ಯರುಗಳಿಗೆ ಆಧುನಿಕ ಔಷಧ ಬಳಕೆ, ವೃತಿಪರ ಹಕ್ಕುಗಳು ಮತ್ತು ಸೇವಾ ಅವಕಾಶಗಳು ಹಾಗೂ ಕೆ.ಪಿ.ಎಂ.ಇ. ಕಾಯಿದೆಯಲ್ಲಿ ದೂರು ಸೂಕ್ತ ಪರಿಶೀಲನೆ ಹಲವಾರು ಬೇಡಿಕೆಗಳಿಗಾಗಿ ಸಂಘಟನೆ ಹೋರಾಟ ಮಾಡಲಾಗುತ್ತಿದೆ....

ಕಸ್ತೂರಿ ಕರ್ನಾಟಕ ಸಂಘಟನೆಗಳ ಒಕ್ಕೂಟ(ರಿ) ಸಹಯೋಗದೊಂದಿಗೆ ಪತ್ರಿಕಾಗೋಷ್ಠಿ ನಡೆಸಲಾಯಿತು

Image
 ಕಸ್ತೂರಿ ಕರ್ನಾಟಕ ಸಂಘಟನೆಗಳ ಒಕ್ಕೂಟ(ರಿ) ಸಹಯೋಗದೊಂದಿಗೆ ಪತ್ರಿಕಾಗೋಷ್ಠಿ ನಡೆಸಲಾಯಿತು  ಕರ್ನಾಟಕ ದಲಿತ ಸಂರಕ್ಷಣಾ ಸೇನೆ(ರಿ), ಡ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ(ರಿ) ವಿಶ್ವರತ್ನ ಅಂಬೇಡ್ಕರ್ ಸೇನೆ(ರಿ), ಪ್ರಜಾಪ್ರಭುತ್ವ ಜನಸೇವಾ ಸಮತಿ(ಲ) ಜೈಭೀಮ್ ಅಂಬೇಡ್ಕರ್ ಸಮಿತಿ(ರಿ) ಪ್ರಜಾಶಕ್ತಿ ಜನಪರ ವೇದಿಕೆ(ರಿ) ಜೈಭೀಮ್ ಸಾಮ್ರಾಜ್ಯ(ರಿ) ಕರ್ನಾಟಕ ಕಟ್ಟಡ ಕೂಲಿ ಕಾರ್ಮಿಕರ ರಕ್ಷಣಾ ವೇದಿಕೆ(ರಿ) ಹೊಸಬೆಳಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ರಿ) ಮಹಾನಾಯಕ ಅಂಬೇಡ್ಕರ್ ಸಮಿತಿ(ರಿ) ಸಂಘಟನೆಗಳವತಿಯಿಂದ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಸರ್ಕಾರಿ ಗೋಮಾಳ ಜಮೀನು ಅತಿಕ್ರಮಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಲಪಟಾಯಿಸಿ ಇದೀಗ ಕೆಲ ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಒತ್ತಡದಿಂದ ಪ್ರತಿಭಟನಾಕಾರರ ಮೇಲೆ ಸುಳ್ಳು ಎಫ್.ಐ.ಆರ್ ದಾಖಲಿಸಿ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿ ಪತ್ರಿಕಾ ಗೋಷ್ಠಿ ಕರೆಯಲಾಗಿದೆ. ಜೈಭೀಮ್ ಬಂಧುಗಳೇ, ಗೂಳ್ಯನಂದಿಗುಂದ ಗ್ರಾಮದ ಜಮೀನು ವಿವಾದದ ಕುರಿತು ನ್ಯಾಯಯುತ ತನಿಖೆಗೆ ಆಗ್ರಹಿಸಿ ಮೇಲ್ಕಂಡ ಸಂಘಟನೆಗಳ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ, ಗೂಳ್ಯ ನಂದಿಗುಂದ ಗ್ರಾಮದ ಸರ್ವೆ ನಂ.28 ರಲ್ಲಿ 8-14 ಎಕರೆ ಜಮೀನು ಹಾಗೂ ಸರ್ವೆ ನಂ. 30 ರಲ್ಲಿ 4-30 ಎಕರೆ ಸರ್ಕಾರಿ ಗೋಮಾಳ ಜಮೀನಿಗೆ ನಕಲಿ/ಅಕ್ರಮ ದಾಖಲಾತಿಗಳ...

ಜಯನಗರದಲ್ಲಿ 44 ಸಾವಿರ ಎಸ್‌ಐಆರ್ ನೋಟಿಸ್ ಅರ್ಹ ಮತದಾರರ ಹೆಸರು ಕೈತಪ್ಪದಂತೆ ವಿಶೇಷ ಶಿಬಿರ: ರಮೇಶ್ ಕೆ.ಎನ್.

Image
  ಜಯನಗರದಲ್ಲಿ 44 ಸಾವಿರ ಎಸ್‌ಐಆರ್ ನೋಟಿಸ್ ಅರ್ಹ ಮತದಾರರ ಹೆಸರು ಕೈತಪ್ಪದಂತೆ ವಿಶೇಷ ಶಿಬಿರ: ರಮೇಶ್ ಕೆ.ಎನ್. * *ಬೆಂಗಳೂರು: * * ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಹಿನ್ನೆಲೆಯಲ್ಲಿ ಅರ್ಹ ಮತದಾರರೊಬ್ಬರೂ ಮತದಾರರ ಪಟ್ಟಿಯಿಂದ ಕೈತಪ್ಪದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜಯನಗರ ವಿಧಾನಸಭಾ ಕ್ಷೇತ್ರವೊಂದರಲ್ಲೇ ಸುಮಾರು 44 ಸಾವಿರ ನೋಟಿಸ್‌ಗಳನ್ನು ನೀಡಲಾಗಿದ್ದು, ನೋಟಿಸ್‌ ಪಡೆದವರು ನಿಗದಿತ ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ದಕ್ಷಿಣ ನಗರಪಾಲಿಕೆ ಆಯುಕ್ತ ರಮೇಶ್ ಕೆ.ಎನ್. ಮನವಿ ಮಾಡಿದರು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಎಸ್‌ಐಆರ್ ವಿಶೇಷ ಅಭಿಯಾನ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪ್ರತಿಯೊಬ್ಬರೂ ಪರಿಶೀಲಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರು ನಮೂನೆ–6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ 2002ರ ಮತದಾರರ ಪಟ್ಟಿಯ ವಿವರಗಳನ್ನು ಸರಿಯಾಗಿ ನೀಡದಿರುವುದು, ಹೆಸರು ಅಥವಾ ವಯಸ್ಸಿನಲ್ಲಿ ವ್ಯತ್ಯಾಸ, ತಂದೆ–ಮಗನ ವಯಸ್ಸಿನ ಅಸಂಗತತೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ ಪಡೆದವರು ಆತಂಕಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕದಂದು ವಿಚಾರ...

Schools of India Education Summit 2026 to Bring Education Leaders Together in Khopoli

Image
  Schools of India Education Summit 2026 to Bring Education Leaders Together in Khopoli Bengaluru, September 16 : The three-day Schools of India Education Summit 2026, focusing on emerging challenges, opportunities and innovations in school education, will be held at Novotel Imagica, Khopoli, Maharashtra, from October 30 to November 1. The national-level summit will bring together educationists, school founders, principals, policymakers, researchers and experts in artificial intelligence (AI) and educational technology to discuss the future of school education in India. The summit was announced at a press meet held at the Press Club of Bangalore on Wednesday in the presence of The School of India founder Ankit Pushparaj Verma, Dhruv Global Schools Director Anishkaa Malpani and others. The conference is being organised under the guidance of Yashvardhan Malpani, Director, Malpani Group. The discussions will focus on integrating technology with traditional educational values, the grow...

ವಿದ್ಯಾರ್ಥಿಗಳಿಗೆ ಶಿಸ್ತು ಬೆಳೆಸುವಲ್ಲಿ ಸ್ಕೌಟ್ಸ್- ಗೈಡ್ಸ್ ಸಂಸ್ಥೆಯ ಪಾತ್ರ ಅನನ್ಯ: ರಾಮಲಿಂಗಾರೆಡ್ಡಿ

Image
  ವಿದ್ಯಾರ್ಥಿಗಳಿಗೆ ಶಿಸ್ತು ಬೆಳೆಸುವಲ್ಲಿ ಸ್ಕೌಟ್ಸ್- ಗೈಡ್ಸ್ ಸಂಸ್ಥೆಯ ಪಾತ್ರ ಅನನ್ಯ: ರಾಮಲಿಂಗಾರೆಡ್ಡ ಬೆಂಗಳೂರು : ವಿದ್ಯಾರ್ಥಿಗಳಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ ಹಾಗೂ  ಉತ್ತಮ ಮನಸ್ಥಿತಿ ಬೆಳೆಸುವಲ್ಲಿ ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕ್ರೀಡಾ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ  ಹೇಳಿದರು. ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳ ಓದಿಗೆ ಸೀಮಿತವಾಗಬಾರದು. ಓದಿನ ಜತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ಶಿಸ್ತು, ಸಮಯಪಾಲನೆ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಖಂಡಿಸಿ ಬೆಂಬಲಿಗರಿಂದ ಪ್ರತಿಭಟನೆ

Image
 ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಖಂಡಿಸಿ ಬೆಂಬಲಿಗರಿಂದ ಪ್ರತಿಭಟನೆ ಬೆಂಗಳೂರು: ರಾಜಕೀಯ ಪ್ರೇರಿತವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಆರೋಪಿಸಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಶುಕ್ರವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ಸಂಘದ ಹೂದಿಗೆರೆ ರಮೇಶ್ ಹಾಗೂ ಕೆಪಿಸಿಸಿ ಕಾನೂನು ಘಟಕದ ಕಾರ್ಯಾಧ್ಯಕ್ಷ ಅನಂತ್ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟಿಸಿದ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಾರೆ ಎಂಬ ಭೀತಿಯಿಂದ ರಾಜಕೀಯ ಪ್ರೇರಿತವಾಗಿ ಇಡಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಈ ರೀತಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು ಖಂಡನೀಯ. ಸತೀಶ್ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗುವ ಸಾವಿರಾರು ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ. ಹೀಗೆ ಹತ್ತು ಹಲವು ಸಮಾಜ ಸುಧಾರಣೆಯಲ್ಲಿ ತೊಡಗಿರುವ ಅವರ ಏಳ್ಗೆಯನ್ನು ಸಹಿಸದೆ ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ...

ಸಾಹಿತ್ಯದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ: ಪದ್ಮಶ್ರೀ ಡಾ. ದೊಡ್ಡರಂಗೇಗೌಡ

Image
 ಸಾಹಿತ್ಯದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ: ಪದ್ಮಶ್ರೀ ಡಾ. ದೊಡ್ಡರಂಗೇಗೌಡ  ಬೆಂಗಳೂರು: ಜ್ಞಾನವೇ ಶಕ್ತಿ, ಆ ಜ್ಞಾನ ಮತ್ತು ಸಂಸ್ಕೃತಿಯನ್ನು ಜಾಗೃತಗೊಳಿಸಿ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆ. ಅದರಿಂದಲೇ ಸಮಾಜದ ಪರಿವರ್ತನೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕವಿ ಹಾಗೂ ಸಾಹಿತಿ ಡಾ. ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು. ಬೆಂಗಳೂರು ವಕೀಲರ ಸಾಹಿತ್ಯ ಕೂಟದ ವತಿಯಿಂದ ಸಾಹಿತ್ಯ ಲೋಕದ ಹಿರಿಯ ಕವಿ ಹಾಗೂ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಾಹಿತ್ಯ ಸಿಂಧು ಎನ್ನುವ ಬಿರುದನ್ನು ಅವರಿಗೆ ನೀಡಿ ಗೌರವಿಸಲಾಯಿತು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಎನ್ನುವುದು ಕೇವಲ ಶಬ್ದಗಳ ಜೋಡಣೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ ಮತ್ತು ವೈಚಾರಿಕ ಜಾಗೃತಿಯನ್ನು ನೀಡುವ ದಿವ್ಯ ಶಕ್ತಿ. ಇಂದಿನ ಆಧುನಿಕ ಯುಗದಲ್ಲಿ, ಸಮಾಜದ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು. ಜ್ಞಾನದ ಶಕ್ತಿಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಒಬ್ಬ ವ್ಯಕ್ತಿಯ ಬೆಳವಣಿಗೆಗೆ, ಬುದ್ಧಿವಂತಿಕೆಗೆ ಹಾಗೂ ಆತನ ವ್ಯಕ್ತಿತ್ವದ ವಿಕಸನಕ್ಕೆ ಜ್ಞಾನ ಮತ್ತು ಉತ್ತಮ ಅಭಿರುಚಿಗಳೇ ಪ್ರಮುಖ ಕಾರಣವಾಗುತ್ತವೆ.ಇಂದಿನ ತಂತ್ರಜ್ಞಾನದ ಓಟದಲ್ಲಿ ಮೊಬೈಲ್ ಮತ್ತು...

ಜಾಣ ಕುರುಡು, ಜಾಣ ಮೌನದ ,ಬಿಜೆಪಿ ಪಕ್ಷ ತಂದೆ ಮಕ್ಕಳ ಪಕ್ಷ,*

Image
 *ಜಾಣ ಕುರುಡು, ಜಾಣ ಮೌನದ ,ಬಿಜೆಪಿ ಪಕ್ಷ ತಂದೆ ಮಕ್ಕಳ ಪಕ್ಷ,*  *ಕಾರ್ಯಕರ್ತರನ್ನ ಬಳಸಿಕೊಂಡು ದೂರ ಮಾಡುತ್ತಾರೆ, ಕೆಲಸ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆಯಿಲ್ಲ* *ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 150ಸ್ಥಾನ ಗೆಲುವಿಗೆ ಶ್ರಮಿಸುತ್ತೇನೆ- ನೆ.ಲ.ನರೇಂದ್ರಬಾಬು* ಬೆಂಗಳೂರು:ಮೌರ್ಯ ಹೋಟೆಲ್ ಸಭಾಂಗಣ: ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ನೆ.ಲ.ನರೇಂದ್ರ ಬಾಬುರವರು ಬಿಜೆಪಿ ಪಕ್ಷದ ಹಿಂದುಳಿದ ವರ್ಗ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ , ಮುಂದಿನ ರಾಜಕೀಯ ನಡೆ ಕುರಿತು ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. *ನೆ.ಲ.ನರೇಂದ್ರಬಾಬುರವರು* ಮಾತನಾಡಿ ಮಹಾನಗರ ಪಾಲಿಕೆ ಸದಸ್ಯನಾಗಿ ಮೂರು ಬಾರಿ  ಮತ್ತು ಎರಡು ಬಾರಿ ಶಾಸಕನಾಗಿ ಕಳೆದ 40ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಇಂದು ಬಿಜೆಪಿ ಪಕ್ಷಕ್ಕೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕಳೆದ 10ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನನ್ನನ ಸಮರ್ಪಣೆ ಮಾಡಿಕೊಂಡೆ ಅದರೆ ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ   ನನ್ನ ಮತ್ತು ನನ್ನ ಕಾರ್ಯಕರ್ತರನ್ನು ದೂರಮಾಡಿದರು ಮತ್ತು ನನ್ನ ವಿರುದ್ದ ಪಿತೂರಿ ಮಾಡಿದವರ ಮೇಲೆ  ಕ್ರಮ ಕೈಗೊಳ್ಳಲ್ಲಿ...

ಕೆಎಸ್‌ಟಿಡಿಎಸ್ ಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು: ಡಿ.ಲಕ್ಷ್ಮೀವೆಂಕಟೇಶ್

Image
 ಕೆಎಸ್‌ಟಿಡಿಎಸ್ ಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು: ಡಿ.ಲಕ್ಷ್ಮೀವೆಂಕಟೇಶ್ ಬೆಂಗಳೂರು: ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ ವಿವಿಧ ಘಟಕಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವರದಿಯಾಗಿರುವುದು ಸಂಪೂರ್ಣ ಸುಳ್ಳು ಎಂದು ಕೆಎಸ್‌ಟಿಡಿಸಿ ಎಂಪ್ಲಾಯಿಸ್ ಯೂನಿಯನ್ ಸ್ಪಷ್ಟಪಡಿಸಿದೆ. ಈ ಕುರಿತು ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಡಿ.ಲಕ್ಷ್ಮೀವೆಂಕಟೇಶ್ ಮಾತನಾಡಿ, ನಮ್ಮ ಸಂಘಟನೆಯ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲನುಂಡ ವರ್ಕಸ್ ಯೂನಿಯನ್‌ನ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯೋರ್ವರು ಈ ಎಲ್ಲಾ ಸುಳ್ಳು ಪ್ರಚಾರಗಳಿಗೆ ಕಾರಣಕರ್ತರಾಗಿರುತ್ತಾರೆ ಎಂದು ಆರೋಪಿಸಿದರು. ಪರಾಜಿತ ವರ್ಕಸ್ ಯೂನಿಯನ್ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯು ಕೆಎಸ್‌ಟಿಡಿಸಿ ನಿಗಮದ ಅಧಿಕಾರಿ ವರ್ಗ, ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಬೆದರಿಕೆ, ಬ್ಲಾಕ್ ಮೇಲ್ ತಂತ್ರಗಳನ್ನು ಬಳಸಿ ಹಣ ವಸೂಲಿ ದಂಧೆಗಳಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಎ.ಬಾಬು ಪೂಜಾರಿ ಮಾತನಾಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಆಡಳಿತ ಹಾಗೂ ನೌಕರರ ವಿರುದ್ಧ ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಆರೋಪಗಳು ಹಾಗೂ ಅಪಪ್ರಚಾರಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ನ...

ಫೈಲ್‌ನೇಮ್: ಕೆಎಸ್‌ಟಿಡಿಎಸ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು

Image
 ಫೈಲ್‌ನೇಮ್: ಕೆಎಸ್‌ಟಿಡಿಎಸ ಭ್ರಷ್ಟಾಚಾರ ನಡೆದಿದೆ ಎನ್ನುವ ವರದಿ ಸಂಪೂರ್ಣ ಸುಳ್ಳು ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ವಿವಿಧ ಘಟಕಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ವರದಿಯಾಗಿರುವುದು ಸಂಪೂರ್ಣ ಸುಳ್ಳು ಎಂಬುದಾಗಿ ಕೆಎಸ್‌ಟಿಡಿಸಿ ಎಂಪ್ಲಾಯಿಸ್ ಯೂನಿಯನ್ ಸ್ಪಷ್ಟೀಕರಣ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಡಿ.ಲಕ್ಷ್ಮೀ ವೆಂಕಟೇಶ್ ಮಾತನಾಡಿ, ನಮ್ಮ ಸಂಘಟನೆಯ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲನುಂಡ ವರ್ಕಸ್ ಯೂನಿಯನ್‌ನ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯೋರ್ವರು ಈ ಎಲ್ಲಾ ಸುಳ್ಳು ಪ್ರಚಾರಗಳಿಗೆ ಕಾರಣ ಕರ್ತರಾಗಿರುತ್ತಾರೆ ಎಂದು ಆರೋಪಿಸಿದರು. ಪರಾಜಿತ ವರ್ಕಸ್ ಯೂನಿಯನ್ ಅಧ್ಯಕ್ಷರೆನಿಸಿಕೊಂಡ ವ್ಯಕ್ತಿಯು ಕೆಎಸ್‌ಟಿಡಿಸಿ ನಿಗಮದ ಅಧಿಕಾರಿ ವರ್ಗ, ಕಾರ್ಮಿಕರು ಮತ್ತು ಗುತ್ತಿಗೆದಾರರಿಗೆ ಬೆದರಿಕೆ, ಬ್ಲಾಕ್ ಮೇಲ್ ತಂತ್ರಗಳನ್ನು ಬಳಸಿ ಹಣ ವಸೂಲಿ ದಂಧೆಗಳಲ್ಲಿ ತೊಡಗಿರುತ್ತಾರೆ ಎಂದು ತಿಳಿಸಿದರು. ಯೂನಿಯನ್ ಗೌರವಾಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಎ.ಬಾಬು ಪೂಜಾರಿ, ಪದಾಧಿಕಾರಿಗಳಾದ ಗೋಪಾಲ್, ಎಸಿ ಗುಂಡಯ್ಯಗೌಡ, ವಿನಯ್, ಲಕ್ಷ್ಮೀಪತಿ ಇತರರಿದ್ದರು.

ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ.

Image
 ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ.   ಬೆಂಗಳೂರು ಸೆಪ್ಟೆಂಬರ್ 8; ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ 17ನೇ ಪದವಿ ಪ್ರದಾನ ಸಮಾರಂಭ ಇಂದು ನಡೆಯಿತು.  ಆರ್‌ಆರ್‌ಎಮ್‌ ಸಿಎಚ್ ಕ್ಯಾಂಪಸ್ ನ ಎಸಿಎಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 736 ಪದವೀಧರ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದರು. ಪದವಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷ ಡಾ. ಎ.ಸಿ. ಷಣ್ಮುಗಂ,ಇಸ್ರೋ  ವಿಜ್ಞಾನಿ, ಚಂದ್ರಯಾನ ಯೋಜನಾ ನಿರ್ದೇಶಕ ಮತ್ತು ಮಿಷನ್ ಡೈರೆಕ್ಟರ್ ಡಾ. ಪಿ. ವೀರಮುತ್ತುವೇಲ್,ಇನ್ಫೋಸಿಸ್ ಲಿಮಿಟೆಡ್‌ ಸಹಾಯಕ ಉಪಾಧ್ಯಕ್ಷ ವಿಕ್ಟರ್ ಸುಂದರರಾಜ,ವಿಪ್ರೋ ಲಿಮಿಟೆಡ್‌ನ ಜಾಗತಿಕ ಕಾರ್ಯತಂತ್ರದ ನೇಮಕಾತಿ ಮುಖ್ಯಸ್ಥ ಪ್ರವೀಣ್ ಕಾಮತ್ ಪದವಿ ಪ್ರಧಾನ ಮಾಡಿದರು ಪದವೀಧರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಎ.ಸಿ. ಷಣ್ಮುಗಂ, ಭವಿಷ್ಯವನ್ನು ಮಹತ್ವಾಕಾಂಕ್ಷೆ, ಜವಾಬ್ದಾರಿ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಬದ್ಧತೆಯೊಂದಿಗೆ ಎದುರಿಸಬೇಕು,ಯುವ ವೃತ್ತಿಪರರ ಜೀವನ ಮತ್ತು ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಪೋಷಕರ ಬೆಂಬಲ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಸ್ಮರಿಸುವ ಅಗತ್ಯವನ್ನು ಅವರು ಒತ್ತು ನೀಡಿದರು. ಪದವೀಧರರು ಕೇವಲ ವೈಯಕ್ತಿಕ ಯಶಸ್ಸನ್ನು ಮಾತ್ರವಲ್ಲದೆ, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾದ ಪ್ರಗತಿಯನ್ನು ಸಾ...

ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿ ಜಿ.ಟಿ ದೇವೇಗೌಡ, ಉಪಾಧ್ಯಕ್ಷರಾಗಿ ಬಿ.ಕೆ. ಶಿವಕುಮಾರ್ ಆಯ್ಕೆ

Image
 ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿ ಜಿ.ಟಿ ದೇವೇಗೌಡ, ಉಪಾಧ್ಯಕ್ಷರಾಗಿ ಬಿ.ಕೆ. ಶಿವಕುಮಾರ್ ಆಯ್ಕೆ ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ನೂತನ ಅಧ್ಯಕ್ಷರಾಗಿ  ಶಾಸಕ ಜಿ.ಟಿ ದೇವೇಗೌಡ ಹಾಗೂ ಉಪಾಧ್ಯಕ್ಷರಾಗಿ ಬಿ.ಕೆ. ಶಿವಕುಮಾರ್ ಶುಕ್ರವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈಸೂರು ವಿಭಾಗದಿಂದ ಜಿ.ಟಿ. ದೇವೇಗೌಡ, ಬಿ.ಸಿ.ಲೋಕಪ್ಪಗೌಡ, ಬಿ.ಶಶಿಕುಮಾ‌ರ್ ರೈ. ಬೆಂಗಳೂರು ವಿಭಾಗದಿಂದ ಎಚ್.ಎನ್ ಅಶೋಕ, ಬಿ.ಕೆ. ಶಿವಕುಮಾರ್, ಕೆ.ಪಿ. ಚನ್ನಬೈರೇಗೌಡ, ಕೆ. ಸುನೀಲ್, ಬೆಳಗಾವಿ ವಿಭಾಗದಿಂದ ಜಗದೀಶ್ ಎಂ. ಕವಟಗಿಮಠ, ಕಾಶಿಲಿಂಗ ಬಿ. ಹುಡೇದ, ಕೃಷ್ಣಗೌಡ ಪಾಟೀಲ್‌, ಕಲಬುರಗಿ ವಿಭಾಗದಿಂದ ಜೆ.ಎಂ. ಶಿವಪ್ರಸಾದ್, ಅಭಿಷೇಕ ಆರ್. ಪಾಟೀಲ್, ವಿಶ್ವನಾಥರೆಡ್ಡಿ ಎಸ್. ದರ್ಶನಾಪೂರ ಆಯ್ಕೆಯಾಗಿದ್ದಾರೆ. ಇತರೆ ಸಹಕಾರ ಸಂಸ್ಥೆಗಳ ಕ್ಷೇತ್ರದಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಚುನಾಯಿತರಾಗಿದ್ದಾರೆ. ಈ ಕುರಿತು ಮಾತನಾಡಿರುವ ಜಿ.ಟಿ ದೇವೇಗೌಡ ಅವರು, ರಾಜ್ಯದ 48 ಸಾವಿರಕ್ಕೂ ಅಧಿಕ ಸಹಕಾರ ಸಂಸ್ಥೆಗಳ ಮಾತೃ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಕಳೆದ 102 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಹಕಾರ ಮಹಾಮಂಡಳದ ಎಲ್ಲ ಕಾರ್ಯಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಲಕ...

1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ

Image
1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ 1,000 ಮಕ್ಕಳ ಕಾಂಡಕೋಶ ಕಸಿ ಮೈಲಿಗಲ್ಲು ಸಾಧನೆ; ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ವಿಶೇಷ ಆಚರಣೆ ಬೆಂಗಳೂರು, ಸೆಪ್ಟೆಂಬರ್ 4, 2026: ತಲಸೇಮಿಯಾ ಸೇರಿದಂತೆ ತೀವ್ರ ಅನುವಂಶಿಕ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳಿಗೆ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ (ಕಾಂಡಕೋಶ ಕಸಿ) ಯಶಸ್ವಿಯಾಗಿ ನೆರವೇರಿಸಿದ್ದು, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಈ ಸಾಧನೆಯನ್ನು “1,000 ಹೊಸ ಆರಂಭಗಳು” ಎಂಬ ಪರಿಕಲ್ಪನೆಯಡಿ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಪಾಲುದಾರ ಸಂಸ್ಥೆ ಕ್ಯೂರ್2ಚಿಲ್ಡ್ರನ್ ಫೌಂಡೇಶನ್ ನಡುವಿನ ದಶಕಕ್ಕೂ ಅಧಿಕ ಕಾಲದ ಸಹಭಾಗಿತ್ವದ ಪ್ರಮುಖ ಸಾಧನೆಯಾಗಿ ಈ ಮೈಲಿಗಲ್ಲು ಗುರುತಿಸಿಕೊಂಡಿದೆ. ತೀವ್ರ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ರಕ್ತಪೂರಣ ಮತ್ತು ದೀರ್ಘಕಾಲದ ಚಿಕಿತ್ಸೆಯ ಅವಲಂಬನೆಯಿಂದ ಹೊರಬಂದು ಆರೋಗ್ಯಕರ ಜೀವನ ನಡೆಸುವ ಅವಕಾಶವನ್ನು ಈ ಟ್ರಾನ್ಸ್‌ಪ್ಲಾಂಟೇಶನ್ ಕಾರ್ಯಕ್ರಮ ಒದಗಿಸುತ್ತಿದೆ. 820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸೆಗೆ DK...

ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ, ಪ್ರಾಮಾಣಿಕವಾಗಿ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಮನವಿ*

Image
 *ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ, ಪ್ರಾಮಾಣಿಕವಾಗಿ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಮನವಿ* ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಸಮಿತಿ ವತಿಯಿಂದ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. ಡಾ||ಹನುಂತಪ್ಪ ಕಳಾಸಪುರ, ಡಾ.ಗುರುಬಸವರಾಜ್, ಡಾ.ಪೂಜ್.ಹೆಚ್., ಡಾ.ಅವಿನಾಶ್ ಬಿರಡಿ, ಡಾ.ಸುನೀಲ್,ಡಾ.ಚಾಂದಿನಿ.ಎನ್.ಡಾ.ಶ್ರೀಶೈಲ್, ಡಾ.ತನ್ವಿತ್, ಡಾ.ಪ್ರಿಯಾಂಕ, ಡಾ.ವಿಕಾಸ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ||ಹನುಮಂತಪ್ಪ ಕಳಸಾಪುರರವರು ಮಾತನಾಡಿ ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಸೇವೆಗಳು ಅತ್ಯಂತ ಅಗತ್ಯ ಸೇವೆಗಳು ಆಗಿದೆ. ಇತ್ತಿಚೇಗೆ 329 ಪಶುವೈದ್ಯಾಧಿಕಾರಿ ಪೈಕಿ 29ಪಶುವೈದ್ಯಾಧಿಕಾರಿ ಮೇಲೆ ಪರೀಕ್ಷೆಯಲ್ಲಿ ವಂಚನೆ, ಕಾಪಿ ಮಾಡಿ ಆಯ್ಕೆಯಾಗಿದ್ದಾರೆ ಎಂದು ಸಿಐಡಿ ಎಫ್.ಐ.ಆರ್.ದಾಖಲಿಸಿದ್ದಾರೆ. ಸುಪ್ರಿಂಕೋರ್ಟ್ ನಲ್ಲಿ ಹಲವಾರು ಪ್ರಕರಣದಲ್ಲಿ ಕಳಂಕಿತರ ಮೇಲೆ ಕ್ರಮ ಮತ್ತು ಪ್ರಾಮಾಣಿಕ ಪಾಸಾದ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿ ಎಂದು ತೀರ್ಪು ನೀಡಿದ್ದಾರೆ ಅದೇ ಮಾದರಿಯಲ್ಲಿ ಇಲ್ಲಿ ಕ್ರಮ ಕೈಗೊಳ್ಳಿ ಕಳಂಕಿತರ ಮೇಲೆ ಕ್ರಮ ನಮಗೆ ನೇಮಕಾತಿ ಆದೇಶ ಪತ್ರ ನೀಡಿ. ಸಿಐಡಿ ಕಛೇರಿ ನಮ್ಮನ್ನ ಕರೆದರೆ ಹೋಗುತ್ತೇವೆ ನಮಗೆ ಯಾವುದೇ ಆಳುಕಿಲ್ಲ, ಭಯವಿಲ್ಲ. ನಾವು ತನಿಖೆಯನ್ನ ವಿರೋಧಿಸುವುದಿಲ್ಲ. ವಿನಾ...

ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಎಸ್‌ಐಆರ್ ಹಂತ-2 ತರಬೇತಿ ಶಿಬಿರ

Image
 ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಎಸ್‌ಐಆರ್ ಹಂತ-2 ತರಬೇತಿ ಶಿಬಿರ     ಆಗಸ್ಟ್ 28  : ಜಯನಗರ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಹಂತ-2 ರ ತರಬೇತಿ ಶಿಬಿರವನ್ನು ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಬಿಎಲ್‌ಒ, ಬಿಎಲ್‌ಒ ಮೇಲ್ವಿಚಾರಕರು, ಎಇಆರ್‌ಒ ಹಾಗೂ ಇಆರ್‌ಒ ಅಧಿಕಾರಿಗಳು ಭಾಗವಹಿಸಿದ್ದರು.  ಸೌತ್ ಸಿಟಿ ಕಾರ್ಪೊರೇಷನ್‌ನ ಎಲೆಕ್ಷನ್ ತಹಶೀಲ್ದಾರ್ ರಶ್ಮಿ, ಕಂದಾಯಾಧಿಕಾರಿ ಈಶ್ವರ್ ಎಸ್ ರಾಯುಡು ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಈ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು.  ಹೊಸ ಮತದಾರರನ್ನು ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಸೇರ್ಪಡೆಯಾಗದಂತೆ ತಡೆದು ಸರಿಯಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ನಮ್ಮ ಉದ್ದೇಶವಾಗಿದೆ,ಪ್ರತಿಯೊಬ್ಬ ವಿದ್ಯಾರ್ಥಿ,ವಯೋಮಿತಿ ಅರ್ಹ ಹೊಂದಿರುವವರು ಮತದಾನದಾನದಿಂದ ದೂರ ಉಳಿಯದಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುನೀಲ್ ಕುಮಾರಿ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಹೇಮಲತಾ,ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ನೌಕರರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ಉತ್ತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಿ: ಮಾನ್ವಿ ಗ್ರೋತ್ ಸೆಂಟರ್ ಕೈಗಾರಿಕಾ ಸಂಘದ ಆಗ್ರಹ

Image
 ಉತ್ತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಿ: ಮಾನ್ವಿ ಗ್ರೋತ್ ಸೆಂಟರ್ ಕೈಗಾರಿಕಾ ಸಂಘದ ಆಗ್ರಹ ಬೆಂಗಳೂರು, ಆ.27: ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗಬೇಕು ಎಂದು ಮಾನ್ವಿ ಗ್ರೋತ್ ಸೆಂಟರ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಆಗ್ರಹಿಸಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೈಗಾರಿಕಾ ಪ್ರದೇಶಗಳಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಸರ್ಕಾರಕ್ಕೆ ತೆರಿಗೆ ಆದಾಯ ಹೆಚ್ಚಿಸುವಲ್ಲಿ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಆದರೆ ಕೈಗಾರಿಕೆಗಳಿಗೆ ಸಂಬಂಧಿಸಿದ ಭೂಮಿ ದರ, ಬ್ಯಾಂಕ್ ಸಾಲ, ಮೂಲಸೌಕರ್ಯ ಹಾಗೂ ಸರ್ಕಾರದ ತೆರಿಗೆ ಸೇರಿದಂತೆ ಹಲವು ಸಮಸ್ಯೆಗಳಿಂದ ಉದ್ಯಮಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು. ಮಾನ್ವಿ ಗ್ರೋತ್ ಸೆಂಟರ್‌ನಲ್ಲಿ ಸುಮಾರು 10 ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ₹20 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದ್ದು, ಸುಮಾರು 50 ಸಣ್ಣ ಕೈಗಾರಿಕೆಗಳು ಮತ್ತು ವರ್ಕ್‌ಶಾಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಭೂಮಿ → ಕೈಗಾರಿಕೆ → ಉದ್ಯೋಗ → ತೆರಿಗೆ → ಸಂಪತ್ತು ಸೃಷ್ಟಿಯ ಸರಪಳಿ ನಿರ್ಮಾಣವಾಗುತ್ತಿದೆ. ಹೀಗಾಗಿ ಈಗಾಗಲೇ ಹೂಡಿಕೆ ಮಾಡಿರುವ ಉದ್ಯಮಿಗಳ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವಿದೆ...

NHCE to Host 48-Hour International Hackathon ‘Smart Horizon 2026’

Image
  NHCE to Host 48-Hour International Hackathon ‘Smart Horizon 2026’ Bengaluru : New Horizon College of Engineering (NHCE) will host Smart Horizon 2026, a 48-hour international hackathon, from September 3 to 5 as part of its Silver Jubilee Year celebrations. The event is being jointly organised by the Department of Artificial Intelligence and Machine Learning (AIML) and the Department of Computer Science and Engineering (CSE). The hackathon is designed to promote innovation, interdisciplinary problem-solving, entrepreneurship and stronger collaboration between academia, industry and government. It is also aligned with the vision of Viksit Bharat@2047, encouraging students to develop technology-driven solutions to real-world challenges. Smart Horizon 2026 has attracted a strong response, with 287 teams registering initially and 118 teams qualifying for the Grand Finale. The finalist teams represent 62 institutions across 11 Indian states, along with participation from the United Stat...

ಗಣೇಶ ಹಬ್ಬದ ಮುನ್ನ ಗಣೇಶ್ ದೇವಸ್ಥಾನದ ಗೋಪುರ ತೆರವು — ಮೇಣದಬತ್ತಿ ಪ್ರತಿಭಟನೆ

Image
ಗಣೇಶ ಹಬ್ಬದ ಮುನ್ನ ಗಣೇಶ್ ದೇವಸ್ಥಾನದ ಗೋಪುರ ತೆರವು — ಮೇಣದಬತ್ತಿ ಪ್ರತಿಭಟನೆ ನೋಟಿಸ್ ನೀಡದೇ ತೆರವುಗೊಳಿಸಿದ ಆರೋಪದ ವಿರುದ್ಧ ಆಕ್ರೋಶ: ಡಾ. ಎಸ್. ಸಂಗಮೇಶ್ ಬೆಂಗಳೂರು, ಆಗಸ್ಟ್ 22: ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ AECS Layoutನ ಗಣೇಶ್ ದೇವಸ್ಥಾನದ ಗೋಪುರವನ್ನು ಮುಂಚಿತ ನೋಟಿಸ್ ನೀಡದೇ ತೆರವುಗೊಳಿಸಲಾಗಿದೆ ಎಂಬ ಆರೋಪದ ವಿರುದ್ಧ ಕರ್ನಾಟಕ ರಾಜ್ಯ ಯುವ ಸಮೂಹದ ವತಿಯಿಂದ ಮೇಣದಬತ್ತಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಹಲವಾರು ಸ್ಥಳೀಯರು ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾರ್ವಜನಿಕರು ಭಾಗವಹಿಸಿ, ದೇವಸ್ಥಾನ ತೆರವು ಕಾರ್ಯಾಚರಣೆಯ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನುಬದ್ಧ ಪ್ರಕ್ರಿಯೆ ಪಾಲಿಸಬೇಕು ಮತ್ತು ಪ್ರಕರಣದ ಸತ್ಯಾಂಶವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್, ದೇವಸ್ಥಾನವು ಸರ್ಕಾರಿ ಅಥವಾ BDA ಜಾಗದಲ್ಲಿದ್ದು ಅತಿಕ್ರಮಣವಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ನ್ಯಾಯಾಲಯದ ಆದೇಶಕ್ಕೂ ಸಂಪೂರ್ಣ ಗೌರವವಿದೆ. ಆದರೆ, ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೇ ತೆರವು ಕಾರ್ಯಾಚರಣೆ ನಡೆಸಿರುವುದಾದರೆ ಅದನ್ನು ಪ್ರಶ್ನಿಸುವುದು ನಮ್ಮ ಹಕ್ಕು ಎಂದು ಅವರು ಹೇಳಿದರು. “ದೇವಸ್ಥಾನಕ್ಕೆ ನೋಟಿಸ್ ನೀಡಲಾಗಿತ್ತೇ?” “...

ಬೆಂಗಳೂರಿನ ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026: ದಾಖಲೆಯ 1,093 ಸ್ಪರ್ಧಿಗಳೊಂದಿಗೆ ಹೊಸ ಮೈಲಿಗಲ್ಲು

Image
 ಬೆಂಗಳೂರಿನ ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026: ದಾಖಲೆಯ 1,093 ಸ್ಪರ್ಧಿಗಳೊಂದಿಗೆ ಹೊಸ ಮೈಲಿಗಲ್ಲು ಬೆಂಗಳೂರು, ಕರ್ನಾಟಕ – ಆಗಸ್ಟ್ 16, 2026 ಬೆಂಗಳೂರಿನ ನೆಕ್ಸಸ್ ಕೊರಮಂಗಲ ಮಾಲ್‌ನಲ್ಲಿ ಸಜ್ಜನ್ ಅಕಾಡೆಮಿ ಆಯೋಜಿಸಿದ್ದ “ಬೆಂಗಳೂರು ಓಪನ್ FIDE ರ್ಯಾಪಿಡ್ ರೇಟೆಡ್ ಚೆಸ್ ಟೂರ್ನಮೆಂಟ್ 2026” ಭರ್ಜರಿ ಯಶಸ್ಸು ಕಂಡಿದ್ದು, ಒಟ್ಟು 1,093 ಸ್ಪರ್ಧಿಗಳು ಭಾಗವಹಿಸುವ ಮೂಲಕ ಕರ್ನಾಟಕದ ಚೆಸ್ ಟೂರ್ನಮೆಂಟ್ ಇತಿಹಾಸದಲ್ಲೇ ಅತಿ ಹೆಚ್ಚು ಭಾಗವಹಿಸುವಿಕೆಯ ದಾಖಲೆಯನ್ನು ನಿರ್ಮಿಸಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ದೇಶದ ಹಲವು ರಾಜ್ಯಗಳಿಂದ ಚೆಸ್ ಆಟಗಾರರು ಆಗಮಿಸಿ ಈ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದರು. ಆರಂಭಿಕ ಹಂತದ ಆಟಗಾರರಿಂದ ಹಿಡಿದು ರೇಟೆಡ್ ಆಟಗಾರರು, ರಾಜ್ಯ ಚಾಂಪಿಯನ್‌ಗಳು, ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಹಾಗೂ ಅಂತರರಾಷ್ಟ್ರೀಯ ರೇಟಿಂಗ್ ಹೊಂದಿರುವ ಆಟಗಾರರು ಕೂಡ ಪಾಲ್ಗೊಂಡಿದ್ದು, ಟೂರ್ನಮೆಂಟ್‌ಗೆ ಹೆಚ್ಚಿನ ಸ್ಪರ್ಧಾತ್ಮಕತೆ ಮತ್ತು ಉತ್ಸಾಹವನ್ನು ತಂದಿತು. ಟೂರ್ನಮೆಂಟ್‌ನಲ್ಲಿ ಒಟ್ಟು ₹4 ಲಕ್ಷ ನಗದು ಬಹುಮಾನ ವಿತರಿಸಲಾಯಿತು. ವಿಶೇಷವಾಗಿ ವಿವಿಧ ವಯೋಮಿತಿ ಹಾಗೂ ಸಾಧನಾ ವಿಭಾಗಗಳಲ್ಲಿ ಬಹುಮಾನಗಳನ್ನು ನೀಡುವ ಮೂಲಕ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಪ್ರೋತ್ಸಾಹಿಸಲಾಯಿತು. ನೂರಾರು ಆಟಗಾರರನ್ನು ಅವರ ಸಾಧನೆಗಾಗಿ ಗುರುತಿಸಿ ಗೌರವಿಸಲಾಯಿತು. ಈ ಪಂದ್ಯಾವಳಿಯನ್ನು AICF, KSCA ಮತ...

ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನಾ

Image
 ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನ ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಮೈಸೂರು ಜಿಲ್ಲೆಯ ಲೋಕ ರಂಜನ್ ಮಹಲ್ ರೋಡ್, ಹಿಟ್ಟಿಗೆ ಗೂಡಿನ ಮೈಸೂರು ಶಾಖೆ ಯಲ್ಲಿ ಇಂದು16/08/2028 ನಡೆಯಿತು  ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ವೇದಶ್ರೀ, ರಾಷ್ಟ್ರೀಯ ಖಜಾಂಚಿ ಸಿದ್ದರಾಜು, ಮೈಸೂರು ಜಿಲ್ಲೆಯ ಅಧ್ಯಕ್ಷ ರಾದ ಮಾಣಿಕ್ಯಂ ,ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ, ಬೆಂಗಳೂರು ಜಿಲ್ಲೆಯ ಕಾರ್ಯದರ್ಶಿ ರಾಜಶೇಖರ್, ಮೈಸೂರು ಜಿಲ್ಲಾ ಸದಸ್ಯ ರಾದ  ತ್ಯಾಗರಾಜು,ಶ್ರೀಮತಿ ರೇವತಿ, ಶ್ರೀಮತಿ ರಾಧಾ,  ಚಂದ್ರಶೇಖರ, ವರಕೋಡು ಕೃಷ್ಣೇಗೌಡರು  ನಂದಕುಮಾರ, ಕುಮಾರ ,ಶ್ರೀಮತಿ ಭುವನೇಶ್ವರಿ  ರಮೇಶ್ ,ಹೇಮಂತ್ ಕುಮಾರ್, ಶೇಖರ್  ಹಾಗೂ ಸ್ಥಳೀಯರು ಭಾಗಿಯಾಗಿದ್ದರು