ಬಚೋ ಬಚೋವೋ ಘೋಷಣೆ ಯಡಿ ಸ್ವಯಂ ರಕ್ಷಣೆಯ ಅಂದೋಲನದ "ಕೊಂಬ್ಯಾಟ್ ವಾರಿಯರ್ಸ್" ಸಂಸ್ಥೆಗೆ ಚಾಲನೆ.

ಬಚೋ ಬಚೋವೋ ಘೋಷಣೆ ಯಡಿ ಸ್ವಯಂ ರಕ್ಷಣೆಯ ಅಂದೋಲನದ "ಕೊಂಬ್ಯಾಟ್ ವಾರಿಯರ್ಸ್" ಸಂಸ್ಥೆಗೆ ಚಾಲನೆ. ಪ್ರತಿಯೊಬ್ಬ ಮನುಷ್ಯನಿಗೆ ತಮ್ಮ ಆತ್ಮ ರಕ್ಷಣೆಯ, ಸ್ವಯಂ ರಕ್ಷಣೆಯ ಅಗತ್ಯವಿದೆ.ವಿಶೇಷವಾಗಿ ಮಹಿಳೆಯರು ಇಂದಿನ ದಿನಗಳಲ್ಲಿ ತಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಅಗತ್ಯವಿದೆ.ಇದಕ್ಕಾಗಿ ಕಿಕ್ ಬ್ಯಾಕ್ ಶಿಕ್ಷಣದ ಮಹತ್ವವನ್ನು ಕಲಿಸುವ ಕಾರ್ಯವನ್ನು ಗ್ರ್ಯಾಂಡ್ ಮಾಸ್ಟರ್ ಅಬೀದ್, ಸಹ ಸಂಸ್ಥಾಪಕಿ ಪ್ರಿಯಾಂಕ ಬಿ.ಎಸ್. ನೇತೃತ್ವದ ಕೊಬ್ಯಾಟ್ ವಾರಿಯರ್ಸ್ ಎಂಬ ಸಂಸ್ಥೆ ಇದೀಗ ಬೆಂಗಳೂರಿನ ಬಸವನಗುಡಿಯ ಗಾಂಧಿನಗರದಲ್ಲಿ ಆರಂಭಗೊಂಡಿದೆ. ದೈಹಿಕ ಸಾಮರ್ಥ್ಯ ಹಾಗೂ ಸ್ವರಕ್ಷಣೆ ಶಿಕ್ಷಣದಲ್ಲಿ ತಮ್ಮನ್ನೆ ತೊಡಗಿಸಿಕೊಂಡಿರುವ ಗ್ರ್ಯಾಂಡ್ ಮಾಸ್ಟರ್ ಎಂ.ಎಚ್. ಅಬೀದ್ ಕೊಂಬ್ಯಾಟ್ ವಾರಿಯರ್ಸ್ ಕೇಂದ್ರಕ್ಕೆ ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗ್ರ್ಯಾಂಡ್ ಮಾಸ್ಟರ್ ಎಂ.ಎಚ್.ಅಬೀದ್, ಪ್ರತಿಯೊಬ್ಬ ವಯೋಮಾನದವರು ತಮ್ಮ ಆತ್ಮ ರಕ್ಷಣೆ ಹಾಗೂ ಸ್ವಯಂ ರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ಶಿಕ್ಷಣವನ್ನು ಕಲಿಯುವ ಅಗತ್ಯವಿದೆ.ಇಂದಿನ ದಿನಮಾನಗಳಲ್ಲಿ ಪ್ರತಿ ಮನೆಗೆ ಪೋಲಿಸರನ್ನು ಭದ್ರತೆಗಾಗಿ ನೇಮಕ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೆ ಸ್ವಯಂ ರಕ್ಷಣೆಯ ಶಿಕ್ಷಣದ ಅಗತ್ಯ ವಿದೆ ಎಂದು ಹೇಳಿದರು. ಬಿಶ್ವಾ ವ್ಯವಸ್ಥೆಯಡಿ "ಬಚೋ ಬಚೋವೋ" ತಪ್ಪಿಸು ನೀನು ತಪ್ಪಿಸೋಕೊ ಎಂಬ ಅಂದೋಲನದಡಿ ಕಳೆದ 40 ವರ್ಷಗಳಿಂದ...