ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2023 ರ " *ಸ್ಪರ್ಶ ಕುಷ್ಟರೋಗ ಜಾಗೃತಿ

 ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆಯ  ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  2023 ರ "*ಸ್ಪರ್ಶ ಕುಷ್ಟರೋಗ ಜಾಗೃತಿ








ಅಭಿಯಾನ* " ದ ಅಂಗವಾಗಿ ಕುಷ್ಟರೋಗಕ್ಕೆ ಸಂಬಂಧಪಟ್ಟಂತೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಗುರುರಾಜ್* ರವರು  ಆರೋಗ್ಯ ಶಿಕ್ಷಣ ನೀಡುತ್ತಾ, ಜನವರಿ 30  ದೇಶದ ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರು  ಹುತಾತ್ಮರಾದ ದಿನವಾಗಿದ್ದು,  ಅವರ ಕುಷ್ಟರೋಗಿಗಳ ಬಗ್ಗೆ ಇದ್ದ ಅಪಾರವಾದ ಕಾಳಜಿಯನ್ನು ಸ್ಮರಿಸುತ್ತ ಸದರಿ ದಿನವನ್ನು ದೇಶದಾದ್ಯಂತ " *ಕುಷ್ಟರೋಗ ನಿರ್ಮೂಲನ ದಿನ* " ವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

 ಇದೇ ಸಂದರ್ಭದಲ್ಲಿ  ಸಮಾಜ ಕಲ್ಯಾಣ ಇಲಾಖೆಯ *ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದರಾಜು* ರವರು ಹಾಗೂ ವಸತಿ ನಿಲಯದ ವಾರ್ಡನ್ ಗಳಾದ ಶ್ರೀ *ಪುಟ್ಟಸ್ವಾಮಿ ಹಾಗೂ ಜಗನ್ನಾಥ್* ರವರು 2023 ರ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನದ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.

 ಕಾರ್ಯಕ್ರಮದಲ್ಲಿ ಬೆಂಡಿಗಾನಹಳ್ಳಿ   ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಶಿವಕುಮಾರ್* ರವರು ವಿದ್ಯಾರ್ಥಿಗಳಿಗೆ *ಪ್ರತಿಜ್ಞಾ ವಿಧಿ* ಯನ್ನು ಬೋಧಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims