ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಕಮಿಷನ್ ಹೊಡೆಯುವ ಸರ್ಕಾರಗಳು- ದಾದ ಸಾಹೇಬ್ ಎನ್.ಮೂರ್ತಿ*

*ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಕಮಿಷನ್ ಹೊಡೆಯುವ ಸರ್ಕಾರಗಳು- ದಾದ ಸಾಹೇಬ್ ಎನ್.ಮೂರ್ತಿ* 












ಪ್ರಸ್ ಕ್ಲಬ್ ಸಭಾಂಗಣದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಬಿ)ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ದಾದ ಸಾಹೇಬ್ ಎನ್.ಮೂರ್ತಿರವರು ಆರ್.ಪಿ.ಐ.(ಬಿ)ಪಕ್ಷದ ಚಿಹ್ನೆ ಉದ್ಘಾಟನಾ ಸಮಾರಂಭದ ಕುರಿತು ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು.

ಎನ್.ಮೂರ್ತಿರವರು ಮಾತನಾಡಿ ಜನವರಿ 26ರಂದು ಸಂವಿಧಾನ,ಗಣರಾಜ್ಯೋತ್ಸವ ಶುಭಾ ಸಂದರ್ಭದಲ್ಲಿ ಆರ್.ಪಿ.ಐ.(ಬಿ) ಪಕ್ಷದ ಚಿಹ್ನೆ ಉದ್ಘಾಟನಾ ಸಮಾರಂಭವನ್ನು  ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಂರಿಗೆ ಖುರಾನ್, ಕ್ರೈಸ್ತರಿಗೆ ಬೈಬಲ್ ರಾಷ್ಟ್ರದ ಎಲ್ಲ ಧರ್ಮವನ್ನು ಒಗ್ಗೂಡಿಸಿದ ಭಾರತ ಸಂವಿಧಾನ ಗ್ರಂಥವಾಗಿದೆ.

ದೇಶದಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆ ಇಲ್ಲ .ರಾಜಕೀಯದಲ್ಲಿ ಮೀಸಲಾತಿ ಕೊಟ್ಟಿರಬಹುದು ಅದರೆ ಅಧಿಕಾರ ಶ್ರೀಮಂತರ ಕೈಯಲ್ಲಿ ಇದೆ.

ಬಡತನ,ನಿರುದ್ಯೋಗ, ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು ಕೊಟ್ಯಂತರ ಜನ ಹಸಿವಿನಿಂದ ಬಾಳುತ್ತಿದ್ದಾರೆ, 9ಕೋಟಿ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್ ಆಗಿದ್ದಾರೆ.

ಕೃಷಿಕರಿಗೆ ಬೆಂಬಲ ಇಲ್ಲ, ಕೇಂದ್ರ ಸರ್ಕಾರ ಬಡವರ ಮೇಲೆ ಹಾಕಿದ್ದಾರೆ, ಶ್ರೀಮಂತ ಉದ್ಯಮಿಗಳಿಗೆ ಜಿ.ಎಸ್.ಟಿ.ತೆರಿಗೆ ವಿನಾಯಿತಿ ನೀಡಿದ್ದಾರೆ.

ಶ್ರೀಮಂತ ಕಂಪನಿಗಳಿಗೆ 14.5ಲಕ್ಷ ಕೋಟಿ ರೂಪಾಯಿ ರೂಪಾಯಿ ಸಾಲ ಮನ್ನ ಮಾಡಿದ್ದಾರೆ.

ಬಡವರಿಗೆ ಇನ್ನು ವಸತಿ ಭಾಗ್ಯ ಲಭಿಸಿಲ್ಲ .
ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ.

ಬಾಬ ಸಾಹೇಬ್ ಅಂಬೇಡ್ಕರ್ ರವರು ಕಾಂಗ್ರೆಸ್ ಪಕ್ಷ ಉರಿಯುವ ಮನೆ ಅಲ್ಲಿ ಹೋಗಬೇಡಿ ಎಂದು ಹೇಳಿದರು.

ಜನರಿಗೆ ಅಕ್ಕಿ ಕೊಡುವ ಬದಲು, ಬಡ ರೈತರಿಗೆ ಕೃಷಿ ಭೂಮಿ ಕೊಡಿ.

ಪರ್ಸೆಂಟೇಜ್ ಕಮಿಷನ್ ಸರ್ಕಾರಗಳು ನಡೆಯುತ್ತಿದೆ.
ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಸರ್ಕಾರಗಳು ಕಮಿಷನ್ ಹೊಡೆಯುವ ಸರ್ಕಾರಗಳಾಗಿವೆ.

ಸಂವಿಧಾನ ರಚನೆಯಾದರು ಬಡತನ,ನಿರುದ್ಯೋಗ,
ಆನರಕ್ಷತೆಹಸಿವು ಅಸ್ಪೃಶ್ಯತೆ,ಅಸಮಾನತೆ ತಾಂಡವಾಡುತ್ತಿದೆ.

ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಮತ್ತು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರು ಆಶಯದಂತೆ ಆರ್.ಪಿ.ಐ.(ಬಿ)ಪಕ್ಷ 365ದಿನ ಜನಾ ಅಂದೋಲನ ರಾಜ್ಯದ್ಯಂತ ರೂಪಿಸಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಪಕ್ಷದ ಚಿಹ್ನೆಯನ್ನು ಜನವರಿ 26ರಂದು ಸಂವಿಧಾನ ದಿನಾಚರಣೆಯಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation