ಜನಪರ ಆಡಳಿತ, ಜನಪರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷ ಬದ್ದ*
*ಜನಪರ ಆಡಳಿತ, ಜನಪರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷ ಬದ್ದ*
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರ ಕೆ.ಆರ್.ಪುರಂನ ಹೊರಮಾವು ವಾರ್ಡ್ ಕಾಂಗ್ರೆಸ್ ಪಕ್ಷದ ಕಛೇರಿಯನ್ನ ಮಾಜಿ ವಿಧಾನಪರಿಷತ್ ಸದಸ್ಯರಾದ ನಾರಾಯಣಸ್ವಾಮಿರವರು, ಉತ್ತರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳಾದ ಎಂ.ನರಸಿಂಹಯ್ಯರವರು ಉದ್ಘಾಟನೆ ಮಾಡಿದರು.
ಕೆ.ಆರ್ ಪುರಂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.
ಮಾಜಿ ವಿಧಾನಪರಿಷತ್ ಸದಸ್ಯರಾದ ನಾರಾಯಣಸ್ವಾಮಿರವರು ಮಾತನಾಡಿ ರಾಜ್ಯದ ಜನಕ್ಕೆ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಸರ್ಕಾರದ ವಿರುದ್ದ ಬಾರಿ ಅಸಮಾಧಾನವಿದೆ.
ಅಚ್ಚೇದೀನ್ ಎಂದರೆ ಇದೇನಾ ಎಂದು ಜನ ಹೇಳುತ್ತಿದ್ದಾರೆ.
ಬಿ.ಜೆ.ಪಿ.ಪಕ್ಷದ ಜನವಿರೋಧಿ ಆಡಳಿತವನ್ನು ಸತತವಾಗಿ ಹೋರಾಡುತ್ತಾ ಬಂದಿದೆ.
ಕಾಂಗ್ರೆಸ್ ಪಕ್ಷ ಜನಪರ ಆಡಳಿತ ನೀಡಿದ ಪಕ್ಷ. ಭಾರತ್ ಜೋಡೋ ಮತ್ತು ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುಮಸ್ಸು,ಹುರುಪು ಬಂದಿದೆ.
2023ರ ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಮತಗಳಿಂದ ಜಯಗಳಿಸಲಿದೆ ಎಂದು ಹೇಳಿದರು.
Comments
Post a Comment