ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ವೃಂದ ಮತ್ತು ನೇಮಕಾತಿ ಹಾಗೂ ಆರೋಗ್ಯ ಸಂಜೀವಿನಿ ಬೇಡಿಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ*
*ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ವೃಂದ ಮತ್ತು ನೇಮಕಾತಿ ಹಾಗೂ ಆರೋಗ್ಯ ಸಂಜೀವಿನಿ ಬೇಡಿಕೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ*
ಬೆಂಗಳೂರು:ಹೋಟೆಲ್ ಲಲಿತ್ ಅಶೋಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಸಭೆಯನ್ನು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಎನ್.ಮಂಜುನಾಥ್ ಪ್ರಸಾದ್ ರವರು, ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ನೂತನವಾಗಿ ಮೂರು ನಿರ್ದೇಶಕರುಗಳಾದ ಸಾಯಿಶಂಕರ್, ಎ.ಜಿ.ಬಾಬು,ಬಿ.ರುದ್ರೇಶ್ ರವರು ಅಧಿಕಾರ ಪದಗ್ರಹಣ ಮಾಡಿದರು.
ಬಿ.ಬಿ.ಎಂ.ಪಿ,
ಬೆಳಗಾಂ,ತುಮಕೂರು ಶಿವಮೊಗ್ಗ,ಹುಬ್ಬಳ್ಳಿ-ಧಾರವಾಡ,ವಿಜಯಪುರ,ದಾವಣಗೆರೆ ಮತ್ತು ಮಂಗಳೂರು,ಗುಲ್ಬರ್ಗ ಮಹಾನಗರ ಪಾಲಿಕೆ ಪದಾಧಿಕಾರಿಗಳು ಭಾಗವಹಿಸಿದ್ದರು.
*ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು* ಮಾತನಾಡಿ ನಗರ ಪ್ರದೇಶ ಬೆಳದಂತೆಲ್ಲ ಅಧಿಕಾರಿ ಮತ್ತು ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚುತ್ತದೆ ಕಾರಣ ಕಾಲಕಾಲಕ್ಕೆ ನೇಮಕಾತಿ ನಡೆಯದೇ ಇರುವುದು.
ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಅಧಿಕಾರಿ,ಸಿಬ್ಬಂದಿಗಳು ಸಮಸ್ಯೆಗಳ ನಿವಾರಣೆಗಾಗಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಶ್ರಮಿಸುತ್ತಿದೆ.
ವೃಂದ ಮತ್ತು ನೇಮಕಾತಿ ಸಮಸ್ಯೆಗಳ ನಿವಾರಣೆ ಮಾನಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
ವೃಂದ ಮತ್ತು ನೇಮಕಾತಿ ನಿಯಾಮವಳಿ ಕರಡು ಮೂಸೂದೆ ಮುಂದಿನ ಪ್ರಕಟನೆಯಾಗಲಿದೆ.
ಅಧಿಕಾರಿ ಮತ್ತು ನೌಕರರು ಸೂಕ್ಷ್ಮವಾಗಿ ಪರಿಶೀಲನೆ ಕೆಲವು ತಿದ್ದುಪಡಿ ಇದ್ದರೆ ಮನವಿ ಸಲ್ಲಿಸಿ.
ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಕಾರ್ಯಕ್ರಮ ಮಹಾನಗರ ಪಾಲಿಕೆಗೆ ವಿಸ್ತರಿಸಬೇಕು ಹಾಗೂ ನಿಯೋಜನೆ ಮೇಲೆ ಮಹಾನಗರ ಪಾಲಿಕೆ ವರ್ಗಾವಣೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಂಘದ
ಪ್ರಲ್ಹಾದ್,ಬಾಲು,ಪ್ರಸಾದ್,ಗೋವಿಂದಬಾಬು,ಶಿರಶ್ಯಾವರವರು ಪಾಲ್ಗೊಂಡಿದ್ದರು.
Comments
Post a Comment