ದೇವನಹಳ್ಳಿಯಲ್ಲಿ ಮಂಜುನಾಥ ಪೌಂಡೇಶನ್ ಕಚೇರಿ ಉದ್ಘಾಟನೆ
" ದೇವನಹಳ್ಳಿಯಲ್ಲಿ ಮಂಜುನಾಥ ಪೌಂಡೇಶನ್ ಕಚೇರಿ ಉದ್ಘಾಟನೆ
,
ದೇವನಹಳ್ಳಿಯಲ್ಲಿ ಮಂಜುನಾಥ ಫೌಂಡೇಶನ್ ಕಚೇರಿ ಉದ್ಘಾಟನೆಯನ್ನು ಶ್ರೀ ನಂಜಾವದೂತ ಸ್ವಾಮೀಜಿ ಉದ್ಘಾಟಿಸಿದರು. ಚಿತ್ರನಟ ಮಾಸ್ಟರ್ ಆನಂದ್, ಶ್ರೀ ಧರ್ಮಸ್ಥಳ ಅಭಿವೃದ್ಧಿ ಅಭಿಮಾನಿ ಸಂಘದ ಅಧ್ಯಕ್ಷರಾದ ಬಿ.ಕೆ. ನಾರಾಯಣಸ್ವಾಮಿ, ಮಾಜಿ ಶಾಸಕರಾದ ವೆಂಕಟಸ್ವಾಮಿ, ಕಸಾಪ ತಾಲ್ಲೂಕು ಅಧ್ಯಕ್ಷರಾದ ಬಿಕೆ ನಂಜೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ. ಎಂ.ಬೀರಪ್ಪ, ಫೌಂಡೇಶನ್ ಪದಾಧಿಕಾರಿ ಮಂಜುನಾಥ್, ಚಂದ್ರೇಗೌಡ,ನಾಗೇಶ್, ರವಿ, ಅಂಬರೀಶ್, ಸುನಿಲ್ ಮುನಿಯಪ್ಪ ಇತರರು ಭಾಗ ವಹಿಸಿದ್ದರು,
ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಮಂಜುನಾಥ ಫೌಂಡೇಶನ್ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿದ ನಂಜಾವಧೂತ ಸ್ವಾಮೀಜಿ ರವರು ಮಾತನಾಡಿ ನಿಸ್ವಾರ್ಥ ಸೇವಾ ಮನೋಭಾವದಿಂದ ಮಂಜುನಾಥ್ ಜನ ಸೇವಾ ಕಚೇರಿ ತೆರೆಯಲಾಗಿದೆ, ಜೊತೆಗೆಜನರ ಆರೋಗ್ಯ ತುರ್ತು ಸೇವೆಗೆ ಉಚಿತ ಆಂಬುಲೆನ್ಸ್ ಲೋಕಾರ್ಪಣೆಗೊಳಿತ್ತಿರುವುದು ಶ್ಲಾಘನೀಯ ಎಂದು ಹೇಳಿದರು, ಸೇವೆ ಮಾಡುವ ಅವಕಾಶ ಸಿಕ್ಕಾಗ ಅದನ್ನು ನಿಸ್ವಾರ್ಥದಿಂದ ಪೂರೈಸಬೇಕು,ಅಂತವರ ಸಾಲಿಗೆ ಸೇರಿದ ಮಂಜುನಾಥ್ ನೊಂದವರ ಸೇವೆ ಮಾಡಲು ಅವಕಾಶ ಕೋರಿ ಬಂದಿದ್ದಾರೆ, ಅವರಿಗೆ ಇಲ್ಲಿನ ಜನ ಹಾರೈಸಬೇಕು ಎಂದರು, ಸಾವಿರಾರು ತಾಯಂದಿರಿಗೆ ಬಾಗಿನ ಕೊಟ್ಟು ಆಶೀರ್ವಾದ ಪಡೆದುಕೊಂಡಿದ್ದಾರೆ, ಇಂಥವರಿಗೆ ಮತ್ತಷ್ಟು ಜನಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು, ನಮ್ಮಲ್ಲಿ ಬಡವರು ಶ್ರೀಮಂತರು ಎಂಬ ಎರಡು ವರ್ಗಗಳಿಂದ ಸಮಾಜದಲ್ಲಿ ಅಸಮತೋಲನವಿದೆ, ಶ್ರೀಮಂತರು ದುಡಿದ ಸ್ವಲ್ಪ ಭಾಗ ಬಡವರ ಏಳಿಗೆಗೆ ವಿನಿಯೋಗಿಸಿದರೆ ಬಡವರಜೀವನ ಸಾರ್ಥಕವಾಗುತ್ತದೆ,
ಫೌಂಡೇಶನ್ ಸಂಸ್ಥಾಪಕರಾದ ಮಂಜುನಾಥ್ ಮಾತನಾಡಿಜನರ ಆಶೀರ್ವಾದ ಬೇಡುತ್ತಿದ್ದೇನೆ.ನಾನು ಸುಮ್ಮನೆ ಮಾತನಾಡುವ ವ್ಯಕ್ತಿಯಲ್ಲ, ಕೆಲಸ ಮಾಡಿತೋರಿಸುತ್ತೇನೆ ಕೆಲಸ ಮಾಡುವ ಅದಮ್ಯ ಕನಸಿನೊಂದಿಗೆ ನಿಮ್ಮ ಆಶೀರ್ವಾದ ಬೇಡಿದ್ದೇನೆ, ದೇವನಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ಗಣಿ ಉದ್ಯಮ ಹಾಗೂ ರಿಯಲ್ ಎಸ್ಟೇಟ್ ನಡೆಸುತ್ತಿದ್ದು ಚಿಕ್ಕಂದಿನಿಂದಲೂ ಬಡವರಸೇವೆ ಸಮಾಜಸೇವೆ ಮಾಡುವ ಹಂಬಲ ಹೊಂದಿದ್ದೇನೆ, ವೃತ್ತಿಯಲ್ಲಿ ಬಂದ ಲಾಭದಲ್ಲಿ ಸಮಾಜ ಸೇವೆ ಮಾಡುತ್ತ ಬಂದಿರುತ್ತೇನೆಂದು ಫೌಂಡೇಶನ್ ಸಂಸ್ಥಾಪಕ ಮಂಜುನಾಥ್ ತಿಳಿಸಿದರು. ದೇವನಹಳ್ಳಿಯನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಂತೆ ವೃದ್ಧಿಪಡಿಸುವುದು ನನ್ನ ಗುರಿ ಎಂದು ಹೇಳಿದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ವರದಿಗಾರರು
ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment