ಬಚೋ ಬಚೋವೋ ಘೋಷಣೆ ಯಡಿ ಸ್ವಯಂ ರಕ್ಷಣೆಯ ಅಂದೋಲನದ "ಕೊಂಬ್ಯಾಟ್ ವಾರಿಯರ್ಸ್" ಸಂಸ್ಥೆಗೆ ಚಾಲನೆ.
ಬಚೋ ಬಚೋವೋ ಘೋಷಣೆ ಯಡಿ ಸ್ವಯಂ ರಕ್ಷಣೆಯ ಅಂದೋಲನದ "ಕೊಂಬ್ಯಾಟ್ ವಾರಿಯರ್ಸ್" ಸಂಸ್ಥೆಗೆ ಚಾಲನೆ.
ಪ್ರತಿಯೊಬ್ಬ ಮನುಷ್ಯನಿಗೆ ತಮ್ಮ ಆತ್ಮ ರಕ್ಷಣೆಯ, ಸ್ವಯಂ ರಕ್ಷಣೆಯ ಅಗತ್ಯವಿದೆ.ವಿಶೇಷವಾಗಿ ಮಹಿಳೆಯರು ಇಂದಿನ ದಿನಗಳಲ್ಲಿ ತಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಅಗತ್ಯವಿದೆ.ಇದಕ್ಕಾಗಿ ಕಿಕ್ ಬ್ಯಾಕ್ ಶಿಕ್ಷಣದ ಮಹತ್ವವನ್ನು ಕಲಿಸುವ ಕಾರ್ಯವನ್ನು ಗ್ರ್ಯಾಂಡ್ ಮಾಸ್ಟರ್ ಅಬೀದ್, ಸಹ ಸಂಸ್ಥಾಪಕಿ ಪ್ರಿಯಾಂಕ ಬಿ.ಎಸ್. ನೇತೃತ್ವದ ಕೊಬ್ಯಾಟ್ ವಾರಿಯರ್ಸ್ ಎಂಬ ಸಂಸ್ಥೆ ಇದೀಗ ಬೆಂಗಳೂರಿನ ಬಸವನಗುಡಿಯ ಗಾಂಧಿನಗರದಲ್ಲಿ ಆರಂಭಗೊಂಡಿದೆ.
ದೈಹಿಕ ಸಾಮರ್ಥ್ಯ ಹಾಗೂ ಸ್ವರಕ್ಷಣೆ ಶಿಕ್ಷಣದಲ್ಲಿ ತಮ್ಮನ್ನೆ ತೊಡಗಿಸಿಕೊಂಡಿರುವ ಗ್ರ್ಯಾಂಡ್ ಮಾಸ್ಟರ್ ಎಂ.ಎಚ್. ಅಬೀದ್ ಕೊಂಬ್ಯಾಟ್ ವಾರಿಯರ್ಸ್ ಕೇಂದ್ರಕ್ಕೆ ಚಾಲನೆ ನೀಡಿದರು.
ಬಳಿಕ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗ್ರ್ಯಾಂಡ್ ಮಾಸ್ಟರ್ ಎಂ.ಎಚ್.ಅಬೀದ್, ಪ್ರತಿಯೊಬ್ಬ ವಯೋಮಾನದವರು ತಮ್ಮ ಆತ್ಮ ರಕ್ಷಣೆ ಹಾಗೂ ಸ್ವಯಂ ರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ಶಿಕ್ಷಣವನ್ನು ಕಲಿಯುವ ಅಗತ್ಯವಿದೆ.ಇಂದಿನ ದಿನಮಾನಗಳಲ್ಲಿ ಪ್ರತಿ ಮನೆಗೆ ಪೋಲಿಸರನ್ನು ಭದ್ರತೆಗಾಗಿ ನೇಮಕ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೆ ಸ್ವಯಂ ರಕ್ಷಣೆಯ ಶಿಕ್ಷಣದ ಅಗತ್ಯ ವಿದೆ ಎಂದು ಹೇಳಿದರು.
ಬಿಶ್ವಾ ವ್ಯವಸ್ಥೆಯಡಿ "ಬಚೋ ಬಚೋವೋ" ತಪ್ಪಿಸು ನೀನು ತಪ್ಪಿಸೋಕೊ ಎಂಬ ಅಂದೋಲನದಡಿ ಕಳೆದ 40 ವರ್ಷಗಳಿಂದ ಸ್ವಯಂ ರಕ್ಷಣೆ ಕುರಿತ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತದೆ. ಪ್ರಸ್ತುತ ಸ್ಥಾಪನೆಯಾಗಿರುವ ಕೊಂಬ್ಯಾಟ್ ವಾರಿಯರ್ಸ್ ಬೆಂಗಳೂರಿನ ಎಲ್ಲ ಕಡೆ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಶಾಲೆ, ಕೆಲ ನಿಗದಿತ ಪ್ರದೇಶಗಳಲ್ಲಿ ತರಬೇತಿ ನೀಡಲಾಗುವುದು, ಸಾಮಾನ್ಯವಾಗಿ ಒಂದು ಸಾವಿರ ದಿಂದ ಎರಡು ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುವುದು. ಬೆಂಗಳೂರಿನ ವೈಟ್ ಪೀಲ್ಡ್, ರಾಜರಾಜೇಶ್ವರಿ ನಗರ, ಯಶವಂತಪುರ,ಶಾಂತಿ ನಗರ, ಜೆ.ಪಿ.ನಗರ ಸೇರಿದಂತೆ ಅನೇಕ ಪ್ರದೇಶದಲ್ಲಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಆರರಿಂದ 70 ವರ್ಷದವರೆಗಿನ ವಯೋಮಾನದವರಿಗೆ ನಮ್ಮ ಸಂಸ್ಥೆಯಿಂದ ಸ್ವಯಂ ರಕ್ಷಣೆ ಕುರಿತು ಕಲಿಕಾ ಶಿಕ್ಷಣ ನೀಡಲಾಗುತ್ತದೆ.ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. ಬೆಳ್ಳಗೆ ಒಂಬತ್ತರಿಂದ ಒಂಬತ್ತರವೆಗೆ ವಾರದ ಶನಿವಾರ,ಭಾನುವಾರ ಈ ತರಬೇತಿ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಹೇಳಿದರು.
ಕೊಂಬ್ಯಾಟ್ ವಾರಿಯರ್ಸ್ ಸಂಸ್ಥೆಯ ಸಹ ಮುಖ್ಯಸ್ಥೆ ಪ್ರಿಯಾಂಕ ಮಾತನಾಡಿ, ಮಹಿಳೆಯರಿಗೆ ಭಾರತೀಯ ಸಮಾಜದಲ್ಲಿ ಸಮಾನತೆ ಮುಖ್ಯವಾದದ್ದು, ಶಿಕ್ಷಣವೂ ಎಷ್ಟು ಮುಖ್ಯವೋ ಅದೇ ರೀತಿ ಮಹಿಳೆಯರಿಗೆ ಸ್ವಯಂ ರಕ್ಷಣೆಯು ಅಗತ್ಯವಿದೆ. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಇತರೆ ಒತ್ತಡದ ಸಂದರ್ಭದಲ್ಲಿ ತಮ್ಮ ಆತ್ಮ ರಕ್ಷಣೆಗಾಗಿ ಕಿಕ್ ಬ್ಯಾಕ್, ಮಾರ್ಷಲ್ ಆರ್ಟ್ಸ್ ಕಲಿಕೆಯ ಅವಶ್ಯವಿದೆ. ಈ ಹಿನ್ನಲೆಯಲ್ಲಿ ನಮ್ಮ ಸಂಸ್ಥೆ ಆರಂಭಗೊಂಡಿದ್ದು ಬೆಂಗಳೂರಿನಾದ್ಯಂತ ನಮ್ಮ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಪ್ರತ್ಯೇಕ ಪಠ್ಯಕ್ರಮವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಕೊಂಬ್ಯಾಟ್ ನ ವಾರಿಯರ್ಸ್ ನ ಅಬೀದ್ ಹಾಗೂ ಪ್ರಿಯಾಂಕ ಸ್ವಯಂ ರಕ್ಷಣೆಯ ವಿವಿಧ ಪಟುಗಳನ್ನು ಪ್ರದರ್ಶಿಸಿ ಅದರ ಮಹತ್ವವನ್ನು ಪ್ರಯೋಗಿಕವಾಗಿ ತೋರಿಸಿದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ನ ಪರಿಣಿತ ಮಹೀದ್ ಹಾಜರಿದ್ದರು.
Comments
Post a Comment