ಬಿಡಿಎ ಸ್ವಾದೀನ ಜಮೀನಿಗೆ ಪರಿಹಾರ, ಬದಲಿ ನಿವೇಶನಕ್ಕೆ ಬಿಡಿಎ ಆಯುಕ್ತರು, ಸಿಬ್ಬಂದಿಗಳಿಂದ ಲಂಚ ಬೇಡಿಕೆ; ಸಂತ್ರಸ್ತ ಆರೋಪ.*

 ಬಿಡಿಎ ಸ್ವಾದೀನ ಜಮೀನಿಗೆ ಪರಿಹಾರ, ಬದಲಿ ನಿವೇಶನಕ್ಕೆ ಬಿಡಿಎ 

ಆಯುಕ್ತರು, ಸಿಬ್ಬಂದಿಗಳಿಂದ ಲಂಚ ಬೇಡಿಕೆ; ಸಂತ್ರಸ್ತ ಅರೋಪ.







1985ರಲ್ಲಿ ಹೆಚ್ ಎಸ್ ಆರ್ ಲೇಔಟ್ ಪ್ರದೇಶದಲ್ಲಿ ಸ್ವಾದೀನ ಪಡಿಸಿಕೊಂಡ ಜಮೀನಿಗೆ ನಗದು ಪರಿಹಾರ, ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರು, ಸಿಬ್ಬಂದಿಗಳು ಲಂಚ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಸಂತ್ರಸ್ತ ಅದಿ ನಾರಾಯಣ ಸ್ವಾಮಿ ಆರೋಪಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1986ರಲ್ಲಿ ಬೊಮ್ಮನಹಳ್ಳಿಯ ಸರ್ವೆ ನಂ36ರಲ್ಲಿ ಒಂದು ಎಕರೆ 4ಗುಂಟೆ ಜಮೀನು, ಸರ್ವೆ ನಂ 39ರಲ್ಲಿ 23.8ಗುಂಟೆ ಜಮೀನು ಬಿಡಿಎ ಸ್ವಾದೀನ ಪಡಿಸಿಕೊಂಡಿದ್ದು. ಅದಕ್ಕೆ ನೀಡಬೇಕಾದ ಪರಿಹಾರವನ್ನು ನನಗೆ ಕೊಡದೇ ಬೇರೆಯವರಿಗೆ ನೀಡಿ, ಕಾನೂನು ಬದ್ದವಾಗಿ ಬರಬೇಕಾಗಿದ್ದ 3600ಚದುರ ವಿಸ್ತೀರ್ಣ ನಿವೇಶನವನ್ನಾದರೂ ಕೊಡಬೇಕು ಎಂದು ಬಿಡಿಎಗೆ ಹಲವು ಬಾರಿ ಮನವಿ ಮಾಡಿದರೂ ಸರಿಯಾದ ನಿವೇಶನ ನೀಡಿಲ್ಲ ಎಂದು ಹೇಳಿದರು.

ಫೆಬ್ರವರಿ 18 2020ರಂದು ಉಪ ಸಮಿತಿಯಲ್ಲಿ 3600 ಅಡಿ ನಿವೇಶನ ನೀಡುವಂತೆ ಉಪಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಇದಾದ ಬಳಿಕ ಎರಡು ಬಾರಿ ನಿವೇಶನ ಹಂಚಿಕೆ ಮಾಡಿದ್ದರೂ ಅದು ಬೇರೆಯವರಿಗೆ ಹಂಚಿಕೆಯಾಗಿರುತ್ತವೆ. ಆಯುಕ್ತರಿಗೆ ,ಸಂಬಂಧಿಸಿದ ನೌಕರರಿಗೆ  ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇದುವರೆಗೂ ನಿವೇಶನ ನೀಡಿರುವುದಿಲ್ಲ. ಈ ಕುರಿತಂತೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದ್ದು. ನ್ಯಾಯಾಲಯ ಎಂಟು ವಾರಗಳ ಗಡುವು ನೀಡಿ ಆದೇಶ ಹೊರಡಿಸಿದೆ. ದ್ವಿತೀಯ ದರ್ಜೆ ನೌಕರರಾದ ಮಂಜುನಾಥ್ ಆರ್ ಎಂಬುವವರು ಹಣದ ಬೇಡಿಕೆ ಇಟ್ಟಿದ್ದು. ಇದಕ್ಕೆ ಒಪ್ಪದಿದ್ದಾಗ ಕಡತ ಮುಂದುವರೆಸಿರುವುದಿಲ್ಲ ಎಂದು ಆರೋಪಿಸಿದರು.


ಸುದ್ದಿಗೋಷ್ಠಿಯಲ್ಲಿ ಮಂಜು ಮತ್ತಿತರರು ಹಾಜರಿದ್ದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation