ನಿವೃತ್ತರಾದ ಶಿಕ್ಷಕರ ಅಪಾರ ಸಮಸ್ಯೆಗಳ ನಿವಾರಣೆಗೆ ಆಗ್ರಹ

 

ರದ್ದತಿಗೆ ಹಾಗೂ ಯು.ಜಿ.ಸಿ. ವೇತನ ಶ್ರೇಣಿ ಪಡೆದು ನಿವೃತ್ತರಾದ ಶಿಕ್ಷಕರ ಅಪಾರ ಸಮಸ್ಯೆಗಳ ನಿವಾರಣೆಗೆ ಆಗ್ರಹ


ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯ ವಿವರ

ಗೌರವಾನ್ವಿತರೆ, ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಕಾಲೇಜುಗಳಲ್ಲಿ ಸುಮಾರು 25,30,32,33,25 ಹಾಗೂ 36 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಈಗ ನಿವೃತ್ತಿ ವೇತನ ಅಥವಾ ಪಿಂಚಣಿಯನ್ನು ಪಡೆಯುತ್ತಿರುವ ಅಧ್ಯಾಪಕರ ದುಸ್ಥಿತಿಗೆ ಪಟ್ಟ ಭದ್ರ ಹಿತಾಸಕ್ತಿಯ ಅಧಿಕಾರಿಗಳೇ ಕಾರಣವಾಗಿರುತ್ತಾರೆ.

ಅದರಲ್ಲೂ 1-4-2012 ರಿಂದ 31-12-2015 ಅವಧಿಯಲ್ಲಿ ನಿವೃತ್ತಿ ಹೊಂದಿದವರ ಜೀವನ ಚಿಂತಾಕ್ರಾಂತವಾಗಿದೆ. ಈ ಅವಧಿಯಲ್ಲಿ ನಿವೃತ್ತಿಯಾಗಿರುವುದೇ ಶಾಪವೇ?

ಇವರ ನಿವೃತ್ತಿ ಉಪದಾನ ಅಥವಾ ಪಿಂಚಣಿಯನ್ನು ನಿಗದಿ ಪಡಿಸಲು ಸರ್ಕಾರ ಆದೇಶ ಸಂಖ್ಯೆ FD(Spl) 113 PEN.2012 ದಿನಾಂಕ 07-01-2013 ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಯಾವುದೇ ಕಾಲೇಜು ಅಧ್ಯಾಪಕರುಗಳು ಅಧಿಕಾರಿಗಳನ್ನು ಸಂಪರ್ಕಿಸದೆ ಸರ್ಕಾರವೇ ಆದೇಶ ಪ್ರಕಟಿಸಿತ್ತು. ಮೇಲೆ ಸೂಚಿಸಿದ ದಿನಾಂಕಗಳಲ್ಲಿ ನಿವೃತ್ತ ಅಧ್ಯಾಪಕ ಮಿತ್ರರು ಹಾಗೂ ನಿವೃತ್ತ ಪ್ರಾಂಶುಪಾಲರುಗಳು ನಿವೃತ್ತಿ ಉಪದಾನವನ್ನು ಅಥವಾ ಪಿಂಚಣಿಯನ್ನು ಸುಮಾರು 6,8,9 ಹಾಗೂ 10 ವರ್ಷಗಳ ಕಾಲ ಪಡೆದು ಸಮಾಧಾನಕರ ಜೀವನ ನಿರ್ವಹಿಸುತ್ತಿದ್ದಾರೆ.

ಬಾಳಿನ ಸಂಧ್ಯಾಕಾಲದಲ್ಲಿರುವ ಇವರುಗಳು ತಮ್ಮ ಸ್ವಂತ ಮನೆ ನಿರ್ಮಾಣಕ್ಕಾಗಿ | ಮಕ್ಕಳ ವಿಧ್ಯಾಭ್ಯಾಸಕ್ಕಾಗಿ | ಮದುವೆಗಾಗಿ ಅಥವಾ ಅನಾರೋಗ್ಯ ಸಮಸ್ಯೆಗಳಿಗಾಗಿ ಪಡೆದ ಸಾಲವನ್ನು ತಮ್ಮ ಪಿಂಚಣಿ ಅಥವಾ ನಿವೃತ್ತಿ ಉಪದಾನದಿಂದ ಹೊಂದಿಸಿಕೊಂಡಿರುತ್ತಾರೆ ಅಥವಾ ವಿನಿಯೋಗಿಸಿಕೊಂಡಿದ್ದಾರೆ. ಈ ಹಂತದಲ್ಲಿ AFC 0 CORRIGENDUM NO:FD (Spl) 113 PEN.2012 ದಿನಾಂಕ : 11-3-2020 ಬೆಂಗಳೂರು, ಇದರ ಮುಖೇನ CORRECTIVE FACTOR 1.839 SHOULD BE 1.6 ಎಂದು ನಿರ್ಧರಿಸಿ ನಿವೃತ್ತಿ ವೇತನ ಅಥವಾ ಗರಿಷ್ಟ ಪಿಂಚಣಿಯನ್ನು ಮಿತಗೊಳಿಸಿ ಅಥವಾ 50% OF LAST PAY DRWAN WHICH EVER IS LESS ಎಂದು ಆದೇಶಿಸಿರುವುದು ದಿಗ್ಗಾಂತಿಗೊಳಿಸಿದೆ.

ನಿವೃತ್ತಿ ವೇತನ ಅಥವಾ ಪಿಂಚಣಿಯನ್ನು ಕಡಿತಗೊಳಿಸಿದರೆ ಸಾಲಗಳನ್ನು ಮರುಪಾವತಿಸುವುದು ಹೇಗೆ? ಮತ್ತು ಜೀವನ ಸಾಗಿಸುವುದು ಹೇಗೆ? ಈ ದಿಸೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳ ಸಂದರ್ಶನ ಅಥವಾ ಭೇಟಿ ಫಲಪ್ರದವಾಗದಿದ್ದಕ್ಕೆ ಅನ್ಯ ಮಾರ್ಗವಿಲ್ಲದೆ ನ್ಯಾಯಾಲಯಗಳನ್ನು ಸಂಪರ್ಕಿಸಿ ಸೂಚಿತ ಆದೇಶವನ್ನು ತಡೆಹಿಡಿಯಲಾಯಿತು. ನಂತರ ಬೆಳಗಾವಿ ಕೆಇಟಿ ಮತ್ತುಧಾರವಾಡದ ಉಚ್ಛ ನ್ಯಾಯಾಲಯ ಪೀಠವು ಈ ಆದೇಶವನ್ನು ರದ್ದುಗೊಳಿಸಿತು. ಈ ದುಸ್ಥಿತಿ 1-4-2012ಕ್ಕಿಂತ ಹಿಂದೆ ಅಥವಾ ಮುಂಚೆ ಮತ್ತು 31-12-2015ರ ನಂತರ ನಿವೃತ್ತಿ ಹೊಂದಿದವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಉಳಿದವರೆಲ್ಲರೂ ನೆಮ್ಮದಿಯ ಜೀವನ ನಿರ್ವಹಿಸುತ್ತಿದ್ದಾರೆ. ನಾವುಗಳು ಮಾತ್ರ ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಬಾಧಿತ ಆದೇಶಗಳನ್ನು ಹಿಂಪಡೆಯುವ ಬದಲು ಸರ್ಕಾರವು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಹೊಸದಾಗಿ WPNo ದಾವೆ ಸಂಖ್ಯೆ 105388 of 2021 (S-KAT) ದಿನಾಂಕ : 30-11-2021 ರಂದು ಸಲ್ಲಿಸಿ ಕೆ.ಎ.ಟಿ, ಆದೇಶವು ಕಾನೂನು ಬಾಹಿರ ಎಂದು ವಿವರಿಸಿದೆ. ಮೇಲೆ ಸೂಚಿತ ಅವಧಿಯಲ್ಲಿ ನಿವೃತ್ತಿ ಹೊಂದಿದವರ ಜೀವನ ದಾರ ತುಂಡಾದ ಗಾಳಿಪಟದಂತೆ ಅತಂತ್ರ ಸ್ಥಿತಿಯಲ್ಲಿದೆ. ಘನತೆವೆತ್ತ ಸರ್ಕಾರವು ಈ ಅಧ್ಯಾಪಕರಿಗಷ್ಟೇ ಪದೇ ಪದೇ ಕಿರುಕುಳ ನೀಡುತ್ತಿರುವುದು ಖಂಡನೀಯ.

ಸರ್ವೋಚ್ಚ ನ್ಯಾಯಾಲಯ ಅನೇಕ ಪ್ರಕರಣಗಳಲ್ಲಿ ನಿವೃತ್ತಿಯಾದ ಐದು ವರ್ಷಗಳ ನಂತರ ನಿವೃತ್ತಿ ಆದವರ ಮಾನಸಿಕ ನೆಮ್ಮದಿ ಕದಡುವಂತಹ ಯಾವುದೇ ಪ್ರಯತ್ನವನ್ನು ಮಾಡಬಾರದೆಂದು ಸೂಚಿಸಿದೆ. ಅದಾಗಿ ಕೆಲ ಅಧಿಕಾರಿಗಳ ವಿವೇಚನಾರಹಿತ ನಿರ್ಣಯದಿಂದಾಗಿ ಪಿಂಚಣಿದಾರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದನ್ನ ತಪ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.

ಈ ಪ್ರಕಟಣೆಯ ನಂತರ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಶಾಹಿಗಳು ತಮ್ಮ ಗದಾಪ್ರಹಾರವನ್ನು ನಿಲ್ಲಿಸುತ್ತಾರೆಂಬ ಭರವಸೆ ಹೊಂದಿದ್ದೇವೆ.

– ಕರ್ನಾಟಕ ರಾಜ್ಯ ನಿವೃತ್ತ ಕಾಲೇಜು ಅಧ್ಯಾಪಕರ ಸಂಘ


Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation