ಸಾರ್ವಜನಿಕರ ಗಮನ ಸಳೆದ ಸಿರಿಧಾನ್ಯ,ಸಾವಯವ ಮೇಳ,*

 *ಸಾರ್ವಜನಿಕರ ಗಮನ ಸಳೆದ ಸಿರಿಧಾನ್ಯ,ಸಾವಯವ ಮೇಳ,









 *ಸಿರಿಧಾನ್ಯ ಶುದ್ದೀಕರಣ ಮಾಡುವ ಯಂತ್ರ ಪೂರೈಕೆ ಮಾಡುವ ಏಕೈಕ‌ ಭವಾನಿ ಇಂಡಸ್ಟ್ರೀಸ್.* 

 *ಶುಗರ್ ನಿಂದ ಕಿಡ್ನಿ ಕಳೆದು ಕೊಂಡ ಸಿದ್ದ ಮಾರಯ್ಯ ಸಿರಿಧಾನ್ಯ ಉತ್ಪನ್ನಗಳ ಯಶಸ್ವಿ ಉದ್ಯಮಿಯಾದ ಕಥೆ.* 

 *ಎಲ್ಲರ ಗಮನ ಸಳೆದ ಜೀವಿಕ ಆರ್ಗಾನಿಕ್.* 

ಬೆಂಗಳೂರಿನ ಅರಮನೆ ಮೈದಾನದ   ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಸಿರಿಧಾನ್ಯ ಹಾಗೂ ಸಾವಯವ ಕೃಷಿ ಮೇಳದ ಮೊದಲ ದಿನವೇ ಸಾವಿರಾರು ಮಂದಿ ಬೇಟಿ ನೀಡಿ ಸಿರಿಧಾನ್ಯ ಹಾಗೂ ಸಾವಯವ ಪದಾರ್ಥಗಳ ಮಾಹಿತಿ ಪಡೆದರು.

ಸುಮಾರು 250ಕ್ಕೂ ಅಧಿಕ ಮಳಿಗೆಗಳು ಒಂದೊಂದು ರೀತಿಯಾಗಿದ್ದು ಎಲ್ಲರ ಗಮನ ಸಳೆದವು.

ವಿಶೇಷವಾಗಿ ಸಿರಿಧಾನ್ಯ ಗಳು ಆರೋಗ್ಯಕ್ಕೆ ಆರೋಗ್ಯಕರ ಆದರೆ ನವಣೆ,ಸಾಮೆ,ಆರ್ಕ,ಜೋಳ, ಸಜ್ಜೆ ಇತ್ಯಾದಿ ಬೆಳೆಗಳನ್ನು ಶುದ್ದೀಕರಣ, ಅರೆದ ಬಳಿಕವೇ ನಾವು ಬಳಸುವುದು ಮುಖ್ಯ.  ಸಿರಿಧಾನ್ಯಗಳನ್ನು ಶುದ್ದಿಕರಣ, ಅರೆಯಲು ಯಂತ್ರಗಳ ರಾಜ್ಯದ ಎಲ್ಲಡೆ ಸಿಗುವುದು ಅಪರೂಪ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಭವಾನಿ ಇಂಡಸ್ಟ್ರೀಸ್ ಸಿರಿಧಾನ್ಯ ಶುದ್ದೀಕರಣ ಮಾಡುವ ಹಾಗೂ ಅರೆಯುವ ಯಂತ್ರಗಳನ್ನು ಪೂರೈಸಲಿದೆ. 3ಹೆಚ್.ಪಿ ಮಾಡೆಲ್ ನ ಯಂತ್ರಗಳನ್ನು ಭವಾನಿ ಇಂಡಸ್ಟ್ರೀಸ್ ಪೂರೈಸಲಿದೆ. 1946ರಿಂದ ಪ್ರಾರಂಭವಾದ ಈ ಭವಾನಿ ಇಂಡಸ್ಟ್ರೀಸ್ ಇದೇ ಕಾರ್ಯವನ್ನು ಮಾಡುತ್ತಿದೆ.

ಸಿರಿಧಾನ್ಯ ಕೃಷಿಕರು ರೈತ ಸಿರಿ ಯೋಜನೆಯಡಿ ಈ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ. 5ಲಕ್ಷರೂಪಾಯಿ ವರೆಗಿನ ಯಂತ್ರಗಳಿಗೆ ಶೇ50ರಷ್ಟು ಸಬ್ಸಿಡಿ ಪಡೆಯಬಹುದಾಗಿದೆ ಎಂದು ಹೇಳುತ್ತಾರೆ ಭವಾನಿ ಇಂಡಸ್ಟ್ರೀಸ್ ಮಾಲೀಕ ಟಿ.ಮನೋಹರ್.

ಸಿರಿಧಾನ್ಯ ಶುದ್ದೀಕರಣ ಯಂತ್ರಗಳನ್ನು ಕೊಂಡುಕೊಳ್ಳುವವರು ಮೇಳದಲ್ಲಿ ಪ್ರವೇಶದ ದ್ವಾರದ ಬಲ ಭಾಗದಲ್ಲಿ ಭವಾನಿ ಇಂಡಸ್ಟ್ರಿಸ್ ಮಳಿಗೆಗೆ ಬೇಟಿ ಕೊಡಬಹುದಾಗಿದೆ.


 **ಶುಗರ್ ನಿಂದ ಕಿಡ್ನಿ ವೈಫಲ್ಯ ಹೊಂದಿದವ ಸಿರಿಧಾನ್ಯ ಉತ್ಪನ್ನಗಳ ಉದ್ದಿಮೆಯಾದ ಕಥೆ.







ಅತೀಯಾದ ಶುಗರ್ ನಿಂದ ಬಿಡದಿಯ ಬೆತ್ತನಗೆರೆಯ ಎನ್.ಸಿದ್ದಮಾರಯ್ಯ ದಂಪತಿಗಳು ಕಿಡ್ನಿ ವೈಫಲ್ಯ ದಿಂದ ಇನ್ನೇನು ಸಾವಿನ ಹಾದಿ ಹಿಡಿದಿದ್ದರು. ಸಿರಿಧಾನ್ಯ ದಿಂದ ತಯಾರಿಸಿದ ಡಯಾಬಿಟಿಕ್ ಮಿಕ್ಸ್ ಬಳಕೆಯಿಂದ ಜೀವ ಉಳಿಸಿಕೊಂಡ ಎನ್ .ಸಿದ್ದಮಾರಯ್ಯ ದಂಪತಿಗಳು ತಮ್ಮಗೆ ಇರುವ ಬಾರ್, ಹೋಟೆಲ್ ಬ್ಯುಸಿನೆಸ್ ಗೆ ತಿಲಾಂಜಲಿ ನೀಡಿ ತಮ್ಮ ಜೀವರಕ್ಷೆಗೆ ಬಳಸುತ್ತಿದ್ದ ಸಿರಿಧಾನ್ಯ ಉತ್ಪನ್ನಗಳ ವ್ಯವಹಾರ, ತಯಾರಿಕೆ ಶುರು ಮಾಡಿ ಯಶಸ್ವಿ ಯಾಗಿ ಸ್ವಂತ: ಬಿಡದಿ ಸಮೀಪದ ಹೆಜ್ಜಾಲದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ "ಸಂಜೀವಿನಿ ಸಿರಿಧಾನ್ಯ  ತಯಾರಿಕಾ ಕೇಂದ್ರ" ನಡೆಸುತ್ತಿದ್ದಾರೆ. ಸುಮಾರು ಇಪ್ಪತೈದಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ಸಂಜೀವಿನಿ ಸಿರಿಧಾನ್ಯ ಬ್ರಾಂಡ್ ನಡಿ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಹೊರತಂದಿದ್ದಾರೆ. 

ಡಿಯೋ ಪ್ರೋ ಹೆಸರಿನ ಸಿರಿಧಾನ್ಯ ಮಿಕ್ಸ್,  ಶುಗರ್, ಗ್ಯಾಸ್,  ನಿದ್ರಾಹೀನತೆಗೆ ಉತ್ತಮ ರಾಮಬಾಣವಾಗಿದೆ ಎಂದು ಹೇಳುತ್ತಾರೆ ಸಿದ್ದ ಮಾರಯ್ಯ.

 ಮನೋಜವಂ ಹೆಸರಿನಲ್ಲಿ ಹೆಲ್ತ್ ಮಿಕ್ಸ್, ಸ್ಪೆಷಲ್ ಟೀ, ಮಸಲಾ, ನೈಸರ್ಗಿಕ ಬೆಲ್ಲದ ಪುಡಿ ಸಂಜೀವಿನಿ ಬ್ರಾಂಡ್ ನಲ್ಲಿ ಮಾರುಕಟ್ಟೆ ಗೆ ಬರುತ್ತಿವೆ.

ಬರುಗು ಅಕ್ಕಿ, ಸಾಮೆ ಅಕ್ಕಿ, ಸೈಂದವ ಲವಣ ಹೀಗೆ ಸಾವಯವ ಪದಾರ್ಥಗಳು ಸಿದ್ದ ಮಾರಯ್ಯನವರ ಸಂಜೀವಿನಿ ಬ್ರಾಂಡ್ ನಲ್ಲಿ ಮಾರಾಟ ವಾಗುತ್ತಿವೆ.


 **ಎಲ್ಲರ ಗಮನ ಸಳೆದ ಜೀವಿಕ ಆರ್ಗಾನಿಕ್ ಮಳಿಗೆ.* 







ಸಿರಿಧಾನ್ಯ ಮೇಳದಲ್ಲಿ ದೇಶಿಯ ರನ್ನು ಅತೀ ಹೆಚ್ಚು ಗಮನ ಸಳೆದ ಮಳಿಗೆಯೆಂದರೆ ಜೀವಿಕ ಆರ್ಗಾನಿಕ್ಸ್. 2014ರಲ್ಲಿ ಆಂಧ್ರಪ್ರದೇಶದ ಹೈದ್ರಾಬಾದ್ ನಲ್ಲಿ ಪ್ರಾರಂಭವಾದ ಈ ಸಾವಯವ ಉತ್ಪನ್ನಗಳ ಸಂಸ್ಥೆ ಬಹುದೊಡ್ಡ ಸಂಸ್ಥೆಯಾಗಿ ಬೆಳದಿದೆ.

 ಇಲ್ಲಿ ತಯಾರಾಗುವ ತೊಗರಿ ಬೇಳೆ, ಅಣಬೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕೊಬ್ಬರಿ ಎಣ್ಣೆ ಅತ್ಯಂತ ಪ್ರಸಿದ್ಧಿ ಪಡೆದಿವೆ.

ಹಿಮಾಚಲ ಎ2ದೇಸಿ ತುಪ್ಪ ಪಕ್ಕಾ ಹಸುವಿನಿಂದ ತಯಾರಾದ ಪುರಾತನ ಕಾಲದ ತುಪ್ಪ ವನ್ನು ಜೀವಿಕ ಆರ್ಗಾನಿಕ್ ಹೊಂದಿದೆ.ಇಲ್ಲಿ  ನೈಸರ್ಗಿಕ ಗೋತುಪ್ಪ ದೊರೆಯಲಿದೆ.

ಮಥುರಾ, ಬೃಂದಾವನದ ಹಾಲಿನ ಹೆಪ್ಪದಿಂದ ತಯಾರಾದ ಗುಲ್ಕಾನ್, ಕೇಸರ್ ಕಾಶ್ಮೀರ್ ಪ್ಯಾಪೋರ್ , ದೇಶಿಯ ಹಸುಗಳಿಂದ ತಯಾರಾದ ಚವನ್ ಪ್ರೆಶ್ ಇಲ್ಲಿ ದೊರೆಯಲಿವೆ.

ಅಲೋವೆರಾ, ತುಳಸಿ, ಅಮ್ಲಾ, ಗೋಧಿ ಹಾಲು, ಕ್ಯಾರೆಟ್ ಜಾಮೂನ್ ಇವೆಲ್ಲವೂ ಜೀವಿಕ ಆರ್ಗಾನಿಕ್ ನಲ್ಲಿ ದೊರೆಯಲಿವೆ.

 ಬೆಂಗಳೂರಿನ ರತ್ನದೀಪ್, ನಾಮಧಾರಿ, ನೇಚರ್ ಬಾನೇಟ್ ಸೇರಿದಂತೆ ಅನೇಕ ಸಾವಯವ ಮಳಿಗೆಗಳಲ್ಲಿ ಜೀವಿಕ ಆರ್ಗಾನಿಕ್ ಪದಾರ್ಥಗಳು ದೊರೆಯಲಿವೆ ಎಂದು ಹೇಳುತ್ತಾರೆ ಅದರ ಮಾಲೀಕರು.

ಉತ್ತರ ಕರ್ನಾಟಕದ ವಿವಿಧ ಸಹಕಾರಿ ಒಕ್ಕೂಟಗಳು ತಾವೇ ತಯಾರಿಸುವ ಸಾವಯವ ಪದಾರ್ಥಗಳ ಮಳಿಗೆಗಳು ಎಲ್ಲರ ಗಮನ ಸಳೆಯುತ್ತಿವೆ.

ಒಟ್ಟಾರೆ 2019ರ ನಂತರ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಬೃಹತ್ ಸಿರಿಧಾನ್ಯ ಸಾವಯವ ಕೃಷಿ ಮೇಳ ಸಾರ್ವಜನಿಕರ ಗಮನ ಸಳೆಯುತ್ತಿವೆ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation