ಸ್ವಪ್ನ ಬುಕ್ ಹೌಸ್ ನಿಂದ ಕನ್ನಡದ 70 ಪ್ರಮುಖ ಲೇಖಕರ ಕೃತಿಗಳ ಲೋಕಾರ್ಪಣೆ
ಸ್ವಪ್ನ ಬುಕ್ ಹೌಸ್ ನಿಂದ ಕನ್ನಡದ 70 ಪ್ರಮುಖ ಲೇಖಕರ ಕೃತಿಗಳ ಲೋಕಾರ್ಪಣೆ ಬೆಂಗಳೂರು ಡಿಸೆಂಬರ್ 27; 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಪ್ನ ಬುಕ್ ಹೌಸ್ ಕನ್ನಡದ 70 ಪ್ರಮುಖ ಲೇಖಕರ ಕೃತಿಗಳ ಲೋಕಾರ್ಪಣೆ ಸಮಾರಂಭ ಗಾಂಧಿಭವನದಲ್ಲಿ ನಡೆಯಿತು. ಅಧಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ,ನಾಡೋಜ ಡಾ.ಹಂಪ ನಾಗರಾಜಯ್ಯ 70ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಎಲ್ಲ ಕೃತಿಗಳ ಪರಿಚಯವನ್ನು ಬಿಎಂಶ್ರೀ ಪ್ರತಿಷ್ಢಾನ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಸಮಾರಂಭದಲ್ಲಿ ಪರಿಚಯಿಸಿದರು. ನಾಡು- ನುಡಿಯ ದೃಷ್ಠಿಯಲ್ಲಿ ಈ ಪುಸ್ತಕಗಳ ಕುರಿತು ಕಾದಂಬರಿಕಾರ,ಕನ್ನಡ ಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ ಮಾತನಾಡಿದರು. ಡಾ.ಹಂಪ ನಾಗರಾಜಯ್ಯ,ಡಾ.ಬಿ.ಎ.ವಿವೇಕ ರೈ,ಡಾ.ಎಂ.ವೀರಪ್ಪ ಮೊಯಿಲಿ,ಪ್ರೋ.ಮಲ್ಲೇಪುರಂ ಜಿ.ವೆಂಕಟೇಶ, ಡಾ.ಕೆ.ಚಿದಾನಂದಗೌಡ,ಜಾಣಗೆರೆ ವೆಂಕಟರಾಮಯ್ಯ,ಡಾ.ಹಿ.ಚಿ.ಬೋರಲಿಂಗಯ್ಯ,ಎಚ್.ಡುಂಡಿರಾಜ್,ಡಾ.ವಸುಂದರಾ ಭೂಪತಿ ಸೇರಿದಂತೆ 70ಲೇಖಕರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ,ವ್ಯವಸ್ಥಾಪಕ ದೊಡ್ಡೇ ಗೌಡ ಸೇರಿದಂತೆ 70 ಲೇಖಕರು ಭಾಗವಹಿಸಿದ್ದರು.