ಡಿಸೆಂಬರ್ 4ರಂದು ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಮಹಿಳಾ ನೌಕರರ ಸಮ್ಮೇಳನ*
*ಡಿಸೆಂಬರ್ 4ರಂದು ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಮಹಿಳಾ ನೌಕರರ ಸಮ್ಮೇಳನ*
*ಋತುಚಕ್ರ ರಜೆ ಘೋಷಣೆ ಮುಖ್ಯಮಂತ್ರಿ, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ*
ಬೆಂಗಳೂರು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ)ವತಿಯಿಂದ ಡಿಸೆಂಬರ್ 4ರಂದು ಮಹಿಳಾ ಸಮ್ಮೇಳನ ಮತ್ತು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿರುವ ರಾಜ್ಯದ ಸರ್ಕಾರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂಘ ಉದ್ದೇಶಗಳು ಮತ್ತು ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಧ್ಯಮಗೋಷ್ಟಿ.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು,ರಾಜ್ಯ ಗೌರವಾಧ್ಯಕ್ಷರಾದ ಶ್ರೀಮತಿ ಗೀತಮಣಿ, ಉಪಾಧ್ಯಕ್ಷೆ ಮಲ್ಲಿಕಾ ಎಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಶಶಿಕಲಾ, ರಾಜ್ಯ ಖಜಾಂಚಿ ಡಾ||ವೀಣಾ ಕೃಷ್ಣಮೂರ್ತಿರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ *ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು* ಮಾತನಾಡಿ ಮಹಿಳೆಯರು ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಇಂದು ಸಮಾಜದಲ್ಲಿ ಪುರುಷರಷ್ಟೆ ಸರಿಸಮಾನವಾಗಿ ಕಾರ್ಯ ನಿರ್ವಹಿಸಿ ದಿಟ್ಟ ಮಹಿಳೆ ಎಂದು ರೂಪಿಸಿದ್ದಾಳೆ ಅದರು ಸರ್ಕಾರದಲ್ಲಿ ಮಹಿಳಾ ನೌಕರರು ಹಲವಾರು ಮಹಿಳೆಯರು ಸಂಕಷ್ಟ ಎದುರಿಸಿದ್ದಾರೆ ಸಮಸ್ಯೆಗಳ ನಿವಾರಣೆ ಮತ್ತು ಮಹಿಳಾ ನೌಕರರ ಪರ ಗಟ್ಟಿಯಾಗಿ ನಿಲ್ಲಲು ನಮ್ಮ ಸಂಘದ ಉದ್ದೇಶವಾಗಿದೆ.
ಮಹಿಳಾ ನೌಕರರಿಗೆ ಋತುಚಕ್ರ ರಜೆ ಮಂಜೂರು ಮಾಡುವಲ್ಲಿ ನಮ್ಮ ಸಂಘವು ಪ್ರಮುಖ ಪಾತ್ರವಹಿಸಿದೆ.
ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಣೆ ಮಾಡುವಲ್ಲಿ ನಮ್ಮ ಸಂಘದ ಹೋರಾಟದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಳರ್ ಮತ್ತು ಸಂಪುಟ ಸಭೆಯಲ್ಲಿ ಅನುಮೋದನೆಯಾಗಿ ಅದೇಶ ಬರುವಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಉತ್ತಮ ಸಹಕಾರ ನೀಡಿದರು.
ಋತುಚಕ್ರ ರಜೆ ಘೋಷಣೆ ಮಾಡಿರುವ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಸಂಪುಟದ ಎಲ್ಲ ಸಚಿವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಡಿಸೆಂಬರ್ 4ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ. ರಾಜ್ಯಾದ್ಯಂತ ಇರುವ ಸರ್ಕಾರಿ ಸಾವಿರಾರು ಮಹಿಳಾ ನೌಕರರು ಭಾಗವಹಿಸಿಲಿದ್ದಾರೆ.
ದೇಶದಲ್ಲಿ ಮೊಟ್ಟಮೊದಲ ಮಹಿಳಾ ನೌಕರರ ಸಂಘಎಂಬ ಕೀರ್ತಿಗೆ ನಮ್ಮ ಸಂಘವಾಗಿದೆ. ರಾಜ್ಯ ಸರ್ಕಾರದಲ್ಲಿ ಶೇಕಡ 52ರಷ್ಟು ಮಹಿಳಾ ನೌಕರರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಹಿಳೆಯಿಂದ ಮಹಿಳೆಯರಿಗಾಗಿ, ಮಹಿಳೆಗೋಸ್ಕರ ನಮ್ಮ ಸಂಘವು ಶ್ರಮಿಸುತ್ತಿದೆ. ಮಹಿಳೆಯರುಮತ್ತು ಅವರ ಮಕ್ಕಳಿಗೆ ಆರೋಗ್ಯ ತಪಾಸಣೆ, ಕ್ರೀಡಾ ಚಟುವಟಿಕೆ ಮತ್ತು ಮಹಿಳಾ ಹಕ್ಕುಗಳಿಗೆ ನಮ್ಮ ಆದ್ಯತೆಯಾಗಿದೆ.
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಮಹಿಳಾ ನೌಕರರಿಗೆ ಋತುಚಕ್ರ ವೇತನ ಸಹಿತ ರಜೆ ಘೋಷಣೆ ಮಾಡಿದ್ದಾರೆ ಮೊಟ್ಟ ಮೊದಲ ರಾಜ್ಯವಾಗಿದೆ.
ಸರ್ಕಾರಿ ಮಹಿಳಾ ನೌಕರರು ನಮ್ಮ ಸಂಘದ ಸದಸ್ಯತ್ವ ಪಡೆಯಬೇಕು, ನಮ್ಮ ಸಂಘದ ಕಾರ್ಯಚಟುವಟಿಕೆ ಸಂಘಟನೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಿದರು.

Comments
Post a Comment