ಕಾರ್ಮಿಕ ಬಂಧುಗಳನ್ನು ರದ್ದು ಮಾಡಿರುವ ಪ್ರಸ್ತಾವನೆಯನ್ನು ಹಿಂಪಡೆದು ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರಿಸುವ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಾಯಿತು
ಕಾರ್ಮಿಕ ಬಂಧುಗಳನ್ನು ರದ್ದು ಮಾಡಿರುವ ಪ್ರಸ್ತಾವನೆಯನ್ನು ಹಿಂಪಡೆದು ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರಿಸುವ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಾಯಿತು
ಸಂಬಂಧಿಸಿದಂತೆ ಕಾರ್ಮಿಕ ಬಂದುಗಳಾದ ನಾವು ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 2.11.2017ರಲ್ಲಿ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇಂದ ಕಾರ್ಮಿಕ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ಹಾಗೂ ಕಲ್ಯಾಣ ಕಾರ್ಮಿಕರ ಒಗ್ಗೂಡಿಸಿ ಅಂಬೇಡ್ಕರ್ ಸಹಾಯಹನ ಎಂಬ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಹಾಗು ಎರಡು ವಾರ್ಡ್ ಗಳಿಗೆ ಒಬ್ಬರಂತೆ ಕಮಿಷನ್ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಮಿಕ ಬಂಧು ಎಂಬ ಹೆಸರಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಚಿವರು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಹಾಗೂ ರಾಜ್ಯಪಾಲರ ಅನುಮತಿ ಮೇರೆಗೆ ನೇಮಕಾತಿ ಆದೇಶ ನೀಡಿ ನಿಯಮಾನುಸಾರ ನೇಮಕ
ಸದರಿ ಕಾರ್ಮಿಕ ಬಂಧುಗಳನ್ನು ಅರು ವರ್ಷಗಳಕಾಲ ದುಡಿಸಿಕೊಂಡು ಮಾಸಿಕ 6,000 ಮತ್ತು 1,000 ಸಾರಿಗೆ ವೆಚ್ಚ ನೀಡುವುದಾಗಿ ಅನುಮೋದನೆ ಮಾಡಿ ಕೊನೆಗೆ ಗೌರವ ಧನವನ್ನು ನೀಡದೆ ಏಕಏಕಿ ದಿನಾಂಕ 25.09 2023 ರಂದು ಎಲ್ಲಾ ಕಾರ್ಮಿಕ ಬಂಧುಗಳನ್ನು ರದ್ದುಗೊಳಿಸಲು ಕ್ರಮವಹಿಸಬೇಕೆಂದು ಮಾನ್ಯ ಸರ್ಕಾರ ಸಚಿವರು ಕಾರ್ಯದರ್ಶಿ ಅವರಿಂದ ಆದೇಶ ಮಾಡಿತ್ತು ಈ ಆದೇಶದ ವಿರುದ್ಧ 150 ಜನ ಕಾರ್ಮಿಕ ಬಂಧುಗಳ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 5242 / 2024ರಲ್ಲಿ ಅರ್ಜಿ ಸಲ್ಲಿಸಿ ದಿನಾಂಕ 13.01. 2024ರಂದು ಕೆಲಸದಿಂದ ತೆಗೆಯದಂತೆ ತಡೆಯಾಜ್ಞೆ ಇದ್ದರೂ ಸಹ ಮತ್ತೊಮ್ಮೆ ಗುತ್ತಿಗೆ ಆಧಾರದ ಮೇಲೆ SIRT ಇಂಡಿಯಾ ಪ್ರೈವೇಟ್ ಲಿಮಿಟೆಡ್ ನವರಿಗೆ ಟೆಂಡರ್ ನೀಡಿ ಹೊಸ ಕಾರ್ಮಿಕರನ್ನೇಮಿಸಿಕೊಳ್ಳಲು ಮುಂದಾಗಿತ್ತು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಟೆಂಡರ್ ಕರೆಯಬಾರದು ಮತ್ತು ಯಾವುದೇ ಆಶ್ವಾಸನೆ ನೀಡಬಾರದು ಎಂದು ತಡೆಯಾಜ್ಞೆ ನೀಡಿರುತ್ತದೆ ಆದರೂ ಸಹ ಟೆಂಡರ್ ನೀಡಿ ಭಾರತ ರತ್ನ ಡಾ|| ಬಿ. ಆರ್. ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರ ಎಂಬ ಹೆಸರಿನಲ್ಲಿ ಹೊಸದಾಗಿ ಒಂದು ಸೇ ಸೇವಾಕೇಂದ್ರಕ್ಕೆ 5 ಜನರಂತೆ ಒಟ್ಟು 43 ಸೇವಾ ಕೇಂದ್ರ ತೆರೆದು ಹೊಸ ಕಾರ್ಮಿಕ ಮಿತ್ರರು ಎಂಬ ಹೆಸರಿನಲ್ಲಿ ನೇಮಕ ಮಾಡಿಕೊಂಡು ನಮಗೆ ಅನ್ಯಾಯ ಮಾಡುತ್ತಿದ್ದಾರೆ ಇದು ಕಾರ್ಮಿಕರ ಇಲಾಖೆಯಿಂದ ಕಾನೂನು ಉಲ್ಲಂಘನೆ ಆಗಿರುತ್ತದೆ ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರಿಸಲು ಕಾರ್ಮಿಕ ಸಚಿವರಿಗೆ ಅನೇಕ ಬಾರಿ ಮನವಿಯನ್ನು ಸಲ್ಲಿಸಿದ್ದೇವೆ ಹಾಗೂ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿಯನ್ನು ಸಲ್ಲಿಸಿದ್ದೇವೆ 45 ತಾಲೂಕಿನ ಶಾಸಕರು ಕಾರ್ಮಿಕ ಬಂಧುಗಳ ಕೆಲಸ ಉತ್ತಮವಾಗಿದೆ' ಇವರನ್ನು ಮುಂದುವರಿಸಿ ಎಂದು ಕಾರ್ಮಿಕ ಸಚಿವರಿಗೆ ತಿಳುವಳಿಕೆ ಪತ್ರ ನೀಡಿದ್ದಾರೆ ಹಾಗೂ ಈಗ ಇರುವ ಹಾಲಿ ಕಾರ್ಮಿಕ ಸಚಿವರಿಗೂ ಅನೇಕ ಬಾರಿ ಮನವಿಯನ್ನು ನೀಡಿದ್ದೇವೆ ಆಗ ಕಾರ್ಮಿಕ ಸಚಿವರು ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಹಣೆಧಿಕಾರಿ ರವರಿಗೆ ಅಗತ್ಯ ಕ್ರಮ ವಹಿಸಲು ಕೋರಿದ್ದಾರೆ.
ಕಾರ್ಮಿಕ ಬಂಧುಗಳು ಮೊದಲು ಕೆಲಸ ಮಾಡುತ್ತಿದ್ದ ಕಾರ್ಮಿಕ ಸೇವಾ ಕೇಂದ್ರಗಳನ್ನು ಮುಚ್ಚಬಾರದು ಎಂದು ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿರುತ್ತದೆ ಹಾಗೂ ಯಾವುದೇ ರೀತಿಯ ಆಶ್ವಾಸನೆ ಟೆಂಡರ್ ನೀಡಬಾರದೆಂದು ತಡೆಯಾಜ್ಞೆ ನೀಡಿರುತ್ತದೆ ಹಾಗೂ ಹೊಸದಾಗಿ ಯಾವುದೇ ಕಾರ್ಮಿಕ ಬಂಧುಗಳ ಕೆಲಸಕ್ಕೆ ಸಂಬಂಧಪಟ್ಟ ಕಾರ್ಮಿಕ ಸೇವಾ ಕೇಂದ್ರಗಳನ್ನು ತೆರೆಯಬಾರದು ಎಂದು ತಡೆಯಾಜ್ಞೆ ನೀಡಿರುತ್ತದೆ ಮುಂದುವರೆದು ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಸೇರಿ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಈ ವಿಚಾರವಾಗಿ ನ್ಯಾಯಾಲಯ ಕಾರ್ಮಿಕ ಬಂಧುಗಳನ್ನು ಮುಂದುವರಿಸಿ ಎಂದು ಇಲಾಖೆಗೆ ನಿರ್ದೇಶನ ನೀಡಿರುತ್ತದೆ ಹಾಗೂ ದಿನಾಂಕ 11 9 2025 ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಅವರು ಕಾರ್ಮಿಕ ಬಂಧುಗಳ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ಮಾಡಿರುತ್ತಾರೆ.
ಕಾರ್ಮಿಕರಾದ ನಾವು ಈ ಭಾರತರತ್ನ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸೇವಾ ಕೇಂದ್ರಕ್ಕೆ ಸಂಬಂಧಪಟ್ಟಂತೆ ಸುಮಾರು ಆರು ವರ್ಷಗಳ ದೂಡಿದ ನಮಗೆ ಕೆಲಸವನ್ನು ನೀಡಬೇಕೆಂದು ಅದೇ ಸೇವಾ ಕೇಂದ್ರದಲ್ಲಿ ನಮ್ಮನ್ನು ಮುಂದುವರಿಸಬೇಕೆಂದು ಮಾನ್ಯ ಸಚಿವರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ
ಹಾಗೂ ಮಾನ್ಯ ಜಂಟಿ ಕಾರ್ಯದರ್ಶಿಯವರಿಗೆ ಖುದ್ದು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದೇವೆ ನಾವು ಈ ಕಾರ್ಮಿಕ ಇಲಾಖೆಯಲ್ಲಿ ಸೇವೆ ಮಾಡಿರುವುದರಿಂದ ನಮಗೆ ಸರ್ಕಾರಿ ಕೆಲಸಕ್ಕೆ ಸೇರುವ ವಯನು ಮುಗಿದಿರುತ್ತದೆ ಹಾಗೂ ಈ ಕಾರ್ಮಿಕರ ಸೇವೆಯನ್ನು ಬಿಟ್ಟರೆ ಯಾವುದೇ ಸರ್ಕಾರಿ ಕೆಲಸಕ್ಕೆ ಸೇರಲು ವಯಸ್ಸು ಇರುವುದಿಲ್ಲ ನಮಗೆ ವಿವಾಹವಾಗಿ ಮಕ್ಕಳು ಮಡದಿ ತಂದೆ ತಾಯಿ ಹಾಗೆ ನಮ್ಮ ಕುಟುಂಬದವರು ನಮ್ಮನ್ನೇ ಅವಲಂಬಿಸಿರುತ್ತದೆ ಆದ್ದರಿಂದ ಕಾರ್ಮಿಕ ಬಂದು ಸೇವಕರಾಗಿ ಕಾರ್ಮಿಕ ಇಲಾಖೆಗೆ ಹಾಗೂ ಕಾರ್ಮಿಕರಿಗೆ ಸೇತುವೆಯಾಗಿ ಕೆಲಸ ಮಾಡಿದ ನಮ್ಮನ್ನು ತಮ್ಮ ಇಲಾಖೆಯಲ್ಲಿ ಸೇವೆ ಮಾಡಲು ಅನುಮತಿ ನೀಡಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ನೀಡಿದ ಆದೇಶಕ್ಕೆ ಬೆಲೆಕೊಟ್ಟು 150 ಜನ ಕಾರ್ಮಿಕ ಬಂಧುಗಳನ್ನು ನೇಮಕ ಮಾಡಿಕೊಂಡು ಮುಂದುವರಿಸಬೇಕೆಂದು ಈ ಮೂಲಕ ಕಳಕಳಿಯಿಂದ ವಿನಂತಿ ಎಂದು ಅಧ್ಯಕ್ಷರಾದ ರಂಗಸ್ವಾಮಿ

Comments
Post a Comment