2025-26 ನೇ ಸಾಲಿನ ನೂತನ ರಾಜ್ಯ ಅಧ್ಯಕ್ಷರಾಗಿ ಡಾ. ರವಿ ಮಂಡ್ಯ ಹಾಗೂ ನೂತನ ರಾಜ್ಯ ಕಾರ್ಯದರ್ಶಿಯಾಗಿ ಶ್ರೀ ಗೋಪಿ. ರಂಗಸ್ವಾಮಿ ಅವರು ಆಯ್ಕೆಯಾಗಿರುತ್ತಾರೆ.
2025-26 ನೇ ಸಾಲಿನ ನೂತನ ರಾಜ್ಯ ಅಧ್ಯಕ್ಷರಾಗಿ ಡಾ. ರವಿ ಮಂಡ್ಯ ಹಾಗೂ ನೂತನ ರಾಜ್ಯ ಕಾರ್ಯದರ್ಶಿಯಾಗಿ ಶ್ರೀ ಗೋಪಿ. ರಂಗಸ್ವಾಮಿ ಅವರು ಆಯ್ಕೆಯಾಗಿರುತ್ತಾರೆ.
ಕರುನಾಡ ಜೀವ ನದಿ ಕಾವೇರಿ ತಾಯಿಯ ಉಗಮ ಸ್ಥಾನ, ದಕ್ಷಿಣ ಭಾರತದ ಕಾಶ್ಮೀರ ಎಂದು ಹೆಸರುವಾಸಿಯಾಗಿರುವ, ಕ್ಷಾತ್ರ ಪರಂಪರೆಯನ್ನು ತನ್ನ ಒಡಲಲ್ಲಿ ಕಟ್ಟಿಕೊಂಡ ನೆಲ, ದೇಶಕ್ಕೆ ಪ್ರಪ್ರಥಮ ಫೀಲ್ಡ್ ಮಾರ್ಷಲ್ ಹಾಗೂ ಸಾವಿರಾರು ಯೋಧರನ್ನು ನೀಡಿದ ಪುಣ್ಯ ಭೂಮಿ, ಓಂ ಕಾರೇಶ್ವರನ ನೆಲೆಯಾದ ಗಿರಿ ಶಿಖರಗಳಿಂದ ಕೂಡಿರುವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ವರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಸಮ್ಮೇಳನವು ನಡೆಯುತ್ತಿರುವುದು ಹರ್ಷದ ವಿಚಾರ 45 ನೇ ಪ್ರಾಂತ ಸಮ್ಮೇಳನವು ದಿನಾಂಕ 17,18,19 ಡಿಸೆಂಬರ್ 2025 ರಂದು ಮಡಿಕೇರಿ ನಗರದ ಕೊಡವ ಗೌಡ ಸಮಾಜ ಭವನದಲ್ಲಿ ನಡೆಯುತ್ತಿದೆ.
45ನೇ ರಾಜ್ಯ ಸಮ್ಮೇಳನವು ಮಡಿಕೇರಿಯಲ್ಲಿ ನಡೆಯಲಿದ್ದು, ಈ ರಾಜ್ಯ ಸಮ್ಮೇಳನದಲ್ಲಿ 2025-26ನೇ ಸಾಲಿನ ನೂತನ ರಾಜ್ಯ ಅಧ್ಯಕ್ಷರಾಗಿ ಡಾ. ರವಿ ಮಂಡ್ಯ ಇವರ ಪರಿಚಯ ಶ್ರೀಯುತರು ಮೂಲತಃ ಮಂಡ್ಯದವರು, ಇವರು M.Com., M.B.A., M.Phil., Ph.D ಪದವಿದವರಾಗಿದ್ದಾರೆ. ಇವರು ಅಲ್ಪಾವಧಿ ವಿಸ್ತಾರಕರಾಗಿ, ಜಿಲ್ಲಾ ಪ್ರಮುಖರಾಗಿ, ಕಾರ್ಯಕಾರಿಣಿ ಸದಸ್ಯರಾಗಿ, ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರ ಕೇಂದ್ರ ಮಂಗಳೂರು.
ನೂತನ ರಾಜ್ಯ ಕಾರ್ಯದರ್ಶಿಯಾಗಿ ಶ್ರೀ ಗೋಪಿ, ರಂಗಸ್ವಾಮಿ ಅವರು ಆಯ್ಕೆಯಾಗಿದ್ದು ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೆದ್ದೇಹಳ್ಳಿಯವರು, ಇವರು ಬಿ.ಕಾಂ ವಿದ್ಯಾಭ್ಯಾಸದ ನಂತರ ಚಿತ್ರದುರ್ಗದ ಎಸ್.ಜೆ.ಎಂ ಕಾಲೇಜಿನಲ್ಲಿ ಎರಡನೇ ವರ್ಷದ ಕಾನೂನು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇವರ ಕೇಂದ್ರ ಚಿತ್ರದುರ್ಗ. ಜಿಲ್ಲೆಯ 2025-26ನೇ ಸಾಲಿನ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಆಯ್ಕೆಯಾದ ಇಬ್ಬರಿಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಹೃತ್ತೂರ್ವಕ ಧನ್ಯವಾದಗಳು.
ಧನ್ಯವಾದಗಳೊಂದಿಗೆ,
ಶ್ರೀ ರಮೇಶ್ ಎಂ
ಚುಣಾವಣಾಧಿಕಾರಿ
ಅ.ಭಾ.ವಿ.ಪ ಕರ್ನಾಟಕ ದಕ್ಷಿಣ.

Comments
Post a Comment