ಪಾಲ್ತು ನಾಯಿ “ಬೋಂಗೋ” ಕಾಣೆ;ಹುಡುಕಿ ಕೊಟ್ಟವರಿಗೆ 25ಸಾವಿರ ರೂ.ಬಹುಮಾನ ಘೋಷಣೆ.

 ಪಾಲ್ತು ನಾಯಿ “ಬೋಂಗೋ” ಕಾಣೆ;ಹುಡುಕಿ ಕೊಟ್ಟವರಿಗೆ 25ಸಾವಿರ ರೂ.ಬಹುಮಾನ ಘೋಷಣೆ.






ಬೆಂಗಳೂರು ಡಿಸೆಂಬರ್ 9; ಪಾಲ್ತು ನಾಯಿ “ಬೋಂಗೋ” ಅನುಮಾನಾಸ್ಪವಾಗಿ ಕಾಣೆಯಾಗಿದ್ದು,ಪತ್ತೆ ಹಚ್ಚಿದವರಿಗೆ 25ಸಾವಿರ ರೂಪಾಯಿ  ಎಂದು ನಾಯಿ ವಾರಸುದಾರೆ ಸ್ವರ್ಣಿಮಾ ನಿಶಾಂತ್  ಘೋಷಣೆ ಮಾಡಿದ್ದಾರೆ. 

 ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಪ್ರಕರಣವನ್ನು ಅಧಿಕೃತವಾಗಿ ಬೆಂಗಳೂರು ಪುಟ್ಟನಹಳ್ಳಿ ಪೊಲೀಸ್ ಠಾಣೆಯಲ್ಲಿ 0277/2025 ಅಡಿಯಲ್ಲಿ ದೂರು ದಾಖಲಿಸಲಾಗಿದೆ.ಬೋಂಗೋ  ಶಿಶುವಾಗಿದ್ದಾಗ ಭಾರೀ ಗಾಯಗೊಂಡಿದ್ದ ಸ್ಥಿತಿಯಲ್ಲಿ ರಕ್ಷಿಸಲಾಗಿತ್ತು ಹಾಗೂ 2021ರಲ್ಲಿಅನೂಭವ್ ಕಬ್ರಾ, ಕೀರ್ತಿ ಲಾಭ್  ಅವರು ದತ್ತು ಪಡೆದಿದ್ದರು, ಸುಮಾರು ಐದು ವರ್ಷ ಮನೆಯಲ್ಲಿ ಬೆಳೆಸಿದ ನಂತರ,ಕಳೆದ ಆಗಸ್ಟ್ ಒಂದರಂದು  ಬೋಂಗೋ ಅವರನ್ನು ತೊರೆದು ಹೋಗಿದೆ,ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ, ಗೊಟ್ಟಿಗೆರೆ, ರಾಯಲ್ ಕೌಂಟಿ ರಸ್ತೆಯಲ್ಲಿ ಬೋಂಗೋ ಕಾಣೆಯಾದ ಬಗ್ಗೆ ತಿಳಿಸಿದ್ದಾರೆ.

ಆ ದಿನದಿಂದ ಇಂದಿಗೂ ಬೋಂಗೋ ಇದುವರೆಗೂ ಪತ್ತೆಯಾಗಿಲ್ಲ, ಇದರ ಪತ್ತೆಗಾಗಿ ಮೂರು ತಿಂಗಳಿಗಿಂತ ಹೆಚ್ಚು ಸಮಯವಾಗಿದ್ದು, ಸ್ವಯಂಸೇವಕರು ಮತ್ತು ರಕ್ಷಕರು ದಿನರಾತ್ರಿ ನಗರದೆಲ್ಲೆಡೆ ಹುಡುಕುತ್ತಿದ್ದಾರೆ. ಇಷ್ಟು ಸಮಯ ಕಳೆದಿರುವುದರಿಂದ, ಬೋಂಗೋ ಬೆಂಗಳೂರು ನಗರದಲ್ಲಿ ಯಾವುದೇ ಭಾಗದಲ್ಲಿ ಇರಬಹುದು, ದೂರಕ್ಕೆ ನಡೆದಿರಬಹುದು ಅಥವಾ ಯಾರಾದರೂ ತೆಗೆದುಕೊಂಡಿರಬಹುದು ಅನುಮಾನ ಕಾಡುತ್ತಿದೆ,ಬೋಂಗೋಗೆ ಹಿಂದಿನ ವೈದ್ಯಕೀಯ ಸಮಸ್ಯೆಗಳಿರುವುದರಿಂದ,  ಬೀದಿಯಲ್ಲಿ ಬದುಕಲು ಅಸಮರ್ಥವಾಗಿದೆ ಎಂದರು.

 ನಾಯಿ ಪತ್ತೆಗಾಗಿ ಪುನಃಪುನಃ ಮನವಿ ಮಾಡಿದರೂ,ಬಿಬಿಎಂಪಿ ಅಧಿಕಾರಿಗಳು ಹಾಗೂ ಜಾರಿಗೆ ಸಂಬಂಧಿತ ಸಂಸ್ಥೆಗಳು ತಕ್ಷಣದ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಯಾರಾದರೂ ಬೋಂಗೋಗೆ ಸಂಬಂಧಿಸಿದ ವಿಶ್ವಾಸಾರ್ಹ ಮಾಹಿತಿ, ಸಿಸಿಟಿವಿ ದೃಶ್ಯಗಳು, ದೃಶ್ಯಾವಳಿ ಅಥವಾ ಸುಳಿವುಗಳಿದ್ದರೆ ತಕ್ಷಣ ಈ ನಂಬರ್ ಗೆ 7483151270ಗೆ ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims