ಕರ್ನಾಟಕದ ಚರ್ಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡ ಕಥೋಲಿಕರು ತಮ್ಮ ನೋವನ್ನು ಬಿಗಿಯಾಗಿ, ಸ್ಪಷ್ಟವಾಗಿ ಮತ್ತು ಸಾರ್ವಜನಿಕವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಬಂದಿರುವುದು ನಮ್ಮೆಲ್ಲರಿಗಾಗಿ ಒಂದು ವಿಷಾದಕರ ಹಾಗೂ ಅಪಾಯಕಾರಿ ಹಂತವಾಗಿದೆ.

  

ಕರ್ನಾಟಕದ ಚರ್ಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕನ್ನಡ ಕಥೋಲಿಕರು ತಮ್ಮ ನೋವನ್ನು ಬಿಗಿಯಾಗಿ, ಸ್ಪಷ್ಟವಾಗಿ ಮತ್ತು ಸಾರ್ವಜನಿಕವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಬಂದಿರುವುದು ನಮ್ಮೆಲ್ಲರಿಗಾಗಿ ಒಂದು ವಿಷಾದಕರ ಹಾಗೂ ಅಪಾಯಕಾರಿ ಹಂತವಾಗಿದೆ.


ಇದೆಲ್ಲ ನಡೆದಿದ್ದು ಎರಡು ವಾರಗಳ ಹಿಂದೆ ನಮ್ಮ ಬೆಂಗಳೂರು ಧರ್ಮಪ್ರಾಂತ್ಯದ ಮಹಾ ಧರ್ಮಾಧ್ಯಕ್ಷರಾದ ಕೊಂಕಣಿ ಮೂಲದ ಪೀಟರ್ ಮಚಾದೊ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡರು ಭೇಟಿ ಮಾಡಿ ಚರ್ಚುಗಳಲ್ಲಿ ಕನ್ನಡ ಪ್ರಾರ್ಥನೆ ನಡೆಯಬೇಕೆಂದು ಹೇಳಿದ್ದರು. ತಕ್ಷಣವೇ ಮಂಗಳೂರಿನ ಶ್ರೀ ರಾಯ್ ಕಾಸ್ಟಲಿನೊ. ಪತ್ರಿಕಾ ಹೇಳಿಕೆಯನ್ನು ನೀಡಿ ಬೇರೆಯವರು ನಮ್ಮ ಚರ್ಚಿನ ಭಾಷೆ ಕುರಿತು ಮಾತನಾಡುವಂತಿಲ್ಲ ನಾವು ನಿರ್ಧರಿಸಿಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಇಲ್ಲಿ ನಾವು ಎಂದರೆ ಯಾರು? ನಾವು ಎಂದರೆ ಕೊಂಕಣಿಗರನ್ನ ಅವರು ಪ್ರತಿನಿಧಿಸಿ ಮಾತನಾಡಿದ್ದಾರೆ. ಇದು ಹಲವು ದಶಕಗಳಿಂದ ನೋವುಂಡು ಕನ್ನಡ ಭಾಷೆ ಬೇಕೆಂದು ಬೇಡಿಕೊಳ್ಳುತ್ತಿರುವ ಕನ್ನಡಿಗರ ಸ್ವಾಭಿಮಾನಿ ಸ್ಮರದ ಮೇಲೆ ಬರೆ ಎಳೆದಂತಾಗಿದೆ.

 ಮಂಗಳೂರು ಧರ್ಮಪ್ರಾಂತ್ಯದ ಪಿ.ಆರ್.ಓ ಆಗಿಯೂ ಕರ್ನಾಟಕ ಕಥೋಲಿಕ ಥಿಂಕ್ ಟ್ಯಾಂಕ್ ಅಧ್ಯಕ್ಷನಾಗಿಯೂ ಇರುವ ಶ್ರೀ ರಾಯ್ ಕ್ಯಾಸ್ಟಿಲಿನೋ ಅವರ ಇತ್ತೀಚಿನ ಸಾರ್ವಜನಿಕ ಹೇಳಿಕೆ ಕನ್ನಡ ಕಥೋಲಿಕ ಸಮುದಾಯದ ಸಹನಶೀಲತೆಗೆ ಮಿತಿ ಮೀರಿದ ಧಕ್ಕೆ ನೀಡಿದೆ. ಅವರ ಮಾತುಗಳು ಕೇವಲ ಅಭಿಪ್ರಾಯವಲ್ಲ ಅವು ಕನ್ನಡದ ಗೌರವದ ಮೇಲೆ ನಡೆದ ನೇರ ದಾಳಿ. ಕನ್ನಡ ಭಾಷೆ ಚರ್ಚಿನೊಳಗೆ ಗೌರವ ಕೇಳುವ ಭಿಕ್ಷೆಯಲ್ಲ. ಅದು ಕರ್ನಾಟಕದ ನಾಡಿನ ಚರ್ಚಿನ ಸಹಜ ಹಕ್ಕು ದಶಕಗಳಿಂದ ಕನ್ನಡ ಕಥೋಲಿಕರು ಶಾಂತಿಯುತವಾಗಿ, ಸಹನೆ ತೋರಿಸುತ್ತಾ, ವಿವೇಕದಿಂದ ತಮ್ಮ ಹಕ್ಕಿಗಾಗಿ ಹೋರಾಡಿಕೊಂಡು ಬಂದಿದ್ದಾರೆ. ಆದರೆ ನಮ್ಮ ಭಾಷೆಯನ್ನು ಹಾಸ್ಯ ಮಾಡುವುದು, ಅವಗಣಿಸುವುದು ಮತ್ತು ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಎಂದರೆ ನಮ್ಮ ಆತ್ಮೀಯತೆಗೆ, ನಮ್ಮ ಗುರುತಿಗೆ ಮತ್ತು ನಮ್ಮ ಧಾರ್ಮಿಕ ಅಸ್ತಿತ್ವಕ್ಕೆ ನೇರ ಅವಮಾನವಾಗಿದೆ.


೧೯೮೩ರಲ್ಲಿ ಬೆಂಗಳೂರು ಮಹಾಧ್ಯಕ್ಷಧರ್ಮಪ್ರಾಂತ್ಯದಿಂದ ಹೊರಡಿಸಲಾದ ಅಧಿಕೃತ ಸುತ್ತೋಲೆಯಲ್ಲಿ, ಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಸ್ಪಷ್ಟವಾಗಿ ಶಿಫಾರಸು ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಅದು ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದು, ಕಾರ್ಯರೂಪಕ್ಕೆ ಬರಲಿಲ್ಲ. ಸಂಪೂರ್ಣ ಮಹಾಪ್ರಾಂತ್ಯದಲ್ಲಿ ಕನ್ನಡವನ್ನು


ನಂತರ ಕೊಂಕಣಿ ಆಡಳಿತಕ್ಕೆ ಒಳಪಟ್ಟ ಬೆಂಗಳೂರು ಮಹಾಧರ್ಮಕ್ಷೇತ್ರ ಹಾಗೂ ಇತರ ಧರ್ಮಕ್ಷೇತ್ರಗಳು ಅನಾಥರಾದವು. ७००९ ಬರ್ನಾಡ್ ಮೊರಸ್ ಮಹಾಧರ್ಮಾಧ್ಯಕ್ಷ ಆಡಳಿತದ ಹಿನ್ನೆಲೆಯ ಕಾಲದಲ್ಲಿ ಕನ್ನಡಕ್ಕೆ ನೀಡಬೇಕಾದ ನ್ಯಾಯಸಮ್ಮತ ಸ್ಥಾನವನ್ನು ಹಂತ ಹಂತವಾಗಿ ಕುಂದಿಸಲಾಯಿತು. ಆ ನಂತರ “ಮೂರು ಭಾಷಾ ಸೂತ್ರ" ಎಂಬ ಮತ್ತೊಂದು ವೃತ್ತಪತ್ರಿಕೆಯನ್ನು ಜಾರಿಗೊಳಿಸಿ

 ಹಿಂದಿನ ನಿರ್ಣಯಗಳನ್ನು ದುರ್ಬಲಗೊಳಿಸಿ. ತನ್ನದೇ ನೆಲದಲ್ಲಿ ಕನ್ನಡವನ್ನು ಪಕ್ಕಕ್ಕೆ ತಳ್ಳುವ ಪ್ರಯತ್ನ ನಡೆದಿದೆ.


ಇದು ಕೇವಲ ಒಂದು ವೈಯಕ್ತಿಕ ಹೇಳಿಕೆಯಾಗಿಲ್ಲ. ಇದು ಚರ್ಚಿನೊಳಗಿನ ದಶಕಗಳಿಂದ ತಮ್ಮ ಕೊಂಕಣಿ ಪ್ರಾಬಲ್ಯವನ್ನು ಉಳಿಸಿಕೊಂಡು ಕನ್ನಡಿಗರ ಮೇಲೆ ದೌರ್ಜನ್ಯವೆಸಗಿ ಬರುತ್ತಿರುವಂತಹ ಕೊಂಕಣಿಗರ ಮನೋಭಾವದ ಪ್ರತಿಬಿಂಬ


ಅದು ಇಂದು ಕರ್ನಾಟಕದಲ್ಲಿ ೧೦ ಲ್ಯಾಟಿನ್ ವಿಧಿ ಧರ್ಮಪ್ರಾಂತ್ಯಗಳಿವೆ. ಆದರೆ ಅವುಗಳಲ್ಲಿ ಕೇವಲ ಒಂದು ಚಿಕ್ಕಮಗಳೂರು ಧರ್ಮಪ್ರಾಂತ್ಯ ಮಾತ್ರ ಕನ್ನಡ ಭಾಷೆಯ ಬಿಷಪ್ ಹೊಂದಿದೆ. ಉಳಿದ ಎಲ್ಲಾ ಧರ್ಮಪ್ರಾಂತ್ಯಗಳ ನೇತೃತ್ವ ಕನ್ನಡ ಭಾಷೆಯಿಂದ ಹೊರಗಿನವರ ಕೈಯಲ್ಲಿರುವುದು. ಒಂದು ಆಕಸ್ಮಿಕವಲ್ಲ ವ್ಯವಸ್ಥಿತ ಅಸಮಾನತೆಯ ಫಲಿತಾಂಶ. ಇದು ಬಹುಸಂಖ್ಯೆಯಲ್ಲಿರುವ ಕನ್ನಡ ಕಥೋಲಿಕರನ್ನು ತಮ್ಮದೇ ನೆಲದಲ್ಲಿ ಅಲ್ಪ ಸಂಖ್ಯೆಯಂತೆ ಭಾವಿಸಿಕೊಳ್ಳುವಂತೆ ಮಾಡಿದೆ. ಕನ್ನಡ ಭಾಷಿಕ ಪಾದ್ರಿಗಳು ಮತ್ತು ಧರ್ಮಗುರುಗಳು ಕರೆಯಲ್ಪಟ್ಟು. ತರಬೇತಿ ಪಡೆದು. ಚರ್ಚಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಾಯಕತ್ವ ಸ್ಥಾನಗಳ ಮಾತಿಗೆ ಬಂದಾಗ, ಅವರನ್ನು ನಿರ್ಲಕ್ಷಿಸುವ ಪರಿಪಾಠ ವರ್ಷಗಳಿಂದ ನಡೆಯುತ್ತಿದೆ. ಇದು ನ್ಯಾಯವೇ? ಇದು ಕ್ರೈಸ್ತ ಧರ್ಮ ಬೋಧಿಸುವ ಸಮಾನತೆಯೇ: ಇದು ಚರ್ಚಿನ ಸಾಮಾಜಿಕ ಸಂವೇದನೆಗೆ ತಕ್ಕಂತಿದೆಯೇ' ಆ ಕೊಂಕಣಿಗರು ಕನ್ನಡಿಗರನ್ನು ಅಸ್ಪೃಶ್ಯರಂತೆ ಕಂಡು ತಾತ್ಸಾರಕ್ಕೆ ಗುರಿ ಮಾಡಿ ಯಾವುದೇ ಹಂತದಲ್ಲೂ ಮೇಲೆ ಬರದಂತೆ ನಮ್ಮನ್ನು ತುಳಿತಕ್ಕೆ ಒಳಪಡಿಸುತ್ತಿರುವಂತವರ ವಿರುದ್ಧ ನಾವಿಂದು ಪತ್ರಿಕಾ ಹೇಳಿಕೆಯನ್ನು ಕೊಡಲು ಬಂದಿದ್ದೇವೆ.


ನಾವು ಇನ್ನೊಮ್ಮೆ ಸ್ಪಷ್ಟವಾಗಿ ಹೇಳುತ್ತೇವೆ: ನಮ್ಮ ಹೋರಾಟ ಯಾವುದೇ ಸಮುದಾಯದ ವಿರುದ್ದವಲ್ಲ. ಆದರೆ ನಮ್ಮ ಗುರುತನ್ನು ನಾಶ ಮಾಡಲು ಹೊರಟ ಸಂಸ್ಕೃತಿಯ ವಿರುದ್ಧ ಕರ್ನಾಟಕದ ಚರ್ಚು ಕರ್ನಾಟಕದ ಮಣ್ಣಿನ ಚರ್ಚಾಗಬೇಕು.

 ಈ ಕೂಡಲೇ ಕರ್ನಾಟಕದ ಎಲ್ಲಾ ಚರ್ಚುಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ ಕನ್ನಡದಲ್ಲಿಯೇ ಪೂಜೆಗಳಾಗಬೇಕು.


* ನಮ್ಮನ್ನು ಆಧ್ಯಾತ್ಮಿಕವಾಗಿ ಮುನ್ನಡೆಸಲು ಇರುವಂತಹ ಧರ್ಮಾಧ್ಯಕ್ಷರುಗಳನ್ನ ಕನ್ನಡ ಯಾಜಕರ ಬಳಗದಿಂದಲೇ ಆರಿಸಬೇಕು.


ನಮ್ಮ ನೆಲದಲ್ಲಿರುವ ಸಂತ ಪೇತ್ರರ ಗುರುಮಠ ಕರ್ನಾಟಕ ಪ್ರಾಂತೀಯ ಗುರುಮಠವಾಗಬೇಕು.


ಇದೆಲ್ಲಾ ಆಗಬೇಕಾದರೆ ಪೋರ್ಚುಗೀಸ್ ಪಾರುಪತ್ಯದ ಬಾಲವನ್ನ ಹಿಡಿದುಕೊಂಡು ಗತ ವೈಭವದ ಹಿರಿಮೆಯನ್ನ ಕಡಲ ತೀರದ ಭಾಗದಿಂದ ಬಂದು ಇಡೀ ಕರ್ನಾಟಕದಲ್ಲಿ ಕೊಂಕಣಿ ಸಾಮ್ರಾಜ್ಯವನ್ನು ಸ್ಥಾಪಿಸುತ್ತಿರುವ ಕೊಂಕಣಿಗರು ತಮ್ಮದೇ ಆದಂತಹ ಪ್ರತ್ಯೇಕ ಪ್ರಾಂತ್ಯವನ್ನು ಮಾಡಿಕೊಳ್ಳುವುದು.


03/1983 ಸುತ್ತೋಲೆಯನ್ನು ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದ ಎಲ್ಲೆಡೆ ಅನುಷ್ಠಾನಗೊಳಿಸುವುದು. ನಮ್ಮ ಎಲ್ಲ ಭಕ್ತಿ ಆಚರಣೆಗಳಲ್ಲಿ ಕನ್ನಡದ ಬಳಕೆ ಖಡ್ಡಾಯ)


ಈ ವಿಷಯವನ್ನು ಇನ್ನು ಮುಂದೆ ತಳ್ಳಿ ಹಾಕುವ ಪ್ರಯತ್ನ ಮಾಡಿದರೆ, ನಮ್ಮ ಚಳವಳಿ ಶಾಂತವಾದರೂ ದೃಢವಾಗಿ, ಇನ್ನೂ ವ್ಯಾಪಕವಾಗಿ ಮುಂದುವರಿಯಲಿದೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims