ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ
ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ ಬೆಂಗಳೂರು : ಸಿನಿಮಾರಂಗದಲ್ಲಿ ಪೈರೆಸಿ ಮತ್ತು ಇತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ) (FMC) ನಿರಂತರವಾಗಿ ಕೆಲಸ ಮಾಡುತ್ತಿದೆ. ಪೈರೆಸಿ ಚಲನಚಿತ್ರ ಉದ್ಯಮಕ್ಕೆ ಭಾರೀ ನಷ್ಟ ತರುತ್ತಿದ್ದು, ಇದನ್ನು ತಡೆಗಟ್ಟಲು FMC ಕಳೆದ ಒಂದು ವರ್ಷದಿಂದ ಪೊಲೀಸ್ ಇಲಾಖೆ, ಸೈಬರ್ ವಿಭಾಗ, ವಾರ್ತಾ ಇಲಾಖೆ, CBFC (Central Board of Film Certification) ಹಾಗೂ ಇತರ ಸರಕಾರೀ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದೆ. ಈ ಮುಂದಾಳತ್ವದ ಭಾಗವಾಗಿ, ಈಗಾಗಲೇ ನಾಲ್ಕು ವೆಬ್ ಪೋರ್ಟಲ್ ಮತ್ತು ಎರಡು ಮೊಬೈಲ್ ಆಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪೈರೆಸಿಯ ವಿರುದ್ಧ ಒಗ್ಗೂಡಿ ಹೋರಾಟ ಹಾಗಿದ್ದರೂ, ಡಿಜಿಟಲ್ ಯುಗದಲ್ಲಿ ಪೈರೆಸಿ ಹೊಸ ಹೊಸ ರೂಪದಲ್ಲಿ ತಲೆದೋರುತ್ತಿದ್ದು, ಸಿನಿಮಾಗಳು ಟೆಲಿಗ್ರಾಂ, ವೆಬ್‌ಸೈಟ್, ಅಪ್ಲಿಕೇಶನ್‌ಗಳ ಮೂಲಕ ಅನಧಿಕೃತವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ, FMC ಚಿತ್ರರಂಗದ ಎಲ್ಲ ಹಿತಾಸಕ್ತಿಗಳನ್ನೂ ಒಗ್ಗೂಡಿಸಿ, ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ. ಚಿತ್ರರಂಗದ ಇತರ ಸಮಸ್ಯೆಗಳಿಗೂ ಪರಿಹಾರ ಅನಿವಾರ್ಯ FMC ಕೇವಲ ಪೈರೆಸಿಯ ವಿರುದ್ಧವೇ ಅಲ್ಲ, ಇತರೆ ಪ್ರಮುಖ ಸಮಸ್ಯೆಗಳಿಗೂ ದಿಟ್ಟ ಹೆಜ್ಜೆ ಹಾಕುತ್ತಿದೆ. ಇದರ ಅಂಗವಾಗಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಮತ್ತು ಪ್ರದರ್ಶನ ನಿಯಂತ್ರಣ UFO/QUBE ಡಿಜಿ...