ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ
ಸಿನಿಮಾ ಪೈರೆಸಿ ತಡೆಗೆ ‘ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ)’ ಮುಂದಾಳತ್ವ

ಬೆಂಗಳೂರು: ಸಿನಿಮಾರಂಗದಲ್ಲಿ ಪೈರೆಸಿ ಮತ್ತು ಇತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಫಿಲ್ಡ್ ಮೇಕರ್ಸ್ ಕೌನ್ಸಿಲ್ (ರಿ) (FMC) ನಿರಂತರವಾಗಿ ಕೆಲಸ ಮಾಡುತ್ತಿದೆ. ಪೈರೆಸಿ ಚಲನಚಿತ್ರ ಉದ್ಯಮಕ್ಕೆ ಭಾರೀ ನಷ್ಟ ತರುತ್ತಿದ್ದು, ಇದನ್ನು ತಡೆಗಟ್ಟಲು FMC ಕಳೆದ ಒಂದು ವರ್ಷದಿಂದ ಪೊಲೀಸ್ ಇಲಾಖೆ, ಸೈಬರ್ ವಿಭಾಗ, ವಾರ್ತಾ ಇಲಾಖೆ, CBFC (Central Board of Film Certification) ಹಾಗೂ ಇತರ ಸರಕಾರೀ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದೆ. ಈ ಮುಂದಾಳತ್ವದ ಭಾಗವಾಗಿ, ಈಗಾಗಲೇ ನಾಲ್ಕು ವೆಬ್ ಪೋರ್ಟಲ್ ಮತ್ತು ಎರಡು ಮೊಬೈಲ್ ಆಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಪೈರೆಸಿಯ ವಿರುದ್ಧ ಒಗ್ಗೂಡಿ ಹೋರಾಟ
ಹಾಗಿದ್ದರೂ, ಡಿಜಿಟಲ್ ಯುಗದಲ್ಲಿ ಪೈರೆಸಿ ಹೊಸ ಹೊಸ ರೂಪದಲ್ಲಿ ತಲೆದೋರುತ್ತಿದ್ದು, ಸಿನಿಮಾಗಳು ಟೆಲಿಗ್ರಾಂ, ವೆಬ್‌ಸೈಟ್, ಅಪ್ಲಿಕೇಶನ್‌ಗಳ ಮೂಲಕ ಅನಧಿಕೃತವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ, FMC ಚಿತ್ರರಂಗದ ಎಲ್ಲ ಹಿತಾಸಕ್ತಿಗಳನ್ನೂ ಒಗ್ಗೂಡಿಸಿ, ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.
ಚಿತ್ರರಂಗದ ಇತರ ಸಮಸ್ಯೆಗಳಿಗೂ ಪರಿಹಾರ ಅನಿವಾರ್ಯ
FMC ಕೇವಲ ಪೈರೆಸಿಯ ವಿರುದ್ಧವೇ ಅಲ್ಲ, ಇತರೆ ಪ್ರಮುಖ ಸಮಸ್ಯೆಗಳಿಗೂ ದಿಟ್ಟ ಹೆಜ್ಜೆ ಹಾಕುತ್ತಿದೆ. ಇದರ ಅಂಗವಾಗಿ,
ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಮತ್ತು ಪ್ರದರ್ಶನ ನಿಯಂತ್ರಣ
UFO/QUBE ಡಿಜಿಟಲ್ ಮೀನಾಪೋಲಿ (Monopoly) ನಿಯಂತ್ರಣ
ನಿರ್ದೇಶಿತ ಸಿನಿಮಾ ಬಿಡುಗಡೆ ಯೋಜನೆ (Structured Release Plan)
ಸಬ್ಸಿಡಿ, ಸರ್ಕಾರಿ ಪ್ರೋತ್ಸಾಹದ ಸಮಸ್ಯೆಗಳಿಗೆ ಪರಿಹಾರ
ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿರ್ಲಕ್ಷ್ಯ ವಿರುದ್ಧ ಕ್ರಮ
ಚಿತ್ರರಂಗಕ್ಕೆ ಸರ್ಕಾರದಿಂದ ಭದ್ರತಾ ಒದಗಿಕೆ

ಈ ಎಲ್ಲ ವಿಷಯಗಳ ಬಗ್ಗೆ ಸರ್ಕಾರದೊಂದಿಗೆ FMC ಸಮಾಲೋಚನೆ ನಡೆಸಲು ಮುಂದಾಗಿದೆ.
ಸಿನಿಮಾ ತಯಾರಕರ ಹಿತಕಾಯುವ ವೇದಿಕೆ
FMC ಕೇವಲ ಒಂದು ಸಂಘಟನೆಯಷ್ಟೇ ಅಲ್ಲ, ಇದು ಸಿನಿಮಾ ತಯಾರಕರ ಸಮುದಾಯಕ್ಕಾಗಿ ಕಾರ್ಯನಿರ್ವಹಿಸುವ ವೇದಿಕೆ. ಚಲನಚಿತ್ರ ಮೌಲ್ಯ ಮತ್ತು ಭದ್ರತೆ ಕುರಿತು ಜಾಗೃತಿ ಮೂಡಿಸಲು, ಚಿತ್ರೀಕರಣ ಅನುಮತಿ, ಪ್ರಚಾರ, ಬಿಡುಗಡೆ ಪ್ರಕ್ರಿಯೆಗಳಲ್ಲಿ ಸಲಹೆ ನೀಡಲು ಈ ಸಂಸ್ಥೆ ನಿರ್ಧರಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ FMC ಚಟುವಟಿಕೆಗಳು
“ಕಾಕಾ ಜೊತೆ ಈ ವಾರದ ಸಿನೆಮಾ” – ಪ್ರೇಕ್ಷಕರಿಗೆ ಹೊಸ ಸಿನಿಮಾಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ
“Let’s Talk with Pavana” – ಸಿನಿಮಾ ತಂತ್ರಜ್ಞರು, ನಿರ್ಮಾಪಕರು ಮತ್ತು ನಟರೊಂದಿಗೆ ಅನುಭವ ಹಂಚಿಕೊಳ್ಳುವ ವೇದಿಕೆ
ಈ ಎಲ್ಲ ಕಾರ್ಯಗಳನ್ನು ಇನ್ನಷ್ಟು ಬಲಪಡಿಸಲು, FMC ಚಿತ್ರರಂಗದ ಸಮುದಾಯ ಮತ್ತು ಮಾಧ್ಯಮ ಮಿತ್ರರ ಸಹಕಾರ ನಿರೀಕ್ಷಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ FMC ಅಧ್ಯಕ್ಷ ಸಂತೋಷ್ ಕೊಡೆಂಕೇರಿ ಮತ್ತು ನಿರ್ದೇಶಕ ಮಂಡಳಿಯ ಸದಸ್ಯರು ಪಾವನ ಸಂತೋಷ್, ಶಿವರುದ್ರಯ್ಯ ಎಸ್.ವಿ, ಪ್ರಮೀಳಾ ಸುಬ್ರಮಣ್ಯ, ಉಮಾಶಂಕರ್ ಸ್ವಾಮಿ, ಹನುಮಂತ್ ರಾವ್ ಕೌಜಲಗಿ, ರಕ್ಷಕ್ ಮೋನಪ್ಪ, ಹಯವದನ ವಾದಿರಾಜ್, ಶ್ರೀನಿವಾಸ್ ರಾಜು ಎಚ್ ಉಪಸ್ಥಿತರಿದ್ದರು. ಗೌರವಾನ್ವಿತ ಸಲಹೆಗಾರರಾದ ರೋಹಿತ್ ಮಂಜ್‌ರೇಕರ್, ಬರಗೂರು ರಾಮಚಂದ್ರಪ್ಪ, ಮೋಹನ್ ಕೊಂಡಜ್ಜಿ, ಕೃಷ್ಣಗೌಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು
Comments
Post a Comment