ಬಿಜೆಪಿ ಮುಖಂಡರಾದ N.R.ರಮೇಶ್ ಅವರು ಗಾಂಧಿನಗರದ ತ್ಯಾಜ್ಯ ವಿಲೇವಾರಿ ಸಂಬಂಧ ಸುಳ್ಳು ಹೇಳಿದ್ದಾರೆ - ಎಂ. ಆನಂದ
ಬಿಜೆಪಿ ಮುಖಂಡರಾದ N.R.ರಮೇಶ್ ಅವರು ಗಾಂಧಿನಗರದ ತ್ಯಾಜ್ಯ ವಿಲೇವಾರಿ ಸಂಬಂಧ ಸುಳ್ಳು ಹೇಳಿದ್ದಾರೆ - ಎಂ. ಆನಂದ
ಬೆಂಗಳೂರು, ಫೆಬ್ರವರಿ 18, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ "ಅಂಬೇಡ್ಕರ್ ಬಹುಜನ ಸೇನೆ (ರಿ)" ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಬಹುಜನ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಎಂ. ಆನಂದ ಅವರು ಮಾತನಾಡಿದರು.
ಬಿಜೆಪಿ ಮುಖಂಡರಾದ ಎನ್.ಆರ್. ರಮೇಶ್ ಅವರು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ನಿತ್ಯ 03 ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿರುವುದಾಗಿ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿಕೆ ನೀಡಿರುತ್ತಾರೆ ಎಂದು ಎಂ. ಆನಂದ ಅವರು ಹೇಳಿದರು.
ವಿಷಯ:ಶ್ರೀ.ರಮೇಶ್ ಎನ್.ಆರ್. ರವರು ಮಾಧ್ಯಮಗಳಿಗೆ ನೀಡಿರುವ ಸುಳ್ಳು ಮಾಹಿತಿಯ ಬಗ್ಗೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕೆಲಸ ನಿರ್ವಹಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ / ಸರಬರಾಜು ಆದೇಶಗಳನ್ನು ನೀಡಲಾಗಿರುತ್ತದೆ. ಈ ರೀತಿಯ ಕಾರ್ಯಾದೇಶ ಹಾಗೂ ಸರಬರಾಜು ಆದೇಶಗಳನ್ನು ಕಾನೂನುಬದ್ದವಾಗಿ ನಿಯಮಾನುಸಾರ ನೀಡಲಾಗಿರುತ್ತದೆ.
ಆದರೆ, ಶ್ರೀ.ರಮೇಶ್ ಎನ್.ಆರ್. ಮಾನ್ಯ ಲೋಕಾಯುಕ್ತಕ್ಕೆ ಹಾಗೂ ಮಾಧ್ಯಮಗಳಿಗೆ ಪತ್ರಗಳನ್ನು ನೀಡಿ, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ನಿತ್ಯ 03 ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿರುವುದಾಗಿ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿಕೆ ನೀಡಿರುತ್ತಾರೆ ಎಂದು ಎಂ. ಆನಂದ ಅವರು ಹೇಳಿದರು.
Comments
Post a Comment