ಬಿಬಿಎಂಪಿಯ ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಾಣಿಸಿರುವ ಕುರಿತು
ಬಿಬಿಎಂಪಿಯ ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಾಣಿಸಿರುವ ಕುರಿತು
ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅರ್ಜಿ ಪೌರಕಾರ್ಮಿಕರು ಕನ್ನಡ ಮಾತನಾಡಲು ತಿಳಿದಿರಬೇಕು ಎಂಬ ಮಾನದಂಡವನ್ನು ಕೈಬಿಟ್ಟು ನೇಮಕಾತಿ ನಡೆಸುತ್ತಿರುವ ಬಿಬಿಎಂಪಿಯ ಕನ್ನಡ ವಿರೋಧಿ ಧೋರಣೆಯನ್ನು ಕರುನಾಡ ಸೇವಕರು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಪೌರಕಾರ್ಮಿಕರ ವಿಶೇಷ ನೇಮಕಾತಿಯಡಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ನಡೆಸುತ್ತಿದೆ.ನೇಮಕಾತಿಯಲ್ಲಿ ಯಾವುದೇ ವಿದ್ಯಾರ್ಹತೆ ಕೇಳಿಲ್ಲ ಬದಲಿಗೆ ಅರ್ಹ ಪೌರಕಾರ್ಮಿಕನಿಗೆ ಕನ್ನಡ ಮಾತನಾಡಲು ತಿಳಿದಿರಬೇಕು ಎಂಬುದು ಪ್ರಮುಖ ಅರ್ಹತಾ ನಿಯಮವಾಗಿದೆ.
ನೇಮಕಾತಿ ಪ್ರಕ್ರಿಯೆ ಸಂಧರ್ಭದಲ್ಲಿ ಈ ಅಂಶವನ್ನು ಪರಿಗಣಿಸಿ ನೇಮಕಾತಿ ನಡೆಸುವಂತೆ ಕನ್ನಡಬಲ್ಲವರನ್ನ ನೇಮಕಗೊಳಿಸುವಂತೆ ಬಿಬಿಎಂಪಿಗೆ ಕರುನಾಡ ಸೇವಕರು ಸಂಘಟನೆ ಮನವಿ ನೀಡಿತ್ತು.ಈ ಸಂಬಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸಹ ಎಚ್ಚರಿಸಿತ್ತು. ಎಚ್ಚೆತ್ತ ಪ್ರಾಧಿಕಾರ ಈ ಸಂಬಂದ ಬಿಬಿಎಂಪಿಗೆ ಪತ್ರವನ್ನು ಸಹ ಬರೆದಿತ್ತು.
ಆಡಳಿತದಲ್ಲಿ ಕನ್ನಡ ಜಾರಿಗೆ ತರುವ ಭರವಸೆ ನೀಡಿರುವ ಬಿಬಿಎಂಪಿ ಒಂದೆಡೆಯಾದರೆ ಕರ್ನಾಟಕದ ರಾಜಧಾನಿಯಲ್ಲಿ ಕರ್ತವ್ಯ ನಿರ್ವಹಿಸುವವರು ಕನ್ನಡ ಬಲ್ಲವರಾಗಿರಬೇಕು ಎಂಬುದು ಸಹಜ ನಿರೀಕ್ಷೆಯಾಗಿದೆ.
ಆದರೆ ಇದೆಲ್ಲವನ್ನು ಗಾಳಿಗೆ ತೂರಿರುವ ಬಿಬಿಎಂಪಿ ಕನ್ನಡ ಬಾರದ ಪೌರಕಾರ್ಮಿಕರನ್ನು ನೇಮಕಗೊಳಿಸಿ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿದೆ.ಅರ್ಹ ಪೌರಕಾರ್ಮಿಕರಿಗೆ ಕನ್ನಡ ಮಾತನಾಡಲು ತಿಳಿದಿರುವ ಬಗ್ಗೆ ಯಾವುದೆ ಸಂದರ್ಶನ ಇತ್ಯಾದಿ ನಡೆಸಿಲ್ಲ.ಬದಲಿಗೆ ಕನ್ನಡ ಕರ್ನಾಟಕ ಕನ್ನಡಿಗರ ವಿರುದ್ಧ ಏನು ಮಾಡಿದರೂ ನಡೆಯುತ್ತದೆಂಬ ಧೋರಣೆಯನ್ನು ಬಿಬಿಎಂಪಿ ಪ್ರದರ್ಶಿಸುತ್ತಿದೆ.ನೇಮಕಾತಿಯಾದ ನಂತರ ಕನ್ನಡ ಕಲಿಸುವುದಾಗಿ ಬಿಬಿಎಂಪಿ ಹೇಳುತ್ತಿದೆ. ಹಾಗಿದ್ದರೆ ಅರ್ಹತಾ ನಿಯಮಕ್ಕೆ ಯಾವ ಗೌರವವೂ ಇಲ್ಲವಾದಂತಾಗಿದೆ.
ಅಲ್ಲಿ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೆ ಇಲ್ಲಿ ಕನ್ನಡಿಗರ ರಾಜಧಾನಿಯ ಕನ್ನಡವನ್ನು ಕಡೆಗಾಣಿಸಿ ಪರಭಾಷಿಕರಿಗೆ ಮಣೆ ಹಾಕಲಾಗಿದೆ. ಇದರಿಂದಾಗಿ ಅರ್ಹ ಕನ್ನಡಿಗರಿಗೆ ಉದ್ಯೋಗವಕಾಶ ಇಲ್ಲದಂತೆ ಮಾಡಲಾಗಿದೆ.
ಕನ್ನಡ ಮಾಧ್ಯಮ.ಗ್ರಾಮೀಣ ಅಭ್ಯರ್ಥಿಗಳ ಹುದ್ದೆಗೂ ಕನ್ನಡಿಗರು ಅರ್ಜಿ ಸಲ್ಲಿಸದಂತೆ ನಿಯಮ ರೂಪಿಸಲಾಗಿದೆ.
ಸಿದ್ದರಾಮಯ್ಯ ನವರು ಕನ್ನಡ ರಾಮಯ್ಯ ಅಲ್ಲ ತೆಲುಗು ತಮಿಳು ರಾಮಯ ಆಗಿದ್ದಾರೆ.
ಬಿಬಿಎಂಪಿ ಪ್ರಮುಖ ಅರ್ಹತಾ ಷರತಾದ ಕನ್ನಡ ತಿಳಿದಿರಬೇಕು ಎಂಬ ನಿಯಮವನು, ಕಡಾಯವಾಗಿ ಪಾರಿಗೆ ತರಬೇಕು. ಕನ್ನಡ ಮಾಧ್ಯಮ ಹಾಗೂ ಗ್ರಾಮೀಣಾ ಅಭ್ಯರ್ಥಿ ಹುದ್ದೆಗಳಿಗೆ ಕನ್ನಡಿಗರು ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ನೀಡಬೇಕು.
ಇವು ಜಾರಿಗೆ ಬರುವರೆಗೆ ಯಾವುದೆ ಕಾರಣಕು, ನೇಮಕಾತಿ ಆದೇಶ ಜಾರಿಗೊಳಿಸದಂತೆ ಆಗ್ರಹಿಸುತ್ತೇವೆ.
ಲೋಕಾಯುಕ್ತದಲ್ಲಿ ಪ್ರಕರಣ ದಾಖಲು:ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯಲ್ಲಿ ಸೂಪರ್ ವೆಸರುಗಳನ್ನು ಸಹ ಪೌರಕಾರ್ಮಿಕರೆಂದು ಪರಿಗಣಿಸಿ ಎಂಟು ನೂರು ಮಂದಿ ಸೂಪರ್ ವೈಸರುಗಳನ್ನು ಪೌರಕಾರ್ಮಿಕರ ಕೋಟಾದಲ್ಲಿ ನೇಮಕಗೊಳಿಸಲಾಗಿದೆ.ಈ ಲೋಕಾಯುಕ್ತದಲ್ಲಿ ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಬೆಂಗಳೂರು ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಕುರಿತು ಗಮನಹರಿಸುವಂತೆ ಆಗ್ರಹಿಸುತ್ತೇವೆ.
Comments
Post a Comment