ಮಾಸಿಕ ತಸ್ತೀಕ್ 10ಸಾವಿರ ರೂಪಾಯಿವರೆಗೆ ಏರಿಸುವಂತೆ ದೇವಾಲಯಗಳ ಆರ್ಚಕರ ಒತ್ತಾಯ.
ಮಾಸಿಕ ತಸ್ತೀಕ್ 10ಸಾವಿರ ರೂಪಾಯಿವರೆಗೆ ಏರಿಸುವಂತೆ ದೇವಾಲಯಗಳ ಆರ್ಚಕರ ಒತ್ತಾಯ.
ಸಂಜೆ ಎಕ್ಸ್‌ಪ್ರೆಸ್ ಸುದ್ದಿ. ಬೆಂಗಳೂರು ಫೆಬ್ರವರಿ 22; ಕಳೆದ 10 ವರ್ಷಗಳಿಂದ ದೇವಸ್ಥಾನಗಳಿಗೆ ಕೊಡುವ ತಸ್ತೀಕ್‌ನ್ನು ಮಾಸಿಕ ಕೇವಲ ರೂ.5,000 ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದ್ದು ಕರ್ನಾಟಕದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಸುಮಾರು 36000 ಸಾವಿರ ದಷ್ಟು 'ಸಿ' ದರ್ಜೆಯ ದೇವಸ್ಥಾನಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಇವುಗಳಲ್ಲಿ ಶೇಕಡಾ: 80% ರಷ್ಟು ಅರ್ಚಕ ಉದ್ಯೋಗಿಗಳು ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗ, ಲಿಂಗಾಯತ, ಒಕ್ಕಲಿಗ, ಮತ್ತಿತರ ಜಾತಿ-ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಧರ್ಮ ಮತ್ತು ಸಂಸ್ಕೃತಿಗಳಿಗೆ ಮೂಲಸೆಲೆಯಾಗಿರುವ ಈ ದೇವಸ್ಥಾನಗಳು ತೀವ್ರ ಅಸಡ್ಡೆ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ. ಈ ಸಣ್ಣ ಮೊತ್ತದಲ್ಲಿ ಅರ್ಚಕರು ಪೂಜಾದ್ರವ್ಯಗಳ ಖರ್ಚುವೆಚ್ಚಗಳ ಜೊತೆ ಜೀವನನಿರ್ವಹಣೆಯನ್ನು ಮಾಡಬೇಕಾಗಿದೆ ಈ ಹಿನ್ನಲೆಯಲ್ಲಿ ಮಾಸಿಕ ತಸ್ತೀಕ್‌ನ ಮೊತ್ತವನ್ನು 10ಸಾವಿರ ರೂಪಾಯಿವರೆಗೆ ಏರಿಸಬೇಕೆಂದು ಧಾರ್ಮಿಕ ಮುಜರಾಯಿ ದೇವಸ್ಥಾನಗಳ ಆರ್ಚಕರ ಸಂಘ ಆಗ್ರಹಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರೋ ಕೆ.ಇ.ರಾಧಾಕೃಷ್ಣ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಮಾತನಾಡಿ, ಅರ್ಚಕ ಗೌರವ ನಿಧಿಯನ್ನು ಸ್ಥಾಪಿಸಿ 60 ವರ್ಷ ಮೇಲ್ಪಟ್ಟ ಅರ್ಚಕ ಉದ್ಯೋಗಿಗಳಿಗೆ ಗೌರವ ವೇತನ ನೀಡಬೇಕು, ದೇವಸ್ಥಾನಗಳ ಸಮೀಪ ಅರ್ಚಕ ಉದ್ಯೋಗಿಗಳಿಗೆ ಗೃಹಮಂಡಳಿಯ ಅಧೀನದಲ್ಲಿ ಕಾಲಮಿತಿಯಲ್ಲಿ ವಿಶೇಷ ವಸತಿ ಯೋಜನೆ ರೂಪಿಸಬೇಕು,ಐತಿಹಾಸಿಕ 'ಸಿ' ದೇವಸ್ಥಾನಗಳ ಅಭಿವೃದ್ಧಿಗೆ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ನಿಧಿಯ ಸಹಯೋಗದೊಂದಿಗೆ ವಿಶೇಷ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನಗಳಿಗೆ ಸೇರಿದ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ-ಪಾಸ್ತಿಗಳನ್ನು ಅನಧಿಕೃತರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿಂದೆ ಇದರ ಬಗ್ಗೆ ಮುಜರಾಯಿ ಇಲಾಖೆ ವಿಶೇಷ ವರದಿಯನ್ನು ತಯಾರು ಮಾಡಿದೆ. ಇಂತಹ ಒತ್ತುವರಿಗಳನ್ನು ಕಾನೂನಾತ್ಮಕವಾಗಿ ಪುನರ್ ಪಡೆಯಲು ಓರ್ವ ಹಿರಿಯ ನ್ಯಾಯಾಧೀಶರು ಹಿರಿಯ ಅಧಿಕಾರಿಗಳ ಅಧೀನದಲ್ಲಿ ಕಾರ್ಯಪಡೆಯನ್ನು ನಿರ್ಮಿಸಿ ಕಾಲಮಿತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸುಮಾರು 5000ಕ್ಕಿಂತಲೂ ಹೆಚ್ಚು ಅರ್ಚಕ ಬಂಧುಗಳು ಬೆಂಗಳೂರಿನಲ್ಲಿ ಕಳೆದ ಫೆಬ್ರವರಿ ಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಮಂತ್ರಿ ಡಾ ಜಿ. ಪರಮೇಶ್ವರ್, ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ನಮ್ಮ ಭೇಡಿಕೆಗಳ ಆಗ್ರಹಕ್ಕೆ ಸ್ಪಂದಿಸಿದ್ದಾರೆ, ನಮ್ಮ ಸಮುದಾಯದ ಕೆಲವೇ ಕೆಲವು ಸಣ್ಣ ಬೇಡಿಕೆಗಳನ್ನು ಈ ಹಿಂದೆಯೂ ಮಾಡಿದಂತೆ ಬರುವ ಆಯ್ಯವ್ಯಯ ಪತ್ರದಲ್ಲಿ ಸೇರಿಸಿ ನಮ್ಮ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಸರ್ಕಾರ ತಂದಿರುವ ರಾಜ್ಯ ಮುಜರಾಯಿ ಕಾನೂನಿಗೆ ತಿದ್ದಪಡಿ ತರಲಾಗಿದೆ ಈ ತಿದ್ದುಪಡಿ ಮಸೂದೆ ರಾಜ್ಯಪಾಲರು ಅಂಕಿತ ನೀಡಬೇಕಾಗಿದೆ ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಬೇಕೆಂದು ಆಗ್ರಹಿಸಿದರು.
Comments
Post a Comment