ಮಾರ್ಚ್ 1, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಎನ್ .ಫೌಂಡೇಶನ್ ವತಿಯಿಂದ “ದೌಪದಿ ಪವರ ದರ್ಪಣ”
ಮಾರ್ಚ್ 1, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಎನ್ .ಫೌಂಡೇಶನ್ ವತಿಯಿಂದ “ದೌಪದಿ ಪವರ ದರ್ಪಣ”

ಮಾರ್ಚ್ 1, 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ಎನ್ .ಫೌಂಡೇಶನ್ ವತಿಯಿಂದ “ದೌಪದಿ ಪವರ ದರ್ಪಣ” ಕಾರ್ಯಕ್ರಮ ಆಯೋಜಿಸಲಾಗಿದ್ದು, ವಹಿಕುಲ ಕ್ಷತ್ರಿಯ ಜನಾಂಗದ ಕರಗ ಪೂಜಾರಿಗಳು ಹಾಗು ಅವರ ಧರ್ಮ ಪತ್ನಿಯರು, ಎರಡಕ್ಕೂ ಹೆಚ್ಚು ಪದವಿ ಪಡೆದ ಮಹಿಳೆಯರು, ಮಹಿಳಾ ಸಾಧಕರು ಹಾಗು 18 ವರ್ಷದೊಳಗಿನ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವ ರಾಜ್ಯ ಮಟ್ಟದ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಸಂಪಾದಕರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದರ ಕುರಿತಂತೆ…

ವಗ್ನಿಕುಲ ಸಮುದಾಯದ ಕುಲದೇವತೆಯಾದ ಆದಿಶಕ್ತಿ ದೌಪದಿ ಅಮ್ಮನವರ ಪವಿತ್ರ ಸಂಪುದಾಯಗಳನ್ನು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಕರಗ ಪೂಜಾರಿಗಳ ದಣಿವರಿಯದ ಭಕ್ತಿ ಮತ್ತು ಸೇವೆ ಅನನ್ಯವಾದದ್ದು ಅವರನ್ನು ಗೌರವಿಸುವುದು ನಮ್ಮ ಪಾಲಿಗೆ ಬಂದಿರುವ ಪುಣ್ಯ ಕೆಲಸವೆಂದೇ ಭಾವಿಸುತ್ತೇವೆ. ಹೀಗಾಗಿ ಮಾ.1. 2025ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಕರಗ ಪೂಜಾರಿಗಳಿಗೆ ‘ಸುಕೃತ ಧರ್ಮಪಾಲ” ಎಂಬ ಬಿರುದು. ಕರಗ ಪೂಜಾರಿಗಳನ್ನು ಬೆಂಬಲಿಸುವ ಪತ್ನಿಯರ ನಿಸ್ವಾರ್ಥ ಸಮರ್ಪಣೆಯನ್ನು ಗುರುತಿಸಿ ಸುಮಾರು 200 ಕ್ಕೂ ಹೆಚ್ಚು ಕರಗ ಪೂಜಾರಿಗಳ ಧರ್ಮ ಪತ್ನಿಯರಿಗೆ ಸುಧರ್ಮ ಧರ್ಮಪತ್ನಿ ಎಂಬ ಬಿರುದು ನೀಡಲಾಗುತ್ತಿದೆ.
ಇದರ ಜೊತೆಗೆ ವಹಿಕುಲ ಕ್ಷತ್ರಿಯ ಜನಾಂಗದ ಮಹಿಳೆಯರ ಸಾಧನೆಯನ್ನು ಗುರುತಿಸುವ ಸಲುವಾಗಿ ರಾಜ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದ ಮಹಿಳೆಯರನ್ನು ಗೌರವಿಸಿ “ವಿಜಯಾದಿ ಶಕ್ತಿ” ಎಂಬ ಬಿರುದು ನೀಡಲಾಗುತ್ತಿದೆ. ಹಾಗೆಯೇ ವಹಿಕುಲ ಕ್ಷತ್ರಿಯ ಜನಾಂಗದ ಎರಡಕ್ಕೂ ಹೆಚ್ಚು ಪದವಿ ಪಡೆದ ವಿದ್ಯಾವಂತ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸಲು ಸುಮಾರು 300 ಕ್ಕೂ ಹೆಚ್ಚು ಮಹಿಳೆಯರಿಗೆ “ಬಹುಪಾಂಡಿತ್ಯ ಯಜ್ಞಸೇನಿ” ఎంబ ಬಿರುದು ನೀಡಿ ಗೌರವಿಸಲಾಗುತ್ತದೆ.
ಕೆ.ಎನ್.ಫೌಂಡೇಷನ್ ಮಕ್ಕಳ ಭವಿಷ್ಯದ ಬಗ್ಗೆ ಭರವಸೆ ಇಟ್ಟಿರುತ್ತದೆ. ಹಾಗೂ ಅವರ ಬೆಂಬಲಕ್ಕೆ ಸದಾ ನಿಲ್ಲುತ್ತದೆ. ಅದರ ಭಾಗವಾಗಿ ವನ್ನಿಕುಲ ಕ್ಷತ್ರಿಯ ಜನಾಂಗದ 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳ ಸಾಧನೆ ಗುರುತಿಸುವ ಸಲುವಾಗಿ ರಾಜ್ಯ ಹಾಗು ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರನ್ನು ಗೌರವಿಸಲು “ಶಂಕೋಧರಿ ಕುಮಾರಿ” ಮತ್ತು ವಕ್ಷಿಕುಲ ಕ್ಷತ್ರಿಯ ಜನಾಂಗದ 18 ವರ್ಷದೊಳಗಿನ ಬಾಲಕರನ್ನು “ಅಭಿಮನ್ಯು ಮಾನ್ಯ” ಎಂಬ ಬಿರುದುಗಳನ್ನು ಕೊಟ್ಟು ಜನಾಂಗದ ಸಂಘಟನೆಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ಕೊಟ್ಟು ಎಲ್ಲಾ ರೀತಿಯ ಶ್ರೇಯೋಭಿವೃದ್ಧಿಗಾಗಿ ಈ ನಿಸ್ವಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಜ್ – ಕೃಷ್ಣಮೂರ್ತಿ BE, MIE, ಡಿಮ್ಯಾಂಡ್,ಗೌರವ ಅಧ್ಯಕ್ಷರು- ಕರ್ನಾಟಕ ರಾಜ್ಯ ವಹಿಕುಲ ಕ್ಷತ್ರಿಯರ ಸಂಘ(ರಿ) ಸಲಹೆಗಾರರು-ಕರ್ನಾಟಕ ರಾಜ್ಯ ಸರ್ಕಾರಿ ನೌಕರರ /ವೃತ್ತಿಪರರ ಸಂಘ (ರಿ)
ಛೇರ್ಮನ್ ಹಾಗೂ ಸಿಈ ಓ ಕೆ .ಎನ್. ಫೌಂಡೇಶನ್,ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು. ಗೋಷ್ಠಿ ಯಲ್ಲಿ ಮುಖಂಡರುಗಳಾದ ಪಿ. ಆರ್. ರಮೇಶ್, ನಾರಾಯನ್, ಕೃಷ್ಣ ಮೂರ್ತಿ, ಡಾ. ರಮೇಶ್ ಮತ್ತು ಮಧುಮಿತ ಉಪಸ್ಥಿತರಿದ್ದರು.
Comments
Post a Comment