ಕೆಎಂಎಫ್ ನೌಕರರ ಬೇಡಿಕೆ ಈಡೇರಿಕೆಗೆ ಫೆಬ್ರವರಿ ಮೊದಲ ವಾರದವರೆಗೆ ಗಡುವು.

ಕೆಎಂಎಫ್ ನೌಕರರ ಬೇಡಿಕೆ ಈಡೇರಿಕೆಗೆ ಫೆಬ್ರವರಿ ಮೊದಲ ವಾರದವರೆಗೆ ಗಡುವು ಬೆಂಗಳೂರು ಜನವರಿ 31; ಕೆಎಂಎಫ್ ನಲ್ಲಿ ನೌಕರರ ವೇತನ, ಸಂಬಳ,ಭತ್ಯೆ, ಸಾರಿಗೆಯ ವ್ಯವಸ್ಥೆಯಲ್ಲಿ ತಾರತಮ್ಯ ನಡೆಯುತ್ತಿದ್ದು,ಸರ್ಕಾರಿ ನೌಕರರಿಗೆ ಇರುವ ಸೌಲಭ್ಯವಿಲ್ಲ ಸಮಾನ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎ.ಎಫ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ. ನೌಕರರ ಸಭೆಯ ಬಳಿಕ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ,ಸರ್ಕಾರಿ ನೌಕರರಂತೆ ಕೆಎಂಎಫ್ ನೌಕರರಿಗೆ ಎಲ್ಲ ರೀತಿಯ ಸೌಕರ್ಯವನ್ನು ಕಲ್ಪಿಸಿಕೊಡಬೇಕು,ಫೆಬ್ರವರಿ ಮೂರರವರೆಗೆ ಕೆಎಂಎಫ್ ಅಧ್ಯಕ್ಷರು,ವ್ಯವಸ್ಥಾಪಕ ನಿರ್ದೇಶಕರು ಗಡುವು ನೀಡಿದ್ದು ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಫೆಬ್ರವರಿ ಏಳರವರೆಗೆ ನೌಕರರು ಯಾವುದೇ ಪ್ರತಿಭಟನೆ ನಡೆಸದೇ ಮೌನರಾಗಿರುತ್ತಾರೆ,ಅಷ್ಟರೊಳಗೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೆಎಂಎಫ್ ನಲ್ಲಿ ಸರ್ಕಾರಿ ನೌಕರರು ಎರವಲು ಸೇವೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಸೌಲಭ್ಯವನ್ನು ಪಡೆಯಲಿದ್ದಾರೆ. ಅದೇ ರೀತಿ ಪೂರ್ವನ್ವಯವಾಗುವಂತೆ ಕೆಎಂಎಫ್ ನೌಕರರಿಗೆ ಏಳನೇ ವೇತನ ಆಯೋಗದ ಸವಲತ್ತುಗಳನ್ನು ಒದಗಿಸಬೇಕು,ಫೆಬ್ರವರಿ ಮೊದಲ ವಾರದೊಳಗೆ ಕೆಎಂಎಫ್ ನೌಕರರ ಬೇಡಿಕೆಗಳನ್ನು ಸರ್ಕಾರ ಪರಿಷ್ಕರಿಸಿ ಜಾರಿ ತರಬೇಕು ಎಂದು ಗಡುವು ವಿಧಿ...