ಅಕ್ಷರ ದಾಸೋಹ (ಬಿಸಿಯೂಟ) ನೌಕರರ ವಿವಿದ ಬೇಡಿಕೆಗಳನ್ನು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈಡೇರಿಸುವ ಕುರಿತು ಮನವಿ

 ಅಕ್ಷರ ದಾಸೋಹ (ಬಿಸಿಯೂಟ) ನೌಕರರ ವಿವಿದ ಬೇಡಿಕೆಗಳನ್ನು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈಡೇರಿಸುವ ಕುರಿತು ಮನವಿ 

ಹಲವಾರು ವರ್ಷಗಳಿಂದ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಕಡಿಮೆ ಸಂಬಳದಲ್ಲಿ (3600 ರಿಂದ =00) ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸುಮಾರು 22 ವರ್ಷಗಳಿಂದ ಹಿಂದೆ ಆಗಿಹೋದ ರ್ಕಾರಿಗಳಿಗೆ ಸಂಬಳ ಹೆಚ್ಚಿಸಲು ಅನೇಕ ಹೋರಾಟ ಮಾಡಿದರು ಕೂಡ ಇಲ್ಲಿಯವರಿಗೆ ಯಾವುದೇ ಪ್ರಯೋಜನ ಇಲ್ಲ. ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ಸಾವಿರ ರೂಪಾಯಿಗಳನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದು ಇದನ್ನು ಅಡಾ ಜಾರಿಗೆ ಬರುವುದಿಲ್ಲ. ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/-ರವಧನ ಹೆಚ್ಚಳ ಆಗಬೇಕು. ಆದರೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಟ ವೇತನ ಹಧಿಪಡಿಸಲಾಗಿದೆ. ಬಿಸಿಯೂಟ ನೌಕರರು 6-7 ಗಂಟೆ ದುಡಿಯುತ್ತಿರುವ ನಮಗೆ ಕನಿಷ್ಠ ವೇತನ ನೀಡಿರುವುದಿಲ್ಲ.

ಹಿಂದೆ ಸರ್ಕಾರ ನಾಲ್ಕುಗಂಟೆ ನಿಗದಿ ಮಾಡಿದ ಸಮಯ ಅವೈಜ್ಞಾನಿಕವಾಗಿರುತ್ತದೆ. ಬಿಸಿಯೂಟ ನೌಕರ ಬೆಳಿಗ್ಗೆ ದೆ ಪ್ರಾರಂಭ ಆಗುವ ಅರ್ಧಗಂಟೆ ಮುಂಚೆ ಶಾಲೆಗೆ ಬಂದು ಬಾಗಿಲು ತೆಗೆದು ಶಾಲೆ ಸ್ವಚ್ಛಗೊಳಿಸಿ, ಮಕ್ಕಳಿಗೆ ಹುಗೆ ತಯಾರಿಸಲು ಸುಮಾರು ಎರಡು ತಾಸು ಬೇಕಾಗುತ್ತದೆ. ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಚಾಪೆಹಾಕಿ ಊಟ -ಸಲು ಸಮಯ ಮಧ್ಯಾಹ್ನದ ಒಂದು ಗಂಟೆಯಾಗುತ್ತದೆ. ಶಾಲೆಯ ಸಮಯ ಮುಗಿದ ನಂತರ ನಾವು ಮನೆಗೆ ರಬೇಕಾಗುತ್ತದೆ. ಈಗಾಗಿ ಸರ್ಕಾರಿ ಸಂಬಳ ತೆಗೆದುಕೊಳ್ಳುವ ಶಿಕ್ಷಕರಿಗಿಂತ ನಾವು ಕೆಲಸ ಮಾಡುವ ಅವಧಿ ಾಗಿರುತ್ತದೆ. ಆದ್ದರಿಂದ ಈ ಕೆಳಕಂಡ ಬೇಡಿಕೆಗಳನ್ನು ಮಂಡನೆಯಾಗಿರುವ ಬಜೆಟ್ ನಲ್ಲಿ ಈಡೇರಿಸಲು ತಮ್ಮಲ್ಲಿ ಈ ಅಲಕ ತಮಗೆ ಮನವಿ ಪತ್ರ ಸಲ್ಲಿಸುತ್ತಿದ್ದೇನೆ.

- ಬಿಸಿಯೂಟ ಯೋಜನೆಯ ನೌಕರರಿಗೆ ಖಾಯಂಯಾತಿ ಆಗುವ ತನಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.

- ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಗೆ ಆಗಬೇಕು.

ನಿವೃತ್ತಿ ಹೊಂದಿದ ನೌಕರರಿಗೆ ರೂ.2. ಲಕ್ಷದವರಿಗೆ ಇಡಗಂಟು ಕೊಡಬೇಕು.

ಕೆಲಸದ ಸ್ಥಳದಲ್ಲಿ ಮರಣಹೊಂದಿದ ಬಿಸಿಯೂಟ ನೌಕರುದಾರರಿಗೆ ರೂ.25 ಲಕ್ಷಗಳು ಪರಿಹಾರ ನೀಡಬೇಕು ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.

 ಬೊಮ್ಮಾಯಿ ಸರ್ಕಾರ ರೂ.1000 ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದು ಅದನ್ನು ಜಾರಿಗೆ ತರಬೇಕು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿರುವ ರೂ.6000/- ಹೆಚ್ಚಳವಾಗಬೇಕು.

6. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚು ಇರುವಾಗ ಇರುವ ಸಿಬ್ಬಂದಿಯನ್ನು ಅದೇ ಶಾಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾದಗ ಅವರನ್ನು ಕೆಲಸದಿಂದ ತೆಗೆದು ಹಾಕದೆ ಸಮೀಪ ಇರುವ ಶಾಲೆಗಳಿಗೆ ಅಥವಾ ಬೇರೆ ಶಾಲೆಗಳಲ್ಲಿ ಸೇರ್ಪಡೆಗೊಳ್ಳಬೇಕು.

7. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನವನ್ನು ಕಡ್ಡಾಯವಾಗಿ ನೀಡಬೇಕು.

8. ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಬಿಸಿಯೂಟ ನೌಕರದಾರರಿಗೆ ದಿನಭತ್ಯೆ ನೀಡಬೇಕು.

9. ಬಿಸಿಯೂಟ ನೌಕರದಾರರಿಗೆ ದಿನನಿತ್ಯ ನಡೆಯುತ್ತಿರುವ ಮಾನಸಿಕ ಕಿರುಕುಳ ತಡೆಗಟ್ಟಬೇಕು.

10. 2024ರ ಏಪ್ರಿಲ್, ಮೇ ತಿಂಗಳಲ್ಲಿ ಕೆಲಸ ಮಾಡಿರುವ ವೇತನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು.

11. ಬಿಸಿಯೂಟ ಯೋಜನೆಯನ್ನು ಶಿಕ್ಷಣ ಇಲಾಖೆಯು ಆಡಿಯಲ್ಲಿಯೇ ನಡೆಯಬೇಕು ಅದನ್ನು ಯಾವುದೇ ಖಾಸಗಿ ಸಂಸ್ಥೆಗಳಲ್ಲಿ ನೀಡಬಾರದು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation