ಬೆಂಗಳೂರು ಜನವರಿ 25; ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ರಾಳಕುಂಟೆ

 ಬೆಂಗಳೂರು ಜನವರಿ 25;  ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ರಾಳಕುಂಟೆ


ಗ್ರಾಮದ ಸರ್ವೆ ನಂ. 29ರಲ್ಲಿ ಈಸ್ತೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಕ್ಕಯ್ಯಮ್ಮ ಮಟ್ಟೆಪ್ಪ ಎಂಬುವವರಿಗೆ ಸೇರಿದ ಜಮೀನನ್ನು ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳ ಕುಮ್ಮಕ್ಕಿನಿಂದ ಆಕ್ರಮವಾಗಿ ಕಬಳಿಸಿದ್ದಾರೆ ದಲಿತ ಪರಿವರ್ತನಾ ಸಮಿತಿಯ ಈಸ್ತೂರು ನಾರಾಯಣಪ್ಪ ಆರೋಪಿಸಿದರು.


ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,ಪರಿಶಿಷ್ಟ ಜಾತಿಗೆ ಸೇರಿದ ಅಕ್ಕಯ್ಯಮ್ಮ 4ಎ-20ಗುಂಟೆ ಜಮೀನು ಮಂಜೂರು ಮಾಡಿ ಸ್ವಾಧೀನ ಅನುಭವದಲ್ಲಿದ್ದು, ಪಹಣಿ, ಮ್ಯುಟೇಷನ್ ಹಾಗೂ ಎಲ್ಲಾ ಕಂದಾಯ ದಾಖಲೆಗಳು ಇವರ ಹೆಸರಿನಲ್ಲಿವೆ, ಅಕ್ಕಯ್ಯಮ್ಮನ ಮರಣದ ನಂತರ ಇವರ ಮಕ್ಕಳು 7 ಕುಟುಂಬದವರು ಸ್ವಾಧೀನ ಅನುಭವದಲ್ಲಿದ್ದು, ತಹಶೀಲ್ದಾರ್  ಸೋಮಶೇಖರ್,ಎ.ಡಿ.ಎಲ್.ಆರ್ ಸಂತೋಷ್  ನಮ್ಮ ಅನುಭೋಗದ ಜಮೀನಿಗೆ ಬಂದು ಪೋಡಿ ಮಾಡಿಕೊಡುತ್ತೇವೆಂದು ನಮ್ಮ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಅಳತೆ ಮಾಡಿಸಿ ನಿಮ್ಮ ಹೆಸರಿಗೆ ಪೋಡಿ ಮಾಡುತ್ತೇವೆ ಎಂದು ತಿಳಿಸಿ ಎ.ಡಿ.ಎಲ್.ಆರ್. ನಮ್ಮ ಅನುಭೋಗದ ಜಮೀನನ್ನು ಅಳತೆ ಮಾಡುವಾಗ ಪೋಟೋಗಳನ್ನು ತೆಗೆದುಕೊಂಡು ರಾತ್ರಿ ನಮ್ಮಗಳ ಅನುಭೋಗದ ಜಮೀನಿನಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಿಯಲ್ ಎಸ್ಟೇಟ್ ರವರಲ್ಲಿ ಒಳ ಒಪ್ಪಂದ ಮಾಡಿಕೊಂಡು ಲಂಚ ಪಡೆದು ನಮ್ಮ ಅನುಭವದ ಜಮೀನುಗಳಲ್ಲಿ ಏಕಾಏಕಿ ಅತಿಕ್ರಮ, ಅಕ್ರಮ ಪ್ರವೇಶ ಮಾಡುವಂತೆ ಮಾಡಿ ಪರಿಶಿಷ್ಟ ಜಾತಿಯವರಿಗೆ ಭಾರಿ ನಷ್ಟ  ಅನ್ಯಾಯ ಉಂಟು ಮಾಡಿದ್ದಾರೆ ಎಂದು ತಿಳಿಸಿದರು.


ಕರ್ತವ್ಯ ಲೋಪ ಮತ್ತು ಕಾನೂನು ಉಲ್ಲಂಘನೆ ಮಾಡಿರುವ,  ಜಾತಿಯ ನಿಂದನೆ ಮಾಡಿರುವವರ  ನಮ್ಮ ಜಮೀನಿನಲ್ಲಿ ರಾತ್ರಿ ವೇಳೆ ಅತಿಕ್ರಮ ಪ್ರವೇಶ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನಮ್ಮಗಳಿಗೆ ಸಂವಿಧಾನಿಕ ನ್ಯಾಯ ದೊರಕಿಸಿ ಕೊಡಬೇಕು ಇಲ್ಲವಾದರೆ ಬೆಂಗಳೂರು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims