ಸಹಕಾರ ಕಾಯ್ದೆ 1959 ಹಾಗೂ ನಿಯಮ 960 ರಂತೆ ಕಹಾಮ ನೊಂದಣಿಯಾಗಿದ್ದು, ಸದರಿ ಕಾಯ್ದೆಯಂತೆ ನಿಬಂಧನೆಗಳನ್ನು kmf

 ಸಹಕಾರ ಕಾಯ್ದೆ 1959 ಹಾಗೂ ನಿಯಮ 960 ರಂತೆ ಕಹಾಮ ನೊಂದಣಿಯಾಗಿದ್ದು, ಸದರಿ ಕಾಯ್ದೆಯಂತೆ ನಿಬಂಧನೆಗಳನ್ನು kmf

 ರೂಪಿಸುವಾಗ ಹಾರಿನ ಡೇರಿ ಉದ್ದಿಮೆ ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ ಅದರಲ್ಲ ಆಡಳಿತ/ಸಿಬ್ಬಂದಿ ವೆಚ್ಚ ಶೇ 2 ಕ್ಕೆ ಮೀರಬಾರದು ಎಂದಿರುವುದನ್ನು ನೆಪಮಾಡಿ RCS ನವರು ಕಹಾಮ/ಜಿಲ್ಲಾ ಒಕ್ಕೂಟಗಳಿಗೆ 7ನೇ ವೇತನ ಪೂರ್ಣಮಟ್ಟದಲ್ಲಿ ಜಾರಿಮಾಡಲು ತಡೆಮಾಡಿರುತ್ತಾರೆ.

ಕೆಡಿಡಿಸಿ ಇದ್ದಾಗ ಪ್ರಾಥಮಿಕ ಸಂಘಗಳ ನಿರ್ವಹಣೆಗೆ ಹಾಲು ಶೇಖರಣೆ ವಿಭಾಗ ಮತ್ತು ಹಾಲನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆ ಮಾಡಲು ಡೇರಿ ವಿಭಾಗವೆಂದು ವಿಂಗಡಿಸಿದರು. ಆಗ ಡೇರಿ ವಿಭಾಗವು Industrial Act ಪ್ರಕಾರ ನೊಂದಣಿಯಾಗಬೇಕಾಯಿತು. ಪ್ರಾಥಮಿಕ ಸಂಘಗಳ ನಿರ್ವಹಣೆ ಮಾಡುವ ಶೇಖರಣಾ ವಿಭಾಗ ಮಾತ್ರ ಸಹಕಾರಿ ತತ್ವದಡಿಯಲ್ಲಿ ನೋಂದಣಿಗೆ ಪರಿಗಣಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರದಿಂದ ನೇರವಾಗಿ ಅಧಿಕಾರಿ/ನೌಕರರಿಗೆ ವೇತನ ನೀಡಲಾಗುತ್ತಿತ್ತು. ಕಾಲಕ್ರಮೇಣ ಹಾಲು ಉದ್ದಿಮೆಯನ್ನು ಸರ್ಕಾರ ನಿರ್ವಹಿಸಲು ತೊಂದರೆಯಾಗಿ ಈ ಎರಡು ವಿಭಾಗಗಳನ್ನು ಒಟ್ಟು ಮಾಡಿ ಒಕ್ಕೂಟದ ಪರಿಕಲ್ಪನೆ ತಂದು ಒಕ್ಕೂಟವನ್ನು 1984 ಸಹಕಾರಿ ಉದ್ದಿಮೆ ಎಂದು ಸೃಷ್ಟಿ ಮಾಡಿ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959, ನಿಯಮ 1960 ರಲ್ಲಿ ನೋಂದಣಿ ಮಾಡಿಕೊಳ್ಳಲು ಪ್ರೆರೇಪಿಸಿತು. ತದನಂತರ

1. ಕೆಡಿಡಿಸಿ ಪ್ರತಿನಿಧಿಗಳು

2. ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು

3. NDDB ಪ್ರತಿನಿಧಿಗಳು ಸೇರಿ Triparty Agrectment ಗೆ ಸಜ್ಜಾದವು. ಆ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರ/ಕೆಡಿಡಿಸಿ ನೌಕರರು ಸದರಿ ಉದ್ದಿಮೆಯಲ್ಲಿ ಕೆಲಸ ಮುಂದುವರೆಸಲು ಒಪ್ಪಲಿಲ್ಲ.

ಈ ಹಂತದಲ್ಲಿ ಕೆಡಿಡಿಸಿ ಉದ್ದಿಮೆಯನ್ನು ಸರಿಪಡಿಸಿ ಸಹಕಾರಿ ಉದ್ದಿಮೆ ಮಾಡಿ KCSR ನಂತೆ KMF/ಜಿಲ್ಲಾ ಒಕ್ಕೂಟಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ ಕಾಲಕಾಲಕ್ಕೆ ಪರಿಷ್ಕರಿಸುವ ವೇತನಗಳು ಹಾಗೂ DA, ಇತ್ಯಾದಿ ಭತ್ಯೆಗಳು ಯಥಾವತ್ತಾಗಿ ಅನ್ವಯಿಸುತ್ತವೆ ಎಂದು Triparty Agreement ನಲ್ಲಿ ಸೇರಿಸಲಾಯಿತು. ಅದರಂತೆ ಇದುವರೆವಿಗೂ ಮುಂದುವರೆದುಕೊಂಡು ಬರುತ್ತಿರುತ್ತದೆ. ಈ ಒಪ್ಪಂದದಂತೆ ಕಹಾಮದಲ್ಲಿ ತಾಂತ್ರಿಕವಾಗಿ ನೇಮಕವಾಗುವ ಅಧಿಕಾರಿಗಳು ಮಾತ್ರ ಒಕ್ಕೂಟಗಳ ಉನ್ನತ ಹುದ್ದೆಗಳಿಗೆ ಹೋಗಲು ಅವಕಾಶ ಕಲ್ಪಿಸಲಾಯಿತು. ಅಲ್ಲದೇ ಸರ್ಕಾರ ತನ್ನ ಯಾವುದೇ ಅಧಿಕಾರಿಯನ್ನು ಒಕ್ಕೂಟ/KMF MD ಗಳಾಗಿ ಹಾಕುವುದಿಲ್ಲ ಎಂದು ಆಶ್ವಾಸನೆ ನೀಡಲಾಯಿತು.

ಕಹಾಮ/ಒಕ್ಕೂಟಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ತನ್ನದೇ ಆದ ಆಡಳಿತ ಮಂಡಳಿಯ ನಿರ್ದೇಶಕರಿದ್ದು, ಸರ್ಕಾರದ ಪ್ರತಿನಿಧಿಗಳನ್ನು ಸರ್ಕಾರದಿಂದ ನಿಯೋಜಿಸಲಾಗುವುದೆಂದು ಜೊತೆಗೆ ಸಂಸ್ಥೆಯು ಸರ್ಕಾರದ ನಿಯಮಾವಳಿಗಳಂತೆ ನಡೆಯಲು ಪಶು ಸಂಗೋಪನೆ ಇಲಾಖೆ ಪ್ರತಿನಿಧಿ. ಸಹಕಾರಿ ಇಲಾಖೆ ಪ್ರತಿನಿಧಿ ಹಾಗೂ NDDB ಪ್ರತಿನಿಧಿಗಳನ್ನು ಕಡ್ಡಾಯವಾಗಿ ಹೊಂದಿರುವಂತೆ ಕಾನೂನು ರೂಪಿಸಿತು. ಜಿಲ್ಲಾ ಒಕ್ಕೂಟಗಳಲ್ಲಿ ಪ್ರಾಥಮಿಕ ಸಂಘಗಳ ನಿರ್ವಹಣೆಯಲ್ಲಿ ಮಾತ್ರ ಸಹಕಾರಿ

 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಅವಕಾಶವಿರುತ್ತದೆ. ಉಳಿದಂತೆ ಡೇರಿ ಉದ್ಯಮದಲ್ಲ ಯಾವುದೇ ವಿಭಾಗದಲ್ಲಿ ಸದರಿ ವಿಷಯಗಳನ್ನು ಅಳವಡಿಸಲು ಸಾಧ್ಯವಿರುವುದಿಲ್ಲ.

ಡೇರಿ ಸಂಸ್ಕರಣೆ ಘಟಕ ಕಟ್ಟಲು ಕಡ್ಡಾಯವಾಗಿ ಇಂಡಸ್ಟ್ರಿ ಕಾಯ್ದೆ ಪ್ರಕಾರ ನೋಂದಾಯಿಸಬೇಕು. ಪರಿಸರ ಇಲಾಖೆಯ ಅನುಮೋದನೆ ಪಡೆಯಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಬೇಕು. ತದನಂತರ 6 ತಿಂಗಳಿಗೊಮ್ಮೆ ಡೇರಿ ಉದಿಮೆಯಲ್ಲಿ ಖಾಯಂ ನೌಕರರ ಮಾಹಿತಿ ಗುತ್ತಿಗೆ ನೌಕರರ ಮಾಹಿತಿ ಮತ್ತು ಕನಿಷ್ಟ ವೇತನ ಕಾಯ್ದೆಯಂತೆ ಪಾವತಿಯಾಗುತ್ತಿರುವ ಬಗ್ಗೆ ಕಾರ್ಖಾನೆ ಪರಿವೀಕ್ಷಕರಿಗೆ ಮಾಹಿತಿ ಸಲ್ಲಿಸಬೇಕು. ವರ್ಷಕ್ಕೊಮ್ಮೆ ಕಾರ್ಮಿಕ ಪರಿವೀಕ್ಷಕರಿಗೆ ಮಾಹಿತಿ ನೀಡಬೇಕು.

ಡೇರಿ ಉದ್ದಿಮೆ ಪ್ರಾರಂಭಿಸಲು ಕಾರ್ಖಾನೆ ಕಾಯ್ದೆ ಅನ್ವಯ ಅನುಮೋದನೆ ಪಡೆದ ನಂತರ ಪರವಾನಗಿ ಸಿಗುತ್ತದೆ. ಅದರಲ್ಲಿ ಕೆಂಪು, ಹಳದಿ, ಹಸಿರು ಹಂತದ ಕಾರ್ಖಾನೆಗಳೆಂದು ಡೇರಿ ವಹಿವಾಟನ ಮೇಲೆ ತೀರ್ಮಾನಿಸಿ ಪ್ರತಿ ವರ್ಷ ಶುಲ್ಕ ಪಾವತಿಸಬೇಕು. ಡೇರಿ ವಿಸ್ತರಣೆ ಮಾಡಬೇಕಾದರೆ ಕಾರ್ಖಾನೆಗಳ ಪರಿವೀಕ್ಷಕರಿಗೆ ನೀಲ ನಕ್ಷೆ ಕಳುಹಿಸಿ ಮುಂಚಿತವಾಗಿ ಅನುಮೋದನೆ ಪಡೆಯಬೇಕು. ಹೀಗೆ ಪಟ್ಟಿ ಮಾಡಿದಾಗ ಸಹಕಾರಿ ರಂಗದಲ್ಲಿ ಕೆಲಸ ನಿರ್ವಹಿಸುವ ಇತರೆ ಸಂಸ್ಥೆಗಳಾದ ಹಾಪ್ ಕಾಮ್ಸ್, ಬ್ಯಾಂಕಿಂಗ್, ಪ್ರಾಥಮಿಕ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರೆ ಅನೇಕ ಸಹಕಾರಿ ಸಂಘ/ಸಂಸ್ಥೆಗಳಲ್ಲಿ ಮೇಲೆ ತಿಳಿಸಿರುವಂತೆ ನಿಬಂಧನೆಗಳಿರುವುದಿಲ್ಲ. ಜೊತೆಗೆ ಅವುಗಳು ಕಾರ್ಖಾನೆ ಕಾಯಿದೆಯನ್ನು ಪಾಲನೆ ಮಾಡುವುದಿಲ್ಲ. ಆದ್ದರಿಂದ ವಹಿವಾಟಿಗೆ ಶೇ.2 ರಂತೆ ಆಡಳಿತ/ಸಿಬ್ಬಂದಿ ವೆಚ್ಚವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಡೇರಿ ಉದ್ಯಮದಲ್ಲಿ ಎಲ್ಲಿಯೂ ಸಹ ಶೇ.2 ರಂತೆ ತನ್ನ ಆಡಳಿತ ವೆಚ್ಚ ನಿರ್ವಹಿಸಲು ಹೇಳುವುದು ಸಮಂಜಸವೇ ಎಂದು ಸಹಕಾರ ಇಲಾಖೆಯು ಪರಾಮರ್ಶಿಸಬೇಕಿದೆ.

ಡೇರಿ ಉದ್ಯಮದಲ್ಲಿ ಆಯಾ ದಿನದ ಹಾಲನ್ನು ಆಯಾದಿನವೇ ಸಂಸ್ಕರಿಸಿ ವಿಲೇವಾರಿ ಮಾಡಬೇಕಾದರೆ ಅದಕ್ಕೆ ತಕ್ಕನಾದ ವೃತ್ತಿಪರ ತಾಂತ್ರಿಕ ಸಿಬ್ಬಂದಿ ಅತ್ಯಾವಶ್ಯಕವಾಗಿ ಇರುತ್ತದೆ ಸದರಿ ವೃತ್ತಿಪರ ತಾಂತ್ರಿಕ ಸಿಬ್ಬಂದಿಗಳಿಗೆ ಅಗತ್ಯವಾದ ತಾಂತ್ರಿಕ ನೈಪುಣ್ಯತೆ ಇರುವುದು ಅವಶ್ಯಕವಾಗಿರುತ್ತದೆ. ಕಾಲಕಾಲಕ್ಕೆ ಬಡ್ತಿಗಳು, ವೇತನ ಬಡ್ತಿಗಳು ಸರ್ಕಾರದ ಶಿಫಾರಸ್ಸಿನಂತೆ ಸೌಲಭ್ಯಗಳನ್ನು ನೀಡಬೇಕಾಗಿದ್ದು ಇತರೆ ಸಹಕಾರಿ ಸಂಘ-ಸಂಸ್ಥೆಗಳಂತೆ ತಾಂತ್ರಿಕೇತರ ಸಿಬ್ಬಂದಿಗಳಿಂದ ಕೆಲಸ ನಿರ್ವಹಿಸಲು ಸಾಧ್ಯವಿರುವುದಿಲ್ಲ.

ಹಾಲು ಉದ್ಯಮದಲ್ಲಿ ಹಾಲನ್ನು ಶೇಖರಿಸಿ ಹಾಗೆಯೇ ವಿಲೇವಾರಿ ಮಾಡುವ ಪ್ರಾಥಮಿಕ ಸಂಘಗಳಲ್ಲಿ ಇಂತಹ ನಿಬಂಧನೆಗಳನ್ನು ಪಾಲನೆ ಮಾಡುವುದು ಅವಶ್ಯಕತೆ ಇರುವುದಿಲ್ಲ. ಆದರೆ ಹಾಲನ್ನು ಶೇಖರಿಸಿ, ಅದನ್ನು ಹಾಳಾಗದಂತೆ ಕಾಪಾಡಲು ಸಂಸ್ಕರಣೆ ಮಾಡಿ ವಿವಿಧ ರೂಪಗಳಲ್ಲಿ ಅದನ್ನು ಪರಿವರ್ತಿಸಿ ಮಾರಾಟ ಮಾಡಲು ಉತ್ಪಾದಿಸಬೇಕಾದರೆ ದಿನನಿತ್ಯ 3 ಪಾಳಿಗಳಲ್ಲಿಯೂ ವರ್ಷದ 365 ದಿನಗಳೂ 24-7 ಸಮಯ ತನ್ನ ತಾಂತ್ರಿಕ ಸಿಬ್ಬಂದಿ/ಗುತ್ತಿಗೆ ಸಿಬ್ಬಂದಿ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಕಾರ್ಖಾನೆ ಕಾಯ್ದೆಯಂತೆ ಪಾಳಿಗಳಿಗೆ ಬರುವ ಸಿಬ್ಬಂದಿಗಳಿಗೆ ಹೆಚ್ಚಿನ ಪಾಳಿ ಭತ್ಯೆ ಹಾಗೂ ಉಚಿತವಾಗಿ ಉಟ ಉಪಹಾರ, ಕಾಫಿ/ಟೀ. ಸಮವಸ್ತ್ರ, ಸಾರಿಗೆ ವ್ಯವಸ್ಥೆ ಇತ್ಯಾದಿಗಳನ್ನು ಒಕ್ಕೂಟ/ಕಹಾಮ ಘಟಕಗಳು ಕಡ್ಡಾಯವಾಗಿ ಭರಿಸಬೇಕಾಗಿದೆ.

2 ಕಹಾಮ/ಒಕ್ಕೂಟಗಳು ಸಂಗ್ರಹಿಸುವ ಕಾಲನ ಪರಿಮಾಣ ಸಂಪೂರ್ಣವಾಗಿ ಮಾರಾಟವಾಗಲ ಆಗದಿರದ ರಕರಿಂದ ನಿರಂತರವಾಗಿ ಕಾಲನ್ನು ಬರೀರಿಮ ಸಂದ ಆರ್ಚಿವಾಗಿ ಗುಡೇರಿಯವರು ತಮ್ಮ ಮಾರುಕಟ್ಟೆ ವಹಿವಾಟಿಗೆ ಮಾತ್ರ ಅಗತ್ಯವಾಗುವ ಹಲೇಬೇಕಿದೆ ಅಂದೆ ಖರೀದಿಸುತ್ತಾರೆ. ಒಂದು ವೇಳೆ ಮಾರುಕಟ್ಟೆ ವಹಿವಾಟು ಕಡಿಮೆಯಾದಲ್ಲಿ ರೈತರಿಂದ ಸುರೀದಿಸುವ ಹಾಲನ ಪರಿಮಾಣವನ್ನು ಕಡಿಮೆಗೊಳಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ನಿಟ್ಟಿಸುತ್ತಾರೆ. ಪ್ರಸ್ತುತ ಕಹಾಮದಲ್ಲಿ ದಿನವೊಂದಕ್ಕೆ ಅಂದಾಜು 100 ಲಕ್ಷ ಈ ಹಾಲು ಶೇಖರಣೆಯಾದರೂ ಮಾರಾಟವಾಗುವುದು ಅಂದಾಜು 65 ಲಕ್ಷ ಲೀ ಮಾತ್ರ ಈ ಹಂತದಲ್ಲಿ ಮಾರಾಟವಾಗದೇ ಉಳಿಯುವ ಹಾಲಿನ ಪ್ರಮಾಣವನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ದಾಸ್ತಾನು ಮಾಡಿ ಕೆಲವು ಸಂದರ್ಭಗಳಲ್ಲಿ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದಿದ್ದರೂ ಸಹ ಮಾರಾಟ ಮಾಡುವುದರಿಂದ ಉಂಟಾಗುವ ನಷ್ಟವನ್ನು ರೈತರಿಗೆ ಹೇರದೆ ಅವರ ನಷ್ಟ ಭರಿಸಲಾಗುತ್ತಿದೆ. ಈ ಕಾರಣದಿಂದಾಗಿ ಖಾಸಗಿ ಡೇರಿಗಳನ್ನು ಕಹಾಮದೊಂದಿಗೆ ಹೋಲಿಕೆ ಮಾಡುವುದು ಸಮರ್ಪಕವಾಗಿರುವುದಿಲ್ಲ. ಖಾಸಗಿ ಡೇರಿಗಳು ಕನಿಷ್ಠ ವೇತನ ಕಾಯಿದೆಯಂತೆ ಕಾರ್ಮಿಕರನ್ನು ಪಡೆದ ಹಾಗೆ ತೋರಿಸಿ ಕಡಿಮೆ ವೇತನ ನೀಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಕಹಾಮ/ಒಕ್ಕೂಟಗಳು ಈ ರೀತಿ ಮಾಡಲು ಸಾಧ್ಯವಿರುವುದಿಲ್ಲ. ಅಲ್ಲದೆ ಕಹಾಮ/ಒಕ್ಕೂಟಗಳು ಹೈನು ರೈತರಿಗೆ ನೀಡುತ್ತಿರುವ ಅನೇಕ ರೈತ ಕಲ್ಯಾಣ ಕಾರ್ಯಕ್ರಮಗಳನ್ನು ಖಾಸಗಿ ಡೇರಿಯವರು ಮಾಡುತ್ತಿರುವುದಿಲ್ಲ.

ಕಹಾಮ/ಒಕ್ಕೂಟಗಳು ತನಗೆ ಹಾಲು ಪೂರೈಸುವ ಹೈನುಗಾರರ ಯೋಗ-ಕ್ಷೇಮ ನೋಡಿಕೊಳ್ಳುವ ಜವಬ್ದಾರಿ ಹೊಂದಿದೆ. ವಿವರಗಳು ಈ ಕೆಳಕಂಡಂತಿವೆ.

1. ಪ್ರಾಥಮಿಕ ಸಂಘಗಳಿಂದ ಕೆ.ಜಿ ಲೆಕ್ಕದಲ್ಲಿ ಹಾಲನ್ನು ಪಡೆದು ಗ್ರಾಹಕರಿಗೆ ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡಬೇಕಾಗಿರುತ್ತದೆ. ನಿಗದಿಪಡಿಸಿದ ಗುಣಮಟ್ಟದಂತೆ ಬಿಲ್ಲನ್ನು ಕಡ್ಡಾಯವಾಗಿ ಪ್ರತಿವಾರ ಪಾವತಿಗೆ ಕ್ರಮವಿಡಲಾಗುತ್ತಿದೆ.

2. ಹೈನುಗಾರರು ತನ್ನ ರಾಸುಗಳ ಆರೋಗ್ಯದಲ್ಲಿ ತೊಂದರೆಯಾದಲ್ಲಿ ತಕ್ಷಣವೇ ಸೇವೆ ನೀಡಲು ಪಶುವೈದ್ಯರನ್ನು ತಾಲ್ಲೂಕು ಮಟ್ಟದಲ್ಲಿ ನಿಯೋಜಿಸಿ ದಿನದ 24 ಗಂಟೆ (24*7) ಪ್ರತಿ ಹಳ್ಳಿಗಳ್ಳಲ್ಲೂ ಸೇವೆ ನೀಡಲಾಗುತ್ತಿದೆ.

3. ರೈತರು ಸಾಕುವ ಪಶುಗಳಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಮತ್ತು ಔಷಧೋಪಚಾರ ಒದಗಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಕಹಾಮ/ಒಕ್ಕೂಟಗಳು ಭರಿಸುತ್ತಿವೆ.

4. ರೈತರಿಗೆ ಉಚಿತವಾಗಿ ಮೇವಿನ ಬೀಜಗಳು, ರಾಸುಗಳ ವಿಮೆ, ಮೇವು ತುಂಡರಿಸುವ

ಯಂತ್ರಗಳು, ಪಶುಗಳು ಮಲಗುವ ಮ್ಯಾಟ್ಗಳು ಹಾಗೂ ಪಶು ಆಹಾರ ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಿ ರೈತರ ಪಶು ಸಂಗೋಪನಾ ಚಟುವಟಿಕೆಗಳಿಗೆ ನೆರವು ನೀಡಲಾಗುತ್ತಿರುತ್ತದೆ,

5. ಉನ್ನತ ವಿದ್ಯಾಭ್ಯಾಸ ಮಾಡುವಂತಹ ರೈತರ ಮಕ್ಕಳಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಉಚಿತವಾಗಿ ವಸತಿ ನಿಲಯದ ಸೌಲಭ್ಯ ಒದಗಿಸಲಾಗುತ್ತಿದೆ. 6. ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಸಂಘದ ಕಟ್ಟಡಗಳನ್ನು ನೂತನವಾಗಿ

ನಿರ್ಮಿಸಲು ಕಹಾಮದಿಂದ ಕಟ್ಟಡ ಅನುದಾನವನ್ನು ನೀಡಲಾಗುತ್ತಿದೆ.

7. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅಕಾಲಿಕ ಮರಣ ಹೊಂದಿದಲ್ಲಿ ಅಂತವರ ಕುಟುಂಬಗಳಿಗೆ ಒಕ್ಕೂಟಗಳಿಂದ ಪರಿಹಾರ ಮೊತ್ತವನ್ನು ನೀಡಲಾಗುತ್ತಿದೆ. ಅಲ್ಲದೇ ಸಹಕಾರ ಸಂಘಗಳಿಗೆ ಹಾಲು ಪೂರೈಸುವ ರೈತ ಸದಸ್ಯರು ಅಕಾಲಿಕ

 ಮರಣ ಹೊಂದಿದಲ್ಲಿ, ಅಂತವರ ಕುಟುಂಬಗಳಿಗೆ ಒಕ್ಕೂಟಗಳಿಂದ ಪರಿಹಾರ ಮಾತ್ರವನ್ನು ನೀಡಲಾಗುತ್ತಿರುತ್ತದೆ.

8. ಚೈನುರಾಸುಗಳ ಘೋಷಣೆ, ರಾಸುಗಳಿಗೆ ವಿದು ಸೌಲಭ್ಯ, ಔಷಧೋಪಚಾರ, ಕೃತಕ ಗರ್ಭಧಾರಣಿ, ಶುದ್ಧ ಹಾಲು ಉತ್ಪಾದನೆ ಮೇವಿನ ಬೆಳೆಗಳ ಪೋಷಣೆಗೆ Subsidy ಅದನ್ನು ಸೇವೆ ನೀಡಲಾಗುತ್ತಿದೆ. ಹಾಗೂ ಸಹಕಾರ ಸಂಘಗಳ ನಿರ್ವಹಣೆ ಮಾಹಿತಿ ಸೇರಿದಂತೆ ಮತ್ತು ಹಲವು ಪಶು ಸಂಗೋಪನಾ ವಿಷಯಗಳ ಕುರಿತು ಹೆನು ರೈತ ಸದಸ್ಯರು ಸಂಘದ ಹಲರ್ಯದರ್ಶಿಗಳು/ಪರೀಕ್ಷಕರು/ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕಹಾಮ ರೈತ ತರಬೇತಿ ಕೇಂದ್ರಗಳ ಮುಖಾಂತರ ಉಚಿತವಾಗಿ ತರಬೇತಿ ನೀಡಲಾಗುತ್ತಿರುತ್ತದೆ.

9. ಸರ್ಕಾರದಿಂದ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು KMFilinion ಗಳು ಹಾಲು ಉತ್ಪಾದಕರಿಗೆ ನೇರವಾಗಿ DBT- ಮುಖಾಂತರ ಪಾವತಿಸುವ ವ್ಯವಸ್ಥೆ ಕಲ್ಪಸಿಕೊಡಲಾಗಿದೆ.

10. ಕರೊನಾ ಮಹಾಮಾರಿ ಸಮಯದಲ್ಲಿ ನಿರಂತರವಾಗಿ ರೈತರಿಂದ ಹಾಲು ಖರೀದಿಸಿ ಗ್ರಾಹಕರಗೆ ಸಕಾಲದಲ್ಲಿ ತಲುಪಿಸಲಾಗುತ್ತಿತ್ತು. ಇದರಿಂದ ರೈತರಿಗೆ ಆರ್ಥಿಕ ಸಬಲೀಕರಣವಾಗಿದೆ ಹಾಗೂ ರೈತರು ಬೆಳೆಯುವ ಯಾವುದೇ ಬೆಳೆಗೆ ನಗದಿತ ಬೆಲೆ ಸಿಗುತ್ತಿಲ್ಲ ಆದರೆ ಹಾಲಿಗೆ ನಿರ್ದಿಷ್ಟ ಬೆಲೆ ನೀಡಿ 15 ದಿನಗಳಿಗೊಮ್ಮೆ ನೇರವಾಗಿ ಬಟಾವಡೆ ಮಾಡಲಾಗುತ್ತಿದೆ.

11. ಕಹಾಮ/ಒಕ್ಕೂಟಗಳ ಆಡಳಿತ ಮಂಡಳಿಯಲ್ಲಿ ಸಹಕಾರ ಇಲಾಖೆ ಪ್ರತಿನಿಧಿ, ಪಶುಸಂಗೋಪನೆ ಪ್ರತಿನಿಧಿ, ಎನ್‌ಡಿಡಿಬಿ ಪ್ರತಿನಿಧಿಗಳಿರುತ್ತಾರೆ. ಸದರಿಯವರ ಮುಂದೆ ಕಹಾಮ/ಒಕ್ಕೂಟದ ಪ್ರಗತಿ ಪರಿಶೀಲನೆಯಾಗುತ್ತದೆ. ಪ್ರತಿ ಮಾಹೆ ಆಡಳಿತ ಮಂಡಳಿ ಸಭೆಯಲ್ಲಿ ಸಂಸ್ಥೆಯ ಖರ್ಚು-ವೆಚ್ಚಗಳ ಪರಿಶೀಲನೆಯಾಗಿ ಅನುಮೋದನೆ ಆಗುತ್ತದೆ. ಒಂದು ವೇಳೆ ಖರ್ಚು ಹೆಚ್ಚು ಎಂದು ಕಂಡು ಬಂದಾಗ ಆ ಹಂತದಲ್ಲಿ ವಿರೋದ ವ್ಯಕ್ತ ಪಡಿಸದೇ ಅನುಮೋದನೆಗಳನ್ನು ನೀಡಿ, ನೌಕರರಿಗೆ ವೇತನ (ಪರಿಷ್ಕೃತ) ನೀಡುವ/ಜಾರಿಗೆ ತರುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವುದು ಸಮಂಜಸವಲ್ಲ.

12. ಕಹಾಮ/ಒಕ್ಕೂಟಗಳ ವ್ಯಾಪ್ತಿಯ ಎಲ್ಲಾ 15,885 ಹಾಲು ಸಹಕಾರ ಸಂಘಗಳಲ್ಲಿ AMCS(Automatic Milk Collection System) ដ ជ ប ០៨ ಪಾರದರ್ಶಕವಾಗಿ ಶೇಖರಣೆ ಮಾಡಿ ಗುಣಮಟ್ಟದ ಆಧಾರದ ಮೇಲೆ ಹಣದ ಲೇಕ್ಖಾಚಾರ ಮಾಡಿ ನೇರವಾಗಿ ರೈತರಿಗೆ ದಾಖಲಾತಿಗಳನ್ನು ಆಯಾ ದಿನವೆ ಒದಗಿಸಲಾಗುತ್ತಿದೆ.

13. ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯರಿಗೆ ರಾಸುಗಳ ಸಂರ್ಪಕದಿಂದ ತಗಲುವ ಮಾರಾಕ ಬ್ರುಸೆಲ್ಲಾ ರೋಗದ ತಪಾಸಣೆ ಹಾಗೂ ಚಿಕೆತ್ಸೆಯನ್ನು ನೀಡಲಾಗುತ್ತಿದೆ.

14. ರಾಸುಗಳಿಗೆ ವಾರ್ಷಿಕ 40 ಲಕ್ಷ ಸಂಪ್ರದಾಯಿಕ ವಿರ್ಯನಳಿಕೆ, ಲಿಂಗ ನಿರ್ಧರಿತ ವಿರ್ಯ ನಳಿಕೆಗಳಿಂದ ರಾಸುಗಳಿಗೆ ಕೃತಕ ಗರ್ಭಧಾರಣೆ ಕೈಗೊಳ್ಳಲಾಗುತ್ತಿದೆ.

15. ಕರ್ನಾಟಕದಲ್ಲಿ ಮೊದಲಬಾರಿಗೆ IVF-ET(ಭ್ರೂಣ ವರ್ಗಾವಣೆ) ಕಾರ್ಯಕ್ರಮವನ್ನು ರೈತರ ರಾಸುಗಳಿಗೆ ಒದಗಿಸುತ್ತಿದ್ದು, ಉತ್ಕೃಷ್ಟ ಹೆಣ್ಣು ಕರುಗಳ ಜನನದಿಂದ ರೈತರಿಗೆ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ.

16. ರಾಸುಗಳಿಗೆ ವಿವಿಧ ರೋಗಗಳನ್ನು ತಡೆಗಟ್ಟಲು ಡೈರೇಯಾಸಿಸ್ ವ್ಯಾಕ್ಸಿನ್, ಕೆಚ್ಚಲ ಬಾವು, ರೋಗ ನಿಯಂತ್ರಣ ಹಾಗೂ ಜಂತು ನಿವಾರಣೆ ಕಹಾಮ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಅಧಿಕಾರಿ/ನೌಕರರ ಸಂಘಗಳ ಬೇಡಿಕೆಗಳು

1. 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕಹಾಮ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳಿ ಯಥಾವತ್ತಾಗಿ ಪೂರ್ಣ ಜಾರಿಗೆ ತರುವುದು.

2. 1984 ರಲ್ಲಿ ಸರ್ಕಾರ, ಕೆಡಿಡಿಸಿ(ಕೆಎಂಎಫ್), ಎನ್‌ಡಿಡಿಬಿ ಅಧಿಕಾರಿಗಳನ್ನು ಒಳಗೊಂ ಸಮಿತಿ(Tri-party) ರಚಿಸಿ ಕಹಾಮದ ಅಧಿಕಾರಿ/ನೌಕರರಿಗೆ ವೇತನಕ್ಕೆ ಸಂಬಂಧಿಸಿ ಆಗಿರು ಒಡಂಬಡಿಕೆಯಂತೆ DA, HRA, CCA ಇತ್ಯಾದಿ ಸೇರಿದಂತೆ ಕಾಲಕಾಲಕ್ಕೆ ಸರ್ಕಾರ ಹೊರಡಿಸುತ ಆದೇಶಗಳಂತೆ ಜಾರಿಗೊಳಿಸಬೇಕಿದೆ.


3. ಹಿಂದೆ ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯವು W.P NO 10773/1988 ಮತ್ತು W.P.NC 11942/1988 ರಲ್ಲಿ ನೀಡಿರುವ ಆದೇಶದಲ್ಲಿನ ಅನುಬಂಧಗಳಂತೆ, As per prevailing practice the Salary, Pay Scales DA, HRA, CCA and other emoluments should be paid/Increased as per the Government Notification

4. ಕರ್ನಾಟಕ ಸಹಕಾರಿ ಕಾಯ್ದೆ-1959ರ ಪ್ರಕರಣ 28(C) ರಡಿ ವೇತನ ಮತ್ತು ಭತ್ಯೆಗಳನ್ನು ಮಂಜೂರು ಮಾಡುವ ದತ್ತವಾದ ಅಧಿಕಾರ ಆಡಳಿತ ಮಂಡಳಿಗೆ ಇರುತ್ತದೆ. ಡೇರಿ/ಘಟಕವು Industrial Act ನಂತೆ ಕೆಲಸ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಮಂಡಳಿ/ನಿಗಮಗಳಿಗಿದ್ದಂತೆ, ವಾರ್ಷಿಕ ಲಾಭ/ನಷ್ಟ ಮಾತ್ರ ವೇತನ ಮತ್ತು ಭತ್ಯೆಗಳ

ಪರಿಷ್ಕರಣೆಗೆ ಪರಿಗಣಿಸಬೇಕು.

15. ಕಹಾಮ/ಒಕ್ಕೂಟದ ಆಡಳಿತ ಮಂಡಳಿ ಸಭೆಗಳಲ್ಲಿ ಸರ್ಕಾರದ ಪ್ರತಿನಿಧಿಗಳಾದ 1. RCS ಪ್ರತಿನಿದಿ 2. ಪಶು ಸಂಗೋಪನೆ 3. NDDB ಪ್ರತಿನಿಧಿ ಇರುವುದರಿಂದ, ಕಾಲಕಾಲಕ್ಕೆ ಸರ್ಕಾರದಿಂದ ಬಿಡುಗಡೆ ಮಾಡುವ ವೇತನ ಮತ್ತು ಭತ್ಯೆಗಳ ಅನುಮೋದನೆಯ ಅಧಿಕಾರ ಕಹಾಮದ ಆಡಳಿತ ಮಂಡಳಿಗೆ ನೀಡಬೇಕು.

ಅದರಂತೆ ಕಹಾಮ ಸೇರಿದಂತೆ ಜಿಲ್ಲಾ ಹಾಲು ಒಕ್ಕೂಟಗಳಿಗೂ ಸಹ ಕಹಾಮದಿಂದ ಆದೇಶವಾಗಬೇಕು.

6. ಕಹಾಮ/ಒಕ್ಕೂಟದ ಉನ್ನತ ಹುದ್ದೆಗಳಾದ ವ್ಯ.ನಿ ಹುದ್ದೆಗಳಿಗೆ ಕಹಾಮದಲ್ಲಿ ಕೆಲಸ ನಿರ್ವಹಿಸಿದ ತಾಂತ್ರಿಕ ಹಿನ್ನೆಲೆಯುಳ್ಳ ಅಥವಾ ಡೇರಿ ಉದ್ದಿಮೆಯಲ್ಲಿ ಅನುಭವವುಳ್ಳ ನಿರ್ದೇಶಕ ಹುದ್ದೆಗಳಿಗೆ ಮಾತ್ರ ಸೀಮಿತ ಮಾಡಬೇಕು ನೀಡಲಾಗುತ್ತಿದೆ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation