ಕೆಎಂಎಫ್ ನೌಕರರ ಬೇಡಿಕೆ ಈಡೇರಿಕೆಗೆ ಫೆಬ್ರವರಿ ಮೊದಲ ವಾರದವರೆಗೆ ಗಡುವು.

 ಕೆಎಂಎಫ್ ನೌಕರರ ಬೇಡಿಕೆ ಈಡೇರಿಕೆಗೆ ಫೆಬ್ರವರಿ ಮೊದಲ ವಾರದವರೆಗೆ ಗಡುವು





ಬೆಂಗಳೂರು ಜನವರಿ 31; ಕೆಎಂಎಫ್ ನಲ್ಲಿ ನೌಕರರ ವೇತನ, ಸಂಬಳ,ಭತ್ಯೆ, ಸಾರಿಗೆಯ ವ್ಯವಸ್ಥೆಯಲ್ಲಿ ತಾರತಮ್ಯ ನಡೆಯುತ್ತಿದ್ದು,ಸರ್ಕಾರಿ ನೌಕರರಿಗೆ ಇರುವ ಸೌಲಭ್ಯವಿಲ್ಲ ಸಮಾನ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎ.ಎಫ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ.


  ನೌಕರರ ಸಭೆಯ ಬಳಿಕ  ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ,ಸರ್ಕಾರಿ ನೌಕರರಂತೆ ಕೆಎಂಎಫ್ ನೌಕರರಿಗೆ ಎಲ್ಲ ರೀತಿಯ ಸೌಕರ್ಯವನ್ನು ಕಲ್ಪಿಸಿಕೊಡಬೇಕು,ಫೆಬ್ರವರಿ ಮೂರರವರೆಗೆ ಕೆಎಂಎಫ್ ಅಧ್ಯಕ್ಷರು,ವ್ಯವಸ್ಥಾಪಕ ನಿರ್ದೇಶಕರು ಗಡುವು ನೀಡಿದ್ದು ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಫೆಬ್ರವರಿ ಏಳರವರೆಗೆ ನೌಕರರು ಯಾವುದೇ ಪ್ರತಿಭಟನೆ ನಡೆಸದೇ ಮೌನರಾಗಿರುತ್ತಾರೆ,ಅಷ್ಟರೊಳಗೆ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಕೆಎಂಎಫ್ ನಲ್ಲಿ ಸರ್ಕಾರಿ ನೌಕರರು ಎರವಲು ಸೇವೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಸೌಲಭ್ಯವನ್ನು ಪಡೆಯಲಿದ್ದಾರೆ. ಅದೇ ರೀತಿ ಪೂರ್ವನ್ವಯವಾಗುವಂತೆ ಕೆಎಂಎಫ್ ನೌಕರರಿಗೆ ಏಳನೇ ವೇತನ ಆಯೋಗದ ಸವಲತ್ತುಗಳನ್ನು ಒದಗಿಸಬೇಕು,ಫೆಬ್ರವರಿ ಮೊದಲ ವಾರದೊಳಗೆ ಕೆಎಂಎಫ್ ನೌಕರರ ಬೇಡಿಕೆಗಳನ್ನು ಸರ್ಕಾರ ಪರಿಷ್ಕರಿಸಿ ಜಾರಿ ತರಬೇಕು ಎಂದು ಗಡುವು ವಿಧಿಸಿದರು.


ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಕರ್ನಾಟಕ ಹಾಲು ಮಹಾಮಂಡಳಿ ಜಾಗೂ ಜಿಲ್ಲಾ ಹಾಲು ಒಕ್ಕೂಟಗಳಿಗೆ ಯಥಾವತ್ತಾಗಿ ಪೂರ್ಣ ಜಾರಿ ತರಬೇಕು, 1984ರಲ್ಲಿ ಆಗಿರುವ ಒಡಂಬಡಿಕೆಯಂತೆ ಡಿಎ,ಹೆಚ್ ಆರ್ ಎ,ಸಿಸಿಎ ಇತ್ಯಾದಿ ಸೌಲಭ್ಯಗಳನ್ನು ಕಾಲಕಾಲಕ್ಕೆ ಸರ್ಕಾರ ಹೊರಡಿಸಿರುವ ಆದೇಶಗಳಂತೆ ಜಾರಿಗೊಳಿಸಬೇಕು,ಸರ್ಕಾರದ ಮಂಡಳಿ ನಿಗಮಗಳಲ್ಲಿ ಇದ್ದಂತೆ ವಾರ್ಷಿಕ ಲಾಭ ಮತ್ತು ನಷ್ಟ ಮಾತ್ರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ಪರಿಗಣಿಸಬೇಕು ಎಂದು ಹೇಳಿದರು.


ಕರ್ನಾಟಕ ಹಾಲು ಮಹಾಮಂಡಳಿ ಸಭೆಗಳಲ್ಲಿ ಸರ್ಕಾರದ ಪ್ರತಿನಿಧಿಗಳಾದ ಆರ್ ಸಿ ಎಸ್, ಪಶುಸಂಗೋಪನೆ, ಎನ್ ಡಿಡಿಬಿ ಪ್ರತಿನಿಧಿಗಳು ಇರುವುದರಿಂದ ಕಾಲಕಾಲಕ್ಕೆ ಸರ್ಕಾರ ಬಿಡುಗಡೆ ಮಾಡುವ ವೇತನ ಮತ್ತು ಭತ್ಯೆಗಳ ಅನುಮೋದನೆಯ ಅಧಿಕಾರವನ್ನು  ಕೆಎಂಎಫ್ ಆಡಳಿತ ಮಂಡಳಿಗೆ ನೀಡಬೇಕು ಎಂದು ಒತ್ತಾಯಿಸಿದರು.


ಕರ್ನಾಟಕ ಹಾಲು ಮಂಡಳಿ  ಒಕ್ಕೂಟದ ಉನ್ನತ ಹುದ್ದೆಗಳಾದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗಳಿಗೆ ಕರ್ನಾಟಕ ಹಾಲು ಮಂಡಳಿಯಲ್ಲಿ ಕೆಲಸ ನಿರ್ವಹಿಸಿದ ತಾಂತ್ರಿಕ ಹಿನ್ನೆಲೆಯುಳ್ಳ ಅಥವಾ ಡೇರಿ ಉದ್ದಿಮೆಯಲ್ಲಿ ಅನುಭವವುಳ್ಳ ನಿರ್ದೇಶಕ ಹುದ್ದೆಗಳಿಗೆ ಮೀಸಲಿಡಬೇಕು ಎಂದು ಹೇಳಿದರು.


ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿದೇ ಗೌಡ,ಪ್ರಧಾನ ಕಾರ್ಯದರ್ಶಿ ಪ್ರಭು ಶಂಕರ, ಜಂಟಿ ಕಾರ್ಯದರ್ಶಿ ಪೂರ್ಣಚಂದ್ರ ತೇಜಸ್ವಿ ಮತ್ತಿತರರು ಹಾಜರಿದ್ದರು

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation