ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜಾತಿ/ಆದಾಯ ಪ್ರಮಾಣ ಪತ್ರದ ತೊಡಕುಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನಾ ಸಭೆ.

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜಾತಿ/ಆದಾಯ ಪ್ರಮಾಣ ಪತ್ರದ ತೊಡಕುಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನಾ ಸಭೆ.


ಪತ್ರಿಕಾ ಪ್ರಕಟಣೆ:- 23 ಜನವರಿ 2024 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿರುವ ಸಮಸ್ಯೆಗಳ ಕುರಿತು ಎಸ್ ಸಿ. ಎಸ್. ಎ /ಟಿ ಎಸ್ ಎ ಜಾಗೃತಿ ವೇದಿಕೆಯು ಸಮಾಲೋಚನಾ ಸಭೆಯನ್ನು ನಡೆಸುತ್ತಿದೆ.

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಇಂದು ಪಿಡುಗಾಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಅಂತ್ಯಜರು, ಶೂದ್ರರು,ಪಂಚಮರು ಮತ್ತು ಕೆಳ ಹಾಕಿಯ ಜನರೆಂದು ಶತಮಾನಗಳಿಂದ ಕರೆಯಲ್ಪಟ್ಟಿದ್ದಾರೆ. ಈ ಸಮುದಾಯಗಳು ಸಾಮಾಜಿಕ ಅಸಮಾನತೆ/ಸಮಾಜದ ಅನ್ಯಾಯ ಮತ್ತು ದಬ್ಬಾಳಿಕೆಗೆ ಒಳಗಾಗಿ ಈ ಜಾತಿಗಳನ್ನು ಅವಮಾನದ ಸಂಕೇತವಾಗಿ ಮಾಡಿ ಊರ ಹೊರಗಡೆಯಿಟ್ಟು ಸಮಾಜದ ವಿವಿಧ ಸಾಂಸ್ಕೃತಿಕ ಆಚರಣೆಗಳಿಂದ ದೂರ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ವ್ಯವಸ್ಥೆಯಲ್ಲಿ ಅವಮಾನಕ್ಕೆ ಒಳಗಾದ ಪರಿಶಿಷ್ಟ ಜಾತಿಯ 101 ಜಾತಿಗಳೇ ಮತ್ತು ಪರಿಶಿಷ್ಟ ಪಂಗಡದ 50 ಜಾತಿಗಳನ್ನು ಎಸ್ ಸಿಜನಸಮೂಹಗಳನ್ನು ಎಸ್ ಸಿ/ಎಸ್ ಟಿ ಸಮುದಾಯಗಳೆಂದು ಭಾರತದ ಸಂಸದೀಯ ವ್ಯವಸ್ಥೆ ಅಂಗೀಕರಿಸುತ್ತದೆ.

1.ಕೊಳಗೇರಿಗಳಲ್ಲಿ ಅನೇಕರು ಒಂಟಿ ಮಹಿಳೆಯರು,ವಿಧವೆಯರು, ಗಂಡ ಬಿಟ್ಟ ಹೆಣ್ಣು ಮಕ್ಕಳು, ಶೋಷಣೆಗೊಳಪಟ್ಟ ಹೆಣ್ಣು ಮಕ್ಕಳು, ವಿಚ್ಛೇದಿತ ಮಹಿಳೆಯರ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ನೀಡಲು ತಂದೆಯ ಶಾಲಾ ದಾಖಲಾತಿಗಳನ್ನು ಕೇಳಲಾಗುತ್ತಿದೆ. ಒಂಟಿಯಾಗಿ ಬದುಕುತ್ತಿರುವ ಹೆಣ್ಣು ಮಕ್ಕಳಗೆ ಇದನ್ನು ಒದಗಿಸುವುದು ಕಷ್ಟವಾಗಿದೆ.

2.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯಲು ಶೈಕ್ಷಣಿಕ ದಾಖಲೆಗಳು ಟಿಸಿ ಕೇಳಿರುವುದು ಅನಕ್ಷರಸ್ಥರಾದ ಕೊಳಗೇರಿ ನಿವಾಸಿಗಳಿಗೆ ಕಷ್ಟವಾಗುತ್ತಿದೆ ಮತ್ತು ಸರಕಾರದ ಆದೇಶದ ಪ್ರಕಾರ ಸ್ಥಳ ಮಹಜರು ಮಾಡಿ ಪ್ರಮಾಣ ಪತ್ರ ನೀಡಬೇಕೆನ್ನುವುದನ್ನು ಯಾವ ಅಧಿಕಾರಿಗಳು: ಪಾಲಿಸುತ್ತಿಲ್ಲ ಆದೇಶದ ಪ್ರಕಾರ ಅಧಿಕಾರಿಗಳೇ ಸ್ಥಳ ಮಹಜರು ಮಾಡಿ ಪ್ರಮಾಣ ಪತ್ರ ನೀಡಬೇಕು.

3.ಜಾತಿ ಪ್ರಮಾಣ ಪತ್ರದಲ್ಲಿ ಮೂಲ ಜಾತಿಗಳನ್ನು ಹಾಕದೇ(ಮಾದಿಗ/ಹೊಲೆಯ) ಇರುವ ಕಾರಣ ನಿಗಮಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಜಾತಿ ಪ್ರಮಾಣ ಪತ್ರದಲ್ಲಿ ಮೂಲ ಜಾತಿಯ ಹೆಸರನ್ನು ಕಡ್ಡಾಯವಾಗಿ ಹಾಕುವಂತೆ ಆದೇಶ ಹೊರಡಿಸಬೇಕು.

4.ಅನ್ಯಧರ್ಮೀಯ ಹೆಸರುಗಳನ್ನು ಇಟ್ಟುಕೊಂಡಿರುವ ಕಾರಣ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಭಾರತ ಸಂವಿಧಾನದ ಪರಿಚ್ಛೇದದ 19ರಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರದ ಭಾಗವಾಗಿ ಕೊಳಗೇರಿಗಳಲ್ಲಿ ಕೆಲವರು ಅನ್ಯ ಧರ್ಮದ ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ, ಆದರೆ ಅವರ ಆಚಾರ ವಿಚಾರಗಳೆಲ್ಲವೂ ಮೂಲ ಜಾತಿಗೆ ಸೇರಿದ್ದಾಗಿರುತ್ತದೆ.ಆಗಾಗಿ ಹೆಸರಿನ ಕಾರಣಕ್ಕೆ ಜಾತಿ ಪ್ರಮಾಣ ನೀಡಲು ನಿರಾಕರಿಸದಂತೆ ತಹಶೀಲ್ದಾರ್ ಅವರಿಗೆ ಸೂಚಿಸಬೇಕು.

5.ಒಂದೇ ಕುಟುಂಬದ ತಂದೆ ಮತ್ತು ಮಕ್ಕಳಿಗೆ ಬೇರೆ ಬೇರೆ ಆದಾಯ ಪ್ರಮಾಣ ಪತ್ರವನ್ನು ಅವೈಜ್ಞಾನಿಕವಾಗಿ ನೀಡಲಾಗುತ್ತಿದೆ, ಆದ್ದರಿಂದ ಕುಟುಂಬದ ಮುಖ್ಯಸ್ಮರ ಆದಾಯವನ್ನು ಪರಿಗಣಿಸಿ ಶೈಕ್ಷಣಿಕ ಯೋಜನೆಗಳನ್ನು ನೀಡಬೇಕು.

6.ನಾಡಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವವರಿಗೆ ಒಂದಲ್ಲಾ ಒಂದು ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಆದರೆ ದಾಖಲಾತಿಗಳೇ ಇಲ್ಲದೇ ಇದ್ದರೂ ಮಧ್ಯವರ್ತಿಗಳ ಅರ್ಜಿ ಪಡೆದು ಜಾತಿ ಪ್ರಮಾಣ ನೀಡಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಪಲಾನುಭವಿಗಳಿಂದ ನೇರವಾಗಿ ಅರ್ಜಿ ಪಡೆದು ಪರಿಶೀಲಿಸಿ ಕೂಡಲೇ ಪ್ರಮಾಣ ಪತ್ರವನ್ನು ನೀಡಬೇಕು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು

ಜನವರಿ 23 ರಂದು ಜಾತಿ ಪ್ರಮಾಣ ಪತ್ರ ಪಡೆಯಲು ತೊಂದರೆ ಪಡುತ್ತಿರುವರು ವೈಯಕ್ತಿಕವಾಗಿ ತೊಂದರೆಗಳ ಬಗ್ಗೆ, ಹಂಚಿಕೊಳ್ಳುತ್ತಿದ್ದಾರೆ ಮತ್ತು ಸಮಸ್ಯೆಗಳಿಗೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಪರ್ಯಾಯ ಪರಿಹಾರವನ್ನು ಒದಗಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ.

ಸಂಘಟನೆಗಳು-ದಲಿತ ಬಹುಜನ ಚಳುವಳಿ-ವೆಂಕಟೇಶ್ 9900212279, ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ, ಮೀನಾ-9738307050, ಪದ್ಮಾವತಿ-9241377142, ದಕ್ಷ ಸಮೂಹ ಸಂಘಟನೆ- 영, 2-9591557585, 2-9986526086, ಮಂಜುಳ-9019409003, ಸುಬ್ಬಲಕ್ಷ್ಮಿ-9986238822, ಗಮನ ಮಹಿಳಾ ಸಮೂಹ- ಅಕಾಶ್-

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation