ಡಾ.ಸಿ.ಸೋಮಶೇಖರ ಮತ್ತು ಸರ್ವ ಮಂಗಳಾ ಸೇವಾ ಪ್ರತಿಷ್ಠಾನದಿಂದ "ಸಂಸ್ಕೃತಿ ಸಂಗಮ" ಪ್ರಶಸ್ತಿ ಪ್ರಧಾನ ಸಮಾರಂಭ
ಡಾ.ಸಿ.ಸೋಮಶೇಖರ ಮತ್ತು ಸರ್ವ ಮಂಗಳಾ ಸೇವಾ ಪ್ರತಿಷ್ಠಾನದಿಂದ "ಸಂಸ್ಕೃತಿ ಸಂಗಮ" ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರು ಅಕ್ಟೋಬರ್ 31; ಡಾ. ಸಿ. ಸೋಮಶೇಖರ ಮತ್ತು ಶ್ರೀಮತಿ ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನವತಿಯಿಂದ ಜಾನಪದ ಸಾಹಿತ್ಯ ,ವಚನ ಸಾಹಿತ್ಯ, ದಾಸ ಸಾಹಿತ್ಯ ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧಕರಿಗೆ ಜೀವಮಾನ ಸಾಧನೆಗಾಗಿ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಗಾಂಧಿ ಭವನದಲ್ಲಿಂದು ಹಮ್ಮಿಕೊಳ್ಳಲಾಗಿತ್ತು. ಜಾನಪದ ಕ್ಷೇತ್ರದಲ್ಲಿ ರಾಮನಗರದ ಕರ್ನಾಟಕ ಜಾನಪದ ಪರಿಷತ್ತು,ವಚನ ಸಾಹಿತ್ಯ ಕ್ಷೇತ್ರದಲ್ಲಿ ಡಾ.ರಂಜಾನ್ ದರ್ಗಾ,ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕಾ.ತ.ಚಿಕ್ಕಣ್ಣ,ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿ ಶ್ರೀನಿವಾಸ ಜಿ.ಕಪ್ಪಣ್ಣ,ಸಂಗೀತ ಕ್ಷೇತ್ರದಲ್ಲಿ ಕಸ್ತೂರಿ ಶಂಕರ್ ಅವರಿಗೆ ನೀಡಿ ಗೌರವಿಸಲಾಯಿತು. ಸುತ್ತೂರು ಮಠದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿ,ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು. ಸಂಸ್ಕೃತಿ ಸಂಗಮ ವಿಶೇಷ ಸಂಚಿಕೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಿಡುಗಡೆ ಮಾಡಲಿದ್ದು,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಿದ್ದರು, ಪ್ರತಿಷ್ಠಾನ ಅಧ್ಯಕ್ಷ ಡಾ....