ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ

ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರಾದ ಶ್ರೀ ಪ್ರೀಯಾಂಕ ಖರ್ಗೆ ರವರು ಇತ್ತೀಚೆಗೆ ಸರ್ಕಾರಿ ಕಾಲೇಜು/ಶಾಲೆ, ಅನುಧಾನಿತ ಶಾಲೆಗಳ ಮೈದಾನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಾ (ಆರ್.ಎಸ್,ಎಸ್) ನ ಶಾಖಾ ಬೈಟೆಕ್ ಗಳನ್ನು ನಿರ್ಬಂದಿಸುವಂತೆ ಮಾನ್ಯ ಮುಖ್ಯಮಂತ್ರಿರವರಿಗೆ ಬರೆದಿರುವ
ಪತ್ರವು ಸಂವಿಧಾನಬದ್ಧವಾಗಿರುವುದನ್ನು ಸಮಿತಿಗಳು ಸ್ವಾಗತಿಸುತ್ತದೆ. ಆದರೆ, ಮನುವಾದಿ ಮನಸ್ಥಿತಿಯ ಅಲ್ಪಜ್ಞಾನಿಗಳಾದ ಕೆಲವು ಮುಖಂಡರುಗಳು ಆರ್.ಎಸ್.ಎಸ್ ನ್ನು ನಿಷೇದಿಸಲು ಹೇಳಿಕೆ ನೀಡಿರುವುದಾಗಿ ತಪ್ಪು ಕಲ್ಪನೆಯಿಂದ ಹೇಳಿಕೆ ನೀಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಗವಾಯಿ ರವರ ತಾಯಿರವರನ್ನು ಆರ್.ಎಸ್.ಎಸ್ ನ 100 ವರ್ಷಗಳ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದು, ಅವರು ನಾನು ಬೌದ್ಧ ಧರ್ಮದ ಅನುಯಾಯಿಯಾಗಿದ್ದು, ಸದರಿ ಆರ್.ಎಸ್.ಎಸ್ ನ 100 ವರ್ಷಗಳ ಆಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರ ಮನವಿಯನ್ನು ತಿರಸ್ಕರಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಮನುವಾದಿಯಾದ ವಕೀಲ ಶ್ರೀ ಕಿಶೋರ್ ರವರು ಮಾನ್ಯ ಮುಖ್ಯ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯ ಇವರ ಮೇಲೆ ಶೂ ಎಸೆದಿರುವ ಪ್ರಕರಣದಲ್ಲಿ ಯಾವುದೇ ಆರ್.ಎಸ್.ಎಸ್ ನ ಮುಖಂಡರುಗಳು ಖಂಡಿಸದಿರುವುದು ವಿಷಾದನೀಯವಾಗಿದೆ ಹಾಗೂ ಇದು ಸಂವಿಧಾನ ವಿರೋದಿ ನಡೆಯಾಗಿರುತ್ತದೆ.
ಸಂವಿಧಾನದ ಆಶಯಗಳನ್ನು ಈಡೇರಿಸಲು ಸದಾ ಬಯಸುವ ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ ಪ್ರೀಯಾಂಕ ಖರ್ಗೆ ರವರ ಹೇಳಿಕೆಯನ್ನು ಸ್ವಾಗತಿಸುತ್ತಾ ಮನುವಾದಿಗಳ ಕೃಪಾ ಪೋಷಿತ ನಾಟಕ ಮಂಡಳಿಯ ರಾಷ್ಟ್ರ ಮತ್ತು ರಾಜ್ಯ ನಾಯಕರುಗಳ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಅಂತಿಮವಾಗಿ ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀ ಪ್ರೀಯಾಂಕ ಖರ್ಗೆ ಸಚಿವರು ಇವರ ಸಂವಿಧಾನ ರಕ್ಷಿಸುವ ವೈಜ್ಞಾನಿಕ ಚಿಂತನೆಯ ಅಭಿಪ್ರಾಯಕ್ಕೆ ಸಮಿತಿಗಳು ಸಹಮತ ವ್ಯಕ್ತಪಡಿಸುತ್ತಾ ಸಂವಿಧಾನ ರಕ್ಷಣೆಯಲ್ಲಿ ಎಲ್ಲಾ ಪ್ರಜೆಗಳು/ ನಾಗರೀಕರುಗಳು ಕೈಜೋಡಿಸುವಂತೆ ಸಮಿತಿಗಳು ವಿನಮ್ರವಾಗಿ ವಿನಂತಿಸಿದೆ.

Comments
Post a Comment