ನವೆಂಬರ್‌ 1ರಂದು ಲಿಂಗೈಕ್ಯ ಬೋವಿ ಶರಣಬಸಪ್ಪ ಅಪ್ಪಂಗಳ ಮಹಾಸ್ವಾಮಿ16ನೇ ವರ್ಷದ ಪುಣ್ಯಸ್ಮರಣೆ ಆಚರಣೆಗೆ ಕರೆ.

 ನವೆಂಬರ್‌ 1ರಂದು ಲಿಂಗೈಕ್ಯ ಬೋವಿ ಶರಣಬಸಪ್ಪ ಅಪ್ಪಂಗಳ ಮಹಾಸ್ವಾಮಿ16ನೇ ವರ್ಷದ ಪುಣ್ಯಸ್ಮರಣೆ ಆಚರಣೆಗೆ ಕರೆ

  .  ಪಬ್ಲಿಕ್ ರಿಪೋರ್ಟ್ ನ್ಯೂಸ್  ಬೆಂಗಳೂರು ಅಕ್ಟೋಬರ್ 30;  ನವೆಂಬರ್‌ ಒಂದರಂದು ಪುಲಿಂಗೈಕ್ಯ ಶರಣಬಸವ ಮಹಾಸ್ವಾಮಿಭೋವಿ ಗುರುಪೀಠ ಕಾರಿಹಳ್ಳ ಬಾಗಲಕೋಟ ಶ್ರೀಗಳ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ ಶರಣ ಬಸವ ಅಪ್ಪಂಗಳವರ ಆಶ್ರಮ ಕರೆ ನೀಡಿದೆ.


ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶ್ರೀ ಮ.ನಿ. ಪ್ರ ಲಿಂಗೈಕ್ಯ ಶರಣಬಸವ ಮಹಾಸ್ವಾಮಿಗಳ ಸುಪುತ್ರ ಸಂಗಮಶ್ ಮಾತನಾಡಿ,

ಶ್ರೀಗಳು ಅಸಂಘಟಿತವಾದ ಸಮಾಜವನ್ನು ಸಂಘಟಿಸಿದ ಮಹಾಯೋಗಿ, ದೀಪದಿಂದ ದೀಪ ಹಚ್ಚಿದ ಕಾಯಕಯೋಗಿ ಕಲ್ಲು ಬಂಡೆ ಹೊಡೆಯುವವರ ಬದುಕಿಗೆ ದಾರಿ ದೀಪವಾಗಿ ಅಕ್ಷರಸ್ಮರನ್ನಾಗಿ ಮಾಡಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಹಾಪೂಜ್ಯರಾಗಿದ್ದು, ಪಾದರಸದಂತೆ ಚಲಿಸಿ ಸಮಾಜದ ಸುಧಾರಣೆಗಾಗಿ ಜನರ ಹತ್ತಿರಕ್ಕೆ ತಾವೆ ಹೋಗಿ ಅವರ ಮಧ್ಯದಲ್ಲಿ ಬೆರೆತು ಅವರ ಮಕ್ಕಳಿಗೆ ಶಿಕ್ಷಣ ಸಾಮಾಜಿಕ ಸುಧಾರಣೆಗಾಗಿ ತಿಳುವಳಿಕೆ ನೀಡುತ್ತಿದ್ದರು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಾ ಹೆಜ್ಜೆ ಹೆಜ್ಜೆಗೂ ಸಮುದಾಯಕ್ಕೆ ಸದಾಕಾಲವೂ ಮಾರ್ಗದರ್ಶಿಗಳಾಗಿ ನಿಂತವರು, ಸಕಲ ಸಮುದಾಯದ ವಿದ್ಯಾರ್ಥಿಗಳಿಗೆ ಗುರುಪೀಠದಲ್ಲಿ ದಿನನಿತ್ಯ ದಾಸೋಹ ಕಾರ್ಯವನ್ನು ನಿರಂತರವಾಗಿ ಕಾರ್ಯರೂಪಕ್ಕೆ ಮಹಾ ಪುರುಷರಾಗಿದ್ದಾರೆ ಎಂದು ಹೇಳಿದರು.


ರಾಜಕೀಯ ಕ್ಷೇತ್ರದ ಎಲ್ಲಾ ಸಮಾಜ ಬಾಂಧವರನ್ನು ಒಂದುಗೂಡಿಸಿ ಸಮಾಜದ ಮಾರ್ಗಸೂಚಕರಾಗಿ ನಮ್ಮನ್ನು ಒಗ್ಗೂಡಿಸಿದ ಮಹಾ ಸತ್ಪುರುಷ ಭೋವಿ ಸಮಾಜದ ಪ್ರತಿ ಮನೆ ಮನೆಗಳಲ್ಲಿ ಮನತಲುಪುವಂತೆ ಧಾರ್ಮಿಕ ಕ್ರಾಂತಿಯನ್ನು ಮಾಡಿದ ಪೂಜ್ಯಶ್ರೀಗಳು

ಸಮಾಜಕ್ಕೆ ಮಾರಕವಾದ ನರಹತ್ಯೆ, ಪ್ರಾಣಿಬಲಿ, ದುಶ್ಚಟ ಗಳಂತ ವ್ಯಸನಿ ಗಳನ್ನು ಇಲಕಲ್ ಪೀಠದ ಮಹಾಂತ ಶಿವಯೋಗಿಗಳಿಂದ ಪ್ರೇರಣೆ ಪಡೆದು ಸಮಾಜದ ಪ್ರತಿಯೊಬ್ಬರಿಂದ ತ್ಯಾಗ ಮಾಡಲು ಪಣತೊಟ್ಟವರು.16ನೇ ವರ್ಷದ ಪುಣ್ಯ ಸ್ಮರಣೆಯನ್ನು ದೀಪದಿಂದ ದೀಪ ಹಚ್ಚುವ ಮೂಲಕ ಇಡೀ ರಾಜ್ಯದ ಎಲ್ಲಾ ಗ್ರಾಮದ ತಾಲೂಕು ಕೇಂದ್ರಗಳಲ್ಲಿ ವಚನ ಜ್ಯೋತಿ ರಥ ಯಾತ್ರೆ ಯನ್ನು ಆಯೋಜಿಸಿದ ಮಹಾನ್ ಶಿವ ಶರಣರು ಭೋವಿ ಸಮಾಜದ ವನ್ನು ಸಂಘಟಿಸಿದವರು ಪೂಜ್ಯರು ಪೂರ್ವ ಆಶ್ರಮ ದಲ್ಲಿ ಶ್ರಾವಣ ಮಾಸದ ನಿಮಿಥ್ಯ ಶಿವಣ ಜಪದ ಮೂಲಕ ನಿರಂತರವಾಗಿ ಪ್ರತಿ ವರ್ಷದಲ್ಲಿ 3 ತಿಂಗಳು 6ತಿಂಗಳು ಹೀಗೆ 3 ರಿಂದ 4 ವರ್ಷಗಳ ಕಾಲ ಉಪವಾಸ ತಪಸ್ಸಿನಲ್ಲಿ ತೊಡಗಿಸಿಕೊಂಡ ಮಹಾ ಯೋಗಿಗಳ ಇವರಾಗಿದ್ದರು,ಆದ್ದರಿಂದ ಇವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ನವಂಬರ್ ಒಂದರಂದು ಆಚರಿಸಬೇಕೆಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ಎಲ್,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವೆಂಕಟರಮಣಪ್ಪ, ಆನಂದ ಸಿ.ತಿರುಮಲ,ರಂಗನಾಥ್ ಲಕ್ಷ್ಮಣ ವಡ್ಡರ,ಸತೀಶ್ ಬಾಬು,ಗೌತಮ್ ವೆಂಕಿ ಮತ್ತಿತರರು ಹಾಜರಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims