ಮಹಿಳೆಯರ ಘನತೆ, ವ್ಯಕ್ತಿತ್ವ ಹಾಗೂ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ನೀಡಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕ ಮುನಿರತ್ನ ವಿರುದ್ಧ ದೂರು.
ಮಹಿಳೆಯರ ಘನತೆ, ವ್ಯಕ್ತಿತ್ವ ಹಾಗೂ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ನೀಡಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕ ಮುನಿರತ್ನ ವಿರುದ್ಧ ದೂರು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 12.10.2025 ರಂದು ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತಕ್ಕೆ ಒಳಪಡುವ ಜೆಪಿ ಪಾರ್ಕ್ ಉದ್ಯಾನದಲ್ಲಿ ಸಾರ್ವಜನಿಕ ಕುಂದು ಕೊರತೆ ಆಲಿಸುವ ಸಭೆಯನ್ನು ಏರ್ಪಡಿಸಲಾಗಿತ್ತು. ಸದರಿ ಸಭೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಸಾರ್ವಜನಿಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪರಾಜಿತ ಅಭ್ಯರ್ಥಿಗಳಾದ ಶ್ರೀಮತಿ ಕುಸುಮ ವಿಚ್ ಅವರು ಕೂಡ ಸಾರ್ವಜನಿಕರ ಸಾಲಿನಲ್ಲಿ ವೇದಿಕೆ ಮುಂಭಾಗ ಕೂತಿದ್ದರು. ಮಾನ್ಯ ಉಪ ಮುಖ್ಯಮಂತ್ರಿಗಳು ಸ್ಥಳೀಯ ಶಾಸಕ ಮುನಿರತ್ನ ಅವರನ್ನು ವೇದಿಕೆಗೆ ಆಹ್ವಾನಿಸಿದಾಗ ಅವರು ಉಪಮುಖ್ಯಮಂತ್ರಿ ಗಳಿಂದ ಮೈಕ್ ಕಸಿದುಕೊಂಡು, ಕಾರ್ಯಕ್ರಮದಲ್ಲಿ ಗದ್ದಲ ಉಂಟುಮಾಡಿದರು. ನಂತರ ಮಾಧ್ಯಮದಲ್ಲಿ ಈ ಘಟನೆಗೆ ಕಾರಣ ಕಾರ್ಯಕ್ರಮದಲ್ಲಿದ್ದ ಕುಸುಮ ಅವರೇ ಕಾರಣ ಅವರ ಐಡೆಂಟಿಟಿ ಏನು ಆಕೆ ಡಿ.ಕೆ ಸುರೇಶ್ ಡಿ.ಕೆ ಶಿವಕುಮಾರ್ ಅವರಿಗೆ ಏನಾಗಬೇಕು ಅವರ ಗಂಡ ಡಿ.ಕೆ ರವಿ ಸತ್ತಿದ್ದರಿಂದಲೇ ಇವತ್ತು ಈ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಹೆಣ್ಣಾಗಿ ಕೀಳು ಮಟ್ಟಕ್ಕೆ ಇಳಿದಿದ್ದಾಳೆ ಎಂದು ಅವಹೇಳನಕಾರಿಯಾಗಿ ಸಾರ್ವಜನಿಕವಾಗಿ ಒಬ್ಬ ಮಹಿಳೆಯ ಮಾನಕ್ಕೆ ಧಕ್ಕೆ ಉಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ. ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳನ್ನು ದುರುದ್ದೇಶದಿಂದ ಅವರ ಅವರ ಘನತೆ ಕುಗ್ಗಿಸುವ ಮತ್ತು ಸಂವಿಧಾನದ ಹಕ್ಕುಗಳನ್ನು ಕಸಿಯುವ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ಪದೇ ಪದೇ ಮಹಿಳೆಯರನ್ನು ಅವಹೇಳನ ಮಾಡುತ್ತಿರುವ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

Comments
Post a Comment