ಭಾರತ್ ಸ್ಕೌಟ್ಸ್ ಅಂಡ್ ಗೈಡ್ ನಿಂದ ಡಿಸೆಂಬರ್ ನಲ್ಲಿ ಶಿರಸಿಯಲ್ಲಿ ಜಾಂಬೊರೇಟ್;ಜನವರಿಯಲ್ಲಿ ರಾಷ್ಟ್ರೀಯ ಐಕ್ಯತಾ ಶಿಬಿರ
ಭಾರತ್ ಸ್ಕೌಟ್ಸ್ ಅಂಡ್ ಗೈಡ್ ನಿಂದ ಡಿಸೆಂಬರ್ ನಲ್ಲಿ ಶಿರಸಿಯಲ್ಲಿ ಜಾಂಬೊರೇಟ್;ಜನವರಿಯಲ್ಲಿ ರಾಷ್ಟ್ರೀಯ ಐಕ್ಯತಾ ಶಿಬಿರ
ಬೆಂಗಳೂರು ಅಕ್ಟೋಬರ್ 10; ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಕಿತ್ತೂರು ಕರ್ನಾಟಕ ಜಾಂಬೋರೇಟ್ ಡಿಸೆಂಬರ್ ತಿಂಗಳಲ್ಲಿ ಶಿರಸಿಯಲ್ಲಿ ನಡೆಯಲಿದೆ,ದಕ್ಷಿಣ ಕನ್ನಡದ ಮೂಡಬಿದರೆಯಲ್ಲಿ ರಾಷ್ಟ್ರೀಯ ಮಟ್ಟದ ರೊಬೋಟಿಕ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕುರಿತ ಯುವ ಉದ್ಯಮಿಗಳ ಕಾರ್ಯಾಗಾರ ಆಯೋಜಿಸಲಾಗಿದೆ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂದ್ಯಾ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ 2026ರ ಜನವರಿ 22ರಿಂದ 26ರವರೆಗೆ ರಾಷ್ಟ್ರೀಯ ಐಕ್ಯತಾ ಶಿಬಿರ ಹಮ್ಮಿಕೊಳ್ಳಲಾಗಿದೆ,ಕಳೆದ 8 ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರಪತಿ ಪ್ರಶಸ್ತಿ ವಿತರಣಾ ಸಮಾರಂಭ ಪುನರಾರಂಭಗೊಂಡಿದ್ದು, 2016ನೇ ಸಾಲಿಗೆ ನಮ್ಮ ರಾಜ್ಯದಿಂದ 340 ವಿದ್ಯಾರ್ಥಿಗಳು "ರಾಷ್ಟ್ರಪತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ, 2024-25ನೇ ಸಾಲಿನ 6 ತಿಂಗಳ ಕಾಲಾವಧಿಯಲ್ಲಿ ಮಕ್ಕಳು ಮತ್ತು ಶಿಕ್ಷಕರುಗಳಿಗಾಗಿ ಸಮಾಜಮುಖಿ ಕಾರ್ಯಕ್ರಮ, ತರಬೇತಿ ಮತ್ತು ಚಟುವಟಿಕೆಗಳನ್ನು ಸಂಘಟಿಸಿ, ರಾಜ್ಯದಾದ್ಯಂತ ಸ್ಕೌಟ್ ಅಂಡ್-ಗೈಡ್ಸ್ ಚಳವಳಿಯ ಸಕ್ರಿಯ ಅನುಷ್ಟಾನಕ್ಕೆ ಕಾರ್ಯೋನ್ಮುಖರಾಗುತ್ತಿದ್ದೇವೆ ಎಂದು ಹೇಳಿದರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯು ಶತಮಾನೋತ್ಸವ ಆಚರಿಸಿರುವ ಸಂಸ್ಥೆಯಾಗಿದ್ದು, ಕಳೆದ 118 ವರ್ಷಗಳಿಂದ ಮಕ್ಕಳ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿ, ಜೀವನ ಶಿಕ್ಷಣ, ಕೌಶಲ್ಯಾತ್ಮಕ ತರಬೇತಿ, ಮಾನವೀಯ ಮೌಲ್ಯಗಳ ಶಿಕ್ಷಣ ನೀಡಿ, ಸ್ಥಳೀಯ ಹಂತದಿಂದ ಅಂತರಾಷ್ಟ್ರೀಯ ಹಂತದವರೆಗೆ ಬೆಳೆಸಿ, ವ್ಯಕ್ತಿತ್ವ ವಿಕಸನದೊಂದಿಗೆ ರಾಷ್ಟ್ರದ ಉತ್ತಮ ನಾಗರೀಕರನ್ನು ರೂಪಿಸುತ್ತಿದೆ,ರೋವರ್ಸ್-ರೇಂಜರ್ಸ್ ವಿದ್ಯಾರ್ಥಿಗಳು ರಾಜ್ಯಾದ್ಯಂತ ಆಯೋಜನೆಯಾಗುವ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಾದ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗದಿನ. ರಾಷ್ಟ್ರೀಯ ಯುವದಿನ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆ, ಸದ್ಭಾವನಾ ದಿನಾಚರಣೆ, ಪಲ್ಸ್ ಪೋಲಿಯೋ, ಸಾರ್ವತ್ರಿಕ ಚುನಾವಣೆಗಳು ಹಾಗೂ ಸಮುದಾಯ ಸೇವಾ ಶಿಬಿರಗಳು, ರಕ್ತದಾನ ಶಿಬಿರಗಳಲ್ಲಿ ಶ್ಲಾಘನೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸ್ಕೌಟ್ಸ್ ಅಂಡ್ ಗೈಡ್ ಸೇವಾ ಕಾರ್ಯಾಚರಣೆಗಳಿಗೆ ಅಗತ್ಯ ಅನುದಾನ ಒದಗಿಸುತ್ತಿದ್ದು ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ತಿಳಿಸಿದರು.

Comments
Post a Comment