Posts

Showing posts from March, 2025

ಪದ್ಮ ಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ, ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ನರಸಪ್ಪ ದಂಡೋರ ಒಳ ಮೀಸಲಾತಿ ಜಾರಿ ಮಾಡಲೇಬೇಕೆಂದು ಪತ್ರಿಕಾ ಪ್ರಕಟಣೆ ಮಾಡಿದರು

Image
ಪದ್ಮ ಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ, ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ನರಸಪ್ಪ ದಂಡೋರ  ಒಳ ಮೀಸಲಾತಿ ಜಾರಿ ಮಾಡಲೇಬೇಕೆಂದು ಪತ್ರಿಕಾ  ಪ್ರಕಟಣೆ ಮಾಡಿದರು  ಪದ್ಮ ಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ, ಮಾದಿಗ ದಂಡೋರ(MRPS) ನಾಯಕತ್ವದಲ್ಲಿ ಸತತ 8ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅನಾರೋಗ್ಯದ ಮಧ್ಯೆಯೂ ಮೊನ್ನೆ ದಿನಾಂಕ: 10/03/2025 ರಂದು ಮಾದಿಗ ದಂಡೋರ(MRPS) ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರರವರು ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳ ನಿಯೋಗವನ್ನು ಭೇಟಿ ಮಾಡಲು ತಮ್ಮ ಗೃಹ ಕಛೇರಿಗೆ ಆಹ್ವಾನಿಸಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮಾದಿಗ ದಂಡೋರ MRPS ರಾಜ್ಯ ಸಮಿತಿಯನ್ನು ತಮ್ಮ ಬೇಡಿಕೆಗಳ ಕುರಿತು ಚರ್ಚಿಸಿ ಮನವಿ ಪತ್ರವನ್ನು ಸಲ್ಲಿಸಿದರು. ಪ್ರಮುಖ ಬೇಡಿಕೆಗಳು: ೧) ಸಾಮಾಜಿಕ ನ್ಯಾಯಕ್ಕಾಗಿ ಮುವ್ವತ್ತು ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮತ್ತು ಸುಪ್ರೀಂ ಕೋರ್ಟ್ ತೀರ್ಪಿಗೆ ಮನ್ನಣೆ ನೀಡಿ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ಆಯೋಗದಿಂದ ಮಧ್ಯಂತರ ವರದಿ ತರಿಸಿಕೊಂಡು ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳಿಗೆ 6% ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು. 9) ಒಳಮೀಸಲಾತಿ ಜಾರಿಯಾಗುವ ವರೆಗೆ ಯಾವುದೇ ಕಾರಣಕ್ಕೂ ಎಸ್ಪಿ ಬ್ಯಾಕ್ ಲಾಗ್ ಹು...

ಪ್ರೆಸ್ ಕ್ಲಬ್ ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರ ಸಮಿತಿ (ರಿ) ವತಿಯಿಂದ ಅಧ್ಯಕ್ಷರಾದ ಗಾಯತ್ರಿ ಚಂದ್ರಶೇಖರ್ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಮುಂತಾದವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ.

Image
 ಪ್ರೆಸ್ ಕ್ಲಬ್ ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರ ಸಮಿತಿ  (ರಿ) ವತಿಯಿಂದ ಅಧ್ಯಕ್ಷರಾದ ಗಾಯತ್ರಿ ಚಂದ್ರಶೇಖರ್ ಉಪಾಧ್ಯಕ್ಷರಾದ ಶ್ರೀ ಮಂಜುನಾಥ    ಮುಂತಾದವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ. ಅಕ್ಕಸಾಲಿಗ ಸಮುದಾಯದ ಬಗ್ಗೆ ಆರ್ ಆರ್ ಗೋಲ್ಡ್ ಪ್ಯಾಲೆಸ್ ನ ಮಾಲೀಕರಾದ ರಮೇಶ್ ರವರು ಜಾಹಿರಾತಿನ ಮೂಲಕ ದಾರಿತಪ್ಪಿಸುವ ಮತ್ತು ಮಾನನಷ್ಟ ಹೇಳಿಕೆಯನ್ನು ನೀಡಿರುವುದರ ವಿರುದ್ಧ ಪತ್ರಿಕಾ ಗೋಷ್ಠಿ ಏರ್ಪಡಿಸಿರುತ್ತಾರೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ  ಆರ್ ಆರ್ ಗೋಲ್ಡ್ ಪ್ಯಾಲೇಸ್ ನ  ಮಾಲೀಕರಾದ ರಮೇಶ್ ರವರು ತಾವು ನೀಡಿದ ಜಾಹಿರಾತಿನಲ್ಲಿ ಎಲ್ಲಾ ಅಕ್ಕಸಾಲಿಗರು ಪ್ರತಿ 10 ಗ್ರಾಂ ಗೆ ಒಂದು ಗ್ರಾಂ ಚಿನ್ನವನ್ನು ವಂಚಿಸುತ್ತಾರೆ ಎಂದೂ, ಅಕ್ಕಸಾಲಿಗ ಸಮುದಾಯದ ಬಗ್ಗೆ ದಾರಿ ತಪ್ಪಿಸುವ ಮತ್ತು ಮಾನ ನಷ್ಟಕರ ಹೇಳಿಕೆಯನ್ನು ನೀಡಿರುತ್ತಾರೆ.  ನಾವು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ.   ಈ ಹೇಳಿಕೆ ಆಧಾರ ರಹಿತ ಮಾತ್ರವಲ್ಲದೆ ತಲೆಮಾರುಗಳಿಂದ ಸಾಂಪ್ರದಾಯಿಕ  ಅಕ್ಕಸಾಲಿಗ ಕೆಲಸ ಮಾಡಿಕೊಂಡು ಮೌಲ್ಯಗಳನ್ನು ಎತ್ತಿ ಹಿಡಿಯುವ ವಿಶ್ವಕರ್ಮ ಸಮುದಾಯದ ಸಮಗ್ರತೆ, ನೈತಿಕತೆ ಮತ್ತು ಕರಕುಶಲತೆಗೆ ಮಾಡಿದ ಅವಮಾನವಾಗಿದೆ. ಆದುದರಿಂದ ಈ ಕೂಡಲೆ ಆರ್ ಆರ್ ಗೋಲ್ಡ್ ಪ್ಯಾಲೆಸ್ ನ ಮಾಲೀಕರು ನಮ್ಮೆದುರಿಗೆ ಮಾದ್ಯಮದ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್...

ಗಾಣಿಗ ಸಮುದಾಯದ ಮಠಕ್ಕೆ ಅನುದಾನ ಬಿಡುಗಡೆ ತಡ: ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಸ್ವಾಮೀಜಿಗಳ ಆಕ್ರೋಶ

Image
  ಗಾಣಿಗ ಸಮುದಾಯದ ಮಠಕ್ಕೆ ಅನುದಾನ ಬಿಡುಗಡೆ ತಡ: ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಸ್ವಾಮೀಜಿಗಳ ಆಕ್ರೋಶ ಬೆಂಗಳೂರು, 10/03/2025  – ವಿಶ್ವಗಾಣಿಗ ಸಮುದಾಯ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ 3.50 ಕೋಟಿ ಅನುದಾನ ಮಂಜೂರಾತಿ ನೀಡಿದ್ದರೂ, ಸಂಪೂರ್ಣ ಮೊತ್ತ ಬಿಡುಗಡೆ ಆಗದೆ ಯೋಜನೆಗಳು ಅಡಕೆ ಬೀಳುವಂತಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುಮೋದನೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಶ್ರೀ  ಶ್ರೀ ಪೂರ್ಣನಂದಪುರಿ ಸ್ವಾಮೀಜಿಗಳು  ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು. ಸರ್ಕಾರದ ಅಸಡ್ಡೆ: ಸ್ವಾಮೀಜಿಯವರ ಪ್ರಕಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾಲದಲ್ಲಿ (2011-12) 8 ಎಕರೆ ಭೂಮಿಯೊಂದಿಗೆ 5 ಕೋಟಿ ಅನುದಾನ ಮಂಜೂರಾಗಿತ್ತು. ಈ ಅನುದಾನದ ಸಹಾಯದಿಂದ ಸಮುದಾಯ ಭವನ, ಗುರುಪೀಠ, ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣದ ಯೋಜನೆಗಳು ಹಮ್ಮಿಕೊಳ್ಳಲಾಯಿತು. ಇದನ್ನು ಮುಂದುವರಿಸಲು 2022ರಲ್ಲಿ ಸರ್ಕಾರ 3.50 ಕೋಟಿ ಬಿಡುಗಡೆ ಮಾಡಲು ಆದೇಶ ನೀಡಿತ್ತು. ಆದರೆ, ಪ್ರಸ್ತುತ ಸರ್ಕಾರ ಇದರಲ್ಲಿ ಕೇವಲ 2 ಕೋಟಿ ಹಣವೇ ಬಿಡುಗಡೆ ಮಾಡಿದ್ದು, ಉಳಿದ 1.50 ಕೋಟಿ ಅನುದಾನ ಇನ್ನೂ ಬಂದಿಲ್ಲ. ರಾಜಕೀಯ ಹಸ್ತಕ್ಷೇಪ? ಸ್ವಾಮೀಜಿಯವರ ಪ್ರಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸ...

ಹಕ್ಕಿ ಜ್ವರ ಎಚ್ಚರಿಕೆ: ಲಕ್ಷಣಗಳು, ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳು

Image
  ಹಕ್ಕಿ ಜ್ವರ ಎಚ್ಚರಿಕೆ: ಲಕ್ಷಣಗಳು, ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳು ಮಾರ್ಚ್ 5, 2025  – ವಿವಿಧ ಪ್ರದೇಶಗಳಲ್ಲಿ ಪಕ್ಷಿ ಜ್ವರ (ಪಕ್ಷಿ ಜ್ವರ) ಪ್ರಕರಣಗಳು ಹೊರಹೊಮ್ಮುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಪ್ರಾಥಮಿಕವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುವ ಈ ವೈರಸ್, ಅಪರೂಪದ ಸಂದರ್ಭಗಳಲ್ಲಿ ಮನುಷ್ಯರಿಗೆ ಸೋಂಕು ತಗುಲುತ್ತದೆ ಎಂದು ತಿಳಿದುಬಂದಿದೆ, ಇದು ಗಮನಾರ್ಹ ಆರೋಗ್ಯ ಅಪಾಯಗಳನ್ನುಂಟುಮಾಡುತ್ತದೆ. ಅತ್ಯಂತ ಸಂಬಂಧಿಸಿದ ತಳಿಗಳು – H5N1, H5N6, H5N8, ಮತ್ತು H7N9 – ಹಿಂದೆ ತೀವ್ರ ಕಾಯಿಲೆಗಳು ಮತ್ತು ಸಾವುಗಳಿಗೆ ಕಾರಣವಾಗಿವೆ. ಲಕ್ಷಣಗಳು ಮತ್ತು ಆರೋಗ್ಯ ಅಪಾಯಗಳು ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸಾಮಾನ್ಯ ಜ್ವರವನ್ನು ಹೋಲುತ್ತವೆ ಆದರೆ ಬೇಗನೆ ಉಲ್ಬಣಗೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸೋಂಕಿತ ವ್ಯಕ್ತಿಗಳು ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ಸ್ನಾಯು ನೋವು ಮತ್ತು ಉಸಿರಾಟದ ತೊಂದರೆ ಅನುಭವಿಸಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ವೈರಸ್ ನ್ಯುಮೋನಿಯಾ, ತೀವ್ರ ಉಸಿರಾಟದ ತೊಂದರೆ, ನರವೈಜ್ಞಾನಿಕ ತೊಂದರೆಗಳು ಮತ್ತು ಸಾವಿಗೆ ಕಾರಣವಾಗಬಹುದು. ವೈರಸ್‌ಗೆ ಒಡ್ಡಿಕೊಂಡ 2 ರಿಂದ 8 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಚಿಕಿತ್ಸೆ ಮತ್ತು ಪ್ರತಿಕ್ರಿಯೆ ಪ್ರಸ್ತುತ, ಓಸೆಲ್ಟಾಮಿವಿರ್ (ಟ್ಯಾಮಿಫ್ಲು) ಮತ್ತು ಜನಮಿವಿರ್ (...

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ 09 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈ ಬಿಟ್ಟು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೇ ಹೆಚ್ಚಿನ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳನ್ನು

Image
 ಬೆಂಗಳೂರು:  ಕರ್ನಾಟಕ ರಾಜ್ಯದ ನೂತನ 09 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈ ಬಿಟ್ಟು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೇ ಹೆಚ್ಚಿನ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳನ್ನು ಪ್ರತಿಭಟನೆ ಬೆಂಗಳೂರು:  ಕರ್ನಾಟಕ ರಾಜ್ಯದ ನೂತನ 09 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈ ಬಿಟ್ಟು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೇ ಹೆಚ್ಚಿನ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ನೂರಾರು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ತಕ್ಷಣ ಉತ್ತರ ನೀಡಬೇಕೆಂದು ಆಗ್ರಹಿಸಿದರು, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ನೂರಾರು ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧನ ಮಾಡಿದರು. ಎಬಿವಿಪಿಯ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ಕಳೆದ ಹಲವಾರು ದಿನಗಳಿಂದ ಎಬಿವಿಪಿ ನೇತೃತ್ವದಲ್ಲಿ ರಾಜ್ಯದ್ಯಂತ ಹಲವಾರು ರೀತಿಯ ಪ್ರತಿಭಟನೆ ಮಾಡಿ ವಿಶ್ವವಿದ್ಯಾಲಯಗಳನ್ನು ಮುಚ್ಚದಂತೆ ಆಗ್ರಹಿಸಿದರು ಸಹಿತ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೊಂಡುತನವನ್ನು ತೋರಿಸುತ್ತಿದೆ, ಯಾವುದೇ ಕಾರಣಕ್ಕು ಎಬಿವಿಪಿ ಹೋರಾಟವನ್ನು ನಿಲ್ಲಿಸುವುದಿಲ್ಲ ವಿಶ್ವವಿದ್ಯಾಲಯಗಳ್ನ ಮುಚ್ಚುವ ನಿರ್ಧಾರವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕೆಂದು ಆಗ್ರಹ...