ಬೋಲ್ಡ್ ವಿನಾಸ ಮತ್ತು ಪೋಟೆಂಟ್ V12 ನೊಂದಿಗೆ ಬಂದಿದೆ ಆಸ್ಟನ್ ರ್ಟಿನ್‌ನ ಐಕಾನಿಕ್ ವ್ಯಾನ್‌ಕ್ವಿಶ್
ಬೋಲ್ಡ್ ವಿನಾಸ ಮತ್ತು ಪೋಟೆಂಟ್ V12 ನೊಂದಿಗೆ ಬಂದಿದೆ ಆಸ್ಟನ್ ರ್ಟಿನ್‌ನ ಐಕಾನಿಕ್ ವ್ಯಾನ್‌ಕ್ವಿಶ್
ಹೊಸ ಹ್ಯಾಲೋ ಮಾದರಿಯೊಂದಿಗೆ ಅದ್ಭುತ ಕಮ್‌ಬ್ಯಾಕ್ ಮಾಡಿದ ಮಾದರಿ
ಹೊಸ V12 ಟ್ವಿನ್-ಟರ್ಬೊ ಎಂಜಿನ್ 835PS ಮತ್ತು 1000 Nm ಪವರ್ ಅನ್ನು ಉತ್ಪಾದನೆ. ಇದರಿಂದ ಆಸ್ಟನ್ ಮಾರ್ಟಿನ್ ಉತ್ಪಾದನಾ ಕಾರುಗಳಿಗೆ ದಾಖಲೆಯ 214 mph ಗರಿಷ್ಠ ವೇಗ ತಲುಪಲು ಅನುವು
80 mm ಉದ್ದದ ವೀಲ್‌ಬೇಸ್‌ನ ಚಾಸಿಸ್, ಬಿಲ್‌ಸ್ಟೈನ್ DTX ಡ್ಯಾಂಪರ್‌ಗಳು, ಇ-ಡಿಫ್ ಮತ್ತು ಕಸ್ಟಮ್ 21-ಇಂಚಿನ ಪೈರೆಲ್ಲಿ ಟೈರ್‌ಗಳಿಂದ ಅತ್ಯುತ್ತಮ ಕಾರ್ಯಕ್ಷಮತೆ
ಪ್ಯಾನರೋಮಿಕ್ ಸನ್‌ರೂಫ್ ಮತ್ತು ಐಷಾರಾಮಿ ಒಳಾಂಗಣದಲ್ಲಿ ಸುಧಾರಿತ ಇನ್ಫೋಟೈನ್‌ಮೆಂಟ್ ವ್ಯವಸ್ಥೆ
29th March 2025, Bengaluru: ಮಾರ್ಟಿನ್ ತನ್ನ ಅಲ್ಟ್ರಾ-ಲಕ್ಸುರಿ ಸ್ಪೋರ್ಟ್ಸ್ ಕಾರು ವಲಯವನ್ನು ಮರುವ್ಯಾಖ್ಯಾನಿಸುವ ಹಾಲೋ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಐಕಾನಿಕ್ ವ್ಯಾನ್‌ಕ್ವಿಶ್ ಮಾರುಕಟ್ಟೆಗೆ ಮರಳುತ್ತಿರುವುದನ್ನು ಹೆಮ್ಮೆಯಿಂದ ಘೋಷಿಸಿದೆ. Ex - showroom 8.85cr (without options), ದರದಲ್ಲಿ ಬಿಡುಗಡೆಯಾದ ಈ ತಾಂತ್ರಿಕ ಮಾದರಿಯು ಉತ್ತಮ ನೋಟದೊಂದಿಗೆ ಅತ್ಯುತ್ತಮ ಸೂಪರ್‌ಕಾರ್ ಕಾರ್ಯಕ್ಷಮತೆಯನ್ನು ಒದಗಿಸಲಿದೆ. ವರ್ಷಕ್ಕೆ ಸೀಮಿತ 1,000 ಉತ್ಪಾದನೆಯನ್ನು ಹೊಂದಿರುವ ಇದರ ಡೆಲಿವರಿಗಳು 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಆರಂಭಗೊಳ್ಳಲಿದ್ದು, ಜಗತ್ತಿನ ಆಯ್ದ ಕೆಲವು ಆಸಕ್ತಿದಾರರಿಗೆ ಮಾತ್ರ ಇದರ ವಿಶೇಷ ಮಾಲೀಕತ್ವವು ದೊರೆಯಲಿದೆ.
ತನ್ನ ದಂತಕಥೆಯಾದ ನೇಮ್‌ಪ್ಲೇಟ್ ಅನ್ನು ಪ್ರದರ್ಶಿಸುತ್ತಿರುವ ಹೊಸ ವ್ಯಾನ್‌ಕ್ವಿಶ್, ಆಸ್ಟನ್ ಮಾರ್ಟಿನ್‌ನ ಶ್ರೀಮಂತ V 12 ಪರಂಪರೆಯನ್ನು ಅವಲಂಬಿಸಿದೆ ಮತ್ತು ಬ್ರ್ಯಾಂಡ್‌ನ ಸ್ಪೋರ್ಟ್ಸ್ ಕಾರಿನ ಹೊಸ ಮಾನದಂಡವನ್ನು ಹೊಂದಿಸಿದೆ. ಈ ಕಾರು ತನ್ನ 5.2-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನೊಂದಿಗೆ ಅಪ್ರತಿಮ ಮಾನದಂಡವನ್ನು ಸ್ಥಾಪಿಸುತ್ತದೆ, ಇದು ವರ್ಗ-ಪ್ರಮುಖ 835PS ಮತ್ತು 1,000 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದು 214 mph ನ ಗರಿಷ್ಠ ವೇಗವನ್ನು ಹೊಂದಿದೆ - ಇದು ಆಸ್ಟನ್ ಮಾರ್ಟಿನ್ ಸರಣಿಯ ಉತ್ಪಾದನಾ ವಾಹನಕ್ಕೆ ಇದುವರೆಗೆ ದಾಖಲಾದ ಅತ್ಯಧಿಕ ವೇಗವಾಗಿದೆ. ಉದ್ದವಾದ ವೀಲ್‌ಬೇಸ್ (+80 ಮಿಮೀ) ಅದರ ನಾಟಕೀಯ ಪ್ರೊಫೈಲ್‌ಗೆ ಸೇರಿಸುತ್ತದೆ, ಆದರೆ ಅತ್ಯಾಧುನಿಕ ಬಿಲ್‌ಸ್ಟೈನ್ DTX ಡ್ಯಾಂಪರ್‌ಗಳು, ಎಲೆಕ್ಟ್ರಾನಿಕ್ ರಿಯರ್ ಡಿಫರೆನ್ಷಿಯಲ್ (ಇ-ಡಿಫ್) ಮತ್ತು ವಿಶೇಷವಾಗಿ ಅಭಿವೃದ್ಧಿಪಡಿಸಿದ 21-ಇಂಚಿನ ಪಿರೆಲ್ಲಿ ಪಿ ZERO™ ಟೈರ್‌ಗಳು ನಿಖರವಾದ ಡೈನಾಮಿಕ್ಸ್ ಅನ್ನು ಒದಗಿಸುತ್ತವೆ. ಪೂರ್ಣ-ಉದ್ದದ ಪನೋರಾಮಿಕ್ ಗಾಜಿನ ಛಾವಣಿ ಮತ್ತು ಅತ್ಯಾಧುನಿಕ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯು ಅದರ ಅಲ್ಟ್ರಾ-ಐಷಾರಾಮಿ ಒಳಾಂಗಣವನ್ನು ಒತ್ತಿಹೇಳುತ್ತದೆ.
ವಿಭಿನ್ನ ವಿನ್ಯಾಸ: ಮನಸೆಳೆಯುವ ಬಾಹ್ಯ ಸೌಂದರ್ಯ, ಅತ್ಯುತ್ತಮ ಆಂತರಿಕ ನೋಟ
ವ್ಯಾನ್‌ಕ್ವಿಶ್ ತನ್ನ ಹೊಸ ಹೊರನೋಟದೊಂದಿಗೆ ಜನರ ಗಮನ ಸೆಳೆಯಲಿದೆ. ಇದು ಫ್ಲುಯಿಡ್ ಕರ್ವ್‌ಗಳು, ಸದೃಢ ಸ್ನಾಯುಗಳನ್ನು ಹೊಂದಿರುವ ಮೇಲ್ಮೈ ಅನ್ನು ಹೊಂದಿದೆ. ಇದರ ವೀಲ್‌ಬೇಸ್, A-ಪಿಲ್ಲರ್ ಮತ್ತು ಮುಂಭಾಗದ ಆಕ್ಸಲ್ ನಡುವೆ 80 ಮಿಮೀ ವಿಸ್ತರಿಸಲ್ಪಟ್ಟಿದ್ದು, ಒಂದು ಆಹ್ಲಾದಕರ ನೋಟವನ್ನು ನೀಡುತ್ತದೆ. ಇದು ಮುಂಭಾಗದ ಎಂಜಿನ್ ಅನ್ನು ಹೈಲೈಟ್ ಮಾಡುತ್ತದೆ ಮತ್ತು ನಿರಂತರ ಪ್ರೊಪಲ್ಷನ್ ಅನ್ನು ಹೊರಸೂಸುವ ಆಕಾರವನ್ನು ಹೊಂದಿದೆ. ಎಂಜಿನ್ ಕೂಲಿಂಗ್ ಹೆಚ್ಚಿಸುವ ಸಲುವಾಗಿ ಬಾನೆಟ್‌ನಲ್ಲಿ F1-ಪ್ರೇರಿತ ಥರ್ಮೋ-ಲೌವ್ರೆಸ್‌ಗಳೊಂದಿಗೆ ಡೈನಾಮಿಸಂ ಅನ್ನು ಅಳವಡಿಸಲಾಗಿದೆ. ಇದರ ವಿಶಿಷ್ಟ ಕಾಮ್ ಟೈಲ್ ಏರೋಡೈನಮಿಕ್ ಸಾಮರ್ಥ್ಯಕ್ಕಾಗಿ ಎಳೆತವನ್ನು ಕಡಿಮೆ ಮಾಡುತ್ತದೆ. ಮುಂಭಾಗದಲ್ಲಿ, ದೃಢವಾದ ಮುಂಭಾಗದ ವಿನ್ಯಾಸವು ದೊಡ್ಡ ಕ್ಲಾಸಿಕ್ ವ್ಯಾನ್ಡ್ ಗ್ರಿಲ್ (ಮೇಲ್ಮೈ ವಿಸ್ತೀರ್ಣದಲ್ಲಿ 13% ಹೆಚ್ಚಳ) ಅನ್ನು ಬಿಂಬಿಸುತ್ತದೆ ಮತ್ತು ಇದು ಹೊರಗೆ ಹೊಸ ಬಂಪರ್ ವೆಂಟ್‌ಗಳನ್ನು ಹೊಂದಿದೆ. ಬ್ರೇಕ್-ಕೂಲಿಂಗ್ ಡಕ್ಟ್‌ಗಳನ್ನು ಬೆಂಬಲಿಸಲು ಅದು ಹೊರಹೋಗುವ ಗಾಳಿಯನ್ನು ನಿಯಂತ್ರಿಸುತ್ತದೆ. ಇದರ ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳು ಇನ್-ಬಿಲ್ಟ್ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ (DRLs) ಹೊಸ ಬೆಳಕಿನ ರೂಪವನ್ನು ನೀಡುತ್ತವೆ. ಇದರಲ್ಲಿ ಆಸ್ಟನ್ ಮಾರ್ಟಿನ್ ಹೆಸರನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಏರೋಡೈನಾಮಿಕ್ಸ್ ಎಲೆಕ್ಟ್ರಾನಿಕ್ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಫ್ರೇಮ್‌ಲೆಸ್ ಕನ್ನಡಿಗಳು ಇದಕ್ಕೆ ಇನ್ನಷ್ಟು ರಂಗು ನೀಡಲಿವೆ. ಇದು ಬ್ರ್ಯಾಂಡ್‌ನ ಚಿಹ್ನೆಯನ್ನು ಪ್ರದರ್ಶಿಸುವ ಹಿಂಭಾಗದ ತೇಲುವ 'ಶೀಲ್ಡ್' ಪ್ಯಾನೆಲ್ (ಕಾರ್ಬನ್ ಫೈಬರ್ ಅಥವಾ ದೇಹದ ಬಣ್ಣದಲ್ಲಿ ಕಸ್ಟಮೈಸ್ ಮಾಡಬಹುದಾದ) ಅನ್ನು ಹೊಂದಿದೆ. ವಾಲ್ಕಿರೀಯಿಂದ ಸ್ಫೂರ್ತಿ ಪಡೆದ ಏಳು-ಬ್ಲೇಡ್‌ನ LED ಲೈಟ್ ಬ್ಲೇಡ್‌ಗಳು ಪೂರ್ಣ-ಅಗಲ ಡಿಫ್ಯೂಸರ್ ಅನ್ನು ಫ್ರೇಮ್ ಮಾಡುತ್ತವೆ ಮತ್ತು ಬೋಲ್ಡ್ ಹಿಂಭಾಗದ ಪ್ರೊಫೈಲ್‌ನೊಂದಿಗೆ ಹೆಚ್ಚಿನ ವೇಗದ ಸ್ಥಿರತೆಯನ್ನು ನೀಡುತ್ತದೆ.
ಒಳಾಂಗಣದಲ್ಲಿ ವ್ಯಾನ್‌ಕ್ವಿಶ್ ಚಾಲಕನ ಮತ್ತು ಪ್ರಯಾಣಿಕರ ಐಷಾರಾಮಿಗಾಗಿ ವಿನ್ಯಾಸಗೊಳಿಸಲಾದ ಎರಡು ಆಸನಗಳ ಒಳಾಂಗಣವನ್ನು ಹೊಂದಿದೆ. ವಿಶಾಲ ಸೆಂಟರ್ ಕನ್ಸೋಲ್ ಇದರ ಆಕರ್ಷಣೆಯಾಗಿದೆ. ಇದು ಸ್ಕ್ಯಾಲೋಪ್ಡ್ ಡೋರ್ ಪ್ಯಾನೆಲ್‌ಗಳನ್ನು ಒಳಗೊಂಡಿದೆ. 10.25-ಇಂಚಿನ TFT ಡ್ರೈವರ್ ಡಿಸ್ಪ್ಲೇ ಕಸ್ಟಮ್ ಕಾನ್ಫಿಗರೇಶನ್‌ಗಳನ್ನು ಒದಗಿಸಿದರೆ ಸ್ಪೋರ್ಟ್ಸ್ ಪ್ಲಸ್ ಸೀಟುಗಳು (ಸ್ಟ್ಯಾಂಡರ್ಡ್) ಅಥವಾ ಐಚ್ಛಿಕ ಕಾರ್ಬನ್-ಫೈಬರ್ ಕಾರ್ಯಕ್ಷಮತೆಯ ಸೀಟುಗಳು ಸ್ಪೋರ್ಟಿ ಚಾಲನಾ ಅನುಭವವನ್ನು ನೀಡುತ್ತದೆ. 6% ಬೆಳಕಿನ ಪ್ರಸರಣ ಮತ್ತು ಕಡಿಮೆ-E ಲೇಪನ ಸನ್ ರೂಫ್ ಗಳು ಕ್ಯಾಬಿನ್ ಗೆ ನೈಸರ್ಗಿಕ ಬೆಳಕನ್ನು ಒದಗಿಸುತ್ತದೆ. ಆಸನಗಳು ಮತ್ತು ಹಿಂಭಾಗದ ಪಾರ್ಸೆಲ್ ಶೆಲ್ಫ್‌ನಲ್ಲಿ ಪರಿಚಯಿಸಲಾಗಿರುವ ಹೊಸ ಕ್ವಿಲ್ಟಿಂಗ್ ಮಾದರಿಗಳು ನಿಖರವಾದ ಕರಕುಶಲತೆಯನ್ನು ಬಿಂಬಿಸುತ್ತವೆ. ಜೊತೆಗೆ ಸ್ಯಾಡಲ್ ಚರ್ಮದ ಲಗೇಜ್ ಸೆಟ್‌ಗಳು ಲಗೇಜ್ ಇರಿಸಲು ಪ್ರತ್ಯೇಕ ಸದಥಾನ ಒದಗಿಸುತ್ತವೆ. (ಉಪಕರಣಗಳು ಲಭ್ಯವಿದೆ). ರೋಟರಿ ಡ್ರೈವ್ ಮೋಡ್ ಡಯಲ್ ಮತ್ತು ಪ್ರಕಾಶಿತ ಗಾಜಿನ ಸ್ಟಾರ್ಟ್/ಸ್ಟಾಪ್ ಬಟನ್‌ಗಳು ಐಷಾರಾಮಿ, ಚಾಲಕ-ಕೇಂದ್ರಿತ ಅನುಭವವನ್ನು ನೀಡುತ್ತವೆ.
ಪವರ್ ಟ್ರೈನ್: V12 ಪೋಟೆನ್ಸಿಯ ಸಾಮರ್ಥ್ಯ
ವ್ಯಾನ್‌ಕ್ವಿಶ್ ಮರು-ವಿನ್ಯಾಸಗೊಳಿಸಲಾದ 5.2-ಲೀಟರ್ ಟ್ವಿನ್-ಟರ್ಬೊ V12 ನಿಂದ ಪವರ್ ಅನ್ನು ಪಡೆದುಕೊಳ್ಳುತ್ತದೆ. ಆಸ್ಟನ್ ಮಾರ್ಟಿನ್ V12 ನ ನಿರ್ದಿಷ್ಟ ವಿದ್ಯುತ್ ಉತ್ಪಾದನೆಯನ್ನು (160 PS/ಲೀಟರ್) ಸಾಧಿಸಲು ಬಲವರ್ಧಿತ ಸಿಲಿಂಡರ್ ಬ್ಲಾಕ್ ಮತ್ತು ಕಾನ್‌ರೋಡ್‌ಗಳಿಂದ 835 PS ಮತ್ತು 1,000 Nm ಟಾರ್ಕ್ ಅನ್ನು ಬಿಡುಗಡೆ ಮಾಡುತ್ತದೆ. ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಹೊಸ ವಿನ್ಯಾಸ ಪಡೆದುಕೊಂಡಿರುವ ಕ್ಯಾಮ್‌ಶಾಫ್ಟ್‌ಗಳು ಮತ್ತು ಆಪ್ಟಿಮೈಸ್ ಮಾಡಿದ ಇನ್‌ಟೇಕ್/ಎಕ್ಸಾಸ್ಟ್ ಪೋರ್ಟ್‌ಗಳನ್ನು ಒಳಗೊಂಡಿರುವ ಸಿಲಿಂಡರ್ ಹೆಡ್ ಅನ್ನು ಇದು ಹೊಂದಿದೆ. ಸ್ಪಾರ್ಕ್ ಪ್ಲಗ್‌ಗಳು ಮತ್ತು ಹೆಚ್ಚಿನ ಫ್ಲೋರೇಟ್ ಇಂಧನ ಇಂಜೆಕ್ಟರ್‌ಗಳೊಂದಿಗೆ (+10%) ಕಂಬಷನ್ ಕ್ಷಮತೆಯು ಏರಿಕೆಯಾಗುತ್ತದೆ. ಹೊಸ ಕಡಿಮೆ-ಜಡತ್ವ ಟರ್ಬೋಚಾರ್ಜರ್‌ಗಳು (+15% ಗರಿಷ್ಠ ವೇಗ) ರೇಜರ್-ತೀಕ್ಷ್ಣವಾದ ಥ್ರೊಟಲ್ ಸಾಮರ್ಥ್ಯವನ್ನು ಒದಗಿಸುತ್ತವೆ.
ಮುಂದುವರಿದು, ಥ್ರೊಟಲ್ ಸಮಯದಲ್ಲಿ ಬೂಸ್ಟ್ ರಿಸರ್ವ್ ಟರ್ಬೊ ಒತ್ತಡವನ್ನು ಉಂಟುಮಾಡುತ್ತದೆ ಮತ್ತು , ಓವರ್‌ಟೇಕಿಂಗ್ ಅಥವಾ ಡೈನಾಮಿಕ್ ಬರ್ಸ್ಟ್‌ಗಳ ಸಂದರ್ಭದಲ್ಲಿ ಅದನ್ನು ಬಿಡುಗಡೆಗೊಳಿಸುತ್ತದೆ. ZF 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇಂದ ಹೊರಬರುವ ಪವರ್ ಉತ್ತಮ ಚಾಲನೆಯ ಅನುಭವ ನೀಡಲಿದೆ. 2.93:1 ರ ಅಂತಿಮ ಡ್ರೈವ್ ಅನುಪಾತವು ವ್ಯಾನ್‌ಕ್ವಿಶ್ ಸೂಪರ್‌ಕಾರ್‌ಗೆ ದಾಖಲೆಯ 214 mph ಗರಿಷ್ಠ ವೇಗದಲ್ಲಿ ಚಲಿಸಲು ಅನುವು ಮಾಡಿಕೊಡುತ್ತದ. ೆ
ಚಾಸಿಯ ವೈಶಿಷ್ಟ್ಯಗಳು: ನಿಖರತೆಗಳು
ಅಲ್ಯೂಮಿನಿಯಂ ರಚನೆಯನ್ನು ಹೊಂದಿರುವ ವ್ಯಾನ್‌ಕ್ವಿಶ್, DBS 770 ಅನ್ನು ಹೊಂದಿದ್ದು, 75% ಹೆಚ್ಚಿನ ಸದೃಢತೆಯನ್ನು ಒದಗಿಸುತ್ತದೆ. ವಾಹನದ ಕೆಳಭಾಗದಲ್ಲಿ ಕೂಡ ಬಿಗಿಗೊಳಿಸುವಿಕೆ ಮತ್ತು ಎಂಜಿನ್ ಕ್ರಾಸ್ ಬ್ರೇಸ್ ಸಹಾಯದಿಂದ ತಿರುಚುವ ಬಿಗಿತವನ್ನು ಹೆಚ್ಚಳ ಮಾಡಲಾಗಿದೆ. ಇದು ಮುಂಭಾಗದ ಅಂಡರ್ ಟ್ರೇ ಮತ್ತು ಕ್ರಾಸ್ ಮೆಂಬರ್ ಅನ್ನು ಹಿಡಿದಿಡುತ್ತದೆ ಮತ್ತು ಸ್ಟೀರಿಂಗ್ ಅನುಭವವನ್ನು ಉತ್ತಮವಾಗಿಸುತ್ತದೆ. ಜೊತೆಗೆ, ಹಿಂಭಾಗದ ಸಸ್ಪೆನ್ಷನ್ ಟವರ್‌ಗಳ ನಡುವಿನ ಶಕ್ತಿಯ ಹೆಚ್ಚಳಕ್ಕಾಗಿ ಡ್ಯಾಂಪರ್ ಅಳವಡಿಸಲಾಗಿದೆ.
ಬಿಲ್‌ಸ್ಟೈನ್ ಡಿಟಿಎಕ್ಸ್ ಡ್ಯಾಂಪರ್ ಮತ್ತು ಮಲ್ಟಿ-ಲಿಂಕ್ ರಿಯರ್ ಸಸ್ಪೆನ್ಷನ್ ಮತ್ತು ಡಬಲ್ ವಿಶ್‌ಬೋನ್ ಫ್ರಂಟ್ ಸಸ್ಪೆನ್ಷನ್ ನಿಖರವಾದ ಸ್ಪೋರ್ಟ್+ ನಿಯಂತ್ರಣವನ್ನು ಖಾತರಿಪಡಿಸುತ್ತದೆ. ಎಲೆಕ್ಟ್ರಿಕ್ ಪವರ್-ಅಸಿಸ್ಟೆಡ್ ಸ್ಟೀರಿಂಗ್ (ಇಪಿಎಎಸ್) ಚಾಲನಾ ಅನುಭವವನ್ನು ಉತ್ತಮಗೊಳಿಸುವ ಮತ್ತೊಂದು ವೈಶಿಷ್ಟ್ಯ ವಾಗಿದೆ. 2.27 ತಿರುವುಗಳ ಲಾಕ್-ಟು-ಲಾಕ್ ಮತ್ತು ವೇರಿಯಬಲ್ ಇದರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಇದರಲ್ಲಿ ಕಾರ್ಬನ್ ಸೆರಾಮಿಕ್ ಬ್ರೇಕ್ ಸಿಸ್ಟಮ್ (410 ಎಂಎಂ ಫ್ರಂಟ್/360 ಎಂಎಂ ರಿಯರ್) 27 ಕೆಜಿ ಅನ್‌ಸ್ಪ್ರಂಗ್ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ನರ್ ಬ್ರೇಕಿಂಗ್ 2.0 ನ ಎಬಿಎಸ್ ಇದೆ. ಇದು ನಾಲ್ಕು ಇಎಸ್‌ಪಿ ಮೋಡ್‌ಗಳು (ಆನ್, ಟ್ರ್ಯಾಕ್, ಆಫ್, ವೆಟ್) ಮತ್ತು ಇಂಟಿಗ್ರೇಟೆಡ್ ಕಂಟ್ರೋಲ್ ಸಿಸ್ಟಮ್‌ಗಳು (ಐಬಿಸಿ, ಐಟಿಸಿ, ಐವಿಸಿ, ಐವಿಸಿ) ಗಳನ್ನು ಒಳಗೊಂಡಿದ್ದು, ಇದು ದೂರ ಪರಿಷ್ಕರಣೆ ಮತ್ತು ಡೈನಾಮಿಕ್ ಚಾಲನೆಗೆ ಸ್ಥಿರತೆ ಮತ್ತು ಚುರುಕುತನ ಒದಗಿಸುತ್ತದೆ.
ತಂತ್ರಜ್ಞಾನ: ಸಂಪರ್ಕಿತ ಐಷಾರಾಮಿ
ವ್ಯಾನ್‌ಕ್ವಿಶ್ 10.25-ಇಂಚಿನ ಪ್ಯೂರ್ ಬ್ಲ್ಯಾಕ್ ಟಚ್‌ಸ್ಕ್ರೀನ್, ಬೆಸ್ಪೋಕ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದ್ದು, ಎಂಬೆಡೆಡ್ ಇ-ಸಿಮ್ ಮೂಲಕ ಸಂಪೂರ್ಣ ಆನ್‌ಲೈನ್ ಸಂಪರ್ಕವನ್ನು ಬೆಂಬಲಿಸುತ್ತದೆ. ಈ ವ್ಯವಸ್ಥೆಯು ಕೆಪ್ಯಾಸಿಟಿವ್ ಗೆಸ್ಚರ್ ಕಂಟ್ರೋಲ್, 3D ಮ್ಯಾಪಿಂಗ್, ನೈಜ-ಸಮಯದ ಟ್ರಾಫಿಕ್ ಓವರ್‌ಲೇಗಳು ಮತ್ತು ಡೈನಾಮಿಕ್ ರೂಟಿಂಗ್ ಅನ್ನು ಕೂಡ ಒಳಗೊಂಡಿವೆ. ಇದರಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಸೆಟ್ಟಿಂಗ್ ಕೂಡ ಇದೆ. ಆಸ್ಟನ್ ಮಾರ್ಟಿನ್ ಅಪ್ಲಿಕೇಶನ್ (iOS/ಆಂಡ್ರಾಯ್ಡ್) ಮೂರು ವರ್ಷಗಳವರೆಗೆ ಉಚಿತ ಸಂಪರ್ಕಿತ ಕಾರು ಚಂದಾದಾರಿಕೆ ಪ್ಯಾಕೇಜ್ ಅನ್ನು ಕೂಡ ಒದಗಿಸುತ್ತಿದೆ.
ಈ ತಂತ್ರಜ್ಞಾನಕ್ಕೆ ಪೂರಕವಾಗಿ, 15-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಸರೌಂಡ್ ಸೌಂಡ್ ಸಿಸ್ಟಮ್ ಮನಸೆಳೆಯುವ ಆಡಿಯೊ ಅನುಭವವನ್ನು ನೀಡುತ್ತದೆ. ಮೆಟಲ್ ರೋಟರಿ ಡಯಲ್‌ಗಳು, ರೋಲರ್‌ಗಳು ಮತ್ತು ಚಾಸಿಸ್, ESP ಮತ್ತು ಎಕ್ಸಾಸ್ಟ್‌ನ ಓವರ್‌ರೈಡ್ ಸ್ವಿಚ್‌ಗಳಂತಹ ನಿಯಂತ್ರಣಗಳು ಚಾಲಕರ ಗಮನವು ರಸ್ತೆಯಿಂದ ಬೇರೆಡೆಗೆ ಸೆಳೆಯದಂತೆ ಎಚ್ಚರವಹಿಸುತ್ತವೆ.
ಗೌತಮ್ ದತ್ತಾ, ಜಿಎಂ ಸೇಲ್ಸ್ ಮಾತನಾಡಿ "ವ್ಯಾನ್‌ಕ್ವಿಶ್, ಆಟೋಮೋಟಿವ್ ಕ್ಷೇತ್ರದಲ್ಲಿ ಶ್ರೇಷ್ಠತೆಯತ್ತ ನಮ್ಮ ನಿರಂತರ ಅನ್ವೇಷಣೆಗೆ ಸಾಕ್ಷಿಯಾಗಿದೆ. ಇದು ಅತ್ಯುನ್ನತ ಸೌಕರ್ಯ ಮತ್ತು ನಿಖರತೆ ಎರಡನ್ನೂ ಒಳಗೊಂಡಿರುವ 835 PS V12 ಚಾಸಿಸ್ ಅನ್ನು ಹೊಂದಿದೆ. ಈ ಫ್ಲ್ಯಾಗ್‌ಶಿಪ್ ಉತ್ಪನ್ನ ಸೂಪರ್‌ಕಾರ್‌ಗೆ ಒಂದು ಹೊಸ ಭಾಷ್ಯ ಬರೆಯಲಿದೆ. ಇದರ ಸುಧಾರಿತ ಬಿಲ್‌ಸ್ಟೈನ್ DTX ಡ್ಯಾಂಪರ್‌ಗಳು ಮತ್ತು ಇ-ಡಿಫ್ ಒಳಗೊಂಡಿರುವ ಪನೋರಮಿಕ್ ಸನ್‌ರೂಫ್ ಮತ್ತು ಇತರ ಅತ್ಯಾಧುನಿಕ ಸೌಲಭ್ಯಗಳು ಹೊಸ ಅನುಭವವನ್ನು ಸೃಷ್ಟಿಸುವ ಜೊತೆಗೆ, ಗ್ರಾಹಕರ ಕುರಿತು ನಮ್ಮ ಸಮರ್ಪಣೆಯನ್ನು ಬಿಂಬಿಸುತ್ತದೆ. ಇದು ಅಸಾಧಾರಣವಾದ ಅನುಭವಗಳಿಗೆ ಬಯಸುವ ಜನರಿಗೆ ಇಷ್ಟವಾಗುವ ವಾಹನವಾಗಿದೆ. ಅತ್ಯುತ್ತಮ ಅಭಿರುಚಿಗಳು, ಐಷಾರಾಮಿ ಮತ್ತು ಕಾರ್ಯಕ್ಷಮತೆಯ ಮಿಶ್ರಣದೊಂದಿಗೆ, ವ್ಯಾನ್‌ಕ್ವಿಶ್ ಆಸ್ಟನ್ ಮಾರ್ಟಿನ್ ಭಾರತದ ಬೆಳೆಯುತ್ತಿರುವ ಸೂಪರ್‌ಕಾರ್ ಮಾರುಕಟ್ಟೆಯನ್ನು ಆಕರ್ಷಿಸಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಟನ್ ಮಾರ್ಟಿನ್ ವ್ಯಾನ್‌ಕ್ಷಿಶ್, ಸೂಪರ್‌ಕಾರ್ ಪವರ್ ಅನ್ನು ಅಲ್ಟ್ರಾ- ಲಕ್ಸುರಿ ಅತ್ಯಾಧುನಿಕತೆಯೊಂದಿಗೆ ಸಂಯೋಜಿಸುವ ಅತ್ಯುನ್ನತ ಸಾಧನೆಯಾಗಿದೆ. ಈ ಸೀಮಿತ ಐಕಾನ್ ಕಾರು ಬುಕಿಂಗ್‌ಗಳಿಗೆ ಲಭ್ಯವಿದೆ ಮತ್ತು ಇದರ ಅನುಭವ ಪಡೆಯುವಂತೆ ಎಲ್ಲಾ ಸ್ಪೋರ್ಟ್ಸ್ ಕಾರು ಉತ್ಸಾಹಿಗಳನ್ನು ಸ್ವಾಗತಿಸುತ್ತದೆ.
ತಾಂತ್ರಿಕ ವೈಶಿಷ್ಟ್ಯಗಳು
ಬಾಡಿ
ಎರಡು -ಡೋರ್‌ನ ಕಾರಿನ ವಿನ್ಯಾಸ 2-ಸೀಟ್ ಸಂಯೋಜನೆಯೊಂದಿಗೆ ಕಾರ್ಬನ್ ಫೈಬರ್ ಮತ್ತು ಸಂಯೋಜಿತ ಫಲಕಗಳೊಂದಿಗೆ ಹೊರತೆಗೆಯಲಾದ ಬಂಧಿತ ಅಲ್ಯೂಮಿನಿಯಂ ದೇಹದ ರಚನೆ
ಇನ್‌ಸೆಟ್ ಬೋನೆಟ್, ಡೋರ್ ಔಟರ್‌ಗಳು ಮತ್ತು ಕಾರಿನ ಬದಿಭಾಗಗಳು
ಇಂಜಿನ್
5.2-ಲೀಟರ್ ಟ್ವಿನ್ ಟರ್ಬೋ V12 ನೀರಿನಿಂದ ಗಾಳಿ ಚಾರ್ಜ್ ಕೂಲಿಂಗ್
ಫ್ರಂಟ್ ಮಿಡ್-ಮೌಂಟೆಡ್ ಇಂಜಿನ್, ಹಿಂದಿನ ಚಕ್ರದ ಚಲನೆ ಗರಿಷ್ಠ ಪವರ್: 835PS / 824bhp / 614kW @ 6,500rpm
ಗರಿಷ್ಠ ಟಾರ್ಕ್: 1,000Nm / 738 lb-ft @ 2,500 – 5,000rpm ಟಾಪ್ ವೇಗ: 214mph / 345km/h
0-60mph: 3.2s 0-100km/h: 3.3s
ಗರಿಷ್ಠ ಬೂಸ್ಟ್ ಪ್ರೆಷರ್: 2.25 ಬಾರ್ ಹೊಸ ಸಿಲಿಂಡರ್ ಬ್ಲಾಕ್, ಟರ್ಬೋಚಾರ್ಜರ್ ಮತ್ತು ಎಕ್ಸಾಸ್ಟ್ ಮ್ಯಾನಿಫೋಲ್ಡ್ ಸುಧಾರಿತ ಕಾರ್ಯಾಚರಣೆಗಾಗಿ
ಟ್ರಾನ್ಸ್‌ಮಿಷನ್
ರಿಯರ್-ಮೌಂಟೆಡ್ ಎಂಟು-ವೇಗದ ಸ್ವಯಂಚಾಲಿತ ಟ್ರಾನ್ಸ್‌ಮಿಷನ್ ಎಲೆಕ್ಟ್ರಾನಿಕ್ ಹಿಂಭಾಗದ ಸೀಮಿತ-ಸ್ಲಿಪ್ ಡಿಫರೆನ್ಷಿಯಲ್
ಟಾರ್ಕ್ ಕನ್ವರ್ಟರ್‌ಕಾರ್ಬನ್ ಫೈಬರ್ ಪ್ರಾಪ್ ಶಾಫ್ಟ್ ಕಾರ್ಬನ್ ಫೈಬರ್ ಪ್ರಾಪ್ ಶಾಫ್ಟ್
ಸ್ಟೀರಿಂಗ್
ವೇರಿಯೇಬಲ್ ಎಲೆಕ್ಟ್ರಿಕಲ್ ಪವರ್ ಅಸಿಸ್ಟೆಂಟ್ ಸ್ಟೀರಿಂಗ್ ಅನುಪಾತ: 13.09:1
ಲಾಕ್ ಟು ಲಾಕ್ ಬದಲಾವಣೆ: 2.27
ಸಸ್ಪೆನ್ಷನ್
ಮುಂದೆ: ಸ್ವತಂತ್ರ ಡಬಲ್ ವಿಶ್‌ಬೋನ್, ಕಾಯಿಲ್ ಸ್ಪ್ರಿಂಗ್‌ಗಳು ಮತ್ತು ರೋಲ್-ಬಾರ್ ನಿರೋಧಕ ಹಿಂಭಾಗ: ಕಾಯಿಲ್ ಸ್ಪ್ರಿಂಗ್‌ಗಳು ಮತ್ತು ಆಂಟಿ-ರೋಲ್ ಬಾರ್‌ನೊಂದಿಗೆ ಮಲ್ಟಿ-ಲಿಂಕ್ ಸಸ್ಪೆನ್ಷನ್
ಬಿಲ್‌ಸ್ಟೇನ್ DTX ಅಡಾಪ್ಟೀವ್ ಡ್ಯಾಂಪಿಂಗ್ ಸಿಸ್ಟಮ್ (ADS) ಬುದ್ಧಿಮತ್ತ ಅಳವಡಿಕೆಯ ಡ್ಯಾಂಪರ್‌ಗಳೊಂದಿಗೆ
ಚಾಲನಾ ಮಾದರಿಗಳು
ಒದ್ದೆ, ಕ್ರೀಡೆ, ಕ್ರೀಡೆ ಪ್ಲಸ್, ಟ್ರ್ಯಾಕ್ ಮತ್ತು ವೈಯಕ್ತಿಕ
ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS)
ಮುಂದಿನ ಅಪಘಾತ ಎಚ್ಚರಿಕೆ, ಸ್ವಾಯತ್ತ ಎಮರ್ಜೆನ್ಸಿ ಬ್ರೇಕಿಂಗ್, ನಿಲ್ಲಿಸಿ ಮತ್ತು ಹೋಗಿ ಸೂಚನೆಯೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್, ಆಟೋ ಹೈ ಬೀಮ್, ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು, ಸಂಚಾರ ಚಿಹ್ನೆ ಗುರುತಿಸುವಿಕೆ, ಬ್ಲೈಂಡ್ ಸ್ಪಾಟ್ ನಿರ್ವಹಣೆ, ತೆರೆದ ಬಾಗಿಲ ಮಾಹಿತಿ, ರಿಯರ್ ಕ್ರಾಸ್ ಟ್ರಾಫಿಕ್ ಅಸಿಸ್ಟ್, ಚಾಲಕರ ನಿದ್ರೆಯ ಗುರುತಿಸುವಿಕೆ, 360° 3D ಸುತ್ತಲಿನ ಕ್ಯಾಮೆರಾ ನೋಟ
ಚಕ್ರಗಳು ಮತ್ತು ಟಯರ್‌ಗಳು
21" ಫೋರ್ಜ್ಡ್ ಅಲಾಯ್ ಚಕ್ರಗಳು ಪಿರೆಲ್ಲಿ ಪಿ ಝೀರೋ™ AML ಬೆಸ್ಪೋಕ್ ಬೇಸಿಗೆ ಮತ್ತು ಚಳಿಗಾಲದ ಚಕ್ರಗಳು
ಪಿರೆಲ್ಲಿ ಶಬ್ದ ರದ್ದತಿ ವ್ಯವಸ್ಥೆ (PNCS) ಮುಂದೆ: 275/35/ZR21 103Y
ಹಿಂದೆ: 325/30/ZR21 108Y
ಬ್ರೇಕ್‌ಗಳು ಮತ್ತು ಚಾಸಿ ವ್ಯವಸ್ಥೆ
ಕಾರ್ಬನ್ ಸೆರಾಮಿಕ್ ಬ್ರೇಕ್ ಸಿಸ್ಟಮ್ ಮುಂಭಾಗ: 6-ಪಿಸ್ಟನ್ ಅಲಾಯ್ ಕ್ಯಾಲಿಪರ್‌ಗಳು; 410mm x 38mm ಕಾರ್ಬನ್ ಸೆರಾಮಿಕ್ ಡಿಸ್ಕ್‌ಗಳು
ಹಿಂಭಾಗ: 4-ಪಿಸ್ಟನ್ ಅಲಾಯ್ ಕ್ಯಾಲಿಪರ್‌ಗಳು; 360mm x 38mm ಕಾರ್ಬನ್ ಸೆರಾಮಿಕ್ ಡಿಸ್ಕ್‌ಗಳು ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ಲಾಕ್-ಕಳ್ಳದ ನಿರೋಧಕ ವ್ಯವಸ್ಥೆ(ABS), ಎಲೆಕ್ಟ್ರಾನಿಕ್ ಬ್ರೇಕ್ ಹಂಚಿಕೆ (EBD), ತುರ್ತು ಬ್ರೇಕ್ ನೆರವು (EBA), ಟ್ರ್ಯಾಕ್ಷನ್ ನಿಯಂತ್ರಣ (TC), ಹೈಡ್ರಾಲಿಕ್ ಬ್ರೇಕ್ ನೆರವು (HBA), ಸಕಾರಾತ್ಮಕ ಟಾರ್ಕ್ ನಿಯಂತ್ರಣ(PTC),ಡೈನಮಿಕ್ ಟಾರ್ಕ್ ವೆಕ್ಟರಿಂಗ್ (DTV)
ಆಯಾಮಗಳು
ಎತ್ತರ: 1,290mm ಅಗಲ (ಕನ್ನಡಿಗಳು ಒಳಗೊಂಡಂತೆ): 2,120mm
ಅಗಲ (ಮಡಿಚಿದ ಕನ್ನಡಿ): 2,044mm ಉದ್ದ: 4,850mm (ಫೆಡರಲ್: 4,890mm)
ವ್ಹೀಲ್ ಬೇಸ್: 2,885mm ಗ್ರೌಂಡ್ ಕ್ಲಿಯರೆನ್ಸ್: 120mm (ಏರ್‌ಡ್ಯಾಮ್ ಅನ್ನು ಹೊರತುಪಡಿಸಿ) / 90mm (ಏರ್‌ಡ್ಯಾಮ್ ಸೇರಿದಂತೆ)
ಬೂಟ್ ಗಾತ್ರ: 248 ಲೀಟರ್‌ಗಳು ಇಂಧನ ಟ್ಯಾಂಕ್: 82 ಲೀಟರ್‌ಗಳು
ತೂಕ: 1,774kg (ಹಗರು, ಒಣ) ತೂಕ ಹಂಚಿಕೆ (ಮುಂದೆ:ಹಿಂದೆ): 51:49
ಇಂಧನ ಆರ್ಥಿಕತೆ ಮತ್ತು ಹೊರಸೂಸುವಿಕೆ
EU WLTP: 312g/km CO2 ROW NEDC: 314g/km CO2
ಸ್ಟ್ಯಾಂಡರ್ಡ್ ಬಾಹ್ಯ ವೈಶಿಷ್ಟ್ಯಗಳು
ಸದೃಢ ಪೇಂಟ್, ಗ್ಲಾಸ್ ಬ್ಲ್ಯಾಕ್ ಕೆಳಗಿನ ಬಾಡಿ ಪ್ಯಾಕೇಜ್, ಕಾರಿನ ಮೇಲ್ಭಾಗದ ಬಣ್ಣಗಳು, ಲಿಕ್ವಿಡ್ ಸಿಲ್ವರ್ 21” ವೈ ಸ್ಪೋಕ್ ವೀಲ್, ಸ್ಯಾಟಿನ್ ಕ್ರೋಮ್ ವ್ಯಾನ್ಡ್ ಗ್ರಿಲ್, ಕಪ್ಪು ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳು, ಕಾರ್ಬನ್ ಸೆರಾಮಿಕ್ ಬ್ರೇಕ್ ಡಿಸ್ಕ್‌ಗಳು, ಪನೋರಮಿಕ್ ಗ್ಲಾಸ್ ರೂಫ್, ಗ್ರೀನ್ ಇನ್‌ಫಿಲ್‌ನೊಂದಿಗೆ ಎನಾಮೆಲ್ ವಿಂಗ್ಸ್ ಬ್ಯಾಡ್ಜ್, ಸ್ಟೇನ್‌ಲೆಸ್ ಸ್ಟೀಲ್ ಎಕ್ಸಾಸ್ಟ್ ಸಿಸ್ಟಮ್
ಸ್ಟ್ಯಾಂಡರ್ಡ್ ಆಂತರಿಕ ವೈಶಿಷ್ಟ್ಯಗಳು
ಅಲ್ಕಾಂಟರಾ ಮತ್ತು ಸೆಮಿ ಅನಿಲೀನ್ ಲೆದರ್ ಟ್ರಿಮ್, ಹೀಟೆಡ್ 16- ರೀತಿ ಹೊಂದಾಣಿಕೆ ಮಾಡಬಹುದಾದ ಸ್ಪೋರ್ಟ್ಸ್ ಪ್ಲಸ್ ಸೀಟುಗಳು, ಕಪ್ಪು ಅಲ್ಕಾಂಟರಾ ಹೆಡ್‌ಲೈನಿಂಗ್, ಕಪ್ಪು 600 GSM ಕಾರ್ಪೆಟ್, ಸ್ಯಾಟಿನ್ ಕ್ರೋಮ್ ಇಂಟೀರಿಯರ್ ಜ್ಯುವೆಲ್ಲರಿ, ಸ್ಪೋರ್ಟ್ಸ್ ಲೆದರ್ ಸ್ಟೀರಿಂಗ್ ವೀಲ್, ಬೋವರ್ಸ್ & ವಿಲ್ಕಿನ್ಸ್ ಆಡಿಯೋ
ಆಯ್ಕೆಯ ಬಾಹ್ಯ ವೈಶಿಷ್ಟ್ಯಗಳು
ವಿವಿಧ ಬಣ್ಣದ ಫಿನಿಷಿಂಗ್‌ಗಳು (ಲೋಹೀಯ, ಸಿಗ್ನೇಚರ್ ಮೆಟಾಲಿಕ್, ಕ್ಯೂ ಸ್ಪೆಷಲ್, ಇತ್ಯಾದಿ), ಕಾರ್ಬನ್ ಫೈಬರ್ ಮತ್ತು ಕಪ್ಪು ಬಣ್ಣದ ಪ್ಯಾಕೇಜ್‌ಗಳು, ಖಾಸಗಿನತದ ಗಾಜು, ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳು (ಬಹು ಬಣ್ಣಗಳು), 21” ಫೋರ್ಜ್ಡ್ ಅಲಾಯ್ ಚಕ್ರದ ಆಯ್ಕೆಗಳು
ಆಯ್ಕೆಯ ಆಂತರಿಕ ವೈಶಿಷ್ಟ್ಯಗಳು
ಕಸ್ಟಮ್ ಲೆದರ್ ಮತ್ತು ಅಲ್ಕಾಂಟರಾ ಟ್ರಿಮ್, ವೈರುಧ್ಯ ಹೊಲಿಗೆಗಳು, ಕಾರ್ಬನ್ ಫೈಬರ್ ಪರ್ಫಾರ್ಮೆನ್ಸ್ ಸೀಟುಗಳು, ಸೀಟ್ ವೆಂಟಿಲೇಷನ್, ಮರ & ಕಾರ್ಬನ್ ಫೈಬರ್ ಇನ್ಲೇಗಳು, ಹೀಟೆಡ್ ಸ್ಟೀರಿಂಗ್ ವೀಲ್, ಪ್ರೀಮಿಯಂ ಕಾರ್ಪೆಟ್‌ಗಳು
ವೈಯಕ್ತೀಕರಣದ ಆಯ್ಕೆಗಳು
ಹೆವಿ ಪೈಲ್ ಫ್ಲೋರ್ ಮ್ಯಾಟ್‌ಗಳು, ಗ್ಯಾರೇಜ್ ಡೋರ್ ಓಪನರ್, ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಮ್
ಆಸ್ಟನ್ ಮಾರ್ಟಿನ್ ಲಗೊಂಡ ಬಗ್ಗೆ:
ಆಸ್ಟನ್ ಮಾರ್ಟಿನ್ ವಿಶ್ವದ ಅತ್ಯಂತ ಆಕಾಂಕ್ಷೆಯ, ಅಲ್ಟ್ರಾ-ಲಕ್ಸುರಿಯ ಬ್ರಿಟಿಷ್ ಬ್ರ್ಯಾಂಡ್ ಆಗಿದ್ದು, ಅದ್ಭುತ ಕಾರ್ಯಕ್ಷಮತೆಯ ಕಾರುಗಳನ್ನು ತಯಾರಿಸುತ್ತಿದೆ. 1913 ರಲ್ಲಿ ಲಿಯೋನೆಲ್ ಮಾರ್ಟಿನ್ ಮತ್ತು ರಾಬರ್ಟ್ ಬ್ಯಾಮ್‌ಫೋರ್ಡ್ ಸ್ಥಾಪಿಸಿದ ಆಸ್ಟನ್ ಮಾರ್ಟಿನ್ ತನ್ನ ವಿಶಿಷ್ಟ ಶೈಲಿ, ಲಕ್ಸುರಿ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯತೆಗಾಗಿ ಜಾಗತಿಕ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಆಸ್ಟನ್ ಮಾರ್ಟಿನ್ ಆಧುನಿಕ ತಂತ್ರಜ್ಞಾನ, ಸಮಕಾಲೀನ ಕರಕುಶಲತೆ ಮತ್ತು ಸುಂದರ ವಿನ್ಯಾಸದ ವ್ಯಾಂಟೇಜ್, DB12, DBS, DBX ಮತ್ತು ಅದರ ಮೊದಲ ಹೈಪರ್‌ಕಾರ್, ಆಸ್ಟನ್ ಮಾರ್ಟಿನ್ ವಾಲ್ಕಿರಿ ಅನ್ನು ತಯಾರಿಸಿದೆ. ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಐಷಾರಾಮಿ ಮಾದರಿಗಳನ್ನು ಒಳಗೊಂಡಿದೆ. ಅದರ ರೇಸಿಂಗ್ ಹಸಿರು ಸುಸ್ಥಿರತೆಯ ತಂತ್ರಯನ್ನು ಅಳವಡಿಸಿಕೊಂಡಿದೆ. ಆಸ್ಟನ್ ಮಾರ್ಟಿನ್ 2025 ಮತ್ತು 2030 ರ ನಡುವೆ PHEV ಮತ್ತು BEV ಸೇರಿದಂತೆ ಮಿಶ್ರ ಡ್ರೈವ್‌ಟ್ರೇನ್ ಮಾದರಿಯ ಇಂಟರ್ನಲ್ ಕಂಬಷನ್ ಇಂಜಿನ್‌ಗೆ ಪರ್ಯಾಯ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರುಗಳು ಮತ್ತು SUV ಗಳು ಕೂಡ ಇರಲಿದೆ. ಇಂಗ್ಲೆಂಡ್‌ನ ಗೇಡನ್‌ನಲ್ಲಿರುವ ಆಸ್ಟನ್ ಮಾರ್ಟಿನ್ ಲಗೊಂಡಾ, ಪ್ರಪಂಚದಾದ್ಯಂತ 50 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುವ ಕಾರುಗಳನ್ನು ವಿನ್ಯಾಸಗೊಳಿಸಿ, ತಯಾರಿಸಿ ಮತ್ತು ರಫ್ತು ಮಾಡುತ್ತದೆ. ಇದರ ಸ್ಪೋರ್ಟ್ಸ್ ಕಾರುಗಳನ್ನು ಗೇಡನ್‌ನಲ್ಲಿ ತಯಾರಿಸಲಾಗುತ್ತದೆ ಮತ್ತು ಅದರ ಐಷಾರಾಮಿ DBX SUV ಶ್ರೇಣಿಯನ್ನು ವೇಲ್ಸ್‌ನ ಸೇಂಟ್ ಅಥಾನ್‌ನಲ್ಲಿ ತಯಾರಿಸಲಾಗುತ್ತದೆ. ಈ ಕಂಪನಿಯು 2030 ರ ವೇಳೆಗೆ ನಿವ್ವಳ-ಶೂನ್ಯ ಉತ್ಪಾದನಾ ಸೌಲಭ್ಯಗಳನ್ನು ಹೊಂದಲಿದೆ. ಲಗೊಂಡಾವನ್ನು 1899 ರಲ್ಲಿ ಸ್ಥಾಪಿಸಲಾಯಿತು ಮತ್ತು 1947 ರಲ್ಲಿ ದಿವಂಗತ ಸರ್ ಡೇವಿಡ್ ಬ್ರೌನ್ ಅವರು ಎರಡನ್ನೂ ಖರೀದಿ ಮಾಡಿದರು. ನಂತರ ಆಸ್ಟನ್ ಮಾರ್ಟಿನ್ ಇದರ ಜೊತೆ ಸೇರಿಕೊಂಡಿತು ಮತ್ತು ಕಂಪನಿಯು ಈಗ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಆಸ್ಟನ್ ಮಾರ್ಟಿನ್ ಲಗೊಂಡಾ ಗ್ಲೋಬಲ್ ಹೋಲ್ಡಿಂಗ್ಸ್ PLC ಎಂದು ಗುರುತಿಸಿಕೊಂಡಿದೆ. 2020 ರಲ್ಲಿ, ಲಾರೆನ್ಸ್ ಸ್ಟ್ರೋಲ್ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.


Comments
Post a Comment