ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರತಿಭಟನೆ ಯಶಸ್ಸಿ: ನಾಲ್ಕೈದು ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಬೆಸ್ಕಾಂ ಎಂಡಿ ಭರವಸೆ

 

ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರತಿಭಟನೆ ಯಶಸ್ಸಿ: ನಾಲ್ಕೈದು ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಬೆಸ್ಕಾಂ ಎಂಡಿ ಭರವಸೆ

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಇಂದು (ಮಾರ್ಚ್​ 18) ಹಮ್ಮಿಕೊಂಡಿದ್ದ ಬೃಹತ್​ ಪ್ರತಿಭಟನೆ ಯಶಸ್ವಿಯಾಗಿದೆ.

ಮೀಟ‌ರ್ ದರ ಹೆಚ್ಚಳ, ರೈತರಿಗೆ ವಿತರಿಸುವ ಟಿಸಿಗಳ ದರ ಹೆಚ್ಚಳ, ಗುತ್ತಿಗೆಯಲ್ಲಿ ತಾರತಮ್ಮ, ಸೇವಾಶುಲ್ಕ ಹೆಚ್ಚಳ ಹೀಗೆ ಹಲವು ಹಂತಗಳಲ್ಲಿ ದರ ಏರಿಕೆ ಮಾಡಿ ಸಾರ್ವಜನಿಕರಿಗೆ ರೈತರಿಗೆ ಹೊರೆಯಾಗಿ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಈ ಕುರಿತು ಸರ್ಕಾರ ಕೂಡಲೇ ಗಮನ ಹರಿಸಿ ಪರಿಹರಿಸಬೇಕೆಂದು ಕೋರಿ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್​ ನೇತೃತ್ವದಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್​ ಅವರ ಆದೇಶದ ಮೇರೆಗೆ ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್​ಗೆ ಆಗಮಿಸಿದ ಬೆಸ್ಕಾಂನ ಎಂಡಿ ಡಾ. ಎನ್‌ . ಶಿವಶಂಕರ್​, ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಜೆ. ಜಾರ್ಜ್​ ಅವರ ಗಮನಕ್ಕೆ ತಂದು ನಾಲ್ಕೈದು ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ವಿದ್ಯುತ್​ ಸಂಘದ ಸದಸ್ಯರು ಪ್ರತಿಭಟನೆಯನ್ನು ಕೈಬಿಟ್ಟರು

ಸಂಘದ ಬೇಡಿಕೆಗಳು ಏನು?
1) ವಿದ್ಯುತ್ ಸ್ಮಾರ್ಟ್ ಮೀಟರ್ ಮಾಪಕಗಳ (SMART ENERGY METER) ದರ ಹೆಚ್ಚಳದ ಬಗ್ಗೆ ಹಾಗೂ 3 ತಿಂಗಳ ಕಾಲಾವಕಾಶ ನೀಡುವ ಬಗ್ಗೆ.
2) ಬೆ.ವಿ.ಕಂ ನಗರ ವ್ಯಾಪ್ತಿಯ ಕಛೇರಿಗಳಲ್ಲಿ ನೆಟವರ್ಕ್ / ಸರ್ವರ್ ಸಮಸ್ಯೆ ಮತ್ತು ಗ್ರಾಮಾಂತರ ವ್ಯಾಪ್ತಿಯ ಐಡಿಯಾ ಇನ್ಫಿನಿಟಿ ನೆಟವರ್ಕ್ ಇಲ್ಲದಿರುವ ಬಗ್ಗೆ (BRAZ).
3) ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಿರುವ ಬಗ್ಗೆ.
4) 2012 ರ ಹಿಂದೆ ಎರಡನೇ ದರ್ಜೆ ಪರವಾನಗಿ ವಿದ್ಯುತ್ ಗುತ್ತಿಗೆದಾರರಿಗೆ ಒಂದನೇ ದರ್ಜೆ ಪರವಾನಗಿ ಪಡೆಯಲು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ವಿನಾಯಿತಿ ನೀಡಿ ಅನುಭವದ ಆಧಾರದ ಮೇಲೆ ಪ್ರಥಮ ದರ್ಜೆ ವಿದ್ಯುತ್ ಪರವಾನಗಿ ನೀಡುವ ಬಗ್ಗೆ.
5) 66/11ಕೆವಿ ಹಾಗೂ 110/11 ವಿದ್ಯುತ್ ವಿತರಣಾ ಕೇಂದ್ರಗಳ ಪಾಳಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಲು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಿಗೆ ಅನುಮತಿಯನ್ನು ನೀಡುವ ಬಗ್ಗೆ.
6).2 ಮೆಗಾ ವ್ಯಾಟ್ ಹಾಗೂ ಮತ್ತು ಅದಕ್ಕಿಂತ ಹೆಚ್ಚು ಮೆಗಾ ವ್ಯಾಟ್ ಸಂಪರ್ಕ ಪಡೆಯುವಾಗ ವಿಳಂಭವಾಗುತ್ತಿರುವ ಬಗ್ಗೆ.
7) ಗ್ರಾಮಾಂತರ ವ್ಯಾಪ್ತಿಯಲ್ಲಿ ದಿನಾಂಕ: 19.11.2023 ಹಿಂದೆ ಅಕ್ರಮವಾಗಿ ಕೃಷಿ ವಿದ್ಯುತ್ ಸಂಪರ್ಕವನ್ನು ಪಡೆದಿರುವ ಕೃಷಿ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸುವ ಬಗ್ಗೆ.
8) ಎಸ್ಕಾಂಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಕೂಲಿ ಕೆಲಸಗಳನ್ನು (LABOUR AWARD) ನಿರ್ವಹಿಸುವಾಗ ನೌಕರರುಗಳಿಗೆ ವಿದ್ಯುತ್ ಅವಘಡಗಳಾದಂತಹ ಸಂಧರ್ಭದಲ್ಲಿ ಕಂಪನಿಗಳಿಂದ ಅಪಘಾತವಾದ / ಮರಣವನ್ನು ಹೊಂದಿದ ಕಾರ್ಮಿಕರಿಗೆ ಕಂಪನಿ ವತಿಯಿಂದ (ಎಸ್ಕಾಂ) ಪರಿಹಾರವನ್ನು ನೀಡುವ ಬಗ್ಗೆ
9).ಈಗಾಗಲೇ ಜಾರಿಯಾಗಿರುವ 1ರಿಂದ 5ಲಕ್ಷದವರೆಗಿನ ತುಂಡು ಗುತ್ತಿಗೆಯ ಕಾಮಗಾರಿಯನ್ನು ಸ್ಥಳಿಯ ಗುತ್ತಿಗೆದಾರರಿಗೆ ಕೊಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಬಗ್ಗೆ
10) ಆರ್ಥಿಕವಾಗಿ ಹಿಂದುಳಿದ ವಿದ್ಯುತ್ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಗಮವನ್ನು ರಚಿಸಿಕೊಡುವ ಬಗ್ಗೆ

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims