ನಾಡೋಜ ಡಾ. ಹೆಚ್. ನರಸಿಂಹಯ್ಯ ಸೇರಿದಂತೆ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರು ಸೇರಿ ಮಟ್ಟು ಹಾಕಿರುವ ಸಂಸ್ಥೆ ಕರಾವಿಣ, ಕಳೆದ ನಾಲ್ಕು ವಶಕಗಳಿಂದ ರಾಜ್ಯದಲ್ಲಿ ವಿಜ್ಞಾನವನ್ನು ಕಳೆದು ಹೋಗಿದೆ
ನಾಡೋಜ ಡಾ. ಹೆಚ್. ನರಸಿಂಹಯ್ಯ ಸೇರಿದಂತೆ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರು ಸೇರಿ ಮಟ್ಟು ಹಾಕಿರುವ ಸಂಸ್ಥೆ ಕರಾವಿಣ, ಕಳೆದ ನಾಲ್ಕು ವಶಕಗಳಿಂದ ರಾಜ್ಯದಲ್ಲಿ ವಿಜ್ಞಾನವನ್ನು ಕಳೆದು ಹೋಗಿದೆ
ನಾಡೋಜ ಡಾ. ಹೆಚ್. ನರಸಿಂಹಯ್ಯ ಸೇರಿದಂತೆ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರು ಸೇರಿ ಮಟ್ಟು ಹಾಕಿರುವ ಸಂಸ್ಥೆ ಕರಾವಿಣ, ಕಳೆದ ನಾಲ್ಕು ವಶಕಗಳಿಂದ ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಲ ಕ್ರಮಿಸುತ್ತಿರುವ ಸಂಸ್ಥೆಯಾಗಿದೆ ಮಾತೃ ಭಾಷೆಯಲ್ಲಿ ವಿಜ್ಞಾನ ಪ್ರಚಾರ ಮಾಡುವುದರ ಜೊತೆಗೆ ವರ್ಷ ಪೂರ್ತಿ ರಾಜ್ಯಾದ್ಯಂತ ನಿರಂತರವಾಗಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಕರಾವಿನ ಆಡಳಿತ ಅವಧಿ ಮುಗಿದು ಎರಡು ವರ್ಷಗಳು ಆಗಿರುತ್ತದೆ. ರಾಜ್ಯದಲ್ಲಿ ನಾಲ್ಕು ವಿಭಾಗಗಳಿಗೆ ಪ್ರತಿ ವಿಭಾಗಕ್ಕೆ ಆರು ಜನರಂತೆ 24 ಜನ ಕಾರ್ಯಕಾರಿ ಸಮಿತಿಗೆ ಚುನಾವಣೆ ಮೂಲಕ ಆಯ್ಕೆಯಾಗಬೇಕಾಗಿರುತ್ತದೆ. ಚುನಾವಣೆಯನ್ನು ನಡೆಸಲು ಸಹಕಾರ ಇಲಾಖೆಗೆ ๒๓๐๐ 19/04/2023 od 20/05/2023 ರಂದು ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿ ಅದೇ ದಿನ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಮಾಹಿತಿ ಅಪೂರ್ಣತೆ ಇದೆಯೆಂದು ಮಾಹಿತಿ ನೀಡಿ ತಾತ್ಕಾಲಿಕವಾಗಿ ಮುಂದೂಡಿರುತ್ತಾರೆ. ನಂತರ ಚುನಾವಣಾ ಅಧಿಕಾರಿಯವರನ್ನೇ ಆಡಳಿತ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸುತ್ತದೆ. ನಂತರ ಹೊಸ ಮುಖ್ಯ ಚುನಾವಣಾ ಅಧಿಕಾರಿ ನೇಮಕ ಗೊಂದು 3/12/2024 ರಂದು ಪೂರ್ಣ ಪ್ರಮಾಣದ ವೇಳಾಪಟ್ಟಿಯನ್ನು ಪ್ರಕಟಿಸಿ ಕಲಂ 25ರ ವಿಚಾರಣಾ ವರದಿಯಲ್ಲಿ ತಿಳಿಸಿರುವ ಸದಸ್ಯತ್ವ ನೊಂದಣಿಯು ಪಾರದರ್ಶಕವಾಗಿರುವುದಿಲ್ಲ ಹಾಗೂ ನಿಯಮ ಬಾಹಿರವಾಗಿರುತ್ತದೆ ಎಂದು ಅಭಿಪ್ರಾಯ ಸಲ್ಲಿಸಿರುವ ಕಾರಣ ನೀಡಿ 11/01/2025 ರಂದು ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿರುತ್ತಾರೆ. ಎರಡು ಬಾರಿ ಚುನಾವಣೆಯನ್ನು ಪ್ರಕಟಿಸಿ ಮತ್ತೆ ಮುಂದೂಡುವುದು ರಾಜ್ಯದ ವಿಜ್ಞಾನ ಪರಿಷತ್ತಿನ ಅಭಿಮಾನಿಗಳಿಗೆ ಹಾಗೂ ದಾನಿ ಸದಸ್ಯರುಗಳಿಗೆ ಬೇಸರ ಮೂಡಿಸಿದೆ. ಕಳೆದ ಬಾರಿ ಕರಾವಿಪದ ಅರ್ಹ ಮತದಾರರ ಪಟ್ಟಿಯನ್ನು ಇಟ್ಟುಕೊಂಡು ಚುನಾವಣೆಯನ್ನು ಮಾಡಲಾಗಿತ್ತು. ಆದರೆ ಈ ಖಾರಿ ಮತದಾರರ ಪಟ್ಟಿ ಸರಿಯಿಲ್ಲವೆಂದು ಮುಂದೂಡುತ್ತಿರುವುದು ಬೇಸರದ ಸಂಗತಿಯಾಗಿದೆ. ಕೆಲವು ದಿನ ಸಂಸ್ಥೆಯ ಬಗ್ಗೆ ಚುನಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದರಿಂದ ಚುನಾವಣೆ ನಡೆಸಲು ತೊಂದರೆಯಾಗುತ್ತಿದೆ. ಸಹಕಾರ ಸಚಿವರು ವಿಜ್ಞಾನ ಪರಿಷತ್ ಬಗ್ಗೆ ಅಭಿಮಾನ ಹೊಂದಿದ್ದಾರೆ. ಆದರೆ ಆರೋಪ ಮಾಡುವವರ ಉದ್ದೇತ ಸರಿ ಇಲ್ಲ. ಕೆಲವರು ಪರಿಷತ್ತನ್ನು ಮುಚ್ಚಿಸಲು ಹೊರಟಿದ್ದಾರೆ.
18 ವರ್ಷ ಮೇಲ್ಪಟ್ಟ ಆಸಕ್ತರು ರೂ. 2000/- ಶುಲ್ಕ ನೀಡಿ ಪರಿಷತ್ತಿನ ದಾನಿ ಸದಸ್ಯರಾಗಬಹುದಾಗಿದೆ. ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ವಾನಿ ಸದಸ್ಯರುಗಳು ಇರುತ್ತಾರೆ. ಸದಸ್ಯತ್ವವನ್ನು ಪಡೆಯಲು ಮಾದರಿ ಅರ್ಜಿ ನಮೂನೆ ವೆಬ್ಸೈಟ್ ನಿಂದ ಅಥವಾ ವಾಟ್ಸಸ್ ನಿಂದ ಪಡೆದು ಅಧಿಕೃತ ದಾಖಲೆಗಳನ್ನು ನೀಡಿ ಸದಸ್ಯತ್ವ ಪಡೆಯಬಹುದಾಗಿದೆ. ಮುಖ್ಯವಾಗಿ ಈ ಗೊಂದಲಕ್ಕೆ ಕಾರಣವಾಗಿರುವುದು ದಿ. 25/02/2022 ರಂದು ಸುಮಾರು 2235 ಅರ್ಜಿದಾರರು ಸದಸ್ಯತ್ವ ಶುಲ್ಕ ರೂ 39,97,000 ನೀಡಿ ಒಂದೇ ದಿನ ಸದಸ್ಯತ್ವವನ್ನು ಪಡೆದಿರುವುದು ನಿಯಮಾನುಸಾರ ಜರುಗಿರದೆ ಹಾಗೂ ಸದಸ್ಯತ್ವ ನೊಂದಣಿಯು ಪಾರದರ್ಶಕತೆಯಿಂದ ಕೂಡಿರದ ಕಾರಣ ನಿಯಮಬಾಹಿರವಾಗಿರುವುದಾಗಿ ವಿಚಾರಣಾ ವರದಿಯಲ್ಲಿ ಅಭಿಪ್ರಾಯ ಪಟ್ಟಿರುವುದರಿಂದ ವಿಚಾರಣಾ ವರದಿಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಚುನಾವಣೆ ಕ್ರಮವಿಡುವಂತೆ ತಿಳಿಸಿರುವ ಹಿನ್ನಲೆಯಲ್ಲಿ ಗೊಂದಲ ಉಂಟಾಗಿದೆ.
ಈ ವಿಷಯಕ್ಕೆ ಸ್ಪಷ್ಟಿಕರಣ ನೀಡುತ್ತಾ ದಿ. 25.02.2022 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಜ್ಯ ಮಟ್ಟದ ಕಾರ್ಯಕ್ರಮ ಜರುಗಿತ್ತು. ಸಮಾವೇಶಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಶಿಕ್ಷಕರು, ಪಾಲಕರು ಹಾಗೂ ವಿಜ್ಞಾನ ಆಸಕ್ತರು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಸಂಯೋಜಕರುಗಳು ಪರಿಷತ್ತಿನ ಸದಸ್ಯತ್ವಕ್ಕೆ ನೋಂದಣಿಗೆ ಸಂಬಂದಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಿದ ಅರ್ಜಿಗಳನ್ನು ದಾಖಲೆ ಸಮೇತ ಕೇಂದ್ರ ಕಛೇರಿಗೆ ತಲಾ 2000 ರೂ ಅಂತ ಒಟ್ಟುಗೂಡಿಸಿ ಒಟ್ಟು ರೂ. 39,97,000 /- ಗಳಷ್ಟು ದೊಡ್ಡ ಮೊತ್ತವನ್ನು ಕೇಂದ್ರ ಕಚೇರಿಯಲ್ಲಿ ಇಡದೇ ನೇರವಾಗಿ ಬ್ಯಾಂಕ್ ಖಾತೆಗೆ ಆಗಿನ ಅಧ್ಯಕ್ಷರಾದ ನಾನು, ಕೆಲವು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಇತರರು ಕಚೇರಿ ಸಿಬ್ಬಂದಿ ಜೊತೆಗೂಡಿ ಜಮೆ ಮಾಡಿದ್ದೇವೆ. ಇದೆಲ್ಲವೂ ಪಾರದರ್ಶಕ ಹಾಗು ಪರಿಷತ್ತಿನ ನಿಯಮಾನುಸಾರ ಆಗಿದೆ. ಹೀಗೆ ಸದಸ್ಯರು ನೀಡಿದ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಅವರಿಗೆ ರಶೀದಿ, ಗುರುತಿನ ಚೀಟಿ, ಸದಸ್ಯತ್ವ ಪತ್ರ ಈಗಾಗಲೆ ಸಂಘವು ನೀಡಿದೆ. ಮುಂದುವರೆದು ಪರಿಷತ್ತಿನ ತ್ರೆ ವಾರ್ಷಿಕ ಚುನಾವಣಾ ನಿಮಿತ್ತ ಎರಡು ಬಾರಿ ಹೊರಡಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಈ ಎಲ್ಲಾ ಸದಸ್ಯರ ಹೆಸರುಗಳಿವೆ. ಎಲ್ಲವೂ ನಿಯಮಾನುಸಾರವಾಗಿವೆ. ಒಂದೇ ದಿನ ಸದಸ್ಯತ್ವ ನೊಂದಣಿಯಾಗಿದ್ದರೂ ಸಹ ಇದು ರಾಜ್ಯದ ವಿವಿಧ ಜಿಲ್ಲೆಗಳಿಗೆ ಅಭಿಯಾನದ ಮೂಲಕ ಕಾರ್ಯಕರ್ತರು ಸಂಗ್ರಹಿಸಿದ ಸದಸ್ಯತ್ವವಾಗಿರುತ್ತದೆ. ಹೀಗೆ ಗುಂಪು ಗುಂಪಾಗಿ ಸದಸ್ಯತ್ವ ಸ್ವೀಕರಿಸಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಆದರೆ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ದುರುದ್ದೇಶ ಪೂರಿತ ವಿಚರಣಾ ವರದಿಯನ್ನು ಸ್ವೀಕರಿಸಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಇದರಿಂದ ಕರಾವಿಪದ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ. ಈ ಮೂಲಕ ಸಹಕಾರ ಸಚಿವರಿಗೆ ಮನವಿಯನ್ನು ಮಾಡುತ್ತೇವೆ ನಿಯಮಾನುಸಾರ ದಾನಿ ಸದಸ್ಯತ್ವ ಪಡೆದ ಎಲ್ಲ ಸದಸ್ಯರನ್ನು ಪರಿಗಣಿಸಿ ವಿಚಾರಣಾ ವರದಿಯನ್ನು ಮರುಪರಿಶೀಲಿಸಲು ಸೂಚಿಸಿ ನಿಂತಿರುವ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆಸಲು ಸಂಭಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಸಂಸ್ಥೆಯ ಹಿತದೃಷ್ಟಿಯಿಂದ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡುತ್ತೇವೆ ಕಳೆದ 3 ವರ್ಷಗಳಿಂದ ಸರ್ಕಾರ ವಿಜ್ಞಾನ ಪರಿಷತ್ತಿಗೆ ಅನುದಾನ ನೀಡಿಲ್ಲ. ಇದರಿಂದ ಪರಿಷತ್ತಿನ ಪ್ರಮುಖ ಯೋಜನೆಗಳು ಸ್ಥಗಿತಗೊಂಡಿದ್ದು, ರಾಜ್ಯದ ಜನತೆ ವೈಜ್ಞಾನಿಕ ಕಾರ್ಯಕ್ರಮಗಳಿಂದ ವಂಚಿತರಾಗುತ್ತಿದ್ದಾರೆ. ಅದಲ್ಲದೇ ಕಳೆದ ನಾಲ್ಕು ದಶಕಗಳಿಂದ ಕನ್ನಡದಲ್ಲಿ ವಿಜ್ಞಾನ ಜನರ ಮನೆ ಮನಗಳಿಗೆ ತಲುಪಿಸುವ ಕಾರ್ಯಕ್ಕಾಗಿ ಅಂತರಾಷ್ಟ್ರೀಯ ಗಿದಾಖಲೆ ನಡೆದಿದ್ದ ವಿಜ್ಞಾನ ಪರಿಷತ್ತಿನ ಮುಖವಾಣಿ ಬಾಲವಿಜ್ಞಾನ ಮಾಸಪತ್ರಿಕೆ ಸಹ ಅನುದಾನದ ಕೊರತೆಯಿಂದ ಪ್ರಕಟಗೊಳ್ಳುತ್ತಿಲ್ಲ. ಕಾರಣ ಸರ್ಕಾರ ಆದಷ್ಟು ಬೇಗ ವಿಜ್ಞಾನ ಪರಿಸತ್ತಿನ ಚುನಾವಣೆ ನಡೆಸಿ ವಿಜ್ಞಾನ ಜನಪ್ರಿಯಗೊಳಿಸಲು ಸಹಕರಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.

Comments
Post a Comment