ಪುರುಷೋತ್ತಮ್ ದಾಸ್ ಹೆಗ್ಗಡೆಯವರ "ಯಾಯಾತಿ" ಬಿಡುಗಡೆ.
ಪುರುಷೋತ್ತಮ್ ದಾಸ್ ಹೆಗ್ಗಡೆಯವರ "ಯಾಯಾತಿ" ಬಿಡುಗಡೆ.
ಬೆಂಗಳೂರು ಮಾರ್ಚ್ 16; ಲೇಖಕ ಪುರುಷೋತ್ತಮ್ ಹೆಗ್ಗಡೆ ಅವರ ಮನೋವೈಜ್ಞಾನಿಕ ಕಾದಂಬರಿ "ಯಯಾತಿ" ಕಾದಂಬರಿ ಬಿಡುಗಡೆ ಸಮಾರಂಭ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು.
ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಮನೋವೈಜ್ಞಾನಿಕ ತಜ್ಞೆ ನಿಮ್ಹಾನ್ಸ್ ನ ಪ್ರಾಧ್ಯಾಪಕಿ ಡಾ.ಮಂಜುಳ, ಈ ಪುಸ್ತಕದಲ್ಲಿ ಲೇಖಕರು ಪೌರಣಿಕ ಐತಿಹಾಸಿಕ ಕಥೆಯನ್ನು ಮನೋವೈಜ್ಞಾನಿಕವಾಗಿ ಚಿತ್ರೀಕರಿಸಿದ್ದಾರೆ,ಈ ಪುಸ್ತಕ ನಮ್ಮನ್ನು ಒದಿಸಿಕೊಂಡು ಹೋಗುತ್ತದೆ.ಮನಶಾಸ್ತ್ರವನ್ನು ವಿವರಿಸುವ ಸಂದರ್ಭದಲ್ಲಿ ವಿವರಿಸಿದ್ದಾರೆ.ಒಬ್ಬ ವ್ಯಕ್ತಿಯ ನಡವಳಿಕೆಯನ್ನು ಹೇಗೆ ಅರ್ಥಮಾಡಿಕೊಳಬೇಕು ಎಂಬುದನ್ನು ಈ ಕಾದಂಬರಿ ತಿಳಿಸಲಿದೆ,ಜೀವನದ ಉದ್ದೇಶ ಏನ್ನೇಬುದನ್ನು ಅರ್ಥಮಾಡಿಕೊಳ್ಳದೇ ಗುರಿ ಸಾಧಿಸಲು ಸಾಧ್ಯವಿಲ್ಲ ಎಂಬುದು ಈ ಕಾದಂಬರಿಯ ಪ್ರಮುಖ ಸಾರಂಶವಾಗಿದೆ,ಒದಲು ಕಾದಂಬರಿ ಅತ್ಯಂತ ಆಕರ್ಷಕವಾಗಿದೆ ಎಂದು ಹೇಳಿದರು.
ಖ್ಯಾತ ವಿಮರ್ಶಕ ದಂಡಪ್ಪ ಮಾತನಾಡಿ, ಪುರುಷೋತ್ತಮ್ ದಾಸ್ ಹೆಗ್ಗಡೆ ರಾಮಾಯಣ ಬರೆದಿದ್ದಾರೆ,ಮನಃಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸ್ತುತ ಯಾಯತಿಯನ್ನು ಬರೆದಿದ್ದಾರೆ.ಪುರಾಣಗಳನ್ನು ಆಯ್ಕೆ ಮಾಡಿಕೊಂಡು ಈ ಕಾದಂಬರಿ ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಶಾಸ್ತ್ರ ಸೇರಿ ಎಲ್ಲ ಅಂಶಗಳನ್ನು ಸೇರಿಸಿಕೊಂಡು ರಚನೆಯಾದ ಉತ್ತಮ ಕಾದಂಬರಿಯಾಗಿದೆ.ಈ ಕಥೆಯಲ್ಲಿ ನಿರೂಪಣೆ ಅತ್ಯದ್ಬುತವಾಗಿ ಮೂಡಿ ಬಂದಿದೆ ಎಂದರು.
ಲೇಖಕಿ ಪುರುಷೋತ್ತಮ್ ದಾಸ್ ಹೆಗ್ಗಡೆ ಮಾತನಾಡಿ,ಮನುಷ್ಯನಿಗೆ ಮುಪ್ಪು,ಸಾವಿನ ಬಗ್ಗೆ ಸಂಶಯ ಕಾಡುತ್ತಲೇ ಬಂದಿದೆ.ಇದಕ್ಕಾಗಿ ಅವರಿಗೆ ಭಯ ಕಾಡುತ್ತಲೇ ಇರುತ್ತದೆ.ಮನುಷ್ಯ ತಾನು ಸತ್ತರೂ ಪರವಾಗಿಲ್ಲ ನನ್ನ ವಂಶ ಬೆಳೆಯಬೇಕು ಎಂಬುದು ಈ ಕೃತಿಯ ಸಾರಾಂಶವಾಗಿದೆ,ಮುಪ್ಪು ಮತ್ತು ಸಾವಿನ ಬಗ್ಗೆ ಮೂನ್ನೂರಕ್ಕೂ ಅಧಿಕ ಪುಸ್ತಕಗಳು ರಚನೆಯಾಗಿವೆ ಇದನ್ನು ಗ್ಯಾರೋಂಟಾಲಜಿ ಎಂದು ಕರೆಯಲಾಗುತ್ತದೆ. ಈ ಕೃತಿಯಲ್ಲಿ ವಿವಿಧ ಪಾತ್ರಗಳ ಮನಸ್ಸು, ಪಾತ್ರವನ್ನು ಅಧ್ಯಯನ ನಡೆಸಿ ಮನೋವೈಜ್ಞಾನಿಕವಾಗಿ ತಯಾರಿಸಲಾಗಿದೆ.ಆಧುನಿಕ ಜಗತ್ತಿನಲ್ಲಿ ಯಾಯಾತಿ ಬಾರೀ ಪ್ರಮುಖ ಪಾತ್ರ ಪಡೆದುಕೊಳಲಿದೆ.ಯತಿ,ಯಾಯತಿ,ಕಚ,ದೇವಯಾನಿ,ಶರ್ಮಿಷ್ಟೆ,ಪುರು ಪಾತ್ರಗಳ ವ್ಯಕ್ತಿತ್ವಗಳ ಸ್ವಭಾವ ಚಿತ್ರ ಪಕ್ಕದ ಕಟ್ ಇದೆ ಎಂದರು.
ಚಿಂತಕ,ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ಕನಕ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಕಾ.ತ.ಚಿಕ್ಕಣ್ಣ, ಸಾಹಿತಿಗಳಾದ ಲಕ್ಷ್ಮಣ್ ಕೊಡಸೆ.ದಾಮೋಧರ್ ಸೇರಿದಂತೆ ಅಪಾರ ಸಾಹಿತಿ, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಭಾಗವಹಿಸಿದ್ದರು.

Comments
Post a Comment