ರಾಜ್ಯಮಟ್ಟದ ವಿಶ್ವಕರ್ಮ ಜನಜಾಗೃತಿ ಬೃಹತ್ ಸಮಾವೇಶ 23 ಏಪ್ರಿಲ್ 2025ನೇ ಬುಧವಾರ ಮಧ್ಯಾಹ್ನ 2-30ಗಂಟೆಗೆ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ರಾಜ್ಯಮಟ್ಟದ ವಿಶ್ವಕರ್ಮ ಜನಜಾಗೃತಿ ಬೃಹತ್ ಸಮಾವೇಶ
23 ಏಪ್ರಿಲ್ 2025ನೇ ಬುಧವಾರ ಮಧ್ಯಾಹ್ನ 2-30ಗಂಟೆಗೆ
ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
ಪಂಚ ಶಿಲ್ಪಗಳಾದ ಕಾಷ್ಠ ಶಿಲ್ಪ (ಮರ) ಲೋಹ ಶಿಲ್ಪ (ಕಬ್ಬಿಣ) ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ) ಎರಕ ಶಿಲ್ಪ (ಕಂಚು), ಸ್ವರ್ಣಶಿಲ್ಪ (ಚಿನ್ನ-ಬೆಳ್ಳಿ), ಪಂಚವೃತ್ತಿಗಳಲ್ಲಿ ಅಮೋಘ ಸಾಧನೆಗೈದಿರುವ ವಿಶ್ವಕರ್ಮ 5 ಪರುಷ ಸಾಧಕರಿಗೆ "ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್" "ವಿಶ್ವಕರ್ಮ ಕಲಾಸಿಂಧು" "ವಿಶ್ವಕರ್ಮ ಶಿಲ್ಪಶ್ರೀ" "ವಿಶ್ವಕರ್ಮ ಕಲಾ ಕೌಸ್ತುಭ" "ವಿಶ್ವಕರ್ಮ ಕಲಾ ಸೌರಭ" ಪ್ರಶಸ್ತಿ ಪುರಸ್ಕಾರ ನೀಡಲಾಗುವುದು ಹಾಗೂ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಕಾನೂನು, ಪ್ರತಿಭೆ, ಕ್ರೀಡೆ, ರಂಗಭೂಮಿ, ಚಲನಚಿತ್ರ ಇತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ 5 ಮಹಿಳಾ ಸಾಧಕರಿಗೆ “ವಿಶ್ವಕರ್ಮ ಕಲಾ ಸಿಂಧು" "ವಿಶ್ವಕರ್ಮ ಸಾಹಿತ್ಯ ಸೌರಭ" "ವಿಶ್ವಕರ್ಮ ಕಲಾ ಸೌರಭ" "ವಿಶ್ವಕರ್ಮ ಕಲಾಕೌಸ್ತುಭ" "ವಿಶ್ವಕರ್ಮ ಕಲಾಶ್ರೀ" ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘವು ನಿರ್ಧರಿಸಿದೆ. ಈ ಪ್ರಶಸ್ತಿ ಪುರಸ್ಕಾರವು 5 ಪುರುಷ ಸಾಧಕರಿಗೆ ಮತ್ತು 5 ಮಹಿಳಾ ಸಾಧಕರಿಗೆ ನಗದು ಸ್ಮರಣಿಕೆ (ಫಲಕ) ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಈ ಪ್ರಶಸ್ತಿ ಆಯ್ಕೆಗೆ ಸಂಬಂದಿಸಿದಂತೆ ಆಯಾಯ ವೃತ್ತಿಯಲ್ಲಿ ಸಾಧನೆ ಮಾಡಿರುವ ಹಿರಿಯ ಸಾಧಕರನ್ನು ಒಳಗೊಂಡ ಆಯ್ಕೆ ಸಮಿತಿ ರಚಿಸಲಾಗುತ್ತದೆ
ದಿನಾಂಕ 23-04-2025, ಬುಧವಾರ ಬೆಂಗಳೂರು, ಜೆ.ಸಿ. ರಸ್ತೆಯ "ರವೀಂದ್ರ ಕಲಾಕ್ಷೇತ್ರ" ದಲ್ಲಿ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಬೃಹತ್ ವಿಶ್ವಕರ್ಮ ಸಮಾವೇಶ ನಡೆಯಲಿದೆ. ಇದೇ ಸಮಾವೇಶದಲ್ಲಿ ಪುರುಷ ಸಾಧಕರಿಗೆ ಹಾಗೂ ಮಹಿಳಾ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ನಾಡು ನುಡಿಗಾಗಿ ಸೇವೆ ಸಲ್ಲಿಸಿದ ನೂರಾರು ಮಹನಿಯರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಪ್ರಶಸ್ತಿಗೆ ಭಾಜನರಾದ ಸಾಧಕರ ಹೆಸರನ್ನು ಅಂದಿನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ, ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾನ್ಯ ಸಚಿವರ ಸಮ್ಮುಖದಲ್ಲಿ ಪುರಸ್ಕರಿಸಲಾಗುವುದು.


Comments
Post a Comment