Posts

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದ

Image
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ದಲಿತ ಮತ್ತು ಮಾದಿಗ ಸಂಘಟನೆಗಳು ಕಳೆದ 30 ವರ್ಷಗಳಿಂದ ಬೀದಿಗಿಳಿದು ಹೋರಾಡಿದ ಪರಿಣಾಮದಿಂದಲೇ ಸಾಮಾಜಿಕ ನ್ಯಾಯವಾದ ಒಳ ಮೀಸಲಾತಿ ವರ್ಗೀಕರಣವು ದಿಲ್ಲಿಯಿಂದ ರಾಜ್ಯ ರಾಜ್ಯಧಾನಿಯವರೆಗೆ ಗೆಲುವು ಕಂಡಿದೆ. 2022ರ ಫ್ರೀಡಂ ಪಾರ್ಕ್ ಐತಿಹಾಸಿಕ ಹೋರಾಟದಿಂದ ಹಂತ ಹಂತವಾಗಿ ಒಳಮೀಸಲಾತಿ ಹೋರಾಟವು ಯಶಸ್ವಿಯಾಗಿ ಮುಂದೆ ಸಾಗಿದೆ. ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳ ಸಂವಿಧಾನಿಕ ಸೌಲಭ್ಯಗಳ ಹಂಚಿಕೆಯಲ್ಲಿ ಉಂಟಾದ ತಾರತಮ್ಯಗಳ ನಿವಾರಣಾ ಸಮಿತಿಯು ಭಾರತದಲ್ಲಿ ಮೊದಲ ಬಾರಿಗೆ ಮನೆಮನೆಯ ಸಮೀಕ್ಷೆಯನ್ನು ನಡೆಸಿ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ದಿನಾಂಕ: 06.06.2012 ರಂದು ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ಒಳಮೀಸಲಾತಿ ಸಮಸ್ಯೆಯನ್ನು ಒಂದು ಸಾಮಾಜಿಕ ನ್ಯಾಯವೆಂದು ಪರಿಗಣಿಸದೆ ರಾಜಕೀಯ ದಾಳವಾಗಿ ಉಪಯೋಗಿಸಿರುವುದು ದುರಂತದ ವಿಷಯ. ಇದು ಖಂಡನೀಯ. ಮಾನ್ಯ ಸುಪ್ರೀಂ ಕೋರ್ಟ್ ದಿನಾಂಕ 1.8.2024ರಂದು ಒಳ ಮೀಸಲಾತಿ ನೀಡುವ ...

ಕರ್ನಾಟಕ ಆದಿಜಾಂಬವ(ಮಾದಿಗ) ಸಂಘಟನೆಗಳ ಒಕ್ಕೂಟ ಸಂವಿಧಾನ ಜಾಗೃತ ಸಮಾವೇಶ : ಸ್ಥಳ: ಫ್ರೀಡಂ ಪಾರ್ಕ್

Image
  ಕರ್ನಾಟಕ ಆದಿಜಾಂಬವ(ಮಾದಿಗ) ಸಂಘಟನೆಗಳ ಒಕ್ಕೂಟ ಸಂವಿಧಾನ ಜಾಗೃತ ಸಮಾವೇಶ : ಸ್ಥಳ: ಫ್ರೀಡಂ ಪಾರ್ಕ್ ಕರ್ನಾಟಕ ಆದಿಜಾಂಬವ ಸಂಘಟನೆಗಳ ಒಕ್ಕೂಟವು ರಾಜ್ಯ ಮಟ್ಟದ ಸ್ವಯಂ ಸೇವಾ ಸಂಘವಾಗಿದ್ದು, ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ವರ್ಗದವರ ಏಳಿಗೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ರಾಜ್ಯದಲ್ಲಿ ಅತೀ ಶೋಷಣೆಗೊಳಗಾಗಿರುವ ಅಸ್ಪಷ್ಟ ಕೋಮಿಗೆ ಸೇರಿದ. ಮಾದಿಗ, ಮೋಚಿ, ಮಾದಾರ, ಮಾಂಗ್, ಮಾತಂಗ, ಜಾಡಮಾಲಿ, ಚಮ್ಮಾರ, ಮಣೆಗಾರ, ಆದಿಶೈವ, ಆದಿಜಾಂಬವ ಮುಂತಾದ ಹೆಸರಿನಿಂದ ಕರೆಯಲ್ಪಡುವ ಆದಿಜಾಂಬವ ಜನಾಂಗವು ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಅತೀ ಹಿಂದುಳಿದಿರುತ್ತದೆ. ಅಲ್ಲದೆ, ಈ ಸಮುದಾಯವು ಚರ್ಮೋದ್ಯೋಗ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಹೀನಾಯವಾದ ಮತ್ತು ಆನೈರ್ಮಲ್ಯ ವಾತಾವರಣದಲ್ಲಿ ಜೀವಿಸುತ್ತಿದ್ದು ಇವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗದೆ ಡಾ: ಅಂಬೇಡ್ಕ‌ರವರ ಮೀಸಲಾತಿಯ ಸವಲತ್ತಿನಿಂದ ವಂಚಿತರಾಗಿದ್ದಾರೆ. 1. ಈ ಹಿನ್ನೆಲೆಯಲ್ಲಿ ಆದಿಜಾಂಬವ ಸಂಘವು 1992ರಿಂದಲೂ ಎಲ್.ಜಿ. ಹಾವನೂರ್ ಆಯೋಗವು 1975ರಲ್ಲಿ ನೀಡಿದ್ದ ವರದಿಯನ್ವಯ ಪರಿಶಿಷ್ಟ ಜಾತಿಯ ಶೇ. 55.57ರಷ್ಟಿರುವ ಆದಿಜಾಂಬವ ಸಮುದಾಯಕ್ಕೆ ಮೀಸಲಾತಿಯಲ್ಲಿ ಜನಸಂಖ್ಯೆಗನುಗುಣವಾಗಿ, ಪ್ರತ್ಯೇಕ ಮೀಸಲಾತಿ ನೀಡಬೇಕೆಂಬ ಒತ್ತಾಯ ಮಾಡಿದ್ದು, ಭಾರತದ ಆಂದ್ರ, ಹರಿಯಾಣ, ಪಂಜಾಬ್, ತಮಿಳುನಾಡು, ಬಿಹಾರ, ಉತ್ತರಖಾಂಡ ಮುಂತಾದ ರಾಜ್ಯಗಳಲ್ಲಿಯೂ ಮೀಸ...

61-ವರ್ಷ-ವಯಸ್ಸಿನ ಸ್ಕೂಲಕಾಯದ ಆಫ್ರಿಕನ್ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಬೋಟ್

Image
 61-ವರ್ಷ-ವಯಸ್ಸಿನ ಸ್ಕೂಲಕಾಯದ ಆಫ್ರಿಕನ್ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನಿಂದ ಮೂತ್ರಪಿಂಡ ಕಸಿ ಮೂಲಕ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು ಬೆಂಗಳೂರು, 22 ನವೆಂಬರ್, 2024: ಕೊನೆ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ಆಫ್ರಿಕನ್ ಮೂಲಕದ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ರೋಟೋಟ್ ನೆರವಿನಿಂದ ಮೂತ್ರಪಿಂಡದ ಕಸಿ ಮಾಡಿದೆ. ಕನ್ನಿಂಗ್ ಹ್ಯಾಮ್ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಡಾ.ಮೋಹನ್ ಕೇಶವಮೂರ್ತಿ, ಹಿರಿಯ ನಿರ್ದೇಶಕರು - ಮೂತ್ರಶಾಸ್ತ್ರ, ಯುರೋ-ಅಂಕೊಲಾಜಿ, ಯುರೋ-ಗೈನಕಾಲಜಿ, ಅಂಡ್ರಾಲಜಿ, ಕಿಡ್ನಿ ಟ್ರಾನ್ಸ್ ಪ್ಲಾಂಟ್, ಮತ್ತು ರೊಬೊಟಿಕ್ ಸರ್ಜರಿ ಫೋರ್ಟಿಸ್ ಅಸ್ಪತ್ರೆ ಬೆಂಗಳೂರು, ಇಂಡಿಯಾದಲ್ಲಿ ರೆನಲ್ ಸೈನ್ಸಸ್ ಸ್ಪೆಷಾಲಿಟಿ ಕೌನ್ಸಿಲ್, ಡಾ. ಶಕೀರ್ ತಬ್ರೇಜ್, ಹೆಚ್ಚುವರಿ ನಿರ್ದೇಶಕ - ಮೂತ್ರಶಾಸ್ತ್ರ, ಯುರೋ-ಅಂಕೊಲಾಜಿ, ಅಂಡ್ರಾಲಜಿ, ಕಿಡ್ನಿ ಟ್ರಾನ್ಸ್ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ಮತ್ತು ಡಾ ರೇಣುಕಾ ಪ್ರಸಾದ್, ಹಿರಿಯ ಸಲಹೆಗಾರ - ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ, ನೆಫ್ರಾಲಜಿ ವೈದ್ಯರ ತಂಡ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು. ರೋಗಿಯು ಚೇತರಿಸಿಕೊಂಡು, ಶಸ್ತ್ರಚಿಕಿತ್ಸೆಯ ನಂತರ ಕೇವಲ ಆರು ದಿನಗಳಲ್ಲಿ ಬಿಡುಗಡೆ ಹ...

ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ,

Image
 *ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ಮಾಡಿ, ರೂಪಶ್ರೀ ಮೇಲೆ ಕೇಸ್ ದಾಖಲಿಸಿ ಎಂದು ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಒತ್ತಾಯ* ಪ್ರೆಸ್ ಕ್ಲಬ್ ಸಭಾಂಗಣದಲ್ಲಿ : ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು ಮತ್ತು ಮನೆ ಮಾಲೀಕ ಬಾಲಕೃಷ್ಣನಾಯಕ್ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ಬೆಂಗಳೂರು ನಗರ ಜಲ್ಲೆ ಯಲಹಂಕ ತಾಲ್ಲೂಕು ಎಲ್ ಬಿ.ಎಸ್.ನಗರದ ನಂಬರ್ 112ರ ಮಾಲೀಕರಾದ ಬಾಲಕೃಷ್ಣ ನಾಯಕ್ ರವರ ಮನೆಯಲ್ಲಿ ರೂಪಶ್ರೀ ಎಂಬುವರಿಗೆ ಮನೆ ಬಾಡಿಗೆಗೆ ನೀಡಲಾಗಿತ್ತು. ರೂಪಶ್ರೀ ರವರಿಗೆ ಮನೆ ಖಾಲಿ ಮಾಡು ಎಂದರೆ ಇಲ್ಲ ಸಲ್ಲದ ಅರೋಪ, ಜಾತಿ ನಿಂದನೆ ಹಾಗೂ 5ಲಕ್ಷ ರೂಪಾಯಿ ಕೊಟ್ಟಿರುವ ಹಣಕ್ಕೆ 10ಲಕ್ಷ ಕೊಡಿ ಎಂದು ಸುಳ್ಳು ಹೇಳುತ್ತಿದ್ದಾರೆ ರೂಪಶ್ರೀರವರು. ರೂಪಶ್ರೀ ರವರು ಜಾತಿ ನಿಂದನೆ ಮಾಡಿರುವುದನ್ನ ಖಂಡಿಸಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ದೂರು ನೀಡಿದರು 48ದಿನವಾದರು ಕ್ರಮ ಕೈಗೊಂಡಿಲ್ಲ. ಯಲಹಂಕ ನ್ಯೂಟೌನ್ ಠಾಣೆಯ ನಿರೀಕ್ಷರಾದ ಸುಧಾಕರ್ ರೆಡ್ಡಿರವರನ್ನು ವರ್ಗಾವಣೆ ಮಾಡಬೇಕು ರೂಪಶ್ರೀ ರವರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸಬೇಕು ಇಲ್ಲದೇ ಹೋದರೆ 25ನೇ ತಾರೀಖು ಸೋಮವಾರ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು *ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು* ರವರು ಹೇಳಿದರು

ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(ರಿ)

Image
 ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(ರಿ) ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್( ಡೋಹರ, ಮಚಿಗಾರ, ಸಮಗಾರ ಸಹೋದರ ಬಾಂಧವರ ಒಕ್ಕೂಟ ಗೌರವಾನ್ವಿತ ಸಹೋದರ ಬಾಂಧವರೇ, ಕರ್ನಾಟಕ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತು, ಡೋಹರ, ಮಚಿಗಾರ. ಸಮಗಾರ ಎಂಬ ಮೂರು ಹೆಸರುಗಳಿಂದ ಕರೆಯಲ್ಪಡುವ ಚರ್ಮಕಾರರ ಸರ್ವತೋಮುಖ ಏಳಿಗೆಗಾಗಿ ವೈಜ್ಞಾನಿಕ ಚಿಂತನೆ, ಪ್ರಗತಿಪರ ಉದ್ದೇಶಗಳು ಹಾಗೂ ನಿಸ್ವಾರ್ಥ ಕಾರ್ಯಾಚರಣೆಗಳನ್ನು ಹೊಂದಿಕ ರಾಜ್ಯಮಟ್ಟದ ಸಂಘಟನೆಯಾಗಿದೆ. ಚರ್ಮೋತ್ಪನ್ನಗಳ ತಯಾರಿಕೆಯನ್ನು ಹಲವಾರು ಶತಮಾನಗಳಿಂದ ಕುಲಕಸುಬನ್ನಾಗಿ ರೂಢಿಸಿಕೊಂಡು ಬಂದ ಒಂದೇ ಕುಲಮೂಲದ ಬಾಂಧವರು ತಮ್ಮ ಮೂಲವನ್ನು ಅರಿಯದೆ ತಾವು ಬೇರೆ ಬೇರೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಶತಮಾನಗಳಿಂದ ಪ್ರತ್ಯೇಕವಾಗಿಯೇ ಉಳಿದಿದ್ದಾರೆ ಈ ಮೂವರು ಸಹೋದರ ಬಾಂಧವರನ್ನು ಒಂದುಗೂಡಿಸಿ ಪರಸ್ಪರ ವಿಶ್ವಾಸ, ಆತೀಯತೆ, ಗೌರವ, ಆದರ ಮತ್ತು ಸ್ನೇಹ ಭಾವಗಳ ಐಕ್ಯಗೊಳಿಸುವುದು ಹಾಗೂ ತಮ್ಮನ್ನು ಬೇರೆ ಬೇರೆ ಎಂದು ನಂಬುವಂತೆ ಮಾಡಿದ ಜಾತಿ ವ್ಯವಸ್ಥೆಯ ಕೇಡುಗಳನ್ನು ತೊಡೆದು ಹಾಕಿ, ವೃತ್ತಿ, ಪ್ರವೃ ನಡೆ-ನುಡಿ ಮುಂತಾದ ಎಲ್ಲದರಲ್ಲೂ ಒಂದುಗೂಡಿಸಿ ಅಖಂಡ ಸಮುದಾಯವನ್ನಾಗಿ ಮಾಡುವ ಗುರಿ ಪರಿಷತ್ತಿನ ಮುಂದಿದೆ. ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತು 2018 ರಲ್ಲಿ ಬೆಂಗಳೂರಿನ ಬಸವಭವನದಲ್ಲಿ ಆರಂಭವಾಗಿ ಕಳೆದ 6 ವರ್ಷಗಳಿಂದ ಮಡಿಯುತ್ತಿ "ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್' ಎಂದಿದ...

ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ

Image
: ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ ದಿನಾಂಕ 20-11-2024ನೇ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಫ್ರೀಡಂ ಪಾರ್ಕ್, ಬೆಂಗಳೂರು ಇಲ್ಲಿ ಐಐಎಂನಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳು : ಐಐಎಂ-ಬೆಂಗಳೂರು ಕಾರ್ಯನಿರ್ವಹಿಸಬೇಕು. ಮೀಸಲಾತಿಯನ್ನು ಜಾರಿಗೊಳಿಸಿ. SC, ST ಮತ್ತು OBC ಕೋಶಗಳನ್ನು ರೂಪಿಸಿ, ಜಾತಿ ತಾರತಮ್ಯ ನಿಲ್ಲಿಸಿ. ಜಾತಿ ಕಿರುಕುಳ ನಿಲ್ಲಿಸಿ, ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರತಿಭಟನೆಯನ್ನು ಈ ಕೆಳಕಂಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. OBC 2 률 (AIOBCSA) 2) ಡಾ ಬಿ.ಆರ್. ಅಂಬೇಡ್ಕರ್ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ (ಬಾನೆ) 3) OBC ಫೆಡರೇಶನ್ ಆಫ್ ಇಂಡಿಯಾ. ಬೆಂಗಳೂರು ಗೌರವ ವಂದನೆಗಳೊಂದಿಗೆ, Kuantumes ಶ್ರೀ ಗೌಡ ಕಿರಣ್‌ ಕುಮಾರ್ ಅಧ್ಯಕ್ಷರು (AIOBCSA) ತಮ್ಮ ವಿಶ್ವಾಸಿಗಳು ಶ್ರೀ ಜೆ. ಎಂಜೇರಪ್ಪ ಅಧ್ಯಕ್ಷರು ಒಬಿಸಿ ಫೆಡರೇಷನ್ ಆಫ್ ಇಂಡಿಯಾ ಶ್ರೀ ಬಿ.ಎಂ. ಪವನ್ ಸಿಂಗ್ ಪ್ರಧಾನ ಕಾರ್ಯದರ್ಶಿ ಒಬಿಸಿ ಫೆಡರೇಷನ್ ಆಫ್ ಇಂಡಿಯಾ

ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ(ರಿ ) ಪತ್ರಿಕಾಗೋಷ್ಠಿ

Image
 ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ(ರಿ )  ಪತ್ರಿಕಾಗೋಷ್ಠಿ  ರಾಜ್ಯದ ಕೆ.ಪಿ.ಟಿ.ಸಿ.ಎಲ್‌ದಿಂದ 2975 ಲೈನ್‌ಮನ್ ಹಾಗೂ ಸ್ಟೇಷನ್ ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಇದರಲ್ಲಿ ಐ.ಟಿ.ಐ. ಅಭ್ಯರ್ಥಿಗಳನ್ನು ಕೈಬಿಟ್ಟು ಬರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಮೇರೆಗೆ ನೇಮಕಾತಿ ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ವಿದ್ಯುತ್ ನಿಗಮಗಳಲ್ಲಿನ ಕೆಲಸ ಕಾರ್ಯಗಳು ಅಪಾಯಕಾರಿ ಹೈ ಓಲ್ಲೇಜ್‌ನಿಂದ ಕೂಡಿರುತ್ತವೆ. ಇವುಗಳಲ್ಲಿ ಐ.ಟಿ.ಐ.ಅಭ್ಯರ್ಥಿಗಳ ಬದಲಿಗೆ ಎಸ್.ಎಸ್.ಎಲ್.ಸಿ. ಅಭ್ಯರ್ಥಿಗಳನ್ನು ತೊಡಗಿಸುವುದರಿಂದ ಕಳೆದ 07 ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವರ ಜೀವ ಹಾನಿಯಾಗಿವೆ. ಅನೇಕರು ಅಂಗವಿಕಲರಾಗಿದ್ದಾರೆ. ಇದಕ್ಕೆ ಕಾರಣ ಅಭ್ಯರ್ಥಿಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯಾಗಿದೆ. ಇವರಿಗೆ ಕಲಿಕೆಯಲ್ಲಿ ತರಬೇತಿ ಇರುವುದಿಲ್ಲ. ಹೀಗಿದ್ದೂ 2016 ರಿಂದ ಸತತವಾಗಿ ಇವರ ನೇಮಕಾತಿಗಳು ನಡೆಯುತ್ತಿವೆ. ಇನ್ನು ಐ.ಟಿ.ಐ, ಅಭ್ಯರ್ಥಿಗಳು ವಿದ್ಯುತ್ ಕೆಲಸ ಕಾರ್ಯಗಳ ಜ್ಞಾನ ಹಾಗೂ ಕೌಶಲ್ಯ ಹೊಂದಿರುತ್ತಾರೆ. ಹೀಗಾಗಿ 2007 ರಿಂದ 2015 ರವರೆಗೆ ಇವರನ್ನು ಅಷಿಸ್ಟೆಂಟ್ ಲೈನ್‌ಮನ್ ಹಾಗೂ ಅಸಿಸ್ಟಂಟ್ ಸ್ಟೇಷನ್ ಆಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಸರ್ಕಾರ ಇವರಿಗಾಗಿಯೇ ಹುದ್ದೆಗಳನ್ನು ಸೃಜಿಸಲಾಗಿದ್ದರೂ ಕಳೆದ 7ವರ್ಷದಲ್ಲಿ ಸುಮಾರು 18ಸಾವಿರ ಹುದ್ದೆಗಳಿಗೆ ಐ.ಟಿ.ಐ.ದವರನ್ನು ...