ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ(ರಿ ) ಪತ್ರಿಕಾಗೋಷ್ಠಿ
ಕರ್ನಾಟಕ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘ(ರಿ )
ಪತ್ರಿಕಾಗೋಷ್ಠಿ
ರಾಜ್ಯದ ಕೆ.ಪಿ.ಟಿ.ಸಿ.ಎಲ್‌ದಿಂದ 2975 ಲೈನ್‌ಮನ್ ಹಾಗೂ ಸ್ಟೇಷನ್ ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಇದರಲ್ಲಿ ಐ.ಟಿ.ಐ. ಅಭ್ಯರ್ಥಿಗಳನ್ನು ಕೈಬಿಟ್ಟು ಬರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಮೇರೆಗೆ ನೇಮಕಾತಿ ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ವಿದ್ಯುತ್ ನಿಗಮಗಳಲ್ಲಿನ ಕೆಲಸ ಕಾರ್ಯಗಳು ಅಪಾಯಕಾರಿ ಹೈ ಓಲ್ಲೇಜ್‌ನಿಂದ ಕೂಡಿರುತ್ತವೆ. ಇವುಗಳಲ್ಲಿ ಐ.ಟಿ.ಐ.ಅಭ್ಯರ್ಥಿಗಳ ಬದಲಿಗೆ ಎಸ್.ಎಸ್.ಎಲ್.ಸಿ. ಅಭ್ಯರ್ಥಿಗಳನ್ನು ತೊಡಗಿಸುವುದರಿಂದ ಕಳೆದ 07 ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅವರ ಜೀವ ಹಾನಿಯಾಗಿವೆ. ಅನೇಕರು ಅಂಗವಿಕಲರಾಗಿದ್ದಾರೆ. ಇದಕ್ಕೆ ಕಾರಣ ಅಭ್ಯರ್ಥಿಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯಾಗಿದೆ. ಇವರಿಗೆ ಕಲಿಕೆಯಲ್ಲಿ ತರಬೇತಿ ಇರುವುದಿಲ್ಲ. ಹೀಗಿದ್ದೂ 2016 ರಿಂದ ಸತತವಾಗಿ ಇವರ ನೇಮಕಾತಿಗಳು ನಡೆಯುತ್ತಿವೆ.
ಇನ್ನು ಐ.ಟಿ.ಐ, ಅಭ್ಯರ್ಥಿಗಳು ವಿದ್ಯುತ್ ಕೆಲಸ ಕಾರ್ಯಗಳ ಜ್ಞಾನ ಹಾಗೂ ಕೌಶಲ್ಯ ಹೊಂದಿರುತ್ತಾರೆ. ಹೀಗಾಗಿ 2007 ರಿಂದ 2015 ರವರೆಗೆ ಇವರನ್ನು ಅಷಿಸ್ಟೆಂಟ್ ಲೈನ್‌ಮನ್ ಹಾಗೂ ಅಸಿಸ್ಟಂಟ್ ಸ್ಟೇಷನ್ ಆಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಆದರೆ ಸರ್ಕಾರ ಇವರಿಗಾಗಿಯೇ ಹುದ್ದೆಗಳನ್ನು ಸೃಜಿಸಲಾಗಿದ್ದರೂ ಕಳೆದ 7ವರ್ಷದಲ್ಲಿ ಸುಮಾರು 18ಸಾವಿರ ಹುದ್ದೆಗಳಿಗೆ ಐ.ಟಿ.ಐ.ದವರನ್ನು ಸಂಪೂರ್ಣವಾಗಿ ಕಡೆಗಣಿಸಿ ಎಸ್.ಎಸ್.ಎಲ್.ಸಿ. ಅಭ್ಯರ್ಥಿಗಳನ್ನು ನೇಮಕ ಮಾಡಿರುವುದು, ಸೂಕ್ತವಲ್ಲ. ಇದರ ಹಿಂದೆ ನಿಗಮಗಳ ಕೆಲವು ಅಧಿಕಾರಿಗಳ ಕುತಂತ್ರವಿದೆ. ಅದೇನೆಂದರೆ ಮುಂದೆ ಇವರಿಗೆ ಜೆ.ಇ. ಎ.ಇ. ಹುದ್ದೆಗಳಿಗೆ ಬಡ್ತಿ ಕೊಡಬೇಕಾಗುತ್ತದೆ. ಮತ್ತು ಅವರ ಕೈ ಕೆಳಗೆ ಕೆಲಸ ಮಾಡಬೇಕಾಗುತ್ತದೆ ಎಂಬುದಾಗಿದೆ.
ಇನ್ನು ಕೇಂದ್ರ ಸರ್ಕಾರ ಹಾಗೂ ನಮ್ಮ ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ವಿದ್ಯುತ್ ನಿಗಮಗಳಲ್ಲಿ ಎಸ್.ಎಸ್.ಎಲ್.ಸಿ. ಅಭ್ಯರ್ಥಿಗಳನ್ನು ನೇಮಕ ಮಾಡದೇ ಐ.ಟಿ.ಐ. ಅಭ್ಯರ್ಥಿಗಳನ್ನೇ ನೇಮಕ ಮಾಡಲಾಗುತ್ತಿದೆ. ಆದ್ದರಿಂದ ಸರ್ಕಾರ ಇನ್ನಾದರೂ ಈಗ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕು. ... ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ನ್ಯಾಯಾಂಗದ ಮೊರೆ ಹೋಗುವುದು ಅನಿವಾರ್ಯವಾಗಲಿದೆ.
ಎಸ್.ಎಂ. ನೆರಬೆಂಚಿ ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಖಾಸಗಿ ಐ.ಟಿ.ಐ.ಗಳ ಸಂಘ (ರಿ) , .: 9449612431
ಸಂಘದ ಮುಖಂಡರಾದ ಶ್ರೀ ಎ.ಎ.ಪಾಟೀಲ್, ಶ್ರೀ ಋಶ್ಯಶೃಂಗ, ಶ್ರೀ ಅನೀಲ್ ಕುಮಾರ್, ಐ.ಟಿ.ಐ. ಅಭ್ಯರ್ಥಿಗಳಾದ ಸುನೀಲ್, ಯಮನೂರಿ ಮಾದರ, ಉಮೇಶ ಸಿ.ಪಿ, ಅನೀಲ್ ಕುಮಾರ್ ಡಿ, ಅಶೋಕ, ಹೆಚ್.ಯು.
Comments
Post a Comment